June 1, 2010 - 8:00am

ಸಾವಿರ ಸಾವಿರ ಕನಸನು ಹೊತ್ತ
ಸಾವಿರಮುಖಗಳ ಚೆಹರೆಯ ಒತ್ತು
ಇದಿರಿನ ಚೆಹರೆಯ ಹಿಂದಿನ ನೋವು
ನೋವಿನ ಮುಂದೆ ನಗುವನು ಹೊತ್ತು
ಬರೆಯದೇ ಉಳಿದ ಸಾಲಿನ ನಡುವೆಯೂ
ಬರೆಯುವ ಇಂದಿನ ಕಲ್ಪನೆ ಗೊತ್ತು
ನೀರೊಳಗದ್ದಿದ ಮುಷ್ಟಿಯ ಹಾಗೇ
ನಮ್ಮಯ ಬದುಕಿದು ಇಹದಲಿ ಸಾಗೇ
ಹೊರತೆಗೆಯಲು ಅದೋ ಎಲ್ಲವೂ ಮಾಯ
ಜಗದಲಿ ನಮ್ಮಯ ಇರವಿನ ಕಾಯ
ಇರವೇ ಇರದಿರೆ ಎಲ್ಲಿಯ ನಮ್ಮದು
ಅಲ್ಲಿಯೇ ಉಳಿದಿರೆ ಶೂನ್ಯವೇ ಜಗದು
ಬರೆಯದೇ ಉಳಿಯುವ ಸಾಲುಗಳೆಲ್ಲಾ
ಬರೆಯಲು ಹೊಳೆಯದೆ ಉಳಿದವೆಲ್ಲಾ
ಬರೆದರೂ ಉಳಿಯದೆ ಸಾಯುವೆವೆಲ್ಲಾ
ಉಳಿಯುವದೊಂದೇ ಕಾರ್ಯವು ಅಲ್ಲಾ
ಎಲರಲಿ ಬೆರೆಯುವ ಶಬ್ದದ ಕಾಯ
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಬರೆಯದೇ ಉಳಿದ ಸಾಲುಗಳು
ಕವನ ತುಂಬಾ ಚೆನ್ನಾಗಿದೆ ಸಾರ್ ಹೊಳೆಯದೆ ಉಳಿದಿರುವ ಕಾರ್ಯಗಳನ್ನು ಬೇಗ ಬೇಗ ಮುಗಿಸಿ ತುಂಬಾ ಧನ್ಯವಾದಹಳು. ಆದರೆ "ಎಲರಲಿ ಬೆರೆಯುವ ಶಬ್ದದ ಕಾಯ"
ಈ ಸಾಲಿನ ಅರ್ಥ ಗೊತ್ತಗಲಿಲ್ಲ.
ಉ: ಬರೆಯದೇ ಉಳಿದ ಸಾಲುಗಳು
ಪ್ರತಿಕ್ರಿಯೆಗೆ
ಧನ್ಯವಾದಗಳು ವಸಂತ್
ಉಸುರುವ ಶಬ್ದಗಳೆಲ್ಲಾ ಕಿವಿಗೆ ಬಿದ್ದರೂ
ಬೀಳದಿದ್ದರೂ ನಮ್ಮೆಲ್ಲರ ಕಾಯದ
ಹಾಗೇ ಗಾಳಿಯಲ್ಲೇ ತಾನೇ ಸಾಯುವುದು.
ಉ: ಬರೆಯದೇ ಉಳಿದ ಸಾಲುಗಳು
ಕೊನೆ ಪ್ಯಾರಾ ತುಂಬಾ ಚೆನ್ನಾಗಿದೆ
ಉ: ಬರೆಯದೇ ಉಳಿದ ಸಾಲುಗಳು
ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ
ಧನ್ಯವಾದಗಳು ಚೇತೂ
ಉ: ಬರೆಯದೇ ಉಳಿದ ಸಾಲುಗಳು
ನಿಜ ಗೋಪಿನಾಥ್. ನಾವು ಮಾಡುವ ಕೆಲಸಗಳು ಮಾತ್ರ ನಮ್ಮನ್ನು ಸತ್ತ ನಂತರದಲ್ಲೂ ಕೆಲಕಾಲ ಉಳಿಸಬಲ್ಲದು.
ಉ: ಬರೆಯದೇ ಉಳಿದ ಸಾಲುಗಳು
ಕವಿ ವರ್ಯರೆ ನಿಮ್ಮ
ಆತ್ಮೀಯ ಪ್ರತಿಕ್ರೀಯೆಗೆ
ಧನ್ಯವಾದಗಳು
ಉ: ಬರೆಯದೇ ಉಳಿದ ಸಾಲುಗಳು
ಅರ್ಥಗರ್ಭಿತವಾದ ಸಾಲುಗಳು...
ಕವನ ಬಹಳ ಚೆನ್ನಾಗಿದೆ ಸಾರ್ !!!
ಉ: ಬರೆಯದೇ ಉಳಿದ ಸಾಲುಗಳು
ರೂಪಶ್ರೀ ಯವರೇ
ನಿಮ್ಮ ಆತ್ಮೀಯ
ಪ್ರತಿಕ್ರೀಯೆಗೆ ಧನ್ಯವಾದಗಳು
ಉ: ಬರೆಯದೇ ಉಳಿದ ಸಾಲುಗಳು
ಗೋಪಿನಾಥರೆ, ಬರೆಯದೆ ಉಳಿದ ಸಾಲುಗಳು, ಅರ್ಥಪೂರ್ಣವಾಗಿವೆ. ನಾವು ಕುಡಿಯದೆ ಉಳಿದ ಕಾಫಿಯನ್ನು ದಯ ಮಾಡಿ ಈ ವಾರ ಮುಗಿಸೋಣವೇ ? ತಮ್ಮ ಬಿಡುವಿನ ವೇಳೆ ನೋಡಿಕೊಂಡು ಕರೆ ಮಾಡಿ, ನಾನು ಹಾಜರಾಗುವೆ. ಮೊಬೈಲ್: ೯೬೨೦೯೩೬೫೭೬
ಉ: ಬರೆಯದೇ ಉಳಿದ ಸಾಲುಗಳು
ಗೋಪಿನಾಥ್ ,
ವಾಹ್ !!! ಎಂತಹ ಸಾಲುಗಳು ರೀ, ಎಲ್ಲ ಪ್ಯಾರಗಳೂ ಮನಸ್ಸಿಗೆ ಹಿಡಿಸಿದವು.
-ಚೈತನ್ಯ
ಉ: ಬರೆಯದೇ ಉಳಿದ ಸಾಲುಗಳು
ಆತ್ಮೀಯ ಚೈತನ್ಯ ಅವರೇ
ಪ್ರತಿಕ್ರಿಯೆಗೆ ಧನ್ಯವಾದಗಳು
ಉ: ಬರೆಯದೇ ಉಳಿದ ಸಾಲುಗಳು
ಆತ್ಮೀಯ ಮಂಜು ಅವರೇ ಒಪ್ಪಿದೆ
ನಾನು ನಿಮಗೆ ಕರೆ ಮಾಡುವೆ
ಪ್ರತಿಕ್ರಿಯೆಗೆ ಧನ್ಯವಾದಗಳು
ಉ: ಬರೆಯದೇ ಉಳಿದ ಸಾಲುಗಳು
ಗೋಪಿನಾಥರೆ,
<ಇದಿರಿನ ಚೆಹರೆಯ ಹಿಂದಿನ ನೋವು
ನೋವಿನ ಮುಂದೆ ನಗುವನು ಹೊತ್ತು>
ಚೆನ್ನಾಗಿದೆ ಈ ಸಾಲುಗಳು. ಜನ ಹೀಗಿರಲೇ ಬೇಕಾಗುತ್ತದೆ.
ಉ: ಬರೆಯದೇ ಉಳಿದ ಸಾಲುಗಳು
ಆತ್ಮೀಯ ತೇಜಸ್ವೀ ಅವರೇ ಹೌದು
ದಿನಾ ದಿನಾ ನಮ್ಮದೇ
ಹೊಸ ಹೊಸ ಚೆಹರೆ,
ಇದಿರಿನವರಿಗೆ ಬೇಕಾದ ಹಾಗೆ
ನಮಗೆ ಕಂಡೂ ಕಾಣದ ಹಾಗೆ
ಪ್ರತಿಕ್ರಿಯೆಗೆ ಧನ್ಯವಾದಗಳು
ಉ: ಬರೆಯದೇ ಉಳಿದ ಸಾಲುಗಳು
ಸರ್ ಚ೦ದದ ಕವನ ನವಿರಾದ ಸಾಲುಗಳು..........
ಉ: ಬರೆಯದೇ ಉಳಿದ ಸಾಲುಗಳು
ಪವಿತ್ರ ಅವರೇ
ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು
ಉ: ಬರೆಯದೇ ಉಳಿದ ಸಾಲುಗಳು
ಚಂದದ ಕವನ.ಮನದ ಮರಭೂಮಿಯಲ್ಲೊಂದು "ಓಯಸಿಸ್" ದೊರಕಿದ ಖುಷಿ. ಧನ್ಯವಾದಗಳು ಗೋಪಿನಾಥರವರೆ.
ಉ: ಬರೆಯದೇ ಉಳಿದ ಸಾಲುಗಳು
ಭಾಗ್ವತ ಅವರೇ
ನಮ್ಮ ಇರವು ಇಷ್ಟೇ ಸಮಯ ಅಲ್ಲವೇ
ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು
ಉ: ಬರೆಯದೇ ಉಳಿದ ಸಾಲುಗಳು
ರಾಯರೇ, ಚೆನ್ನಾಗಿದೆ ಕವನ.
ಉ: ಬರೆಯದೇ ಉಳಿದ ಸಾಲುಗಳು
ಸಂತೋಶ್ ಅವರೇ
ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು