~
ಗರಿಗೆದರಿದಾಗ
exchange of thoughts, views among all thinkers of our land
ಸಾರ್ಥಕ ಜೀವನ:
ಪ್ರಕೃತಿಯನ್ನು ನೋಡಿ, ಗಮನಿಸಿ. ಒ೦ದು ಮರ ತೆಗೆದುಕೊಳ್ಳಿ. ಹೂ ಬಿಡುತ್ತದೆ. ಅದು ಕಾಯಿಯಾಗುತ್ತದೆ. ಆ ಕಾಯಿಯೂ ಮಾಗುತ್ತಾ ಬರುತ್ತದೆ. ಹುಳಿ, ಕಹಿ ಕಳೆದುಕೊ೦ಡು ಹೆಚು ಹೆಚ್ಚು ಸಿಹಿಯಾಗುತ್ತಾ ಹೋಗುತ್ತದೆ. ಕೊನೆಗೆ ಗಿಡದಿ೦ದ ಕಳಚಿ ಭೂದೇವಿಯ ಮಡಿಲನ್ನು ಸೇರುತ್ತದೆ. ತನ್ನ ಹೊರ ಶರೀರವನ್ನು ಮಣ್ಣಿನಲ್ಲಿ ಕರಗಿಸಿ ತನ್ನಲ್ಲಿನ ಪ್ರಾಣಸತ್ವವಾದ ಬೀಜದಿ೦ದ ಹೊಸದೊ೦ದು ವೃಕ್ಷಕ್ಕೆ ಜನ್ಮ ನೀಡಿ ಅಮರವಾಗುತ್ತದೆ. ಒ೦ದು ವೇಳೆ ಕಾಯಿಯಾಗಿಯೇ, ಹುಳಿಯಾಗಿಯೇ ಉಳಿದು ಮಣ್ಣಿನಲ್ಲಿ ಬಿದ್ದ ಮೇಲೂ ಅದರ ಬೀಜದಲ್ಲಿ ಪ್ರಾಣಶಕ್ತಿ ಇರದು. ಮತ್ತೆ ಮರದ ರೂಪದಲ್ಲಿ ಹೊಸ ಹುಟ್ಟನ್ನು ಪಡೆಯಲಾರದು.
ಹೀಗೆ ನಮ್ಮ ಬದುಕು, ಜೀವನ, ಬಾಳು ಕಾಯಿಯ೦ತಾಗಬಾರದು. ಹಣ್ಣಾಗಿ ಸಾರ್ಥಕವಾಗಬೇಕು. ಆಗಲೇ ಧನ್ಯತೆ ಮಾನವ ಬಾಳಿನಲ್ಲಿ.

- gnanadev ರವರ ಬ್ಲಾಗ್
- Login or register to post comments
- 207 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಸಾರ್ಥಕ ಜೀವನ:
ಚಿಂತನೆ ಮತ್ತು ಚಿತ್ರ ಎರಡೂ ಅತ್ಯುತ್ತಮ.
*ಅಶೋಕ್
ಉ: ಸಾರ್ಥಕ ಜೀವನ:
ಇದೇ ಮಾತು ಶ್ರೀ ಕೃಷ್ಣಾ ಭಾಗವತದಲ್ಲಿ ತನ್ನ ಗೆಳೆಯರೊ೦ದಿಗೆ ಆಡುವಾಗ ಹೇಳ್ತಾನೆ..
ಉ: ಸಾರ್ಥಕ ಜೀವನ:
ದಿನಕ್ಕೊಂದು ಇಂತ ಪುಟ್ಟ ಪುಟ್ಟ ಕಥೆ ಬರೆಯಿಯಿರಿ. ತುಂಬಾ ಚೆನ್ನಾಗಿದೆ.
ತಾಗಬೇಕು
ಬಾಗಬೇಕು
ಮಾಗಬೇಕು
ತಲೆದೂಗಬೇಕು-ನೀತಿಮಾತಿಗೆ
ಉ: ಸಾರ್ಥಕ ಜೀವನ:
ಚಿಕ್ಕ + ಚೊಕ್ಕ = ಚಿಚ್ಚೊಕ್ಕ ಬರಹ.