ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಗೋಪಾಲ್ ಮಾ ಕುಲಕರ್ಣಿ
ಪರಿಚಯ
ನಾನು ಮೂಲತಃ ಧಾರವಾಡದವನು.
ಹೇಳಿಕೊಳ್ಳುವಂತಹ ಸಹಾಸವೇನು ಇಲ್ಲಿಯವರೆಗೂ ಮಾಡಿಲ್ಲ.
ನಿಮ್ಮೆಲ್ಲಾ ಕವನ, ಲೇಖನ ಮತ್ತು ಬ್ಲಾಗ್ ಬರಹಗಳನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ನಾನು ಇಗ ಏನಾದ್ರು ಬರೀತಾ ಇದ್ರೆ ಅದೆಲ್ಲಕ್ಕೂ ನೀವುಗಳೇ(ಸಂಪನ್ದಿಗರೇ) ಕಾರಣ.......
ಇದು ನನ್ನ ಕನಸಿನ ಕೂಸು http://jaisrirama.bl...
http://haalusakkare....
ದೇವರು
ಒಬ್ಬ ಮನುಷ್ಯ ಸಾಧುವಿನ ಬಳಿ ಹೋಗಿ ನಾನು ದೇವರನ್ನು ನಮ್ಬುವದಿಲ್ಲ ಎಂದ. ನೀವು ನನಗೆ ದೇವರನ್ನು ತೋರಿಸಿದರೆ ನಂಬುವೆ ಎಂದ.
ಆಗ ಆ ಸಾಧು ಒಂದು ಪ್ರಶ್ನೆ ಮುಂದಿಟ್ಟರು.
ನಿನಗೆ ಎಷ್ಟು ಜನ ಪರಿಚಯ?
ಹ್ಮ... ಯೋಚನೆ ಮಾಡುತ್ತ ಸುಮಾರು ಒಂದು ೧೦೦೦೦ ಜನ ಎಂದ.
೧೦೦೦೦ ಜನಗಳ ಬಿಟ್ಟು ಬೇರೆ ಜನಗಳೇ ಗೊತ್ತಿಲ್ಲ ನಿನಗೆ. ಆದಿ ಕಾಲದಿಂದಲೂ ಕೋಟಿ ಕೋಟಿ ಜನ ನಂಬಿರುವ ದೇವರ ಬಗ್ಗೆ ಅನುಮಾನವಾ?... ಎಂದರು.
ಮತ್ತೊಂದು ಪ್ರಶ್ನೆ ಮುಂದಿಟ್ಟರು.
ನಿನ್ನ ಇರುವಿಕೆ ಹೇಗೆ ಸಮರ್ಥಿಸುವೆ ಎಂದು.
ನಾನು ನಿಮ್ಮ ಜೊತೆ ಮಾತನಾಡುತ್ತಿರುವೇನಲ್ಲ ಎಂದ.
ನೀನು ಹೇಗೆ ಧರೆಗೆ ಬಂದೆ.
ನನ್ನ ತಂದೆ ಮತ್ತು ತಾಯಿಗಳಿಂದ.
ಹಾಗೆ ನಿನ್ನ ತಂದೆ ಇರುವಿಕೆ ಸಮರ್ಥಿಸು ಎಂದರು.
ನನ್ನ ಅಜ್ಜ ಮತ್ತು ಅಜ್ಜಿ ಎಂದ.
ಮತ್ತೆ ನಿಮ್ಮ ಅಜ್ಜನ ಇರುವಿಕೆ ಸಮರ್ಥಿಸು ಎಂದರು.
ಅವನು ಮತ್ತೆ ಮುತ್ತಜ್ಜ ಮಾತು ಮುತ್ತಜ್ಜಿ ಎಂದ.
ಹಾಗೆ ಮತ್ತೆ ಮುತ್ತಜ್ಜ ಇರುವಿಕೆ ಸಮರ್ಥಿಸು ಎಂದರು.
ಅವನು ಹಾಗೆ ಗಿರಿ ಮುತ್ತಜ್ಜ ಮತ್ತು ಗಿರಿ ಮತ್ತಜ್ಜಿ ಎಂದ..
ನಿನ್ನ ಗಿರಿ ಮುತ್ತಜ್ಜ ಇದ್ದ .. ಅಂತ ಹೇಗೆ ಹೇಳುವೆ ನೀನು ಹೇಳುವದೆಲ್ಲ ಸುಳ್ಳು ಎಂದರು .....ಈಗ ಅವರನ್ನು ತೋರಿಸು ಎಂದರು.
ಆಗ ಅವನ ತಪ್ಪಿನ ಅರಿವಾಗಿ ಆ ಸಾಧುಗಳ ಶಿಷ್ಯನಾಗಿ ಹೋದ.
- gopaljsr's blog
- Login or register to post comments
- 419 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ದೇವರು
ಗೋಪಾಲ್,
ಇಂತಹ ಹಲವು ಕಥೆಗಳು ಓಡಾಡುತ್ತಿರುತ್ತವೆ ಅವು ಯಾವುವೂ ದೇವರಿದ್ದಾನೆಂದು ನಿರೂಪಿಸಲು ಸಾಧ್ಯವಿಲ್ಲ. ನನ್ನ ಅನುಭವ ಒಂದು ಇದೇ ರೀತಿಯದ್ದು.
ನಾನು ೭ ನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ನಮ್ಮ ಸಂಧ್ಯಾ ಟೀಚರ್ ದೇವರು ಯಾವಾಗ ನಗುತ್ತಾನೆ ಎಂಬ ಪಾಠ ಮಾಡುತ್ತಿದ್ದರು. ಕೊನೆಗೆ ಪಾಠದ ಸಾರಾಂಶ ಹೇಳುತ್ತ ದೇವರ ಬಗ್ಗೆ ಹೇಳುತ್ತಿದ್ದರು ನಾನು ಹಿಂದಿನಿಂದ (ಯಾವಾಗ್ಲೂ ಹಿಂದುಳಿದವನೆ) ದೇವರಿಲ್ಲ ನೀವು ದೇವರನ್ನು ನೋಡಿದ್ದೀರ? ತೋರ್ಸಿ ನೋಡೋಣ ಎಂದೆ. ಹಿಂತಿರುಗಿ ನಿಂತ ಸಂಧ್ಯಾ ಟೀಚರ್ಗೆ ಗೊತ್ತಿತ್ತು ತರ್ಲೆ ನಂದೇ ಅಂತ. ಹತ್ತಿರ ಬಂದು ಒಮ್ಮೆ ಧೀರ್ಘವಾಗಿ ನನ್ನ ಕಣ್ಣುಗಳನ್ನೆ ದೃಷ್ಟಿಸಿ, ನಿಟ್ಟುಸಿರು ಬಿಟ್ಟು ಪಟಾರನೆ ನನ್ನ ಕೆನ್ನೆಗೆ ಹೊಡೆದರು, ಅವಮಾನದಿಂದಾದ ಕೋಪಕ್ಕೆ ಕಣ್ಣಲ್ಲಿ ನೀರು ತುಂಬಿಕೊಂಡಿತು. ಆದರೆ ಛಲಬಿಡದೆ ಅವರನ್ನೆ ದಿಟ್ಟಿಸುತ್ತಾ ನಿಂತಿದ್ದೆ. "ನೋವಾಯ್ತ?" ಎಂದು ಕೇಳಿದರು. ಹೂಂ ಎಂದು ತಲೆಯಾಡಿಸಿದೆ. ತೋರ್ಸು ಎಂದರು. ಓಹ್ ಹೀಗಾ ಅರ್ಥವಾಯ್ತು, ದೇವರು ನೋವನಲ್ಲಿದ್ದಾನ? ಎಂದು ಮರು ಪ್ರಶ್ನೆ ಹಾಕಿದೆ. ಸೋತಂತೆ ನಿಂತ ಸಂಧ್ಯಾ ಟೀಚರ್ ಅವರನ್ನು ನೋಡಿ ಗೆದ್ದ ಖುಷಿಯಿಂದ ನಗೆ ಮೂಡಿಬಂತು. ಖುಷಿಯಾಯ್ತ? ಎಂದು ಕೇಳಿದರು ಹೌದು ಎಂದೆ, ತೋರ್ಸು ಎಂದರು.
ಈಗ ಹೇಳಿ ಇಂತಹ ಘಟನೆಗಳು ದೇವರಿರುವುದನ್ನು ನಿರೂಪಿಸುತ್ತವೆಯೆ?
ದೇವರಿಲ್ಲ ಎನ್ನುವವರಿಗೆ ದೇವರನ್ನು ತೋರಿಸಲು ಹೆಣಗುವುದೇಕೆ? ಬಿಟ್ಟುಬಿಡಿ. ದೇವರು ಎನ್ನುವ ಸಿದ್ದಾಂತವನ್ನು ಮಾನವ ಏಕೆ ಹುಟ್ಟುಹಾಕಿದ ಎಂಬ ಸತ್ಯದ ಅರಿವಾದ ದಿನ ಅವರು ಸುಮ್ಮನಾಗುತ್ತಾರೆ.
ದೇವರಿದ್ದಾನೆ ಎನ್ನುವವರನ್ನು ಅವಹೇಳನ ಮಾಡಿ ಅವರು ನಂಬುವ ದೇವರನ್ನು(ಒಂದು ಧರ್ಮೀಯರನ್ನು ಮಾತ್ರ) ಹೀಯಾಳಿಸುವುದರಿಂದ ಆಸ್ತಿಕರಿಗೆ ದೇವರಿಲ್ಲ ಎನ್ನುವ ನನ್ನ ನಂಬಿಕೆಯನ್ನು ಹೇರಿ ಅವರಿಗೆ ದೇವರಿಲ್ಲ ಎನ್ನುವುದನ್ನು ನಿರೂಪಿಸಲು ಸಾಧ್ಯವಿಲ್ಲ.
ದೇವರು ಸಾಧನೆ ಮಾಡುವವರಿಗೆ ಮಾತ್ರ ಕಾಣಿಸುತ್ತಾನೆ ಮಾಡದವರಿಗಲ್ಲ ಎನ್ನುವುದು ಎಂತಹ ಪಲಾಯನವಾದವೊ, ವಿಕಾಸವಾದವನ್ನು ವೈಜ್ಞಾನಿಕ ಎನ್ನುವವರು ವಿಕಾಸಕ್ಕೆ ನಿರ್ಧಿಷ್ಟ ಪಥ ನಿರ್ಧಿಷ್ಟ ಸಮಯ ಇರುತ್ತದೆ ಎಂದು ಹೇಳಲಾಗುವುದಿಲ್ಲ ಎಂಬುದು ಕೂಡ ಅಂತಹುದೆ ಪಲಾಯನ ವಾದ.
ಉ: ದೇವರು
ದೇವರು ಇದ್ದಾನೋ ಇಲ್ಲವೋ, ಅದಿರಲಿ. ನಿಮ್ಮ ಟೀಚರ್ ಘಟನೆ ಮಾತ್ರ ಸೂಪರ್. ಖುಷಿಯಾಯ್ತು ಪ್ರಸನ್ನ. ದೇವರ ಬಗ್ಗೆ ನನ್ನಆಭಿಮತವೇನು ಗೊತ್ತಾ? ನಮ್ಮ ಕಲ್ಪನೆಗೂ ನಿಲುಕದ ಅದ್ಭುತ ಶಕ್ತಿಯೊಂದು ಈ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಕಾರಣವಾಗಿರಲೇ ಬೇಕಲ್ಲಾ, ಅದನ್ನು ನೀವು ಏನಾದರೂ ಕರೆದುಕೊಳ್ಳಿ. ನಾನು ಅದನ್ನು "ಚೇತನ" ಎನ್ನುವೆ. ಅದು ಯಾವ ಮಂದಿರ-ಮಸೀದಿ-ಚರ್ಚ್ ಗಳಲ್ಲೂ ಇಲ್ಲ. ಆಕಾರವೇ ಇಲ್ಲ. ಇನ್ನು ನೋಡಲೆಂತು ಸಾಧ್ಯ? ಆದರೆ ಅದರ ಅಸ್ತಿತ್ವವನ್ನು ಗುರುತಿಸ ಬಹುದು. ಉಧಾಹರಣೆಗಾಗಿ ಹಸುವಿಗೆ ಹುಲ್ಲು-ನೀರು ಕೊಟ್ಟರೆ ಅದು ಅಮೃತ ಸಮಾನ ಹಾಲು ಕೊಡುತ್ತೆ. ಇದು ದೇವರ ಕೃಪೆ ಎಂದು ನಾನು ಹೇಳುವೆ. ಅಲ್ಲ ಎನ್ನುವುದಾದರೆ ಅದೇ ಹುಲ್ಲು-ನೀರು ಉಪಯೋಗಿಸಿ ಯಂತ್ರದಿಂದ ಹಾಲು ಉತ್ಪಾದಿಸಿ ಯಾರಾದರೂ ತೋರಸಲಿ. ನಾನು ಆಗ ದೇವರಿಲ್ಲವೆಂದು ಒಪ್ಪಿ ಅವರ ಅನುಯಾಯಿ ಯಾಗಿಬಿಡುವೆ.
ಉ: ದೇವರು
<<ಹಸುವಿಗೆ ಹುಲ್ಲು-ನೀರು ಕೊಟ್ಟರೆ ಅದು ಅಮೃತ ಸಮಾನ ಹಾಲು ಕೊಡುತ್ತೆ. ಇದು ದೇವರ ಕೃಪೆ ಎಂದು ನಾನು ಹೇಳುವೆ. ಅಲ್ಲ ಎನ್ನುವುದಾದರೆ ಅದೇ ಹುಲ್ಲು-ನೀರು ಉಪಯೋಗಿಸಿ ಯಂತ್ರದಿಂದ ಹಾಲು ಉತ್ಪಾದಿಸಿ ಯಾರಾದರೂ ತೋರಸಲಿ. ನಾನು ಆಗ ದೇವರಿಲ್ಲವೆಂದು ಒಪ್ಪಿ ಅವರ ಅನುಯಾಯಿ ಯಾಗಿಬಿಡುವೆ.>>
ಅದ್ಭುತ ಶ್ರೀಧರ್.
ಉ: ದೇವರು
>>>ಉಧಾಹರಣೆಗಾಗಿ ಹಸುವಿಗೆ ಹುಲ್ಲು-ನೀರು ಕೊಟ್ಟರೆ ಅದು ಅಮೃತ ಸಮಾನ ಹಾಲು ಕೊಡುತ್ತೆ. ಇದು ದೇವರ ಕೃಪೆ ಎಂದು ನಾನು ಹೇಳುವೆ. ಅಲ್ಲ ಎನ್ನುವುದಾದರೆ ಅದೇ ಹುಲ್ಲು-ನೀರು ಉಪಯೋಗಿಸಿ ಯಂತ್ರದಿಂದ ಹಾಲು ಉತ್ಪಾದಿಸಿ ಯಾರಾದರೂ ತೋರಸಲಿ.
ಆ ದೇವರ ಪೂಜೆ/ಧ್ಯಾನ ಮಾಡೋದ್ರಿಂದ ಯಂತ್ರ ಹಾಲು ಕೊಡಬಹುದೇ?
ಉ: ದೇವರು
ಆ ದೇವರ ಪೂಜೆ-ಧ್ಯಾನ ಮಾಡವುದರಿಂದ ನಿಮಗೆ ಸಮಾಧಾನ ಸಿಗಬಹುದು, ಅದೂ ನಂಬಿಕೆ-ಶ್ರದ್ಧೆ ಇದ್ದರೆ.
ಉ: ದೇವರು
ಆತ್ಮೀಯ
<<ಹುಲ್ಲು-ನೀರು ಉಪಯೋಗಿಸಿ ಯಂತ್ರದಿಂದ ಹಾಲು ಉತ್ಪಾದಿಸಿ ಯಾರಾದರೂ ತೋರಸಲಿ>>
ಹಾ ಹಾ ..ನಿಜ ಸರ್ ಸೂಪರ್, ಧನ್ಯವಾದಗಳು.
ಉ: ದೇವರು
ಸರ್
ನಿಮ್ಮ ಕತೆ ಸೂಪರ್ ,
ನೀವು ಹೇಳಿರುವದೆಲ್ಲವು ನಿಜ ಸರ್ , ಧನ್ಯವಾದಗಳು.
ಉ: ದೇವರು
<<ಆ ದೇವರ ಪೂಜೆ/ಧ್ಯಾನ ಮಾಡೋದ್ರಿಂದ ಯಂತ್ರ ಹಾಲು ಕೊಡಬಹುದೇ?>>
ಇಲ್ಲಿ ಪೂಜೆ ಧ್ಯಾನ ಎ೦ದರೆ ನಾವು ಆ ನಿಸರ್ಗಕ್ಕೆ ಆ ಅಗೋಚರ ಮಹಾನ್ ಚೇತನಕ್ಕೆ ಸಲ್ಲಿಸುವ ಕೃತಜ್ಞತೆಯೇ ಆಗಿದೆ. A sense of gratitude. ಇಲ್ಲಿ ದೇವರು ಎ೦ಬ ಕಲ್ಪನೆ ಒ೦ದು ಕೃತಜ್ಞತೆಯ ಭಾವನೆ. ಈ ನಿಸರ್ಗಕ್ಕೆ ಈ ಪ್ರಕೃತಿಗೆ ಈ ಅಸ್ತಿತ್ವಕ್ಕೆ ನಾವು ಸ೦ದಾಯ ಮಾಡಬೇಕಾದ ಕೃತಜ್ಞತೆ. ಅದೇ ಪರಮಾತ್ಮ ಭಗವ೦ತ . ಒ೦ದು ಅಪಾರ, ಅನಿರ್ವಚನೀಯ ಶಕ್ತಿಗೆ ಸಲ್ಲಿಸುವ ಋಣ. ಈ ಅರ್ಥದಲ್ಲಿ ತೆಗೆದುಕೊ೦ಡಾಗ ಮಾತ್ರ ನಮಗೆ ಪೂಜೆ ಆರಾಧನೆ ಧ್ಯಾನ ಭಕ್ತಿ ಎ೦ಬ ಶಬ್ದಗಳ ಅರ್ಥವಾಗುವುದು. ಇಲ್ಲಿ ಶುಷ್ಕ ತರ್ಕಕ್ಕೆ ಮೀರಿದ ಭಾವಪೂರ್ಣ ಹೃದಯವ೦ತಿಕೆ ಇರುವ ಅಗತ್ಯವಿದೆ.
ಉ: ದೇವರು
ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಉ: ದೇವರು
ತುಂಬಾ ದಿನವಾದ ಮೇಲೆ ಸಂಪದ ತೆರೆದರೆ ಮತ್ತದೇ ದೇವರು . ದೇವರು ಎಲ್ಲಿ ಹೋದರೂ ಕಾಣುತ್ತಾನಲ್ಲ ಎಂದು ಅಚ್ಚರಿಗೊಂಡೆ
ಅಂದ ಹಾಗೆ ದೇವರು ಇದ್ದಾನಾ ಇಲ್ಲವಾ ಎಂಬುದನ್ನು ಯಾರೂ ವಿವರಿಸಲಾಗದ್ದು, ತೋರಿಸಲಾಗದ್ದು,. ಕೇವಲ ಅನುಭವದಿಂದ ಮಾತ್ರ ಸಾಧ್ಯ.
ನಾನೊಂದು ಸಿನಿಮಾ ನೋಡಿ ಸಂತಸಗೊಂಡೆ ಎಂದರೆ ಸಿನಿಮಾ ತೋರಿಸಬಹುದೇ ಹೊರತು ಸಂತಸವನ್ನು ತೋರಿಸಲಾಗುವುದಿಲ್ಲ. ಹಾಗೆಯೇ ದೇವರೂ ಸಹಾ
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ದೇವರ ಸಹಾಯ ಹಸ್ತ ಸಿಕ್ಕಿರುತ್ತದೆ . ಕೆಲವರು ಅದನ್ನು ಕಾಣುತ್ತಾರೆ. ದೇವರ ದಯೆಯಿಂದ ಆಯ್ತು ಎನ್ನುತ್ತಾರೆ. ಕೆಲವರು ಕಂಡರೂ ಇದು ನಮ್ಮ ಪ್ರಯತ್ನದಿಂದ ಬಂದದ್ದು ಎಂದುಕೊಳ್ಳುತ್ತಾರೆ.ಅದು ಅವರವರ ಭಾವಕ್ಕೆ.
ನನ್ನ ಒಬ್ಬ ಸ್ನೇಹಿತನೊಬ್ಬ ಕಟ್ಟಾ ನಾಸ್ತಿಕವಾದಿಯಾಗಿದ್ದ . ಆ ನಿನ್ನ ದೇವರು ಎಲ್ಲಿದ್ದಾನೆ ತೋರಿಸು ಥೇಟ್ ಈ ಸಂಪದದ ಕೆಲ ಜನರ ರೀತಿಯಲ್ಲೇ ಮಾತಾಡುತ್ತಿದ್ದ.
ಒಮ್ಮೆ ಅವನಿಗೆ ಕಾಲೇಜಿನ ಫೀ ಕಟ್ಟಲು ಹಣವಿರಲಿಲ್ಲ ಅದು ಕಡೆಯ ದಿನದ ಹಿಂದಿನ ಸಂಜೆ . ಎಲ್ಲಾ ಕಡೆ ಕೇಳಿ ಕೇಳಿ ಸುಸ್ತಾಗಿದ್ದ .ಆಗ ನಮ್ಮ ಮತ್ತೊಬ್ಬ ಮಿತ್ರ ದೇವರನ್ನು ಬೇಡಿಕೋ ಎಲ್ಲಿಂದಾದರೂ ಹಣ ಬಂದೇ ಬರುತ್ತದೆ ಎಂದು ಹೇಳಿದ್ದ. ಈ ಸ್ನೇಹಿತ ಅಲ್ಲೇ ಗಣಪತಿ ದೇವಸ್ಥಾನದಲ್ಲಿ ನಿಂತು ಬೇಡಿಕೊಂಡ. ಜೊತೆಗೇ ಹೇಳಿದ ’ಏನಾದರೂ ಹಣ ಸಿಗಲಿಲ್ಲವಾದಲ್ಲಿ ದೇವರನ್ನ ಮಾತ್ರವಲ್ಲ ದೇವರನ್ಬ್ನು ನಂಬುವವರನ್ನೂ ನಂಬುವುದಿಲ್ಲ.’
ನಾವೆಲ್ಲಾ ತುಂಬಾ ಆತಂಕಗೊಂಡಿದ್ದೆವು. ಮಾರನೆಯ ದಿನವಾಯ್ತು. ಹತ್ತು ಘಂಟೆಯಾಯ್ತು. ನನ್ನ ಸ್ನೇಹಿತ ಬರಲಿಲ್ಲ. ಕೊನೆಗೆ ಮದ್ಯಾಹ್ನ ಎರೆಡುಘಂಟೆಗೆ ಬಂದ. ಬಂದವನ ಹಣೆಯಲ್ಲಿ ಕುಂಕುಮವಿತ್ತು.
ಆತ ಅಚ್ಚರಿಗೊಂಡಿದ್ದ. ನೆನ್ನೆ ಸಾಯಂಕಾಲ ಹಣ ಕೊಡಲಾಗುವುದಿಲ್ಲ ಎಂದು ಹೇಳಿದ್ದ ಆತನ ಒಬ್ಬ ಸ್ನೇಹಿತ ಇಂದು ಬೆಳಗ್ಗೆ ಬಂದು ಹಣ ಅಡ್ಜಸ್ಟ್ ಆಯ್ತು ಎಂದು ಕೊಟ್ಟು ಹೋಗಿದ್ದ. ನನ್ನ ಸ್ನೇಹಿತನ ಮಟ್ಟಿಗೆ ಇದು ಪವಾಡವೇ. ಅಂದಿನಿಂದ ಆತ ದೇವರ ಭಕ್ತನಾಗಿದ್ದಾನೆ.
ಇಂತಹ ಉದಾಹರಣೆಗಳು ನಮ್ಮೆಲ್ಲಾರ ಜೀವನದಲ್ಲೂ ಆಗುತ್ತವೆ ಕೆಲವರು ದೇವರು ಎನ್ನುತ್ತಾರೆ .ಕೆಲವರು ಕಾಕತಾಳೀಯ ಎನ್ನುತ್ತಾರೆ. ಅರ್ಥೈಸುವ ಪರಿ ವಿಭಿನ್ನ ಅಷ್ಟೇ