ಈಗಿನಂತೆ 7 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರವಾಸಿ ಸ್ಥಳಗಳು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
14
Feb
2010
ಪುಟ

  ಐತಿಹಾಸಿಕ ಸ್ಥಳಗಳ ರಕ್ಷಣೆ ಮತ್ತು  ಪ್ರವಾಸೋದ್ಯಮದ ಅಭಿವೃದ್ಧಿ ಈ ವಿಷಯಗಳಲ್ಲಿ ನಮ್ಮ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ರಾಜಧಾನಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,393
ಮಹಾಭಾರತದಲ್ಲಿ ಭಾಗೀರಥಿ !
bhalle's picture
ಶ್ರೀನಾಥ್ ಭಲ್ಲೆ
11
Jul
2011
ಲೇಖನ

ನೀರಿನ ಮಹಿಮೆಯನ್ನು ಎಷ್ಟು ನುಡಿದರೂ ಕಡಿಮೆಯೇ. ನೀರು ಪ್ರಕೃತಿದತ್ತವಾದ ವರ. ನೀರು ಜೀವಿಗಳಿಗೆ ಮಹದುಪಕಾರಿ. ಇದೇ ನೀರು ಮುನಿದರೆ ಏನಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಗಳು...

ಪ್ರತಿಕ್ರಿಯೆಗಳು: 26
ಹಿಟ್ಸ್ : 800
ಯಶವಂತ ಚಿತ್ತಾಲರ 'ಪಯಣ' - ಒಂದು ನಿಗೂಢ ಕಥೆ , ಮತ್ತು ಅದರ ವಿವರಣೆ(!?)
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
13
Jan
2006
ಬ್ಲಾಗ್ ಬರಹ
ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ಅವರ 'ಪಯಣ' ಕಥೆಯನ್ನು ಓದಿ ೨೫ ವರ್ಷ ಆದರೂ ನೆನಪು ಚೆನ್ನಾಗಿದೆ. ಇದಕ್ಕೆ ಅದರ ರಹಸ್ಯಮಯತೆ ಕಾರಣ. ಕಥಾನಾಯಕ ಒಂದು...
ಪ್ರತಿಕ್ರಿಯೆಗಳು: 5
ಹಿಟ್ಸ್ : 1,428
ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!
hamsanandi's picture
ಹಂಸಾನಂದಿ
03
Feb
2010
ಬ್ಲಾಗ್ ಬರಹ

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು
ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;
ಅರಿವು ನಿನ್ನಲಿ ಇರಲು ಪರರ ನೋಯಿಸುವಂಥ
ನುಡಿಯಂಬುಗಳನೆಂದೂ...

ಪ್ರತಿಕ್ರಿಯೆಗಳು: 3
ಹಿಟ್ಸ್ : 996
ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ
palachandra's picture
ಪಾಲಚಂದ್ರ
10
Aug
2010
ಬ್ಲಾಗ್ ಬರಹ

ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,126
ಮನಸಿನ ಹೆಜ್ಜೆ ಹಿಡಿದು
sinchanabhat's picture
17
Mar
2006
ಪುಟ
ಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ...
ಪ್ರತಿಕ್ರಿಯೆಗಳು: 10
ಹಿಟ್ಸ್ : 1,539
ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ
guruve's picture
Guruprasad D N
01
Sep
2011
ಲೇಖನ

ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ 

...
ಪ್ರತಿಕ್ರಿಯೆಗಳು: 2
ಹಿಟ್ಸ್ : 339
ಚಿಂತನೆ :- ಕಾಫಿಯಿಂದ ಸಂಸ್ಕೃತಿವರೆಗು
partha1059's picture
ಪಾರ್ಥಸಾರಥಿ
10
May
2011
ಬ್ಲಾಗ್ ಬರಹ

    ಹೀಗೆ ಸುಮ್ಮನೆ ಕುಳಿತ್ತಿದ್ದೆ, ಸ್ವಲ್ಪ ಕಾಫಿ ಬೇಕೆನಿಸಿತು. ನಾನೇ ಏಕೆ ಮಾಡಬಾರದು ಅನ್ನಿಸಿ ಅಡಿಗೆಮನೆಯೊಳಗೆ ಹೋದೆ,...

ಪ್ರತಿಕ್ರಿಯೆಗಳು: 6
ಹಿಟ್ಸ್ : 427
ದೇಹವೆಂಬ ದೇವಾಲಯ
ramaswamy's picture
ಡಿ.ಎಸ್.ರಾಮಸ್ವಾಮಿ
16
Apr
2010
ಪುಟ

‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’


ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು...

ಪ್ರತಿಕ್ರಿಯೆಗಳು: 3
ಹಿಟ್ಸ್ : 978

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ತಾಳಗುಪ್ಪ ರೈಲು ಒಂದು ನೆನಪು:

ತಾಳಗುಪ್ಪ ರೈಲು ಒಂದು ನೆನಪು:

 

 

 

 

 

 

ದಕ್ಷಿಣ ಭಾರತದಲ್ಲಿಯ ಕೊನೆಯ ರೈಲು ನಿಲ್ದಾಣ ಎಂಬ ಖ್ಯಾತಿ ಹೊಂದಿದ್ದ ತಾಳಗುಪ್ಪ  ಮೀಟರ್ ಗೇಜ್ ರೈಲು ನಿಲ್ದಾಣ

ಸ್ವತಂತ್ರ ಪೂರ್ವದ ರೈಲು ನಿಲ್ದಾಣವೂ ಆಗಿದ್ದು, ಶರಾವತಿ ನದಿಗೆ ಕಟ್ಟಿದ ಮೊದಲ ಅಣೆ ಕಟ್ಟೆ ಮಡೆನೂರು ಡ್ಯಾಂ ಹಾಗೂ ಮಹತ್ಮಾ ಗಾಂಧಿ ವಿದ್ಯುದಾಗಾರ,  ನಾಡಿನ ಹೆಮ್ಮೆಯ ಅತಿ ದೊಡ್ಡ ಜಲವಿದ್ಯುದಾಗಾರ ಜೋಗದ ಎ.ಬಿ.ಸೈಟ್  ಹಾಗೂ ಅದಕ್ಕೆ ನೀರುಣಿಸುವ ಲಿಂಗನ ಮಕ್ಕಿ ಜಲಾಶಯದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಹೆಗ್ಗಳಿಕೆಗೂ ಪಾತ್ರವಾದುದು ಈ ರೈಲು ನಿಲ್ದಾಣ.

ನಂತರದ ದಿನಗಳಲ್ಲಿ ನಿಲ್ದಾಣದ ಸಮೀಪದಲ್ಲಿಯೇ ಸ್ಥಾಪನೆಗೊಂಡಿದ್ದ ಪ್ಲೈವುಡ್ ಕಾರ್ಖಾನೆಗೆ ಕಚ್ಛಾ ಹಾಗೂ ತಯಾರಾದ ಮಾಲುಗಳ ಸಾಗಾಣಿಕೆ, ಸುತ್ತಲಿನ ಕಾಡಿನಲ್ಲಿ ದೊರೆಯುವ ಚಾರ್ಕೋಲ್ ಬಿದಿರು ಬೊಂಬು ಮೊದಲಾದ ಸರಕು ಸಾಗಾಣಿಕೆ ಹಾಗೂ ಜೋಗ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರ ಓಡಾಟಕ್ಕಷ್ಟೇ ಉಪಯೋಗವಾಗಿತ್ತು ಈ ರೈಲು ಸೇವೆ. ಕ್ರಮೇಣ ವಿವಿಧ ಕಾರಣಗಳಿಂದಾಗಿ ಸರಕು ಸಾಗಣೆಯೂ ನಿಂತುಹೋಗಿದ್ದಲ್ಲದೇ, ದಿನಕ್ಕೆರಡು ಬಾರಿ ಬೆಂಗಳೂರಿಗೆ ಸಂಚರಿಸುತ್ತದ್ದ ಪ್ಯಾಸೆಂಜರ್ ರೈಲು ಸಹ ದಿನಕ್ಕೊಂದಾಗಿ ಪರಿವರ್ತನೆ ಗೊಂಡಿತು.

 

 

  


ರೈಲಿನ ನಿಧಾನಗತಿ, ಸಾಕಷ್ಟು ಬಸ್ಸುಗಳ ಸೌಕರ್ಯ ಪಡೆದ ಕಾರಣದಿಂದಾಗಿ ಪ್ರಯಾಣಿಕರ ಸಂಖ್ಯೆಯೂ ಬೆರಳೆಣಿಕೆಯಷ್ಟಾಯಿತು. ಹೀಗಾಗಿ ಬಸ್ ನಷ್ಟೆ ದೊಡ್ಡದಾದ ರೈಲ್ವೆ ಕಾರ್ ಎಂದು ಕರೆಸಿಕೊಳ್ಳುತ್ತಿದ್ದ ಒಂದೇ ಬೋಗಿಯು ಶಿವಮೊಗ್ಗ ದಿಂದ  ಬೆಳಿಗ್ಗೆ ಬಂದು ಪುನಃ ಸಂಜೆ ಶಿವಮೊಗ್ಗದ ವರೆಗೆ ಹೋಗಿ ಅಲ್ಲಿಂದ ಸಾಗುವ ಬೆಂಗಳೂರಿಗೆ ಹೋಗುವ ರೈಲಿಗೆ ಸಂಪರ್ಕ ನೀಡುತ್ತಿತ್ತು. ಮುಂದೆ ಈ ರೈಲು ಮಾರ್ಗವನ್ನು ಕೊಂಕಣ ರೈಲ್ವೆ ಯೊಂದಿಗೆ ಜೋಡಿಸಲಾಗುವುದೆಂದು ಸುದ್ದಿಯಾಗಿತ್ತು. ಹಾಗೂ  ಶಿವಮೊಗ್ಗದ ವರೆಗೆ ರೈಲ್ವೆ ಮಾರ್ಗವೂ ಬ್ರಾಡ್ ಗೇಜಾಗಿ ಪರಿವರ್ತನೆ ಗೊಂಡಿತು. ಮತ್ತು ಇಲ್ಲಿಗೆ ಬರುತ್ತಿದ್ದ ರೈಲ್ ಕಾರ್ ಸಹ ನಿಂತು ಹೋಯಿತು.ಇದ್ದ ಮೀಟರ್ ಗೇಜ್ ಹಳಿಗಳನ್ನು ಕೀಳಲಾಯಿತು. ಕೊಂಕಣ ರೈಲ್ವೇಗೆ ಸೇರಿಸುವ ಪ್ರಸ್ತಾವನೆಯು ಕ್ಷೀಣಿಸತೊಡಗಿತು. 

 

ಹೀಗೆ ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ದೊರಕುತ್ತಿದ್ದ  ರೈಲ್ವೆ ಸೇವೆಯು ನಿಂತು ಹೋದಾಗ ಸಾಗರ ಹಾಗೂ ಸುತ್ತಮುತ್ತಲಿನ ಆಸಕ್ತರು ರೈಲ್ವೇ ಹೋರಾಟ ಸಮಿತಿಯನ್ನು ರಚಿಸಿಕೊಂಡು ರೈಲ್ವೆ ಸೇವೆ ಪುನರಾರಂಭಿಸಬೇಕೆಂದು ಪಟ್ಟು ಹಿಡಿದು ಸರ್ಕಾರದ ಮೇಲೆ ಒತ್ತಡ ಹೇರತೊಡಗಿದರು.   ನಂತರದ ವರ್ಷಗಳಲ್ಲಿ ಶಿವಮೊಗ್ಗದಿಂದ ಅನಂತಪುರದ ವರೆಗೆ ಬ್ರಾಡ್ ಗೇಜ್ ಗೆ ಪರಿವರ್ತನೆ ಗೊಂಡಿತು- ತಾಳಗುಪ್ಪದ ವರೆಗೆ ಬರುವುದು ನೆನೆಗುದಿಗೆ ಬಿದ್ದು ಹೋಯಿತು. ಹಾಗಾಗಿ ರೈಲ್ವೇ ಹೋರಾಟ ಸಮಿತಿಯವರು ಎಲ್ಲ ದಿಕ್ಕಿನಿಂದಲೂ ಸರ್ಕಾರಗಳ ಮೇಲೆ ಒತ್ತಡ ಹೆಚ್ಚಿಸಿ ಕೊನೆಗೂ ಈ ಮಾರ್ಗವು ಪುನರಾರಂಭ ಗೊಳ್ಳುವ ಸಮಯ ಹತ್ತಿರ ಬಂದಿದೆ.

 


ಆದರೆ, ಅಂದು ನಾವು ನೋಡಿದ,ಮರದ ಸ್ಲೀಪರ್ ಗಳ ಮೇಲೆ ಉದ್ದನೆಯ ರೈಲು ಹಳಿಗಳು (ಸಾಗುವಾನಿ ಮರದ್ದೆಂದು ಹೇಳುತ್ತಿದ್ದರು), ರೈಲ್ವೇ ಸ್ಟೇಷನ್ ನಿಂದ ಸ್ವಲ್ಪ ದೂರದಲ್ಲಿದ್ದ ಕೈ ಮರಗಳು, (ರೈಲಿಗೆ ಸ್ಟೇಷನ್ ಗೆ ಬರಲು ಅನುಮತಿ ನೀಡುವ/ ನಿರಾಕರಿಸುವ ಎತ್ತರದ ಕಂಬದ ಮೇಲೆ ಸ್ಥಾಪಸಿದ ಕೆಂಪು/ ಹಸಿರು ಬಣ್ಣದ ಗಾಜನ್ನು ಹೊಂದಿದ ದೀಪಹಚ್ಚಿಡುವ ಸೂಚನಾ ವ್ಯವಸ್ಥೆ)   10-12 ಡಬ್ಬಿಗಳುಳ್ಳ ರೈಲು, ಕಲ್ಲಿದ್ದಲಿನಿಂದ ನಡೆಯುವ ಉಗಿ ಬಂಡಿ, ಬೇಕಾಗುವ ಕಲ್ಲಿದ್ದಲಿನ ರಾಶಿ, ಬೂದಿಯ ರಾಶಿ, ಬಂಡಿಗೆ ನೀರುತುಂಬುವ ಟ್ಯಾಂಕ್,  ನಂತರ ಬಂದ ಡೀಸೆಲ್ ಇಂಜಿನ್, ಹಾಗೂ ಬಸ್ ನಂತೆ ಕಾಣುತ್ತಿದ್ದ ರೈಲ್ ಕಾರ್,  ಕೂ ಎನ್ನುವ ವಿಷಲ್, ಪಾಂ ಎಂದು ಕೂಗುವ ಸಪ್ಪಳ,  ರೈಲು ಹೊರಡುವಾಗ ಅದರಿಂದ ಹೊರಡುವ ಚಿ..ಶ್   ಚಿ.. . ಶ್  ಸದ್ದು,  ಹಿಂದೆ ಮುಂದೆ ಸರಿಯುವ ಬೆಳ್ಳಿ ಬಣ್ಣದ  ಮಾರುದ್ದದ ಪಿಸ್ಟನ್ ರಾಡ್ ಗಳು, ರೈಲು ಹೊರಡುವ ಮತ್ತು ಬರುವ ಮುನ್ನ ಸಿಗ್ನಲ್  ತೋರಿಸಲು ಲಾಟಿನ್ ಹಿಡಿದು ಓಡುವ ಗ್ಯಾಂಗ್ಮನ್ ಗಳು, ಕೈ ಮರಗಳನ್ನು ಕೆಡಗುವ ಸಿಬ್ಬಂದಿಗಳು,  ಹಸಿರು ಮತ್ತು ಕೆಂಪು ಬಾವುಟ ಹಿಡಿದ ರೈಲ್ವೆ ಸಿಬ್ಬಂದಿಗಳು, ಟೆನಿಸ್ ಬ್ಯಾಟ್ ನಂತೆ ಕಾಣುವ ದೊಡ್ಡದಾದ ಬೆತ್ತದಿಂದ ಮಾಡದ ಡ್ರೈವರ್ ಗಳಿಗೆ ಕೊಡುವ ಮತ್ತು ಅವರಿಂದ ತೆಗೆದುಕೊಳ್ಳುವ ರಿಂಗ್ ಗಳು,  ಕಲ್ಲಿದ್ದಲನ್ನು ಸುರಿದು ಕುದುಕಿ ಉರಿ ದೊಡ್ಡದು ಮಾಡಿ ರೈಲು ನಡೆಸುವ  ನೋಡಿದಾಕ್ಷಣವೆ ಗೊತ್ತಾಗುತ್ತಿದ್ದ ಕಪ್ಪು ಕಪ್ಪಾಗಿದ್ದ ರೈಲ್ವೇ ಡ್ರೈವರ್ ಗಳು, ಟಿಟಿ. ಗಳು,   ರೈಲಿನಿಂದಿಳಿದು ಬಂದ ಬಣ್ಣ ಬಣ್ಣದ ಪ್ರಯಾಣಿಕರು (ದೇಶೀ - ವಿದೇಶಿಯರೂ ಇರುತ್ತಿದ್ದರು), ಎಲ್ಲೆಲ್ಲಿಂದಲೋ ಬಂದ/ ಸಾಗಹಾಕಿದ ಕುರುಡರು, ಕುಂಟರು, ಹುಚ್ಚರು, ಭಿಕ್ಷುಕರು ಉದ್ದುದ್ದನೆಯ ಡಬ್ಬಿಗಳ ಸಾಲನ್ನು ಹೊಂದಿದ ಸಿಮೆಂಟ ತುಂಬಿದ ವ್ಯಾಗನ್ ಗಳು  ಎಲ್ಲಿಗೋ ಸಾಗಣೆಗಾಗಿ ಕಾದು ಕುಳಿತ ಕಟ್ಟಿಗೆಯ ದೊಡ್ಡ ದೊಡ್ಡ ರಾಶಿಗಳು, ಸ್ಥಳೀಯ ಪ್ಲೈವುಡ್ ಫ್ಯಾಕ್ಟರಿಗಾಗಿ ಮಲೇಷಿಯಾದಿಂದಲೋ ಎಲ್ಲಿಂದಲೋ ಬಂದ ಒಂದಾಳೆತ್ತರಕ್ಕು ಹೆಚ್ಚು ದಪ್ಪನಾಗಿ ಅಡ್ಡ ಮಲಗಿದ ಮರದ ದಿಮ್ಮಿಗಳು,   ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ತೆರೆದ ವ್ಯಾಗನ್ಗಳು, ಸಿಮೆಂಟ್ ಅನ್ ಲೋಡ್ ಮಾಡುವ ಸಿಮೆಂಟ್ ಬಣ್ಣ ಬಳಿದುಕೊಂಡ ಹಮಾಲಿಗಳ ಸಾಲು, ಐಸಾ - ಐಸಾ ಎಂದು ಟಿಂಬರ್ ಲೋಡ್ - ಅನ್ ಲೋಡ್ ಮಾಡುವ ಹಾರೆ ಮೀಟುವ ಜನ, ಸಾಗಿಸುವ ತೆರೆದ ದೊಡ್ಡ ದೊಡ್ಡ ಲಾರಿಗಳು, ಜೋಗದಲ್ಲಿನ ಚಾನಲ್ ಗಳಿಗೆ ಅಳವಡಿಸಲು ತಂದ ಒಳಗಡೆ ಲಾರಿಯೇ ಸಂಚರಿಸಬಹುದಾದಷ್ಟು ದೊಡ್ಡ ದೊಡ್ಡ ಪೈಪ್  (ಹೂಮ್ ಪೈಪ್ ಗಳೆಂದು ಕರೆಯುತ್ತಿದ್ದರು) ಗಳ ರಾಶಿ, ಆ ಪೈಪ್ ಗಳನ್ನೆ ಮನೆಯಾಗಿಸಿಕೊಂಡು ಸಂಸಾರ ಹೂಡಿರುತ್ತಿದ್ದ ಅಲ್ಲಿನ ಕೆಲಸಗಾರರು, ಭಿಕ್ಷುಕರು,  ತಮಗಿಂತಲೂ ದೊಡ್ಡದಾದ ಪೈಪ್ ಗಳನ್ನು ಹೇರಿಕೊಂಡು ಸಾಗುವ ಲಾರಿಗಳು, ಪೈಪ್ ಗಳನ್ನು ರೈಲಿನಿಂದ ಇಳಿಸಲು ಲಾರಿಗಳಿಗೆ ಹೇರಲು ಬಂದ ಕಪ್ಪಿಗಳೆಂದು ಕರೆಯುತ್ತಿದ್ದ ವಿವಿಧ ಬಗೆಯ ಕ್ರೇನ್ ಗಳು, ಇವೆಲ್ಲವುಗಳಿಂದ ಸದಾ ಗಿಜಿ ಗುಡುತ್ತಿದ್ದ,  ವಾಹನಗಳ ಓಡಾಟದಿಂದಾಗಿ ಮಳೆಗಾಲದಲ್ಲಿ ಸದಾ ಕೆಸರಿನಿಂದ ಕೊಚ್ಚೆಯಾಗಿ ರುವ ರೈಲ್ವೇ ಮೈದಾನ.   ವಿಶಿಷ್ಟ ವಿನ್ಯಾಸದಿಂದ ಕೂಡಿದ ಗೋಪಿ ಬಣ್ಣದಿಂದ ಕಂಗೊಳಿಸುತ್ತಿದ್ದ ರೈಲ್ವೆ ಸ್ಟೇಷನ್, ರೈಲು ಇಂಜಿನನ್ನು  ಇವೆಲ್ಲವುಗಳನ್ನು ನೋಡಿದ್ದೇನೆ. ಇವೆಲ್ಲಗಳ ನಡುವೆ ಅಲ್ಲಿದ್ದ ಸರಕುಗಳ ಗೋಡನ್ ಗಳೆ ಕಣ್ಣಿಗೆ ಕಾಣದಾಗಿದ್ದವು.  ಆದರೆ ಅವೆಲ್ಲವುಗಳು ಸ್ಮೃತಿಯಲ್ಲಿ ಮಾತ್ರ ಇವೆ. ಆದರೂ ಅಂದು ದೊಡ್ಡ ದೊಡ್ಡ ಮರದ ದಿಮ್ಮಿ ಹಾಗೂ ಪೈಪ್ ಗಳನ್ನು ರೈಲ್ವೆ ವ್ಯಾಗನ್ ನಿಂದ  ಇಳಿಸಿ, ಲಾರಿಗಳಿಗೆ ತುಂಬಲು ಬಳಸುತ್ತಿದ್ದ (HERBERT MORRIS LTD, LOUGHBOROUGH ENGLAND) ಇಂಗ್ಲೆಂಡ್ ನಲ್ಲಿ ತಯಾರಾದ ಬೃಹದಾಕಾರದ ಚೈನು ಪುಲ್ಲಿ ಹಾಗೂ ಅದನ್ನು ಸ್ತಾಪಿಸಿದ ಗೋಪುರ, ರೈಲಿಗೆ ನೀರು ತುಂಬಲು ಮಾಡಿದ ನೀರಿನ ಟ್ಯಾಂಕ್ ನ್ನು ಸಧ್ಯ ನೋಡಬಹುದಾಗಿದೆ.  ಹಾಗಾಗಿ ಈ ಬಾರಿ ನಡೆಯುತ್ತಿರುವ ಕಾಮಗಾರಿ ನಡೆಯುತ್ತಿರುವಾಗ ಬರಿ ನೋಡಿ ಬರದೆ ಕೆಲವನ್ನಾದರೂ ಕೆಮರಾದಲ್ಲಿ ಸೆರೆ ಹಿಡಿದು ಒಂದೆರಡನ್ನು ಹಂಚಿಕೊಂಡಿದ್ದೇನೆ

Average: 4 (4 votes)
660 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Iynanda Prabhukumar's picture
20
May
2011
3:12

ಉ: ತಾಳಗುಪ್ಪ ರೈಲು ಒಂದು ನೆನಪು:

ಪ್ರಿಯ ಭಟ್!
ಗತಕಾಲವನ್ನು ನಮ್ಮ ಮುಂದಿಟ್ಟ ನಿಮ್ಮ ಪ್ರಯತ್ನ ಸ್ತುತ್ಯಾರ್ಹ!
ಕೆಲವು ಸುಧಾರಣೆಗಳನ್ನು ತಿಳಿಸಲು ಅನುಮತಿ ಕೋರುತ್ತೇನೆ.
ಉದ್ದುದ್ದನೆಯ ವಾಕ್ಯಗಳಿಗಿಂತ ಸಣ್ಣವು ಇನ್ನಷ್ಟು ಹೆಚ್ಚಿನ ಪರಿಣಾಮಕಾರಿಯಾಗಿ ಓದಿಸಿಕೊಂಡು ಹೋಗುತಿತ್ತೇನೋ!
ಫೊಟೊಗಳು ಎನ್ಲಾರ್ಜ್ ಆಗುವಂತಿದ್ದಿದ್ದರೆ ಚೆನ್ನಿತ್ತು.
ಒಟ್ಟಿನಲ್ಲಿ ಧನ್ಯವಾದಗಳು!