ಬಸುರಿಯ ಮಗು ಮಾಯ... !
ಎಂದಿನಂತೆ ನಾನು ಅತ್ಯುತ್ಸಾಹದಿಂದ ಆಫೀಸ್ ಗೆ ಬಂದೆ. ಯಾಕೆಂದರೆ ನಾನು ಮಾಡುವ ಕೆಲಸದ ಬಗ್ಗೆ ಅದಮ್ಯ ಪ್ರೀತಿ. ಅಂದು ಶುಕ್ರವಾರ. ನನಗೊಂದು ಅಚ್ಚರಿಯ ಸುದ್ದಿ ಕಾದಿತ್ತು. ಬುಲಿಟೆನ್ ಪ್ರೋಡುಸರ್ ಅಂತಾ ನನ್ನ ಕೂರಿಸಿದ ಮೇಲೆ ಹೆಚ್ಚಿಗೆ ಸ್ಕೀಪ್ಟ್ ಗಳನ್ನು ಬರೆಯಲಿಕ್ಕೆ ಅದರಲ್ಲೂ ವಿಶೇಷ ವರದಿಗಳನ್ನು ಬರೆಯಲಿಕ್ಕೆ ನನಗೆ ಅವಕಾಶ ಸಿಕ್ಕಿದ್ದು ಕಡಿಮೆ. ನನಗೆ ಅವುಗಳನ್ನು ಬರೆಯಲು ಇಷ್ಟ. ಅವತ್ತು ಸಿಕ್ಕದ್ದು ನನ್ನ ಪಾಲಿಗೆ ಭರ್ಜರಿ ಬೇಟೆಯೇ ( ಸುದ್ದಿ )..! ವಿಷಯ ಏನಪ್ಪಾ ಅಂದ್ರೆ, ಆಕೆ ಹೆರಿಗೆಗಾಗಿ ತವರಿಗೆ ಬಂದಿದ್ದಳು.
ಆದರೆ ಇನ್ನೇನು ೨ - ೩ ದಿನಗಳಲ್ಲಿ ಹೆರಿಗೆಯಾಗಿ ಮಗು ಪಡೆಯಬೇಕು ಅನ್ನೋ ಹೊತ್ತಿಗೆ ತಾಯಿಯ ಹೊಟ್ಟೆಯಲ್ಲಿದ್ದ ಮಗುನೇ ಮಾಯಾವಾಗಬೇಕೆ... ? ಹೌದು, ಇಂತಹದೊಂದು ವಿಸ್ಮಯಕಾರಿ ಘಟನೆ ನಡೆದಿರುವುದು ಗುಲ್ಬರ್ಗಾ ಜಿಲ್ಲೆ ಆಫಜಲಪುರ ತಾಲೂಕಿನ ಬಿದನೂರಿನಲ್ಲಿ.
ನನಗೆ ರಿಪೋರ್ಟರ್ ಕಳುಹಿಸಿದ್ದ ಸುದ್ದಿ ಓದಿ ಹೊಟ್ಟೆ ಚುರುಕ್ ಅಂತು. ಪಾಪ ಆಕೆ ೯ ತಿಂಗಳು ಕಷ್ಟಪಟ್ಟು ಮಗು ಹೊತ್ತವಳು, ಇದು ಎಂತಾ ದುರಂತ ಅನ್ನಿಸಿತು. ೬ ವರ್ಷಗಳ ಕಾಲ ಮಕ್ಕಳಿಲ್ಲದೇ ಆಕೆ ಸಮಾಜದ ಚುಚ್ಚುಮಾತುಗಳನ್ನು ಕೇಳಿ ಬಸವಳಿದಿದ್ದಳು. ಇದೀಗ ಆಕೆಯ ಕುಟುಂಬದಲ್ಲಿ ನಗುವಿನ ಅಲೆ ಬೀಸಬೇಕಾದ ಸಂದರ್ಭದಲ್ಲಿ ಇದೊಂದು ಸುನಾಮಿ ಹೊಡೆತ. ಇಷ್ಟಕ್ಕೂ ತಾಯಿಯ ಹೊಟ್ಟೆಯಲ್ಲಿದ್ದ ಮಗು ಮಾಯವಾಗಿದ್ದದರೂ ಹೇಗೆ ಅಂದರೆ ,ಅದು ಇನ್ನೂ ಕೂತೂಹಲಕಾರಿ ಸಂಗತಿ. ಆಕೆಗೆ ಕನಸಲ್ಲಿ ಒಬ್ಬ ಸನ್ಯಾಸಿ ಬಂದಿದ್ದನಂತೆ, ಆಮೇಲೆ ಅದೇ ಸನ್ಯಾಸಿ ಬಹಿರ್ದೆಸೆಗೆ ಹೋದಾಗ ಪ್ರತ್ಯಕ್ಷನಾಗಿ ಮನೆವರೆಗೆ ಬೆನ್ನಟ್ಟಿ ಬಂದು ಭಿಕ್ಷೆ ಕೇಳಿದನಂತೆ. ಪಾಪ ಅಂತ ಭಿಕ್ಷೆ ಹಾಕಿದರೆ, ಆ ಸನ್ಯಾಸಿ ಮಗುನೂ ಮಾಯ ಮಾಡಿ ಹೋಗಬೇಕೆ... ? ಇದರಿಂದ ತಾಯಿ ವಿಜಯಲಕ್ಷ್ಮಿ ಬೆಚ್ಚಿಬಿದ್ದು ತಾಯಿಗೆ ಸುದ್ದಿ ಮುಟ್ಟಿಸಿದಳು. ಕೊನೆಗೆ ಡಾಕ್ಟರ್ ಪರೀಕ್ಷೆ ನಡೆಯಿತು. ಮಗು ಇಲ್ಲ, ಮಂತ್ರವಾದಿಗಳ ಮೊರೆ ಹೊದ್ರೆ ಅವರು ಮಗು ಸನ್ಯಾಸಿಯ ಜೋಳಿಗೆಯಲ್ಲಿದೆ ಎಂದ್ರು. ಗ್ರಾಮದಲ್ಲಿ ಆತಂಕ. ಒಬ್ಬರು ಇದು ಪವಾಡ ಅಂದ್ರೆ, ಇನ್ನು ಕೆಲವರು ಇದು ಭಾನಾಮತಿ ಅಂದ್ರು. ಆದ್ರೆ ನನಗೆ ಮಾತ್ರ ಒಂದು ಪ್ರಶ್ನೆ ಕಾಡತಾನೆ ಇದೇ ಅದೆನೆಂದರೆ ೨೧ ನೇ ಶತಮಾನದಲ್ಲಿ ಹೀಗೂ ಉಂಟೇ....?
- gosuba's blog
- Login or register to post comments
- 387 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಬಸುರಿಯ ಮಗು ಮಾಯ... !
ಈ ತರಹದ ಪ್ರಸಂಗ ವನ್ನ ಭೈರಪ್ಪ ಅವರ ಗ್ರಹಣ ಕಾದಂಬರಿಯಲ್ಲಿ ಓದಿದ್ದೆ - ಮತ್ತೆ ಅದನ್ನು ಓದಿದವರೊಬ್ಬರು ಈ ತರಹ ಪ್ರಸಂಗವನ್ನ (ಸುಳ್ಳು ಬಸಿರು - ಬಸಿರಿನಲ್ಲಿ ಮಗುವಿಲ್ಲದಿದ್ದರೂ, ಇನ್ನೆಲ್ಲಾ ಬಸಿರಿನ ಲಕ್ಷಣಗಳು ಕಾಣುವುದು) ನಿಜವಾಗಿ ನೋಡಿದ್ದೆ ಎಂದೂ ಹೇಳಿದ್ದರು.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಬಸುರಿಯ ಮಗು ಮಾಯ... !
ಭರ್ಜರಿಬೇಟೆ!
ಅಚ್ಚರಿಯ ಸುದ್ದಿ!
ವಿಸ್ಮಯಕಾರಿ ಘಟನೆ!!!
ಓದಿ ಹೊಟ್ಟೆ ಚುರುಕ್ ಅಂತು!!!!
ಎಂತಾ ದುರಂತ!!!!!
ಸುನಾಮಿ ಹೊಡೆತ!!!!!!
ಇಷ್ಟಕ್ಕೂ ತಾಯಿಯ ಹೊಟ್ಟೆಯಲ್ಲಿದ್ದ ಮಗು ಮಾಯವಾಗಿದ್ದಾದರೂ ಹೇಗೆ!!!!!!?
ಕನಸಲ್ಲಿ ಒಬ್ಬ ಸನ್ಯಾಸಿ...ಬಹಿರ್ದೆಸೆ..ಮಗುಮಾಯ..ಪವಾಡ..ಭಾನಾಮತಿ..
ಕಾಡತಾ ಇದೆ ಪ್ರಶ್ನೆ...ಹೀಗೂ ಉಂಟೆ!!!!!?
ರಾತ್ರಿ ಹತ್ತರ ನಂತರ ಎಲ್ಲಾ ಕನ್ನಡ ಚಾನಲ್‌ಗಳು ಇದನ್ನೇ ಹಿಂದು ಮುಂದು ಮಾಡಿ -ಅಗೋಚರ/ಹೀಗೂ ಉಂಟೇ/ಕ್ರೈಂ/ಮಣ್ಣು ಮಸಣ ಅಂತ ತೋರಿಸುತ್ತಾ ಇದ್ದಾವೆ. ಈ ಹಾಸ್ಯಕಾರ್ಯಕ್ರಮಗಳು ಚೆನ್ನಾಗಿ ಬರುತ್ತಿವೆ. ನೀವು ಬರೆದ ಕಾರ್ಯಕ್ರಮವೂ ಚನ್ನಾಗಿ ಬರಲಿ,ಎಲ್ಲರೂ ಹೊಟ್ಟೆತುಂಬಾ ನಗಲಿ.
-ನನ್ನಿ
ಗಣೇಶ.
(ಗೊಸುಬರವರೆ,
ನಿಮ್ಮ ಉತ್ಸಾಹವನ್ನು ಇಂತಹ ಸುದ್ದಿಗಳನ್ನು ಹುಡುಕುವುದರಲ್ಲಿ ಹಾಳು ಮಾಡಬೇಡಿ.ಹಾಗೂ ಇದೇ ಸುದ್ದಿ ಬೇಕೇ ಬೇಕೆಂದಾದರೆ-ಆ ಗರ್ಭಿಣಿ ಸ್ತ್ರೀ ತೋರಿಸಿದ ವೈದ್ಯರ ಬಳಿ ಹೋಗಿ ವಿಷಯ ಸಂಗ್ರಹಿಸಿ, ಮತ್ತೆ ಬರೆಯಿರಿ.
ನೆನಪಿಡಿ-
೬ ವರ್ಷ ಮಕ್ಕಳಿಲ್ಲದ ಆ ಸ್ತ್ರೀ ಸುತ್ತಮುತ್ತಲಿನವರ ಬಾಯಿ ಮುಚ್ಚಿಸಲಿಕ್ಕಾಗಿ ಒಂದು ಕಟ್ಟುಕತೆ ಮಾಡಿದಳು.
ಅದು ಅಲ್ಲಿಗೆ ಮುಚ್ಚಿಹೋಗುತ್ತಿತ್ತು. ನೆಮ್ಮದಿಯಾಗಿ ಬಾಳುತ್ತಿದ್ದಳೋ ಏನೋ. ಇನ್ನೆಲ್ಲಿಯ ನೆಮ್ಮದಿ? )
good night. ನಾಳೆ ನೈಟ್ ಬೀಟ್‌ನಲ್ಲಿ ಮತ್ತೆ ಭೇಟಿಯಾಗೋಣ......
ಉ: ಬಸುರಿಯ ಮಗು ಮಾಯ... !
ಇದನ್ನ pseudo pregnancyಯೆಂದು ಕರೆಯುತಾರೆ.
ಸ್ಪ್ರಹಿ
ಉ: ಬಸುರಿಯ ಮಗು ಮಾಯ... !
ಸಾರ್ ಇದ್ನ ಸುಳ್ಳು ಗರ್ಭ ಅಂತಾರೆ... ವೈದ್ಯಲೋಕಕ್ಕೆ ಇದರ ಬಗ್ಗೆ ಚೆನ್ನಾಗಿ ಗೊತ್ತಂತೆ... ಇದ್ಯಾವುದೂ ತಿಳಿಯದ ನಿಮಗೆ ಬುಲೆಟಿನ್ ಬರೆಯುವುದಕ್ಕೆ ಕೊಡುತ್ತಾರೆಂದರೆ ನಮ್ಮ ಚಾನೆಲ್‌ಗಳು ಯಾವ ಉತ್ತಮ ಸಮಾಜವನ್ನು ಎಷ್ಟು ನೇರ, ದಿಟ್ಟ, ನಿರಂತರವಾಗಿ ಕಟ್ಟುತ್ತಿವೆ ಎಂಬುದು ತಿಳಿಯುತ್ತದೆ :lol:
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaarido...
ಉ: ಬಸುರಿಯ ಮಗು ಮಾಯ... !
"ಸಂಗವಕ್ಕನ ಮುದ್ದಿನ ಸೊಸಿಯು ಬಸಿರಾದ ಸುದ್ದಿ " ಅಂತ ಗುರುರಾಜ ಹೊಸಕೋಟಿ ಹಾಡಿದ್ದು ನೆನಪಾಯಿತು.