ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನೆನಪಿನ ಬುತ್ತಿಯಿಂದ ಒಂದಷ್ಟು-೨ :)

ನನ್ನ ಜಿರಳೆ ಓಡಾಡಿದಾಗ.. :)
*******************

ನಾನು ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಕಾಲ.ಅಂದು ವಾರದ ಮಧ್ಯ ದಿನ. ಜೀವಶಾಸ್ತ್ರ ಪ್ರಯೋಗ ಮುಗಿಸಿ ಮನೆಗೆ ತಲುಪಿದಾಗ ಸಂಜೆಯಾಗಿತ್ತು. ಮನೆ ಒಳಗೆ ಕಾಲಿಟ್ಟಿದ್ದೇ ತಡ,ನನ್ನ ಲೌಡು ಸ್ಪೀಕರ್ನಲ್ಲೊಂದು ಬೊಬ್ಬಿಟ್ಟೆ.. "ಅಮ್ಮಾ ನಾಳೆ ಎಂಗೊಗೆ ಜೆರಳೆ ಕೊರವಲಿದ್ದು.."(ಅಮ್ಮಾ ನಾಳೆ ನಮಗೆಲ್ಲಾ ಜೆರಳೆಯನ್ನು ಕುಯ್ಯಲಿಕ್ಕಿದೆ) ಎಂದು. ತಂಗಿ ಆಗ ಹತ್ತನೆ ತರಗತಿ. ನನ್ನ ಈ ಮಾತು ಕೇಳಿ ಅವಳು ನನಗೆ ಮುಂದಿನ ವರ್ಷ ಜೀವಶಾಸ್ತ್ರ ಬೇಡ.ಜಿರಳೆ ಕೊರೆಯಬೇಕೇ.. ಹೆಕ್.. ಅಂದಳು. ಇನ್ನೇನು ನಾನು ತೆಕ್ಕೊಂಡಾಗಿತ್ತು ನಾಳೆ ಕುಯ್ಯಲೇಬೇಕಿತ್ತು. ಅಮ್ಮನಲ್ಲಿ ಜಿರಳೆ ಹಿಡಿಯಬೇಕಲ್ಲ ಎಂದು ಅದರ ಬಗ್ಗೆ ಮಾತಾಡುತ್ತ ಕುಳಿತೆ. ಅಮ್ಮ, ಅಪ್ಪ ಬಂದ ನಂತರ ಅವರಲ್ಲಿ ಹೇಳು. ಬಚ್ಚಲು ಮನೆಯಲ್ಲಿ ರಾತ್ರೆ ಬರುತ್ತೆ ಆಗ ಪ್ಲಾಸ್ಟಿಕ್ ಕವರ್ಗೆ ಹಾಕಿ ತೆಕ್ಕೊಂಡು ಹೋಗು ಅಂತ ಹೇಳಿದ್ರು.ಆಯ್ತು ಅಂತ ತಲೆ ಆಡಿಸಿ, ಅಪ್ಪನಿಗಾಗಿ ಇಬ್ಬರೂ ಕಾಯುತ್ತಿದ್ದೆವು. ಅಪ್ಪ ಇನ್ನೇನು ಮೆಟ್ಟಿಲು ಹತ್ತಬೇಕು, ಆಗಲೆ ತಂಗಿ ಅಲ್ಲಿಗೆ ಹೋಗಿ ಪೂರ್ತಿ ವಿವರಿಸಿ ಆಗಿತ್ತು ಕತೆಯ!.ಅಪ್ಪ ಎಷ್ತೂ ಜಿರಳೆ ಬರುತ್ತೆ , ಒಂದು ಅಲ್ವಾ ಬೇಕದ್ದು . ಅಮೇಲೆ ಹಿಡಿದು ಕೊಡುವೆ ಎಂದರು.

ರಾತ್ರಿ ೧೦ ಗಂಟೆಯಿಂದಲೇ ಹೋಗಿ ,ಹೋಗಿ ನೋಡುತ್ತಾ ಇದ್ದೆ ಬಚ್ಚಲು ಮನೆಯ. ಎಲ್ಲಾದರೂ ಜಿರಳೆ ಓಡಾಡುತ್ತಿದೆಯಾ? ಎಂದು! ಅಂತೂ ೧೧ ದರ ಹೊತ್ತಿಗೆ ಕಣ್ಣಿಗೊಂದು ಬಿತ್ತು. ಅಪ್ಪನನ್ನು ಕೂಗಿ ಕರೆದೆ. ಪ್ಲಾಸ್ಟಿಕ್ ಕವರ್ ಜೊತೆ ಅಪ್ಪ ರೆಡಿ! :). ಅಂತೂ ಜಿರಳೆ ಕವರ್ ಒಳಗೆ ಸೇರಿ ಆಯ್ತು. ಕವರ್ ಮೇಲೆ ಗ್ಲಾಸ್ ಅನ್ನು ಬೋರಲು ಹಾಕಿದೆ.. ಒಳಗಿರುವ ಜಿರಳೆ ಉಸಿರುಗಟ್ಟಿ ಸಾಯಲಿ ಎಂದು! :). ರಾತ್ರೆ ತಲೆಯಲ್ಲೆಲ್ಲಾ.. ಬರಿ ಜಿರಳೆ ಕತ್ತರಿಸೋ ಯೋಚನೆನೇ ಆಯ್ತು!! ಬೆಳಗ್ಗೆ ಎದ್ದು ನೋಡಿದೆ,ಜಿರಳೆ ಸತ್ತಂತೆ ಇತ್ತು. ಹ್ಮ್ಮ್ ಸತ್ತಿದೆ ,ಎಂದು ಸುಮ್ಮನಾದೆ. ಕಾಲೇಜ್ಗೆ ಹೋಗೋ ಸಮಯ ಆಯ್ತು, ಪಕ್ಕದ ಮನೆ ಗೆಳತಿ ಬಾ ಎಂದು ಒಂದು ಕೂಗಿಟ್ಟಳು. ನಾನು ಹೊರಟೆ, ಆಗ ಅಮ್ಮ ಜಿರಳೆ.. ಜಿರಳೆ.. ಎಂದು ನೆನಪಿಸಿದರು. ಓಡಿ ಹೋಗಿ, ಪ್ಲಾಸ್ಟಿಕ್ ಕವರ್ ಅನ್ನು ಬ್ಯಾಗ್ಗೆ ತುಂಬುವಾಗ ಜಿರಳೆ ಸರ ಸರ ಎಂದು ಕವರ್ ಒಳಗೆ ಓಡಾಡಿತು. :( ಇನ್ನೇನು ಮಾಡಲಿ ಸಾಯಿಸಬೇಕಿತ್ತಲ್ಲಾ ಎಂದು ಅಲ್ಲೇ ಇದ್ದ ಪೊರಕೆ ತೆಗೆದು ಕವರ್ ಮೇಲೆ ಸರ್ಯಾಗ್ ಹೊಡೆದೆ.. ಕವರ್ ಒಡೀತೆ ಹೊರ್ತು, ಜಿರಳೆ ಸಾಯ್ಲಿಲ್ಲ!! ಅದು ಹೊರ ಓಡಿತು. ಅದನ್ನು ಸಾಹಸ ಮಾಡಿ ಇನ್ನೊಂದು ಕವರ್ ಒಳಗೆ ಹಾಕಿ ಪೊರಕೆಯಲ್ಲಿ ನಾಲ್ಕು ಒದೆ ಕೊಟ್ಟೆ. ನಂತರ ಜಿರಳೆ ಅಲ್ಲಾಡಿಲ್ಲ. ಸತ್ತಿತು ಎಂದು ಬ್ಯಾಗ್ಗೆ ತುಂಬಿ ಕಾಲೇಜ್ ಸೇರಿದೆ.

ಎಲ್ಲರೂ ತಂದ ಜಿರಳೆ ತೋರಿಸ್ತಿದ್ರು. ಬಾಟಲ್ ಅಲ್ಲಿ ಕವರ್ ಅಲ್ಲೆಲ್ಲಾ ತುಂಬಿ ಬಂದಿದ್ರು..!!
ಎಲ್ಲರ ಜಿರಳೆಯೂ ಹರಿದಾಡುತ್ತಿತ್ತು.. ಆದರೆ ನನ್ನದು..!! ಅಬ್ಬಾ ಬೇಸರವಾಯ್ತು.. ಸುಮ್ಮನೆ ಕೊಂದೆ. ಇಲ್ಲೆ ಕೊಲ್ಲಬಹುದಿತ್ತು ಎಂದು.ಮನೆಯಲ್ಲಿ ಯಾರಿಗು ಜಿರಳೆಯನ್ನು ಜೀವಂತ ತಕ್ಕೊಂಡು ಹೋಗೂದು ಅಂತ ಗೊತ್ತಿರಲಿಲ್ಲ, ನಾನು ಯಾರ ಬಳಿಯೂ ವಿಚಾರಿಸಿರಲಿಲ್ಲ.!! ಮ್ಯಾಡಮ್ ಬಂದು ಎಲ್ಲರಿಗು ಮರದ ಹಲಿಗೆ ಕೊಟ್ಟು, ಜಿರಳೆಗಳಿಗೆಲ್ಲ ಕ್ಲೋರೋಫಾರ್ಮ್ ಹಾಕ್ತಾ ಬಂದ್ರು. ಇನ್ನು ಇಬ್ಬರು ನನ್ನಂತೆಯೇ ಜಿರಳೆ ಸಾಯಿಸಿ ತಂದಿದ್ದರು. ಈಗ ಸತ್ತಿದ್ದು ಎಂದಾದಲ್ಲಿ ಕುಯ್ಯಬಹುದು ಎಂದರು. ಅಬ್ಬ ಈಗಷ್ಟೆ ಕೊಂದು ತಂದಿದ್ದಲ್ಲ. ಕವರಿಂದ ಹೊರ ತೆಗೆದು ಹಲಗೆಯಲ್ಲಿಟ್ಟೆ! ಜಿರಳೆ ..ಸರ್.. ರ್... ಎಂದು ಓಡಬೇಕೆ!! ಅಯ್ಯೋ ಎಲ್ಲಿ ಹೋಯ್ತೋ ಎಂದು ಹುಡುಕುತ್ತಿದ್ದಾಗ, ಒಬ್ಬನು ಅದರ ಮೀಸೆ ಹಿಡಿದು ಸಿಕ್ಕಿತು ಎಂದು ನನ್ನ ಎದುರೆ ಹಿಡಿದ. :) ಮ್ಯಾಡಮ್ ಬಂದು ಅದಕ್ಕೂ ಒಂದು ಹನಿ ಹಾಕಿದರು.ಜಿರಳೆ ಸುಮ್ಮನಾಯಿತು. ಎಲ್ಲರೂ ಸಾಮೂಹಿಕ ಜಿರಳೆ ಹತ್ಯೆ ಮಾಡಿದೆವು.. ಎಲ್ಲರದಕ್ಕಿಂತ ನನ್ನ ಜಿರಳೆಯು ಹೈಬ್ರಿಡ್ ನಂತೆ ಜೀರ್ಣಾಂಗವ್ಯೂಹ ದೊಡ್ಡದಾಗಿ ಕಾಣತ್ತಿತ್ತು. ಮ್ಯಾಡಮ್ ಇದು ಸರಿಯಾಗಿ ತೋರುತ್ತಿದೆ ಎಂದು ಹಲಗೆಯನ್ನು ಎಲ್ಲರೆದುರಿಗೂ ಹಿಡಿದು ತೋರಿಸುತಿದ್ದಾಗ ಮನದಲ್ಲೇನೋ ಖುಶ್ ಅನ್ನಿಸಿತು.. :)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

pradeepcomm's picture

ಚೆನ್ನಾಗಿದೆ ನಿಮ್ಮ ಜಿರಳೆ ಪಾಡು.. :)

ನಾನು ಜಿರಳೆ ಕುಯ್ಯಬೇಕಾದರೆ ಮೂರು ಕಾಲು ಕಿತ್ತು ಬಂದಿತ್ತು...ಉಳಿದ ಮೂರಕ್ಕೆ ಮೊಳೆ ಹೊಡೆದು dissection ಮಾಡಿದ್ದಾಯ್ತು..

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಹ್ಹಿಹ್ಹಿ ಜಿರಳೆ ಡಾಕ್ಟರ್ಸ್... :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ರಾತ್ರಿ ಊಟಕ್ಕೆ ಅದೇ ಮಾಡಿದ್ರೋ ಹೇಗೆ ಅಕ್ಕ :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಎನೋ.... ತಮ್ಮ ,ನಿನಗೆ ದಿನಾಲೂ ಊಟಕ್ಕೆ ಇದೆ ಇರುತ್ತಾ??? :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ಹೋಗ್ಲಿ ಬಿಡಿ ನಮಗ್ಯಾಕೆ ನಿಮ್ಮ ಅಡಿಗೆ ಮನೆ ವಿಷ್ಯ , ನಾ ಬಂದಾಗ ಮಾತ್ರ ಜಿರಳೆ ಹಾಕದಿದ್ದರೆ ಸರಿ . :D :D
ಅಂದಹಾಗೆ ಅದು ಗಂಡು ಜಿರೆಲೆಯೋ ಅಥವಾ ಹೆಣ್ಣೋ :D :D
ಯಾಕೆ ಅಂದ್ರೆ ಸ್ತ್ರಿ ಹತ್ಯೆ ಮಹಾ ಪಾಪ :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಗಂಡು ಜಿರಳೆ..!!
ಅಲ್ಲಿ ಸತ್ತಿದ್ದರಲ್ಲಿ ಗಂಡು ಜಿರಳೆಗಳ ಸಂಖ್ಯೆಯೇ ಮೂರು ಪಟ್ಟು ಜಾಸ್ತಿ ಇತ್ತು :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ಹಾಗಾದ್ರೆ ಪ್ರಾಣಿದಯಾ ಸಂಘಕ್ಕೆ ದೂರು ಕೊಡಲೇ ಬೇಕು ,
<<ಅಲ್ಲಿ ಸತ್ತಿದ್ದರಲ್ಲಿ ಗಂಡು ಜಿರಳೆಗಳ ಸಂಖ್ಯೆಯೇ ಮೂರು ಪಟ್ಟು ಜಾಸ್ತಿ ಇತ್ತು>>
ಎಲ್ಲೆಲ್ಲೂ ಮೀಸಲು ಕೇಳುವ ನೀವು ಹೀಗೆ ಸಾರ್ವಜನಿಕವಾಗಿ ಗಂಡಸರ ಮಾರಣ ಹೋಮ ನಡೆಸಿದ್ದು ಸರಿಯೇ ? :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಒಹ್... ಎನೋ ತಮ್ಮ ಭಾರಿ... ಜಿರಳೆ ಮೇಲೆ ಇಷ್ಟೊಂದು..!!! ಇನ್ನೊಮ್ಮೆ ಜಿರಳೆ ಸಾಯಿಸು.. ನೋಡ್ಕೊತೀನಿ ನಿನ್ನ..!! :D
ತರಗತಿಲಿರೋ ಹುಡುಗರೂ ಕೊಂದಿದಾರಪ್ಪ... ನಾವು ಮಾತ್ರ ಅಲ್ಲ..!!

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

palachandra's picture

ಚೆನ್ನಾಗಿದೆ ಜಿರ್ಲೆ ಪುರಾಣ,, ನಮಗೆ ಜಿರಳೆ, ಕಪ್ಪೆ ಯಾವ್ದೂ ಕತ್ತರಿಸಲಿಕ್ಕೆ ಹೇಳಲಿಲ್ಲ..
ಆದ್ರೆ ಚಿಕ್ಕವನಿರ್ಬೇಕಾದ್ರೆ ನಾನೇ ಬೇಕಾದಷ್ಟು ಕತ್ತರಿಸಿದೀನಿ.. ಅದ್ರ ಸ್ಕೆಲಿಟನ್ ಹೆಂಗಿರತ್ತೆ ನೋಡೋಣ ಅಂತ,, ಅದೂ ಅಲ್ದೇ ಕೊಂದು, ಹೂತು ವಾರ ವಾರ ನೋಡ್ತಾ ಇದ್ದೆ ಅಸ್ತಿಪಂಜರ ಕಾಣಿಸುತ್ತಾ ಅಂತ. ಹೈಸ್ಕೂಲಿಗೆ ಹೋದಮೇಲೆ ಗೊತ್ತಾಯ್ತು ಅದಕ್ಕೆ ಸ್ಕೆಲಿಟನ್ ಹೊರಗಡೆ ಇರೋದು ಅಂತ :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಪಾಲಣ್ಣ ನಿಮ್ಮ ತಲೆಗೆ ನನ್ನದೊಂದು ಸೆಲ್ಯೂಟ್.. ಹಹ್ಹ :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

palachandra's picture

:)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

n.nagaraja shetty sablady's picture

ಆತ್ಮೀರೇ ಚೆನ್ನಾಗಿದೆ ಜಿರಳೆ ಕಥೆ ಭಾಲ್ಯ ಎನ್ನುವುದು ಹಾಗ ತಾನೇ ಮತ್ತೆ ಸಿಗಲಾರದು ಅಲ್ವಾ? ಬೇಕು ಬೇಕು ಅಂತಲೇ ತಲೆ ಹತ್ತುವ ಹತ್ತಾರು ಪ್ರಶ್ನೆಗಳು ಅವುಗಳಿಗೆ ಅಮ್ಮ ಅಥಾವ ಅಪ್ಪನಿಂದ ಉತ್ತರ ಸಿಕ್ಕರೆ ಮಾತ್ರ ಸಮಾದಾನ ಅಲ್ವಾ?
ಒಮ್ಮೆ ಬರಬಾರದೇ ಆ ನಮ್ಮ ಭಾಲ್ಯ, ?!

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಹೌದು ನಾಗರಾಜ್ರೆ.. ಮತ್ತೆ ಬಾರದು... :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

malathi shimoga's picture

ದಿವ್ಯ ನಿಮ್ ಜಿರಳೆ ಪುರಾಣ ಸೂಪರ್........ಇಂಥ ನೆನಪುಗಳು ಮನಸ್ಸಿಗೆ ಎಷ್ಟು ಹಿತ ಅನ್ಸುತ್ತಲ್ವ.
ನಿಜವಾಗ್ಲು..college life is golden life ಅಲ್ವ..

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ಅದನ್ನೇ ಕನ್ನಡದಲ್ಲಿ ಬರೆಯಬಹುದಿತ್ತಲ್ಲ ಅಕ್ಕ
"ಕಾಲೇಜು ಜೀವನ ಬಂಗಾರದಂತ ಜೀವನ " ಅಂತ .

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಮಾಲತಿರವರೆ... ನಿಮ್ಮ ಪ್ರತಿಕ್ರಿಯೆಗೆ.. ನನ್ನೀ.. :)
ಈಗಲೂ ನಂದು ಕಾಲೇಜ್ ಜೇವನ golden ಅಲ್ಲಾ.. godow,n ಜೀವನ ಆಗ್ಬಿತ್ತಿದೆ..
:)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

anil.ramesh's picture

ಇಂದು ಮಧ್ಯಾಹ್ನ ಮನೆಯ ಕಾಂಪೌಂಡ್ ಗೋಡೆಯ ಮೇಲೆ ಒಂದು ಪುಟ್ಟ ಜಿರಳೆ ಕಾಣಿಸಿತು.
ತಕ್ಷಣ ಕೋಣೆಯಿಂದ ಕ್ಯಾಮೆರಾ ತೆಗೆದುಕೊಂಡು ಬಂದು ಜಿರಳೆಯ ಚಿತ್ರಗಳನ್ನು ಸೆರೆಹಿಡಿದೆ.
ಒಂದು ಚಿತ್ರ ಇಲ್ಲಿದೆ.

ಅಂದಹಾಗೆ, ಜಿರಳೆ ಪುರಾಣ ಚೆನ್ನಾಗಿದೆ.

-ಅನಿಲ್

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಫೋಟೋ ಚೆನ್ನಾಗಿದೆ :)
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಅನಿಲ್ :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

raghava's picture

ಅಪ್ಜಿರ್ಳೆ: (ಮರಿಜಿರ್ಳೆಗೆ) ಏಯ್, ಎಲ್ಲಿಗ್ ಹೊರ್ಟೆ?
ಮರಿಜಿರ್ಳೆ: ಇಲ್ಲೇ, ಬಾತ್ರೂಮ್ಕಡೆಗೆ. ಟೂತ್ಬ್ರಶಿನ್ಸಂದಿಲಿ ಇರೋದನ್ನ ತಿಂದ್ಬರ್ತೀನಿ.
ಅಮ್ಜಿರ್ಳೆ: ಏನೂ ಬೇಡ. ತೆಪ್ಗಿರು. ಕತ್ಲೆ ಆಯ್ತು. ಮೊದ್ಲೇ ಜನ ಸರಿ ಇಲ್ಲ ಈಗ. ಏನೇನೋ ಬಳ್ಸ್ತಾರೆ ಬೇಗಾನು/ಮಾರ್ಟೀನು ಅಂತ.
ತಮ್ಜಿರ್ಳೆ: ಅಣ್ಣಾ ಅಣ್ಣ ನಾನೂ ಬರ್ತೀನಿ.
ಮರಿಜಿರ್ಳೆ: ಏನಿಂದೊಳ್ಳೆ. ಸುಮ್ನಿರು. ನಂಗೇ ಹೋಗೋಕ್ಬಿಡ್ತಿಲ್ಲಾ ನೀನ್ಬೇರೆ. ಮಲ್ಕಾಹೋಗ್ಸಾಕ್ ...

ಮರಿಜಿರ್ಳೆ ಮುಂಡೇದು ಭಾಳ ಅಡ್ವೆಂಚರಸ್ಜೀವ. ಏನ್ಹೇಳ್ದ್ರೂ ಕೇಳ್ಲಿಲ್ಲಾ. ನೋಡ್ತು ಅಪ್ಜಿರ್ಳೆ,ಅಮ್ಜಿರ್ಳೆ,ತಮ್ಜಿರ್ಳೆ ಎಲ್ಲಾ ಸೌಂಡ್ಸ್ಲೀಪಲ್ಲಿದಾವೆ /* ಜಿರ್ಳೆ ಗೊರ್ಕೆ ಹೆಂಗೆ ಹೊಡ್ಯೋದು :) */ ಸರಿ ಹೊರ್ಡ್ತು.
(ಮರಿಜಿರ್ಳೆ ತಲೇಲಿ ಬರ್ತಿರೋ ಯೋಚ್ನೆಗ್ಳು): {ಸಂದಿ ಮೂಲೆ, ಎರ್ಡ್ಲೆಫ್ಟು ಒಂದ್ರೈಟು ಸ್ವಲ್ಪ ಮುಂದೆ ಪೈಪಿಂದ ಹೊರ್ಗೆ. ಬಂತು. ಟಡಾ! ಬಚ್ಲುಮನೇ! ಸರ್ಚ್ಮೋಡ್ ಆನ್, ಎಲ್ಲಿ ಬ್ರಷ್ಷು ಎಲ್ಲಿ ... ಹ್ಮ್ಮ್ ... ಅಯ್ಯ್ ಏನಿನ್ನೂ ಬೆಳ್ಕಿದೆ! ಅಯ್ಯೋ ,, ಯಾರೋ ಇದಾರೆ! ಎಸ್ಕೇಪೋಯೆಸ್ಕೇಪ್! ಓಡುಮಗಾಓಡು!‌ಭಾಗೋ! ರನ್ಫಾರ್ಯುವರ್ಲೈಫು! ಊಹೂ! ಏನೂ ಪ್ರಯೋಜ್ನ ಇಲ್ಲ. ಕವರಲ್ಲಾಕ್ಬುಟ್ರು. ಸಿಗಾಕ್ಕಂಡೆ, ಛೆ! ಹೆಂಗ್ತಪ್ಸ್ಕೊಳೋದು? ಏನ್ಕರ್ಮಾನೋ , ಎಲ್ಲಾ ಬಿಟ್ಟು ಈ ಮಾರಾಯ್ತಿ ನನ್ಹಿಡ್ಕೊಂಡ್ಬಿಟ್ಲಲ್ಲಾ!‌ನಾನೇ ಸಿಗ್ಬೇಕಿತ್ತಾ ಇವ್ಳ್ಕೈಗೆ! ಏನ್ಮಾಡ್ತಾರೋ ನಂಗೆ! ಹಾಳಾಘೋಗ್ಲಿ, ಈಗ್ಸದ್ಯಕ್ಕೆ ನಿದ್ದೆ ಮಾಡಣ.} /* ಮಲ್ಕೊತು ಮರಿಜಿರ್ಳೆ */

/* ವೇಕಿ ವೇಕಿ , ರೈಸೆಂಡ್ಶೈನಿಂಗ್! ಮರಿಜಿರ್ಳೆ ಕಣ್ಬಿಡ್ತು */ ಇನ್ನೂ ಆ ಟೆಂಟಲ್ಲೇ ಇದೀನಿ. ಏನಾದ್ರು ಎಸ್ಕೇಪ್ದಾರಿ ಇದ್ಯಾ ನೋಡಣ.
/* ಅಲ್ಲಿ ಇಲ್ಲಿ ಸ್ವಲ್ಪ ಓಡಾಡ್ತು. */

ಥೋಪೇಕ್! ಠಪಾಕ್! ಥಪಿಲ್! ಥಿಪ್ಥಪ್ಥಪಾಶ್! ಧಪ್ಧಡಪ್ಧಡೂಪ್!
ಮರಿಜಿರ್ಳೆ: ಅಯ್! ಇದೊಳ್ಳೇ ! ಸುಮ್ಸುಮ್ನೇ ಚಚ್ತಾರಲ್ಲಪ್ಪಾ ಏನ್ಕತೆ! ಅಯ್ಯ್ ಅಮ್ಮ! ಓಯ್! ಏನಕ್ಕೆ ಅಂತ ಹೇಳಾದ್ರು ಹೊಡ್ಯಮ್ಮಾ! ಅದೂ ಆ ಪರ್ಕೇಲಿ ಹೊಡೀತೀರಾ! ಅಯ್ಯೋ! ಕಾಲು! ಅಯ್ ಮೀಸೆ! /* ಬಿತ್ತು ನೋಡಿ ತಲೆಮೇಲೊಂದು ಸರ್ಯಾಗಿ, ಮರಿಜಿರ್ಳೆ ಅಲ್ಲೇ ಮಟಾಶ್! */

ಇಲ್ಲಿ ಅಪ್ಜಿರ್ಳೆ ಮತ್ತೆ ಅಮ್ಜಿರ್ಳೆ ತಮ್ಜಿರ್ಳೆಗೆ ಹೇಳ್ತಿದ್ವು. "ನೋಡು, ಹೇಳಿದ್ರೆ ಕೇಳ್ಲಿಲ್ಲಾ ಹೋದ ಅವ್ನು ಹೊಗೆ ಹಾಕ್ಸ್ಕಂಡ! ಹೇಳೋ ಮಾತೇ ಕೇಳೋಲ್ಲಾ ಈಗಿನ್ಮಕ್ಳು.! ಈಗ್ಲಾದ್ರೂ ದೊಡ್ಡೋರು ಹೇಳೋದನ್ನಾ ಕೇಳು.' ತಮ್ಜಿರ್ಳೇ ತಲೆ ಅಲ್ಲಾಡ್ಸಿದ್ದೇ ಬಂತು.

ಮಾರಲ್ಲಾಫ್ದಿಸ್ಟೋರಿ: ದೊಡ್ಡೋರು ಹೇಳೋದನ್ನಾ ಕೇಳ್ಬೇಕು (ಎಲ್ಲಾ ಟೈಮಲ್ಲಾಂದ್ರೂ). ಇಲ್ಲಾಂದ್ರೆ ಕಷ್ಟ.

:D
:D
:D

ಅಂದ ಹಾಗೆ, ನಿಮ್ನೆನ್ಪಿನ್ಬುತ್ತಿ ಕತೆಗ್ಳು ಚೆನ್ನಾಗಿವೆ! :P

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Aravinda's picture

:) ಯಪ್ಪಾ...

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಅಣ್ಣೋ ಸೂಪರ್ ಕಣಣ್ಣೋ.. ಸ್ಟೋರಿ. ಸಕತ್ :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಅಣ್ಣೋ ಸೂಪರ್ ಕಣಣ್ಣೋ.. ಸ್ಟೋರಿ. ಸಕತ್ :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

palachandra's picture

ಅಣ್ಣಾ ನಿಂ ಕಥೆ ಓದೋಕೆ ಕಂಡಾಪಟೆ ತಾಳ್ಮೆ ಬೇಕು!

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

anil.ramesh's picture

ರಾಘವ,
ನಿಮ್ಕಥೆ ಓದಕ್ಹತ್ನಿಮ್ಷ ಬೇಕಾಯ್ತು.

ಚೆನ್ನಾಗಿದೆ.

-ಅನಿಲ್

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Indushree's picture

ನಾನು ಜಿರಲೆ dissect ಮಾಡಿದ್ದು ನೆನಪಾಯ್ತು...ಜಿರಲೆಯನ್ನ ಮೇಣದ ಹಲಗೆಗೆ ಸಿಕ್ಕಿಸುವುದು ಹೇಗೆ ಅಂತ ತೋರಿಸಿಕೋಡೋಕೆ ಹೋಗಿ ನಮ್ಮ ಲೆಕ್ಚರರ್ ಪಾಪ ನನಗೆ ಕೊಟ್ಟಿದ್ದ ಆ ಜಿರಲೆ ತಲೆ ಕಿತ್ತು ಹಾಕುವುದರೊಂದಿಗೆ dissection ಶುರು ಆಯ್ತು...ಜಿರಲೆ ಮುಟ್ಟೋಕು ಹೆದರ್ತಾ ಇದ್ದು ಒಂದು ಘಂಟೆ ಬರಿ ಸುಜಿಯಿಂದಾ ಜಿರಲೆಯನ್ನು ಆ ಕಡೆ ಈ ಕಡೆ ತಿರುಗಿಸ್ತಾ ಇದ್ದ ನನ್ನ್ ಸ್ನೇಹಿತೆ ಜ್ಯೋತಿ ಕೊನೆಗೂ ಧೈರ್ಯ ಮಾಡಿ ಜಿರಲೆಯನ್ನು ಮೇಣದ ಹಲಗೆಗೆ ಚುಚ್ಚಿ dissect ಮಾಡಿದಳು.. ಅವಳ ಜಿರಲೆಯ ಎಲ್ಲಾ ಅಂಗಾಂಗಗಳು ಸ್ಪಷ್ಟವಾಗಿ ಗೋಚರಿಸುತ್ತಿತ್ತು... ನಮಗೆ ಕಾಲೇಜಿಂದಾನೆ ಜಿರಲೆ ಕೊಟ್ಟಿದ್ರು ನಾವು ಮನೆಯಿಂದ ತಗೊಂಡು ಹೊಗಿರಲಿಲ್ಲ.....

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ಹಾಗಾದ್ರೆ ನಿಮ್ಮ ಕಾಲೇಜಲ್ಲಿ ಜಿರಳೆ ಫಾರಂ ಏನಾದ್ರೂ ಇತ್ತ ? :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

manjunathams's picture

ಸಂಪದದಲ್ಲಿ ಇಷ್ಟು ಜನ ಜಿರಳೆ ಹಂತಕರಿದ್ದಾರೆಂದು ಗೊತ್ತಿರಲಿಲ್ಲ.}:) }:-) }:) }:-)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

<<ಸಂಪದದಲ್ಲಿ ಇಷ್ಟು ಜನ ಜಿರಳೆ ಹಂತಕರಿದ್ದಾರೆಂದು ಗೊತ್ತಿರಲಿಲ್ಲ>>
ಇದನ್ನ ಓದಿದ ವಾಟಾಳ್ , ಜಿರಳೆ ಸಂಘದ ಪರವಾಗಿ ಹೈಕೋರ್ಟ್ ಅಲ್ಲಿ ಸಾರ್ವಜಿರಳೆ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತಿದ್ದಾರಂತೆ . ಹಿ ಹೀ :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Indushree's picture

ನನಗೆ ಗೊತ್ತಿಲ್ಲ...ನಾನಂತೂ ನೋಡಿರಲಿಲ್ಲ..... ಒಟ್ಟಿನಲ್ಲಿ ಎಲ್ಲರಿಗೂ ಅವರೇ ಕೊಟ್ಟಿದ್ದು....

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ಪಾಪ ಅದರ ಕೊನೆ ಆಸೆ ಏನು ಅಂತ ಕೇಳಿ ಸಾಯಿಸಿದಿರೋ ಅಥವಾ ಸಿಕ್ಕಿದ್ದೇ ಚಾನ್ಸ್ ಅಂತ ಒಂದೇ ಏಟಿಗೆ ಡಮಾರ್ ಅನಿಸಿದಿರೋ . :D :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Indushree's picture

ಕೊನೆ ಆಸೆ ಕೇಳೋಕೆ ಅವರು ನಮಗೆ ಕೊಟ್ಟಿದ್ದು chloroform ಹಾಕಿದ್ದ ಜಿರಲೆಗಳು... ಅವುಗಳ ಅರೆ ಜಾಗೃತಾವಸ್ಥೆಯಲ್ಲಿ ಕೊಂದಿದ್ದು... :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ಹ್ಮ್ ಏನ್ರೀ ಇದು ಚಿತ್ರಹಿಂಸೆ ಕೊಟ್ಟು ಕೊಟ್ಟು ಸಾಯಿಸಿದ್ದೀರಿ , ಅವೇನು ಶಾಪಹಾಕಿದಾವೋ .
ಅಂದ್ರೂ ಜಿರಳೆಗಳು ಅದೃಷ್ಟ ಮಾಡಿದ್ವು ಬಿಡಿ . ತಾವು ಸಾಯುವ ಭಾಗ್ಯ ನೋಡೋಕೆ ಎಷ್ಟು ಜನರಿಗೆ ಸಿಗುತ್ತೆ ಅಲ್ವಾ :D :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Indushree's picture

<<ತಾವು ಸಾಯುವ ಭಾಗ್ಯ ನೋಡೋಕೆ ಎಷ್ಟು ಜನರಿಗೆ ಸಿಗುತ್ತೆ ಅಲ್ವಾ
ಅಯ್ಯೊ ಅವುಗಳು ಹೇಗೆ ನೋಡಿರುತ್ತೆ ಹೇಳಿ... ಅವುಗಳೆಲ್ಲ ಜಾಗೃತವಾಗಿರಲಿಲ್ಲ ಅಂತ ಹೇಳಿದೆನಲ್ಲ....

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ಹೋಗ್ಲಿ ಬಿಡಿ , ನಮಗ್ಯಾಕೆ ಅವಕ್ಕಿಲ್ಲದ ಚಿಂತೆ .ಹಿ ಹೀ
ಅದ್ರು ಇನ್ನೊಮ್ಮೆ ಜಿರಳೆ ಕೊಲ್ಲುವಾಗ ಕೊನೆ ಆಸೆ ಕೇಳಿ ಕೊಲ್ಲಿ . :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Indushree's picture

ಸರಿ ಹಾಗೆ ಮಾಡ್ತೀನಣ್ಣಾ... :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Rakesh Shetty's picture

ಎಕ್ಕಲೆದ ಫ್ರೈ ಎಂಚ ಇತ್ತಂಡ್ ದಿವ್ಯ ;)

ಚೆನ್ನಾಗಿದೆ ಜಿರಳೆ ಪುರಾಣ, ನಮಗೆ ಜಿರಳೆ,ಕಪ್ಪೆ ಯಾವುದನ್ನು ಕುಯ್ಯಲು ಹೇಳಲಿಲ್ಲ ನೋಡಿ, ಪ್ರಾಣಿ ಹಿಂಸೆ ಮಹಾ ಪಾಪ ಅಂತ ನಮ್ಮ ಮೇಷ್ಟ್ರು ಹೇಳ್ತಾ ಇದ್ರೂ :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಧನ್ಯವಾದಗಳು.. ಶೆಟ್ರೆ.. :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinutha.mv's picture

ದಿವ್ಯ ಚೆನ್ನಾಗಿದೆ ನಿಮ್ಮ ಜಿರಳೆ ಕೊಯ್ತ :)
ನಾವೂ ಸಹ ಜಿರಳೆ ಮನೆಯಿ೦ದಾನೆ ಹಿಡ್ಕೊ೦ಡು ಹೋಗಬೇಕಿತ್ತು. ನಮ್ಮ ಮನೆ ಎದುರಿಗೆ ಒ೦ದು ಸ್ಟೋರ್ ರೂಂ ಇತ್ತು. ಅದರಲ್ಲಿ ತು೦ಬಾ ಚೆನ್ನಾಗಿರೋ ಜಿರಳೆಗಲಿದ್ದವು!! ಮೇಲ್ಗಡೆ ಮನೆ ಅಣ್ಣ೦ದ್ರು, ನಮ್ತ೦ದೆ ಎಲ್ಲರಿಗೂ ಹೇಳಿ ಇಟ್ಟಿದ್ದೆ. ಎಲ್ಲರೂ ಸೇರ್ಕೊ೦ಡು ಸುಮಾರು ೬-೭ ಜಿರಳೆ ಹಿಡ್ಕೊಟ್ಟಿದ್ರು. ಕವರ್ ನಲ್ಲಿ ಕಟ್ಕೊ೦ಡು ಹೋಗಿದ್ದೆ. ಒಬ್ಳು ಬೆ೦ಕಿಪೊಟ್ಟಣದಲ್ಲಿ ಹಿಡ್ಕೊ೦ಡು ಬ೦ದಿದ್ಲು. ಕ್ಲಾಸ್ನಲ್ಲಿ ಹೇಗಿದೆ ಅ೦ತ ನೋಡೋಕೆ ತೆಗೆದಳು. ಅಷ್ಟೇ! ಕ್ಲಾಸಿನಲ್ಲೆಲ್ಲಾ ಅಲ್ಲೋಲ ಕಲ್ಲೋಲ! ಒಬ್ಳು ಜಿರಳೆ ಕಾಲು ಹತ್ರ ಇದೆ ಅ೦ದಿದ್ದು ಕೇಳಿಯೇ ಅಳೋದಿಕ್ಕೇ ಶುರು ಮಾಡಿದ್ಲು. ಒಬ್ಳು ಕ್ಲೋರೂಫಾರ್ಮ್ ಬಾಟಲನೊಳಗೆ ಹಾಕಿದ್ದ ಜಿರಳೆಗಳನ್ನು ನೋಡಿ ತಲೆತಿರುಗಿ ಬಿದ್ದು ಬಿಟ್ಲು. ಇನ್ನೊಬ್ಳು ತು೦ಬಾ ಧೈರ್ಯ ಮಾಡಿ dissection ಮಾಡೋದಕ್ಕೆ ಶುರು ಮಾಡಿದ್ಲು. ಪಾಪ! ಕುಯ್ದ೦ಗೂ ಬರೀ fat! ಮೇಡಂ ಹೇಳಿದ್ರು, ಇದು ಲೇಡಿ ಕಾಕ್ರೋಚ್! :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ಪ್ರತಿಕ್ರಿಯೆಗಾಗಿ ಧನ್ಯವಾದಗಳು ವಿನುತಾ.. :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

raghava's picture

(ಕಾಕ್)ರೋಚಕ ಅನುಭವಗಳು! :P

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

asuhegde's picture

ಈಗ ಇವಕ್ಕೆಲ್ಲಾ ಕಡಿವಾಣ ಹಾಕಿದ್ದಾರಂತೆ.
ಪ್ರಾಣಿಹಿಂಸೆ ಮಾಡುವಂತಿಲ್ಲ. ನನ್ನ ಮಗಳು ಹೇಳಿದ ನೆನಪು.
ಆಕೆಯ ಪದವಿ ಪೂರ್ವ ತರಗತಿಗಳಲ್ಲಿ ಜೀವಶಾಸ್ತ್ರದ ಯಾವ ಪ್ರಯೋಗವನ್ನೂ ಮಾಡಿಸಿಲ್ಲ.

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

manjunathams's picture

ಮೇಲಿನ ಎಲ್ಲಾ ಹಂತಕ ಹಂತಕಿಯರ ಕಾರಣದಿಂದಾಗಿ ಬಹುಶಃ ಜಿರಳೆಗಳ ಅಭಾವ ಇರಬಹುದು

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

manjunathams's picture

ಇರಬಹುದು ಇವತ್ತು ಕವಿಮನಸ್ಸಿಗೆ ರಜಾದಿನ
ಅದಕ್ಕೆ ಬಂದಿಲ್ಲ ಈ ದಿನ ಆಸು ಕವನ.

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

asuhegde's picture

ಜ್ವರ ಬಂದು ಹೋದ ಮೇಲೆ ಕೆಮ್ಮೀಗ ಉಳಿದಿದೆ
ತಲೆ ನೋವು ಕಾಡುತಿಹುದು ಮೂಗು ಮೋರಿ ಆಗಿದೆ

ವಿಷಯ ನೂರಾರು ಇದ್ದರೂ ಬರೆಯಲೇನೂ ತೋಚದು
ಮಾತು ಹೊರಬರುವ ಮೊದಲೇ ಕೆಮ್ಮು ಮಾತ ತಡೆವುದು

ಮೈಕೈ ಎಲ್ಲಾ ನೋವು ಯಾರೋ ಹಿಡಿದು ಗುದ್ದಿರುವಂತಿದೆ
ತುಂಬಿದ ಸಿಟಿ ಬಸ್ಸಲ್ಲಿ ನಿಂತೇ ಪಯಣ ಮುಗಿಸಿ ಇಳಿದಂತಿದೆ

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

manjunathams's picture

ಮುಸುಕಿದ ಮೋಡ ಕರಗಲೇ ಬೇಕು ಒಂದಿಲ್ಲೊಂದು ಕ್ಷಣ
ತಾಕಲೇ ಬೇಕು ಇಳೆಗೆ ದಿನಕರನ ಕಿರಣ ಅನುಕ್ಷಣ!
ತಾಪ ದೇಹಕ್ಕಾದರೂ ಮನಕ್ಕೆ ನೂರೆಂಟು ಕವಲುಗಳು
ಹೇಗಾದರೂ ಹೊರಬರಲೇಬೇಕು ಕವಿಯ ಕವನಗಳು!

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

rashmi_pai's picture

ದಿವ್ಯ,
ಜಿರಳೆ ಪುರಾಣ ಚೆನ್ನಾಗಿದೆ.
ನಾನು ಪ್ಲಸ್ ಟು ಕಲಿಯುತ್ತಿರುವಾಗ ಇದೇ ಅನುಭವ ಆಗಿತ್ತು. ನಮ್ಮ ಮನೇಲಿ ಜಿರಳೆ ಇರುತ್ತಿರಲಿಲ್ಲ. ಅದಕ್ಕಾಗಿ ಹತ್ತಿರದ ಮನೆಯವರು ನನಗೆ ಜಿರಳೆ ಹಿಡಿದು ಕೊಟ್ಟಿದ್ದರು. ಮತ್ತೊಮ್ಮೆ ಜಿರಳೆಗಾಗಿ ರೇಷನ್ ಅಂಗಡಿಗೆ ಹೋಗಿ ಅಲ್ಲಿಯ ರೇಷನ್ ಮಾಮನಲ್ಲಿ ಜಿರಳೆ ಕೇಳಿದ್ದೆ.

ಲ್ಯಾಬ್್ನಲ್ಲಿ ಜಿರಳೆಗಳನ್ನು ಮೂರ್ಛೆ ಹೋಗುವಂತೆ ಮಾಡಲು ಸ್ಪಿರಿಟ್ ಅದ್ದಿದ್ದ ಹತ್ತಿ (cotton)ಯಿರುವ ಬಾಟಲ್್ಗೆ ಹಾಕಲಿಕ್ಕೆ ಸರ್ ಹೇಳಿದ್ದರು. ಸ್ವಲ್ಪ ಸಮಯದ ನಂತರ ಅಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿರುವ ಜಿರಳೆಗಳನ್ನು ಹೊರತೆಗೆಯುವಂತೆ ಹೇಳಿದ್ದೂ ಆಯಿತು. ನಾನು ಜಿರಳೆಯನ್ನು ತೆಗೆಯಲು ಹೋದೆ. ಬಾಟಲ್ ಮುಚ್ಚಳ ತೆಗೆದು ಜಿರಳೆಯನ್ನು ತೆಗೆಯಬೇಕೆಂದಿರುವಾಗ ನಾನೇ ಪ್ರಜ್ಞೆ ತಪ್ಪಿ ಬಿಟ್ಟೆ. ಆಮೇಲೆ 10 ನಿಮಿಷ ಕಳೆದ ಮೇಲೆ ನಂಗೊತ್ತಾದದ್ದು.

ಲ್ಯಾಬ್್ನಲ್ಲಿ ಎಲ್ಲರಿಗೂ ನಗು..

ಅದಕ್ಕೇ ನಮ್ಮ ಸರ್ ಹೇಳ್ತಾ ಇದ್ರು,. ಬಾಟಲ್್ನಲ್ಲಿರುವ ಜಿರಳೆಯ ಪ್ರಜ್ಞೆ ತಪ್ಪುವ ಮೊದಲೇ ಬೀಟ್್ರೂಟ್್ನ (ಪ್ಲಸ್ ಟುನಲ್ಲಿರುವಾಗ ನನಗಿಟ್ಟಿದ್ದ ಅಡ್ಡ ಹೆಸರು) ಪ್ರಜ್ಞೆ ತಪ್ಪಿತ್ತು ಎಂದು ...

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

Divya Bhat Balekana's picture

ರಶ್ಮಿ.. :)
ನಿನ್ನ ಕತೆನು ಚೆನ್ನಾಗಿದೆ.. ಪ್ರತಿಕ್ರಿಯೆಗಾಗಿ ಧನ್ಯವಾದಗಳು.. :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

asuhegde's picture

>>>.......ಮೊದಲೇ ಬೀಟ್ ರೂಟ್ ನ (ಪ್ಲಸ್ ಟುನಲ್ಲಿರುವಾಗ ನನಗಿಟ್ಟಿದ್ದ ಅಡ್ಡ ಹೆಸರು) ...<<<
ಬೀಟ್ ರೂಟ್ :-D
ಇನ್ನು ಮುಂದೇನೂ ಅದೇ... :)

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

vinideso's picture

ಚೆನ್ನಾಗಿದೆ ನಿಮ್ಮ ಜಿರಳೆ ಪುರಾಣ ಬೀಟ್ ರೂಟ್ ಅಕ್ಕ :D :D :D

ಉ: ನೆನಪಿನ ಬುತ್ತಿಯಿಂದ ಒಂದಷ್ಟು-೨ :)

rashmi_pai's picture

:)