23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಜತೆಯಲಿ.. ಜತೆಜತೆಯಲಿ 2

May 23, 2010 - 7:41pm
gopinatha

ನಮ್ಮ ಕಟ್ಟಡ ಪ್ರಾಯಶಃ ಭೂಕಂಪದ ಕಂಪನದ ಮಿತಿಯನ್ನು ಸಹಿಸುವ ಗುಣಹೊಂದಿದಂತೆ ಪ್ರತಿ ಮನೆಯೂ ಮೂರು ಮೂರು ಕಾಂಕ್ರೀಟಿನ ಚೌಕಟ್ಟು ಹೊಂದಿದ್ದವು. ನಮ್ಮ ಈ ಮಲಗುವ ಕೋಣೆಯೂ ಅಡಿಪಾಯದಿಂದ ಟೆರೇಸಿನವರೆಗೆ ಅಭಿನ್ನವಾಗಿ ಎರೆದ ಕಾಂಕ್ರೀಟಿನದ್ದಾದ ಲಿಫ್ಟ್ ನ ಪಕ್ಕದ್ದೇ.


ಕಬ್ಬಿಣ ಸಿಮೆಂಟ್ ಬಳಸಿ ಕಟ್ಟಲ್ಪಟ್ಟ ಆ ಬಹು ಮಹಡಿ ಕಟ್ಟಡಗಳು ಯಾವುದೊ ಕ್ರೋಧೀ ಕೆಟ್ಟ ಹುಡುಗ ಕುಟ್ಟಿ ಪುಡಿ ಮಾಡಿದ ಮಕ್ಕಳ ಆಟಿಕೆಗಳಂತೆ
ಉದುರುತ್ತವೆ, ಪ್ರಭಾವೀ ಗೌರವದ ಯಾವ ಹೆಸರುಗಳೂ ಅವುಗಳ ಭವಿಷ್ಯವನ್ನು ಅಂಧಕಾರದಿಂದ ಹೊರಗೆಳೆಯಲು ಅಸಮರ್ಥವಾಗಿರುವವು.  ಭೂಕಂಪದ ಮುನ್ಸೂಚನೆಯನ್ನು ನಿಖರವಾಗಿ ಇನ್ನೂ ಯಾವ ರೀತಿಯಿಂದಲೂ ಅಳೆಯಲಾರೆವೋ, ಅಂತೆಯೇ ಅದನ್ನು ಸಹಿಸುವ  ಕಟ್ಟಡವನ್ನೂ ಕಟ್ಟಲಾರೆವು. ಏನಿದ್ದರೂ ಅವೆಲ್ಲ ನಮ್ಮ ನಮ್ಮ ಸಮಾಧಾನಕ್ಕೆ, ಸಾಂತ್ವನಕ್ಕೆ ಅಷ್ಟೇ.

ನಮ್ಮ ಕಟ್ಟಡದ ಇದಿರಿನಲ್ಲಿದ್ದ ಕಟ್ಟೋಣವು ಕುಸಿದು ನೆಲಕಚ್ಚಿತು.

 

ಗೋಡೆಯಲ್ಲಿನ ಅಲಂಕಾರಿಕ ಚೌಕಟ್ಟುಗಳೆಲ್ಲ ನೆಲಕಪ್ಪಳಿಸಿದವು.

 

ಎಲ್ಲೋ ನನಗಾಗಿಯೇ ಎಂಬಂತೆ ಹುಟ್ಟಿ ಬೆಳೆದು ನನ್ನ ಜತೆ ಸಪ್ತ ಪದಿ ತುಳಿದು, ಸುಖದಲ್ಲಿ ಧುಖದಲ್ಲಿ ಒಡನಾಡಿಯಾದ ಗೆಳತಿಯನ್ನು ಹೀಗೇ ಬಿಟ್ಟು ಹೋಗುವುದೇ..?.
ಆ  ಕ್ಷಣದ ನನ್ನ ನಿರ್ಧಾರ ಬಲಿತು ಸತ್ತರೆ ಎಲ್ಲರು ಓಟ್ಟಿಗೇ ಸಾಯಲೆಂಬ ನಿರ್ಧಾರಕ್ಕೆ ಬಂದೆ.

 

ಯಾವುದಕ್ಕೂ ಇರಲಿ ಎಂದು ಇಬ್ಬರು ಮಕ್ಕಳನ್ನು ಪಕ್ಕದಲ್ಲಿಯೇ ಇದ್ದ ಬೀಟೆ ಮರದ ಮೇಜಿನಡಿಯಲ್ಲಿ ಕುಳ್ಳಿರಿಸಿದೆ.




*******************************                                                                       ******************************                                              **********************



"ಅನೂ ಹೇಳು ನಿನಗೇನನ್ನಿಸಿತ್ತು? ನಾನಂತೂ ಮಮ್ಮಿಯ ಅಸಹಾಯಕಥೆ ನೆನೆಸಿ ಅಲ್ಲಿಯೇ ಉಳಿಯಲು ಮನಸ್ಸು ಮಾಡಿದೆ
ನಾವಿಬ್ಬರೂ ನಿಮಗೆ ಹೋಗಲು ಹೇಳದೆ ಅಲ್ಲಿಯೇ, ಸತ್ತರೆ ನಾವೆಲ್ಲರೂ ಒಟ್ಟಿಗೇ  ಸಾಯಲಿ ಎಂತ ಅಲ್ಲಿಯೇ ಕುಳಿತದ್ದು ಸರಿಯಾ?"


ಕೇಳಿದೆ ನನ್ನ ಬೆಳೆದು ನಿಂತ ಇಂಜಿನೀಯರ್ ಮಗನನ್ನ. ಮೇಲಿನ ಘಟನೆ ನಡೆದು ಏಳೆಂಟು ವರುಷದ ಬಳಿಕ.


"ಇಲ್ಲ ಪಪ್ಪಾ..ನನಗೆ ಭೂಕಂಪದ ಪರಿಣಾಮದ ಅರಿವಿರಲಿಲ್ಲ ಆಗ" ಎಂದನಾತ.


ಈಗಲೂ ಈ ಯೋಚನೆ ನನ್ನನ್ನೇ ಒಮ್ಮೊಮ್ಮೆ ಹಿಂಡುತ್ತಲೇ ಇರುತ್ತದೆ, ನಾನು ಮಾಡಿದ್ದು ಸರಿಯಾ?

 


ನೀವು ಹೇಳಿ  ನೋಡೋಣ..?

 

 

 

 

( ಜತೆಯಲಿ.. ಜತೆಜತೆಯಲಿ 1    http://sampada.net/b... )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by manju787 on

ನೀವು ಮಾಡಿದ್ದು ಖಂಡಿತಾ ಸರಿ ಎಂದು ನನ್ನ ಅಭಿಪ್ರಾಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ತುಂಬಾ ಅಬಾರಿ.
ಮಂಜು ಅವರೇ
ಏನಾಯ್ತು ನಮ್ಮ ನಿಮ್ಮ ಭೇಟಿಯ ವಿಷಯ..?
... ಆ ಕಾಫಿ..? ಬಾಕಿಯೇ ಅಯ್ತಲ್ಲ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಗೋಪಿನಾಥರೆ, ಗೋಜಲಾಗಿರುವ ಕೆಲವು ಸೂಕ್ಷ್ಮ ಸಿಕ್ಕುಗಳನ್ನು ಬಿಡಿಸಲೇಬೇಕಿದೆ, ಅದಕ್ಕಾಗಿ ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೇನೆ! ಖಂಡಿತ ಕಾಫಿಯೊಡನೆ ನಮ್ಮ ಭೇಟಿ ಇಷ್ಟರಲ್ಲೇ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಹೌದು!!
ಅತ್ಯವಶ್ಯಕ ಅದು
ನೀವು ಇಲ್ಲಿಗೆ ಬಂದ ಉದ್ದೇಶ
ಬೇಗ ನೆರವೇರಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ನಾಲ್ವರೂ ಬದುಕುಳಿದಿದ್ದೀರಿ ಸರಿ. ಆದರೆ ಅದಕ್ಕೆ ನಿಮ್ಮ ನಿರ್ಧಾರ ಕಾರಣವಲ್ಲ.
ಬದುಕುಳಿಸುವ ಮತ್ತು ಬದುಕುಳಿಯುವುದಕ್ಕೆ ಸಹಕಾರಿಯಾಗುವ ನಿರ್ಧಾರವಷ್ಟೇ ಮುಖ್ಯವಾಗುತ್ತದೆ ಅಲ್ಲಿ.
ನಿಮ್ಮ ನಿರ್ಧಾರ ಸೂಕ್ತ ಅಂತ ಮೇಲುದೃಷ್ಟಿಗೆ ಅನಿಸಿದರೂ, ಮಕ್ಕಳನ್ನು ಹೊತ್ತೊಯ್ದು ಕೆಳಗೆ ಬಿಟ್ಟು ಬಂದು ಹೆಂಡತಿಯನ್ನೂ ಹೊತ್ತೊಯ್ಯುವ ಪ್ರಯತ್ನ ಮಾಡಬಹುದಿತ್ತು ಅನ್ನುವುದು ನನ್ನ ಅನಿಸಿಕೆ.

ಎರಡನೇ ಪ್ರಯತ್ನ ಯಶಸ್ವಿಯಾದರೆ, ನಾಲ್ವರೂ ಬದುಕುತ್ತಾರೆ.

ಎರಡನೇ ಪ್ರಯತ್ನ ಅಸಫಲವಾದರೆ, ಅರಳಬೇಕಾಗಿರುವ ಮೊಗ್ಗುಗಳು ಮುರುಟಿಹೋಗುವುದು ತಪ್ಪುತ್ತದೆ.

ಇಲ್ಲಿ ಈ ಐದು ಸಾಧ್ಯತೆಗಳು:

ನಾಲ್ವರೂ ಸಾಯಬಹುದು (ನೀವು ಮಕ್ಕಳನ್ನು ದೂರ ಸಾಗಿಸುವ ಪ್ರಯತ್ನದಲ್ಲಿ ಇರುವಾಗಲೇ ಅನಾಹುತವಾಗಿ ಸಮಾಧಿಯಾದರೆ)
ಮೂವರು ಬದುಕುಳಿಯಬಹುದು (ನೀವು ಮಕ್ಕಳನ್ನು ಕೆಳಗಿಸಿಳಿದ ನಂತರ ಮರಳಲು ಅಸಾಧ್ಯವಾದರೆ)
ಈರ್ವರು ಬದುಕುಳಿಬಹುದು (ನೀವು ಮರಳಿದ ನಂತರ ನೀವು ಪತ್ನಿಯೊಂದಿಗೆ ಬಲಿಯಾದರೆ)
ನಾಲ್ವರೂ ಬದುಕುಳಿಯಬಹುದು (ಪತ್ನಿಯನ್ನೂ ಹೊತ್ತೊಯ್ಯಲು ಸಫಲರಾದರೆ)
ನಾಲ್ವರೂ ಸಾಯಬಹುದು (ಇದ್ದಲ್ಲೇ ಇದ್ದು, ಕಟ್ಟಡ ಕುಸಿದು ನೀವೆಲ್ಲಾ ಸಮಾಧಿಯಾದರೆ)

ಹೀಗೆ ಯೋಚಿಸುವಾಗ ಜೀವ ಉಳಿಸುವ ಯಾವುದೇ ಪ್ರಯತ್ನಕ್ಕೆ ಬೆಲೆ ಜಾಸ್ತಿ.

ಸಾಯುವ ಅಥವಾ ಸಾಯಿಸುವ ಯಾವುದೇ ನಿರ್ಧಾರಕ್ಕೆ ಬೆಲೆಯೇ ಇಲ್ಲ.

ಪ್ರೀತಿ, ಅಕ್ಕರೆ, ಮಮತೆ, ವಾತ್ಸಲ್ಯ ಇವು ಜೀವನವನ್ನು ನೀಡಬೇಕು. ಕಿತ್ತುಕೊಳ್ಳಬಾರದು.

ನಿಮ್ಮ ಪತ್ನಿಯವರ ಮಾತು ಇಲ್ಲಿ ಸಮಂಜಸ ಎಂದನಿಸುತ್ತದೆ.

- ಆತ್ರಾಡಿ ಸುರೇಶ ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by malathi shimoga on

ನನ್ನ ಪ್ರಕಾರ ನಮ್ಮ ತಪ್ಪು ಒಪ್ಪುಗಳನ್ನು ಓರೆಗೆ ಹಚ್ಚುವುದು ಬರಿ ಮನಸಿನ ಸಮಾಧನಕ್ಕೆ ಅನಿಸುತ್ತದೆ..ಪ್ರಯತ್ನ ಸೋಲು ಗೆಲವು ಎಲ್ಲ ವಿಧಿ ನಿರ್ಧರಿತ ಅನಿಸುತ್ತದೆ.. ಅದರಿಂದ ಹೊರ ಬಂದು ಯೋಚಿಸಿದಾಗ.. ನನ್ನ ಪ್ರಕಾರ ಮಕ್ಕಳಿಗೆ ಬದುಕು ಕೊಡುವುದು..ಮುಖ್ಯ ಎನಿಸುತ್ತದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಮಾಲತಿಯವರೇ
ಹೆಗ್ಡೆಯವರೇ
ನಿಮ್ಮ ಆತ್ಮೀಯ ಅಭಿಪ್ರಾಯಕ್ಕೆ ಅಬಾರಿ
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ನಾನು ಅಷ್ಟುದ್ದ ಪ್ರತಿಕ್ರಿಯೆ ಬರೆದು ಸಮಯ ಪೋಲು ಮಾಡಿದೆ ಅಂತ ಅನಿಸುವಂತೆ ಮಾಡಿದಿರಿ.

:)

ಆಭಾರಿ ನಾಮಪದ

(<ಸಂ. ಆಭಾರಿನ್) ಉಪಕೃತ, ಋಣಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಇಲ್ಲ ಹೆಗ್ಡೆಯವರೆ
ನೀವು ಬರೆದುದು ಅಕ್ಷರಶಃ ನಿಜ!!
ನನಗೆ ನಾನು ಮಾಡಿದುದು ತಪ್ಪೇನೋ ಅನ್ನುವ ಭಾವನೆ ಒಳಗೊಳಗೇ ಕೊರೆಯುತ್ತಿತ್ತು.
ಅದಂತೂ ನಿಜ. ಮತ್ತೆ ಇನ್ನೇನು ಬರೆಯಲಿ ಅಂತ ಬರೆಯಲಿಲ್ಲ.
ನಿಮಗೆ ಬೇಸರವಾಯಿತಾ? ದಯವಿಟ್ಟು ಕ್ಷಮಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಬೇಸರ ಆಗಿದ್ದು ನಿಜ ಪ್ರತಿಕ್ರಿಯೆ ಬರೆದದ್ದು ಬೇಸರದಿಂದಲೇ
ಆದರೆ ಆ ಬೇಸರವನ್ನು ಅಲ್ಲೇ ಬಿಟ್ಟಿದ್ದೆ ನೆನಪಾದದ್ದು ಈಗಲೇ
:)

ನನಗೆ ನಿಜವಾಗಿಯೂ ಬೇಕಾಗಿಲ್ಲ ಈ ರೀತಿಯ ಕ್ಷಮಾಯಾಚನೆ ನಿಮ್ಮದು
ಚಿಕ್ಕ ಪುಟ್ಟ ವಿಷಯಗಳ ಬಗ್ಗೆಯೂ ಗಮನವಿರಬೇಕು ಎಂಬ ಆಶಯ ನನ್ನದು
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.