devaru.rbhat ರವರ ಬ್ಲಾಗ್

ಮತ್ಸಕ್ಕೆ ಮತ್ತುಣಿಸುವರೇ?

ಗಿರಿ ಶಿಖರಗಳ ಸಾಲು ಸಾಲು, ಕಾನನದಲ್ಲಿ ಹಳ್ಳ ಕೊಳ್ಳಗಳು, ಜುಳು ಜುಳು ಹರಿಯುವ ನೀರಿನ ತೊರೆಗಳು, ಪುಟ್ಟ ಪುಟ್ಟ ಜಲಪಾತಗಳು, ತಂಪಾದ ಸ್ವಚ್ಛಂದ ಗಾಳಿ, ಹಕ್ಕಿ ಗಳ ಚಿಲಿಪಿಲಿ ನಾದ, ಅಲ್ಲೊಂದು ಇಲ್ಲೊಂದು ಒಂಟಿ ಮನೆಗಳು, ಹಾವಿನಂತೆ ಅಂಕುಡೊಂಕಾಗಿರುವ ಪುಟ್ಟ ಪುಟ್ಟ ದಾರಿಗಳು ಹೀಗೆ ಹೇಳಿದಾಗಲೇ ಮಲೆನಾಡಿನ ಚಿತ್ರ ಕಣ್ಣ ಮುಂದೆ ಬಂದರೆ ಆಶ್ಚರ್ಯವಿಲ್ಲ.

ಕಾರೇ ಕಾಯಿಗಳನ್ನು ಜಪ್ಪಿ ತಯಾರಿ ನಡೆಸುತ್ತಿರುವುದುಹಾಗೆಯೇ ಮೀನುಗಾರಿಕೆ ಎಂದಾಕ್ಷಣ ಕಣ್ಣಿಗೆ ಕಾಣುವುದು, ದೋಣಿಗಳು, ಬಲೆಗಳು, ಹಡಗುಗಳೆ, ಇನ್ನೂ ಚಿಕ್ಕವೆಂದರೆ ಹವ್ಯಾಸಕ್ಕಾಗಿ ಕೊಳಗಳಲ್ಲಿ ಗಾಳದ ತುದಿಗೆ ಹುಳು ಹುಪ್ಪಡಿಗಳನ್ನು ಸಿಕ್ಕಿಸಿಕೊಂಡು ಮೀನು ಹಿಡಿಯುವ ಚಿತ್ರಗಳೇ ಕಣ್ಣ ಮುಂದೆ ಬರುತ್ತವೆ.  ಮುಂದೆ ಓದಿ »

ಬಾಣಂತಿ ಹಸ್ತ

ಸಾಧಕರು, ಸಂತರು, ಮಾಂತ್ರಿಕರು, ಅಘೋರಿಗಳದೇ ಇತ್ತೀಚೆಗೆ ಮಾಧ್ಯಮಗಳ ಮುಖ್ಯ ಬಂಡವಾಳವಾದಂತಿದೆ. ಹಾಗೆ ನಿನ್ನೆ (೧೨-೦೩-೨೦೧೦) ರಾತ್ರಿ ನಮ್ಮ ಮನೆಯ ತರಕಾರಿ ಬುಟ್ಟಿಯಲ್ಲೊಂದು ಹಸ್ತದಂತಹ ಆಕಾರವನ್ನು ಕಂಡಾಗ   ಹಿಂದೆ ನಾವು ಚಿಕ್ಕವರಿರುವಾಗ  ಅಡಿಕೆ ಸುಗ್ಗಿಯ ಕಾಲಗಳಲ್ಲಿ ಬರುತ್ತಿದ್ದ ಕೆಲವು ಗಿಡಬುಡಿಕಿಗಳ ನೆನಪಾಯಿತು.  ಮುಂದೆ ಓದಿ »

ದೀಪದ ಬೆಳಕಿಗೆ ಕಂಗೆಟ್ಟೆ

ಶೀರ್ಷಿಕೆ ನೋಡಿದಾಕ್ಷಣ ಜಗಮಗಿಸುವ ಬೆಳಕೆಂದು ಊಹಿಸಿರಬಹುದಲ್ಲವೇ? ಅಥವಾ ಚಿತ್ರಕ್ಕೂ ಶೀರ್ಷಿಕೆಗೂ ಎಂತಹ ಸಂಬಂಧ ಎಂದಿರಬಹುದು. ಸಂಬಂಧ ಹೇಗೆ ಕಲ್ಪಿಸಿದ್ದೇನೆ ನೋಡಿ. ನಮ್ಮೂರಿನ ಸಂತೋಷನ ಮನೆಯಪತಂಗ ಗೋಡೆಯ ಮೇಲೆ ಕುಳಿತ ಪತಂಗವನ್ನು ಕಂಡಾಗ ಇದು ಏಕೆ ಹೀಗೆ ಕುಳಿತಿರುತ್ತದೆ. ಹಗಲಿನಲ್ಲಿ ಇಷ್ಟೊಂದು ದೊಡ್ಡ ಚಿಟ್ಟೆ ಕಾಣುವುದಿಲ್ಲ ಎಂಬ ಪ್ರಶ್ನೆಗೆ ಶಾಲೆಗೆ ಹೋಗುವಾಗ ಓದಿದ ನೆನಪನ್ನು ಬಿಚ್ಚಿಟ್ಟಿದ್ದು ಹೀಗೆ. ಇದು ಚಿಟ್ಟೆ ಅಲ್ಲ. ಪತಂಗ, ಇದಕ್ಕೆ ಹಗಲು ಹೊತ್ತಿನಲ್ಲಿ ಕಣ್ಣು ಕಾಣುವುದಿಲ್ಲ. ಹಾಗಾಗಿ ಅಪ್ಪಿ ತಪ್ಪಿ ರಾತ್ರಿ ಬೆಳಕಿಗೆ ಬಂದು ಬಿಟ್ಟರೆ ಹೀಗೆ ಮಂಕು ಹಿಡಿದಂತೆ ಕುಳಿತುಬಿಡುತ್ತದೆ. ಎಂದು ನನ್ನ ಪಾಂಡಿತ್ಯ ಬಿಗಿದೆ. ಸರಿ ಇದ್ದರೆ ಸರಿ ಅನ್ನಿ ಇಲ್ಲದಿದ್ದರೆ ತಿದ್ದಿ ಹೇಳಿ. ಇದರ ದೇಹದ ಮುಖ್ಯ ಭಾಗ ಚಿಟ್ಟೆಗಿಂತಲೂ ದಪ್ಪನಾಗಿರುತ್ತದೆ.  ಮುಂದೆ ಓದಿ »

ಸೇನಾನಿಗಳು

ಸ್ವತಂತ್ರ ಹೋರಾಟಗಾರರಲ್ಲ. ಬದುಕಿನ ಹೋರಾಟಗಾರರು.

ಸ್ವತಂತ್ರ ಹೋರಾಟಗಾರರಲ್ಲ. ಬದುಕಿನ ಹೋರಾಟಗಾರರು.

ಶಿಲ್ಪ ಕೌಶಲ

ಶಿಲ್ಪ ಕಲೆಯ ಅಧ್ಬುತ ಗಳನ್ನು ಕಂಡಿದ್ದೇವೆ. ಬೇಲೂರಿನ ಶಿಲಾ ಬಾಲಿಕೆ ಕಂಡಿದ್ದೇವೆ. ಅಲ್ಲಿನ ಶಿಲ್ಪಗಳಲ್ಲಿ ಮೂಗು - ಬಾಯಿಗಳಿಗೆ ಸಂಬಂಧ ಕಲ್ಪಿಸುವ ರಂಧ್ರಗಳನ್ನು ಕಂಡಿದ್ದೇವೆ. ದೇವಾಲಯದ ಎದುರಿನ ಗರುಡ ಗಂಭಗಳಡಿ ಕಾಗದ, ದಾರಗಳನ್ನು ತೂರಿಸಿ ನೋಡಿದ್ದೇವೆ. ಏಕ ಶಿಲೆಯ ಗೊಮ್ಮಟ, ಒಂದೇಕಲ್ಲಿನಲ್ಲಿ ಕೆತ್ತಿದ ಸರಪಳಿ ಹೀಗೆ ಅನೇಕ ಅಧ್ಬುತಗಳನ್ನು ಶಿಲ್ಪಿಗಳು ಸೃಷ್ಟಿಸಿದ್ದಾರೆ. ಹಾಗೆ ಹೈದರಾ ಬಾದಿನ ಸಾಲರ್ ಜಂಗ್‌  ಮ್ಯೂಸಿಯಂನಲ್ಲಿ ಅಮೃತ ಶಿಲೆಯಲ್ಲಿ ಕೆತ್ತಿದ ಮುಸುಕು ಧಾರಿ ಮಹಿಳೆಯನ್ನು ಕಂಡಿದ್ದೇವೆ. ಇವೆಲ್ಲವುಗಳೂ ಕಲಾವಿದರ ನೈಪುಣ್ಯತೆಯ ಸಂಕೇತಗಳು ಅಂತೆಯೇ ನಮ್ಮ ಬಳಿಯಲ್ಲಿರುವ ಈ ಅಧ್ಬುತವನ್ನು ತಮ್ಮ ಮುಂದಿಟ್ಟಿದ್ದೇನೆ. ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿನ ಉಮಾಮಹೇಶ್ವರ ದೇವರ ಲಿಂಗ. ಈ ಲಿಂಗದ ಶಿರೋ ಭಾಗದಲ್ಲಿ ಕೆಂಪಾದ ಒಂದು ಚಿತ್ತಾರ ಕಂಡು ಬರುತ್ತಿದೆ.  ಮುಂದೆ ಓದಿ »

Syndicate content