January 22, 2010 - 11:56am
ಇಂದು ಬೆಳಗ್ಗೆ ಹಾಸ್ಟೆಲ್ ತಿಂಡಿ ಮುಗಿಸಿ ಪೇಪರ್ ಓದುತ್ತಿದ್ದೆ. ಪಕ್ಕದಲ್ಲೇ ಕುಳಿತವಳು ಸಂಯುಕ್ತ ಕರ್ನಾಟಕ ಓದುತ್ತಿದ್ದಳು. ನಿನ್ನದು ಓದಿ ಆದ ನಂತರ ನನಗೆ ಕೊಡು ಎಂದು ಬುಕ್ ಮಾಡಿದೆ. ಒಮ್ಮೆಲೇ ಅವಳು ನೀವು ಹವ್ಯಕರೇ ಅಲ್ವಾ ಅಂತ ಕೇಳ್ಬೇಕಾ.. ಹ್ಮ್ಮ್ ಅಂದೆ. ಏನು ಹೀಗೆ ಕೇಳಿದಳಲ್ಲ, ಎಂದು ಅವಳನ್ನೊಮ್ಮೆ ದಿಟ್ಟಿಸಿ ನೋಡಿದೆ. ಆಗ ಅವಳು”ಅಲ್ಲ ನಿಮ್ಮಲ್ಲಿ ಪೇಪರ್ ಅಲ್ಲೆಲ್ಲ ಬರೋವಷ್ಟರ ಮಟ್ಟಿಗೆ ಹುಡುಗಿಯರು ಕಡಿಮೆಯಾಗಿದಾರಾ ಅಂದಳು. ಏನು ಉತ್ತರಿಸದೆ ಪ್ರಶ್ನಾರ್ಥಕವಾಗಿ ಅವಳನ್ನೇ ನೋಡಿದೆ. ಪೇಪರ್ ಕೈಗಿತ್ತು ಹೋದಳು. Read more about ಹವ್ಯಕರೇ ಉದಾಹರಣೆಯಾದರೇಕೆ??
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 19, 2010 - 11:10pm
ಸ್ಕೌಟ್ಸ್ ಮತ್ತು ಗೈಡ್ಸ್ ಮೊದಲಿಗೆ ಪ್ರಾರಂಭವಾಗಿದ್ದು ಯುನೈಟೆಡ್ ಕಿಂಗ್ಡಮ್ನಲ್ಲಿ.ಲಾರ್ಡ್ ಬಾಡನ್ ಪಾವೆಲ್ ರವರು ೧೯೦೭ರಲ್ಲಿ ಹುಡುಗರಿಗಾಗಿ ಸ್ಕೌಟ್ಸ್ ಪ್ರಾರಂಭಿಸಿದರು.ಇದು ಅಲ್ಲೂ, ಮತ್ತು ಇತರೆ ದೇಶಗಳಲ್ಲೂ ಬೇಗನೆ ಹರಡಿಕೊಂಡಿತು. Read more about ಏನಿದು ಸ್ಕೌಟ್ಸ್ ಮತ್ತು ಗೈಡ್ಸ್?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 15, 2010 - 1:15pm
ಸೂರ್ಯನಿಗೂ ಅಡ್ಡಗಟ್ಟುವವರಿದ್ದಾರಲ್ಲಾ…!! ಕಣ್ಣು ಹಾಗೆಯೇ ಕ್ಯಾಲೆಂಡರ್ ನೋಡಿತು.. ಮನಸ್ಸು ಹಾಗೆಯೇ.., ಈ ಸೂರ್ಯಗ್ರಹಣದ ಯೋಚನಾ ಲಹರಿಯ ಸುತ್ತ ಸುತ್ತ ತೊಡಗಿತು. ಬಾಲ್ಯದಲ್ಲಿ ಇದೇ ರೀತಿ.. (ಮೂರನೆಯೋ, ಐದನೆಯೋ ಕ್ಲಾಸ್ನಲ್ಲಿದ್ದಾಗ)ಮಧ್ಯಾಹ್ನ ಹೊತ್ತಲ್ಲೆ ಗ್ರಹಣ ಕಾಲವಿತ್ತು.ರಜಾ ದಿನವೇ ಬಂದಿತ್ತು. ನಾವೆಲ್ಲರೂ ನನ್ನ ಅಜ್ಜನ ಮನೆಯಲ್ಲಿದ್ದೆವು. ಹೆಚ್ಚಿನ ಮೊಮ್ಮಕ್ಕಳೆಲ್ಲರೂ ಸೇರಿದ್ದರು. Read more about ಬಾಲ್ಯದಲ್ಲಿ ಕಂಡ ಗ್ರಹಣ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
January 12, 2010 - 8:03pm
ಹಾಗೇ.. ಸಂಪದದಲ್ಲಿ ಬರೆದಿದ್ದ ಬ್ಲಾಗ್ ಬರಹಗಳನ್ನು ಓದುತ್ತಿದ್ದೆ.ಸಂತೋಷರವರು ಬರೆದ "3Idiots ಚಲನಚಿತ್ರ ವಾಸ್ತವ ಬದುಕನ್ನೇ ಹೇಳುತ್ತದೆ" ಎಂದು ಬರೆದಿದ್ದನ್ನು ಓದಿದಾಗ,ಮನಸ್ಸನ್ನು ಕೋಣೆಯೊಳಗೇ ಬಂಧಿಸಲಾಗಲಿಲ್ಲ.ಇಂದು ತೋಚಿದ್ದನ್ನೆಲ್ಲಾ ಬರೆಯಬೇಕೆಂದೆನಿಸಿತು. ಸಂಪದದಲ್ಲಿ ನನ್ನ ಬರಹಗಳಿಗೆ ಇಷ್ಟು ಸಮಯ ವಿರಾಮ ಕೊಡಬೇಕಾಗಿ ಬಂದಿದ್ದೂ ,ಈ ಇಂಜಿನಿಯರಿಂಗ್ ಎಂಬ ಪೆಡಂಭೂತಕ್ಕಾಗಿಯೇ.. ಬರೆಯುತ್ತಿದ್ದೆ ನಾನೂ.. ನನ್ನಷ್ಟಕ್ಕೆ..!! ಮನೆಯಲ್ಲಿ ಬರವಣಿಗೆಯ ತೋರಿಸುತ್ತಿದ್ದೆ.ಅದನ್ನು ಒಮ್ಮೆ ಓದಿ ನೋಡಲೂ ಉತ್ಸಾಹವಿಲ್ಲದವರಂತಿದ್ದರು.. ಎಲ್ಲಿ ಮಗಳಿಗೆ ಇದರಲ್ಲೇ ಆಸಕ್ತಿ ಹೆಚ್ಚಾಗಿ ಓದಿನ ಕಡೆ ಗಮನ ಕಡಿಮೆಯಾಗಿ ಇದನ್ನೇ ವೃತ್ತಿಯನ್ನಾಗಿ ಆರಿಸಿದರೆ ಎನ್ನೋ ಭಯವಿದ್ದಿರಬಹುದು..!! Read more about ಬದುಕಲು ಬಿಡಿ, ಬೇಕಾದ ಹಾಗೆ..!!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
June 1, 2009 - 9:56pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
Pages