ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › D.S.NAGABHUSHANA ರವರ ಬ್ಲಾಗ್

ನಾಗಸಂಪದ

ಸಾರ್ವತ್ರಿಕ

ರಾಜ್ಕುಮಾರ್ ಎಂಬ ಪವಾಡ

June 24, 2007 - 11:35am — D.S.NAGABHUSHANA

ರಾಜ್ಕುಮಾರ್ ಎಂಬ ಪವಾಡ

ಐವತ್ತು ವರ್ಷಗಳ ಹಿಂದೆ ಕನ್ನಡ ರಾಜ್ಯೋದಯವಾದಾಗ ಕನ್ನಡಿಗರು ಕಂಡ ಕನಸುಗಳು ಹಲವಾರು. ಹರಿದು ಹಂಚಿಹೋಗಿದ್ದ ಕನ್ನಡದ ಜನ ನೂರಾರು ವರ್ಷಗಳ ನಂತರ ಮತ್ತೆ ಒಂದಾದ ಸಂದರ್ಭದಲ್ಲಿ ಕನ್ನಡದ ಹೆಸರಿನಲ್ಲಿ ಹೊಸ ಉತ್ಸಾಹ ತಾಳಿದರು. ಏಕೆಂದರೆ, ಕನ್ನಡವೆಂಬುದು ಆಗ ಕೇವಲ ಒಂದು ಭಾಷೆಯ ಹೆಸರು ಮಾತ್ರವಾಗಿರದೆ ಅದು, ಸಾವಿರಾರು ವರ್ಷಗಳ ಒಂದು ಸಾಮಾನ್ಯ ಸಂಸ್ಕೃತಿಯ ಸ್ಮೃತಿಕೋಶದ ಹಕ್ಕುದಾರಿಕೆಯುಳ್ಳ ಒಂದು ಭಾಷಾ ಸಮುದಾಯ ಮತ್ತೆ ಹೊಸ ಉತ್ಸಾಹದೊಡನೆ ಒಟ್ಟಾಗಿ, ಕನ್ನಡ ಬದುಕೆಂಬುದನ್ನು ಕಟ್ಟಿಕೊಳ್ಳುವ ಛಲದ ಪ್ರತೀಕವೂ ಆಗಿತ್ತು. ಈ ಉತ್ಸಾಹ, ಛಲಗಳಿಗೆ ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಮುಂತಾದ ಕ್ಷೇತ್ರಗಳಿಂದ ಒತ್ತಾಸೆಯಾಗಿ ಬಂದವರು ಹಲವು ಮಹನೀಯರು. ಈ ಮಹನೀಯರ ಸಾಲಿನಲ್ಲಿ ವಿಶಿಷ್ಟವಾಗಿ ನಿಲ್ಲುವ ಒಂದು ಮಹಾನ್ ವ್ಯಕ್ತಿತ್ವ ರಾಜ್ಕುಮಾರ್.
ವಿಶಿಷ್ಟ ಏಕೆಂದರೆ, ರಾಜ್ಕುಮಾರ್ ಬೇರೆ ಮಹನೀಯರಂತೆ ಒಂದು ಸಾಂಸ್ಕೃತಿಕ ಮಹತ್ವಾಕಾಂಕ್ಷೆಯಿಂದೇನೂ ಕನ್ನಡ ಜನಮನವನ್ನು ಪ್ರವೇಶಿಸಲಿಲ್ಲ. ಒಂದು ಸಾಮಾನ್ಯ ಸಾಮಾಜಿಕ, ಕೌಟುಂಬಿಕ ಹಿನ್ನೆಲೆಯಿಂದ ಬಂದ ಮೂರನೆಯ ತರಗತಿಯವರೆಗೆ ಮಾತ್ರ ಓದಿದ ಈ ಮುತ್ತುರಾಜ್, ಕರ್ನಾಟಕ ರಾಜ್ಯೋದಯ ಸಂದರ್ಭದ ಒಬ್ಬ ಸಾಮಾನ್ಯ ಕನ್ನಡಿಗನ ಪ್ರತೀಕ ಮಾತ್ರವಾಗಿದ್ದರು. ಆದರೆ ಮುಂದಿನ ಐವತ್ತು ವರ್ಷಗಳಲ್ಲಿ ಅವರು ಮುಟ್ಟಿದ ಎತ್ತರ, ಅವರನ್ನು ಕರ್ನಾಟಕದ ಒಂದು ದೊಡ್ಡ ಸಾಂಸ್ಕೃತಿಕ ಶಕ್ತಿಯನ್ನಾಗಿ ಮಾರ್ಪಡಿಸಿತ್ತು. ಆಧುನಿಕ ಕರ್ನಾಟಕ ಕಟ್ಟಿದವರು ಮೂರು ಶಕ್ತಿಗಳು: ಕುವೆಂಪು-ಕಾರಂತ-ರಾಜ್ಕುಮಾರ್. ಇವರಲ್ಲಿ ಒಬ್ಬೊಬ್ಬರೂ ಕನ್ನಡದ ಮನಸ್ಸಿಗೆ ಹೊಸ ಉದ್ದ-ಅಗಲ-ಎತ್ತರಗಳನ್ನು ಒದಗಿಸಿದರು.
ರಾಜ್ಕುಮಾರ್ ಒಬ್ಬ ಅಸಾಮಾನ್ಯ ಕಲಾವಿದ. ಆದರೆ ಈ ರೀತಿ ಅಸಾಮಾನ್ಯ ಕಲಾವಿದರೆಲ್ಲರೂ ರಾಜ್ಕುಮಾರ್‌ರಂತೆ ಒಂದು ಭಾಷಾ ಸಮುದಾಯದ ಅಸ್ಮಿತೆಯ ಸಂಕೇತವಾದದ್ದು ಕಡಿಮೆ. ಇದಕ್ಕೆ ಕಾರಣ, ರಾಜ್ಕುಮಾರ್ ಕೇವಲ ಅಸಾಮಾನ್ಯ ಕಲಾವಿದನಾಗಿ ಮಾತ್ರವಲ್ಲ, ಅಸಾಮಾನ್ಯ ಮನುಷ್ಯನಾಗಿ ಕೂಡಾ ಜನತೆಯ ಮನದಲ್ಲಿ ಬೆಳೆದದ್ದು. ನಿಜ, ಇದಕ್ಕೆ ಅವರು ಆರಿಸಿಕೊಂಡ ಚಲನಚಿತ್ರ ಮಾಧ್ಯಮದ ಜನಪ್ರಿಯತೆಯೂ ಕಾರಣವಾಯಿತು. ಆದರೆ ಅವರಂತೆ ಕನ್ನಡಕ್ಕೆ ಅರ್ಪಿಸಿಕೊಂಡ ನಟರು ಕಡಿಮೆ. ಕನ್ನಡಕ್ಕೆ ಅರ್ಪಿಸಿಕೊಂಡದ್ದು ಎಂದರೆ ಮತ್ತೆ ಭಾಷಾನಿಷ್ಠೆ ಮಾತ್ರವಲ್ಲ. ಅವರು ಕನ್ನಡ ಸಿನಿಮಾ ಭಾಷೆ ಮೂಲಕ ಕನ್ನಡ ಜನತೆಗೆ ಒಂದು ವಿಶಿಷ್ಟ ಅಭಿರುಚಿ ಹಾಗೂ ಮೌಲ್ಯ ಪ್ರಪಂಚವನ್ನು ಕಟ್ಟಿಕೊಟ್ಟರು. ಅವರ ಬಾಯಲ್ಲಿ ಕನ್ನಡ ಭಾಷೆ ಒಂದು ಹೊಸ ಶಕ್ತಿ ಹಾಗೂ ಶೋಭೆಯನ್ನು ಪಡೆದುಕೊಂಡಿತು. ಅರವತ್ತು-ಎಪ್ಪತ್ತರ ದಶಕದ ತಲೆಮಾರಿನ ಸಾಮಾನ್ಯ ಕನ್ನಡ ಜನೆತೆಗೆ ರಾಜ್ಕುಮಾರ್, ಕನ್ನಡ ಬದುಕಿನ ಅತ್ಯುತ್ತಮ ಮೌಲ್ಯಗಳ ಪ್ರತೀಕವಾಗಿದ್ದರು. ವಿಮರ್ಶೆಯಲ್ಲಿ ಅವುಗಳ ಮಿತಿ ಏನೇ ಇರಲಿ, ತಂದೆ-ಮಗ, ಗಂಡ-ಹೆಂಡತಿ, ಅಣ್ಣ-ತಮ್ಮ, ಅಣ್ಣ-ತಂಗಿ ಮುಂತಾದ ಕೌಟುಂಬಿಕ ಸಂಬಂಧಗಳಿಗೆ ಮತ್ತು ಸ್ನೇಹ, ದುಡಿಮೆ, ಮಾತು ಮುಂತಾದ ಸಾಮಾಜಿಕ ಮೌಲ್ಯಗಳಿಗೆ ತಮ್ಮ ಚಿತ್ರಗಳ ಮೂಲಕ ಒಂದು ಘನತೆ ತಂದುಕೊಟ್ಟರು. ರಾಜ್ಕುಮಾರ್ ಚಿತ್ರಗಳ ಮೌಲ್ಯಗಳೊಂದಿಗೆ, ಆದರ್ಶಗಳೊಂದಿಗೆ ಎರಡು-ಮೂರು ಕನ್ನಡದ ತಲೆಮಾರುಗಳು ಬೆಳೆದವು. ಹಾಗೇ ರಾಜ್ಕುಮಾರ್ ಕೂಡಾ ಕನ್ನಡದ ವಿವೇಕ, ವಿನಯ, ಪ್ರತಿಭೆ ಹಾಗೂ ಸ್ವಾಭಿಮಾನದ ಸಂಕೇತವಾಗಿ ಬೆಳೆದರು.
ಭಕ್ತಿ ಪ್ರಧಾನವಾದ ಬೇಡರ ಕಣ್ಣಪ್ಪ, ಭಕ್ತ ಕನಕದಾಸ, ಸಂತ ತುಕಾರಾಂ ಅಥವಾ ಮಂತ್ರಾಲಯ ಮಹಾತ್ಮೆ ಇರಲಿ, ಪುರಾಣ, ಇತಿಹಾಸ ಪ್ರಧಾನವಾದ ರಣಧೀರ ಕಂಠೀರವ, ಸತ್ಯಹರಿಶ್ಚಂದ್ರ, ಕಿತ್ತೂರು ಚೆನ್ನಮ್ಮ ಅಥವಾ ಶ್ರೀ ಕೃಷ್ಣದೇವರಾಯ ಇರಲಿ; ಸಾಮಾಜಿಕವಾದ ಅಣ್ಣ-ತಂಗಿ, ಕರುಣೆಯೇ ಕುಟುಂಬದ ಕಣ್ಣು, ಕಣ್ತೆರೆದು ನೋಡು, ನಾಂದಿ, ಮಣ್ಣಿನ ಮಗ, ಕಸ್ತೂರಿ ನಿವಾಸ, ಸಾಕ್ಷಾತ್ಕಾರ, ಅಥವಾ ಭಾಗ್ಯವಂತರು ದಂತಹ ಚಿತ್ರಗಳಿರಲಿ; ಮನರಂಜನಾ ಪ್ರಧಾನವಾದ ಜೇಡರ ಬಲೆ, ಶಂಕರ್ ಗುರು, ಭಾಗ್ಯದ ಲಕ್ಷ್ಮಿ ಬಾರಮ್ಮದಂತಹ ಚಿತ್ರಗಳಿರಲಿ, ಅವರು ತಮ್ಮ ಕಲಾ ಪ್ರೌಢಿಮೆಯ ಜೊತೆಗೆ ಸಾಂಸ್ಕೃತಿಕ ಎಚ್ಚರವನ್ನು ಮೆರೆದರು. ಕುವೆಂಪು-ಕಾರಂತರಿಲ್ಲದೆ ಕನ್ನಡ- ಕನ್ನಡ ಜನತೆ ಹೇಗೆ ಹೀಗಿರಲಾಗುತ್ತಿರಲಿಲ್ಲವೋ ಹಾಗೆ, ರಾಜ್ಕುಮಾರ್ ಇಲ್ಲದೆಯೇ ಕನ್ನಡ-ಕನ್ನಡ ಜನತೆ ಹೀಗಿದ್ದಂತೆ ಇರುತ್ತಿರಲಿಲ್ಲ. ಹಾಗಾಗಿ ರಾಜ್ಕುಮಾರ್ ಕರ್ನಾಟಕದ ಮಟ್ಟಿಗೆ ಇಪ್ಪತ್ತನೇ ಶತಮಾನದ ಉತ್ತರಾರ್ಧದ ಇತಿಹಾಸದ ಉಜ್ವಲ ತಾರೆಗಳಲ್ಲೊಬ್ಬರು.
ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ಪವಾಡವೇನಾದರೂ ಸಂಭವಿಸಿದ್ದರೆ, ಆ ಪವಾಡ ರಾಜಕುಮಾರರೇ. ಏಕೆಂದರೆ ಅವರು ಬಂದ ಸಾಮಾಜಿಕ ಹಿನ್ನೆಲೆ ಹಾಗೂ ಪ್ರತಿಭೆ ಮತ್ತು ಜನಮನ್ನಣೆ- ಈ ಎರಡೂ ವಿಷಯಗಳಲ್ಲಿ ಅವರು ಮುಟ್ಟಿದ ಎತ್ತರ ಯಾರನ್ನಾದರೂ ಬೆಕ್ಕಸ ಬೆರಗಾಗಿಸುವಂತದು. ಹಾಗೆ ನೋಡಿದರೆ ಇದು ಪ್ರಜಾಪ್ರಭುತ್ವದ ವಿಜಯ; ಕನ್ನಡ ರಾಜ್ಯೋತ್ಸವದ ಯಶಸ್ಸಿನ ಸಂಕೇತವೂ ಹೌದು. ಇಂತಹ ರಾಜ್ಕುಮಾರ್ ಇನ್ನಿಲ್ಲ ಎಂದರೆ ನಂಬುವುದು ಕಷ್ಟ. ಅವರು ಕನ್ನಡದ ಸ್ಮೃತಿಕೋಶದ ಅವಿಭಾಜ್ಯ ಅಂಗ. ಹಾಗಾಗಿ ಅವರಿಗೆ ಸಾವಿಲ್ಲ.

ಅಂದಹಾಗೆ: ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿದ್ದ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡುವ ತನ್ನ ನಿಧರ್ಾರವನ್ನು ಕರ್ನಾಟಕ ಸರಕಾರ ಹಿಂತೆಗೆದುಕೊಂಡಿದೆ. ಈ ಶಾಲೆಗಳು ತಮ್ಮ ತಪ್ಪಿಗಾಗಿ ಇಪ್ಪತ್ತೈದು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗಿನ ದಂಡ ಕಟ್ಟಿದರೆ ಸಾಕಂತೆ! ಇವು ಮುಂದಿನ ಶೈಕ್ಷಣಿಕ ವರ್ಷದಿಂದ ಹಂತಾನುಹಂತವಾಗಿ ಕನ್ನಡ ಮಾಧ್ಯಮದಲ್ಲಿ ಬೋಧಿಸುವಂತೆ ಸೂಚಿಸಲಾಗಿದೆಯಂತೆ! ಯಾವುದೇ ಕಾರಣಕ್ಕೂ ಮಾನ್ಯತೆ ರದ್ದತಿಯನ್ನು ಹಿಂತೆಗೆದುಕೊಳ್ಳುವುದಿಲ್ಲವೆಂದು ಘೋಷಿಸಿದ್ದ ಪ್ರಾಥಮಿಕ ಶಿಕ್ಷಣ ಮಂತ್ರಿ ಬಸವರಾಜ ಹೊರಟ್ಟಿಯವರು ಈಗ, ಇದು ಸಂಪುಟದ ತೀರ್ಮಾನ; ಎಲ್ಲರೂ ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅಪ್ಪಣೆ ಕೊಡಿಸಿದ್ದಾರೆ. ಯಾಕೆ, ಸಂಪುಟದಲ್ಲಿ ಇವರೂ ಇರಲಿಲ್ಲವೇ? ಸಂಪುಟ ತೀರ್ಮಾನವನ್ನು ತಾವು ಒಪ್ಪಿಕೊಳ್ಳಲೇ ಬೇಕಾಗುವ ರಾಜಕೀಯ ಸ್ಥಿತಿಯಲ್ಲಿ ಇವರು ಇರುವುದಾದರೆ, ಕನ್ನಡದ ಬಗೆಗಿನ ವೀರಾವೇಶದ ಮಾತೇಕೆ? ಶೈಕ್ಷಣಿಕ ವಿಷಯದ ತೀರ್ಮಾನಗಳಲ್ಲೂ ಶಿಕ್ಷಣ ಮಂತ್ರಿಯವರ ಪಾತ್ರವೇ ಇಲ್ಲವೆಂದ ಮೇಲೆ ಶಿಕ್ಷಣ ಮಂತ್ರಿಯಾದರೂ ಯಾಕೆಬೇಕು?
ದಂಡಕ್ಕೊಳಗಾಗಿರುವ ಶಾಲೆಗಳು ಈಗ ದಂಡದ ವಿಷಯದಲ್ಲಿ ಚೌಕಾಸಿ ಆರಂಭಿಸಿವೆ. ಇದೂ ಕೂಡಾ ತನ್ನ ಕನ್ನಡ ಬದ್ಧತೆಯನ್ನು ಸಡಿಲಗೊಳಿಸಿರುವ ಸರಕಾರದ ಬಗ್ಗೆ ಜನತೆಯಲ್ಲಿ ಸಹಾನುಭೂತಿ ಹುಟ್ಟಿಸುವ ಹುನ್ನಾರವಾಗಿದ್ದರೂ ಆಶ್ಚರ್ಯವಿಲ್ಲ. ಏಕೆಂದರೆ ಈ ದಂಡ ಮೊತ್ತ ಈ ಶಾಲೆಗಳು ವಸೂಲು ಮಾಡುವ ಶುಲ್ಕಗಳ ಮುಂದೆ ಯಾವ ಲೆಕ್ಕ? ಅದೇನೇ ಇರಲಿ, ಚೌಕಾಸಿ ಯಾವುದೋ ಒಂದು ಮಟ್ಟದಲ್ಲಿ ಇತ್ಯರ್ಥವಾಗಲೇಬೇಕು. ಆನಂತರ ಮತ್ತೆ ಇಂಗ್ಲಿಷ್ ಮಾಧ್ಯಮ ಬೋಧನೆ, ಮಾನ್ಯತೆ ರದ್ದತಿ, ದಂಡ ವಸೂಲಿಯ ವ್ಯವಸ್ಥೆ ಇದ್ದೇಇದೆ! ಹೀಗೆ ಪ್ರತಿ ವರ್ಷ ಕಟ್ಟಬೇಕಾಗಿ ಬರಬಹುದಾದ ದಂಡವನ್ನೂ ಈಗಲೇ ಕಡಿಮೆಗೊಳಿಸಿಕೊಳ್ಳಲೆಂದೇ ಈ ಚೌಕಾಸಿ ನಡೆದಿದ್ದರೂ ಆಶ್ಚರ್ಯವಿಲ್ಲ! ಎಷ್ಟಾದರೂ ಸರಕಾರ ಮಕ್ಕಳ, ಪೋಷಕರ ಹಾಗೂ ಕನ್ನಡ ಹಿತ ಕಾಪಾಡಲಿಕ್ಕೆ ಪ್ರತಿವರ್ಷವೂ ಬದ್ಧ ತಾನೆ?
ಅಂತೂ ಹೊರಟ್ಟಿಯವರಿಗೆ ಕನ್ನಡದ ಕೆಲಸ ಒಳ್ಳೆ ಕಮಾಯಿಯ ಕೆಲಸವಾಗಿ ಮಾರ್ಪಟ್ಟಿದೆ. ಹೀಗಾಗಿ ಅವರು ನಮ್ಮ ಶಿಕ್ಷಣ ಮಂತ್ರಿಯಾಗಿ ಮುಂದುವರಿಯುವುದು ಅನಿವಾರ್ಯವಾಗಿದೆ.

  • ಸಾಂಸ್ಕೃತಿಕ
~.~
  • D.S.NAGABHUSHANA ರವರ ಬ್ಲಾಗ್
  • Login or register to post comments
  • 372 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 24, 2007 - 12:10pm — srajath

ಉ: ರಾಜ್ಕುಮಾರ್ ಎಂಬ ಪವಾಡ

srajath's picture

ಸಂಪದದಲ್ಲಿ ಈ blog ನೋಡಿ ತುಂಬಾ ಖುಷಿಯಾಗಿ ಪ್ರತಿಕ್ರಿಯಿಸಲು ಸದಸ್ಯನಾಗಿದ್ದೇನೆ. ನಮ್ generation ಜನಗಳಿಗೆ ಡಾ||ರಾಜ್ ಅವರ ಬಗ್ಗೆ ಜಾಸ್ತಿ ಗೊತ್ತಿಲ್ಲ. ಅವರ ಬಗ್ಗೆ ಠೀಕೆ ಮಾಡೋದು ಒಂಥರಾ fashion ಆಗಿಹೋಗಿದೆ. ಈ ಬರಹ ನನಗೆ ಡಾ||ರಾಜ್ ಬಗ್ಗೆ ಒಂದು ಬೇರೆ point of view ಕೊಟ್ಟಿದೆ. ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜನಮಾನಸದ ಆದರ್ಶವ್ಯಕ್ತಿಯಾಗಿ ರಾಜ್ಕುಮಾರ್
  • ಮಾಹಿತಿ ತಂತ್ರಜ್ಞಾನ, ಕನ್ನಡ ಮತ್ತು ಶಿಕ್ಷಣ ಬಗ್ಗೆ ಅರ್ಧ ದಿನದ ಕಾರ್ಯಾಗಾರ
  • ಮಂಗಳೂರು ಕನ್ನಡ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕರ್ನಾಟಕ ಅಥವಾ ಕನ್ನಡತನ (೨)
Syndicate content

ಲೇಖಕರು

D.S.NAGABHUSHANA's picture

ಪರಿಚಯ

A retired(Vol.) All India Radio employee. I write literary criticism. A Socialist by belief.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator