ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › gurubaliga ರವರ ಬ್ಲಾಗ್

ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

September 22, 2008 - 12:56pm — gurubaliga
Magnum HDMC Campaign 1.jpg

ಹೆಚ್ಚಿನ ಜಾಹೀರಾತು ವಿದ್ವಾಂಸರೆಲ್ಲ ಇಂಗ್ಲಿಷಿಗೆ ಶರಣು ಹೋಗುವವರು. ಕನ್ನ್ನಡದ ಜಾಹಿರಾತುಗಳನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿ ಬಳಸುವವರು. ನಮ್ಮ ಜಾಹೀರಾತು ಸಂಸ್ಥೆ ಮಂಗಳೂರು ಮೂಲದ ಮ್ಯಾಗ್ನಂ ಇಂಟರ್ಗ್ರಾಫಿಕ್ಸ್ (www.magnumad.in) ಕರ್ನಾಟಕದಲ್ಲಿ ಕನ್ನಡದಲ್ಲೆ ಮೂಲ ಚಿಂತನೆಯುಳ್ಳ ಜಾಹೀರಾತು ಕಾನ್ಸೆಪ್ಟ್ ಗಳನ್ನೂ ಉತ್ತೆಜಿಸುತ್ತಿದ್ದು ಇಲ್ಲಿ ಕೆಳಗೆ ನಾವು ಮಾಡಿದ ಕೆಲವು ಜಾಹೀರಾತು ಕ್ಯಾಂಪೈನ್ ಗಳನ್ನ ಪ್ರಕಟಿಸಲಾಗಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

1. ಹುಬ್ಬಳ್ಳಿ ಧಾರವಾಡ ಆಸ್ತಿ ತೆರಿಗೆ ಅಭಿಯಾನ

ಮಣಿವಣ್ಣನ್ ಎಂಬ ಸಾವಿರಕ್ಕೊಬ್ಬನೇ ಇರುವ ಮಹಾನುಭಾವ ಹುಬ್ಬಳ್ಳಿ ಧಾರವಾಡ ಆಯುಕ್ತರಾಗಿದ್ದುಕೊಂಡು ಪುರೋಗಾಮಿ ಕೆಲಸಗಳನ್ನು ಕೈಗೊಂಡು ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿಯನ್ನು ಮಾಡುತ್ತಿದ್ದಾಗ ಈ ಅಭಿಯಾನವನ್ನು ನಾವು ರಚಿಸಿ ಅವರಿಗೆ ತೋರಿಸಿದ್ದೆವು. ಕಾರಣಮ್ತರಗಳಿಂದ ಇದು ಬೆಳಕು ಕಂಡಿಲ್ಲವಾದರೂ ಇದನ್ನು ರಚಿಸಲು ನಾವು ತುಂಬ ಶ್ರಮ ತೊಡಗಿಸಿದ್ದೇವೆ.

ನಮ್ಮ ಹುಬ್ಬಳ್ಳಿ ಪ್ರಮುಖ ಜಯಂತ್ ರವರ ಉತ್ತೇಜನದಂತೆ ಇದನ್ನು ರಚಿಸಲು ತಲೆಖರ್ಚು (Brain storm) ಮಾಡಲಾಯಿತು. ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಮೂಡಲ ಮನೆ ಟಿ.ವಿ. ಧಾರಾವಾಹಿಯ ದೇಶಮುಖ್ ಪಾತ್ರವಹಿಸಿದ್ದ ರವೀ ಎಂದೆ ಕರೆಯಲ್ಪಡುವ ಕನ್ನಡದ ಜನಪ್ರಿಯ ನಟ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿಯವರು ಈ ಅಭಿಯಾನಕ್ಕೆ ರೂಪದರ್ಶಿಯಾಗಲು ಒಪ್ಪಿಕೊಂಡರು.

ಮೂಡಲ ಮನೆ ಚಿತ್ರೀಕಾರಣವಾಗುತ್ತಿದ್ದ ಹಾವೇರಿಯ ಬಳಿಯ ಹಂದಿಗನೂರಿನ ದೇಸಾಯಿ ವಾಡೆಯಲ್ಲಿ ಅವರ ಚಿತ್ರಗಳನ್ನು ಸೆರೆಹಿಡಿಯಲಾಯಿತು. ವೃಷಭೇಂದ್ರರು ಮೊದಲೇ ಹುಬ್ಬಳ್ಳಿ ಭಾಷೆಯಲ್ಲಿ ಸಂಭಾಷಣೆಗಳನ್ನು ಬರ ಕೊಟ್ಟಿದ್ದರಿಂದ ನಾನು ಓದುತ್ತ ಹೋದೆ ರವೀ ಹಾವಭಾವಗಳನ್ನು ಮೂಡಿಸಿಕೊಂಡರು ರಮಾನಂದ ಪೈ ಕ್ಲಿಕ್ಕಿಸುತ್ತಲೇ ಇದ್ದರು. ಬರೆ ಅರ್ಧ ಗಂಟೆಯೊಳಗೆ ನೂರಕ್ಕೂ ಹೆಚ್ಚು ಭಾವಗಳನ್ನು ರವೀ ಮೂಡಿಸಿದರು.

ಈ ಅಭಿಯಾನ ಅವಧಿ ಸುಮಾರು ಒಂದು ತಿಂಗಳು. "ಅಸ್ತಿ ತೆರಿಗೆ ತುಂಬಿರೆನಪ?" ಅಂತ ಕಾಳಜಿಯಿಂದ ಕೇಳುವ ದೇಶಮುಖ್ (ರವೀ) ಎಲ್ಲ ಜಾಹಿರಾತು ಮಾಧ್ಯಮಗಳಲ್ಲೂ ಕೊಂಡಿಯಾಗಿ ಮೂಡಿ ಬರುವುದು ಈ ಅಭಿಯಾನದ ಇನ್ನೊಂದು ಅಂಶ.

ಪೂರ್ಣ ಅಭಿಯಾನವನ್ನು ನೋಡಲು ಈ ತಾಣಕ್ಕೆ ಭೇಟಿ ನೀಡಿ. http://yaadukannada.blogspot.com/

  • ಮ್ಯಾಗ್ನಂ ಇಂಟರ್ಗ್ರಾಫಿಕ್ಸ್
~.~
  • gurubaliga ರವರ ಬ್ಲಾಗ್
  • Login or register to post comments
  • 294 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 23, 2008 - 11:46am — Sunil Jayaprakash

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

Sunil Jayaprakash's picture

ಅಭಿನಂದನೆಗಳು ಕಣ್ರೀ, ಜಾಹೀರಾತುಗಳಲ್ಲಿ ಕನ್ನಡದ ಸೊಗಡಿದ್ದರೆ ತುಂಬಾ ಚೆನ್ನಾಗಿರತ್ತೆ. ಈ ದಿಸೆಯಲ್ಲಿ ಕೆಲಸಮಾಡುತ್ತಿರುವ ನಿಮಗೆ ಹೆನ್ನನ್ನಿ. ಉದಾಹರಣೆಗೆ, ಹಿಂದೆ ಬರುತ್ತಿದ್ದ ಒಂದು ಸ್ಪೈಸ್ ಜಾಹೀರಾತನ್ನು, ಯೂಟ್ಯೂಬಿನಿಂದ ನೋಡಿ.


  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 2:48pm — gurubaliga

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

gurubaliga's picture

ಧನ್ಯವಾದಗಳು. ಅದ್ಸರಿ ಎಲ್ಲರು ನನ್ನೀ ನನ್ನೀ ಅಂತಾರಲ್ಲ? ಏನು ಹಂಗಂದ್ರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 4:23pm — Sunil Jayaprakash

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

Sunil Jayaprakash's picture

"ಧನ್ಯವಾದಗಳು" ಅಂತ ದೊಡ್ಡದಾಗಿ ಹೇಳುವ ಬದಲು ಇರುವ ಪುಟ್ಟ ಕನ್ನಡ ಪದ "ನನ್ನಿ", ಹೆಚ್ಚಿನ ವಿವರಗಳಿಗೆ ಶ್ರೀನಿವಾಸ್ ಅವರ ಈ ಎಳೆ ನೋಡಿ.
ನನ್ನಿಯ ಮೂಲ - http://sampada.net/forum/4839

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 4:41pm — gurubaliga

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

gurubaliga's picture

ನಾವು ತುಳುವಿನಲ್ಲಿ ಥ್ಯಾಂಕ್ಸ್ ಹೇಳಲು ಸೊಲ್ಮೆ ಅಂತ ಹೇಳ್ತೇವೆ. ಸೊಲ್ಮೆಗೆ ಕನ್ನಡದಲ್ಲಿ ಏನರ್ಥವಿದೆಯೋ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 5:37pm — Sunil Jayaprakash

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

Sunil Jayaprakash's picture

ಸೂಪರ್, ಇಷ್ಟು ದಿನ ಇದನ್ನ ನಿಮ್ಮಲ್ಲೆ ಇಟ್ಕೊಂಡ್ ನಮ್ಗೆಲ್ಲ ಮೋಸ ಮಾಡಿದಿರಲ್ಲ ಗುರುಬಾಳಿಗ (ಸರಿಯೇ ನಿಮ್ಮ ಹೆಸರು).

೪. ಸೊಲ್ಲು (ದೇ) (ಕ್ರಿ) ಹೇಳು, ಮಾತನಾಡು
೫. ಸೊಲ್ಲು (ದೇ) (ನಾ) ೧ ಮಾತು, ನುಡಿ ೨ ಆಜ್ಞೆ, ಅಪ್ಪಣೆ ೩ ನಾದ, ಧ್ವನಿ ೪ ಶಬ್ದ, ಪದ ೫ ಹೊಗಳಿಕೆ, ಪ್ರಶಂಸೆ ೬ ಕೂಗುವಿಕೆ, ಕರೆ ೭ ವಿಷಯ, ಸಂಗತಿ ೮ ಜನಪದಗೀತೆ, ದಾಸರ ಕೀರ್ತನೆ ಮೊ. ಹಾಡಿನ ಒಂದು ನುಡಿ

ಬಲ್ - ಬಲ - ಬಲ್ಮೆ,
ಸೊಲ್ - ಸೊಲ್ಮೆ - ಹೇಳುವ ಚೈತನ್ಯ,

ಸೂಪರ್, ಕನ್ನಡದ ಸಂಸ್ಕೃತಿ ಸಖತ್ತಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 5:54pm — gurubaliga

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

gurubaliga's picture

ಏನೋ ! ಮನ್ನಿಸಿ ಸ್ವಾಮಿ !
ಆದದ್ದಾಯಿತು ! ಹೊಟ್ಟೆಲಿ ಹಾಕ್ಕೊಳ್ಳಿ! (ಯಾಕೋ ಜೋಡಿಸಿ ಬರೆಯೋಕೆ ಬಿಡ್ತಿಲ್ಲ ಈ ಸಾಪ್ಟು)
ತುಂಬ ಸೊಲ್ಮೆಗಳು. (ಸೊಲ್ಮೆಲು ಅಂತ ತುಳುವಿನಲ್ಲಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 8:03pm — Sunil Jayaprakash

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

Sunil Jayaprakash's picture

Smiling ಹೆನ್ನನ್ನಿ, ಹೆಚ್ಚೊಲ್ಮೆ, ಅನಂತಾನಂತ ಧನ್ಯವಾದಗಳು, ಥ್ಯಾಂಕ್ಸ್ ಅ ಟನ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 12:01pm — gurubaliga

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

gurubaliga's picture

ಹೀಗೆ ನೀವು ನನ್ನೀ ನಾನು ಸೊಲ್ಮೆ ನೀವು ನನ್ನಿ ನಾನು ಸೊಲ್ಮೆ.....

ಇಂಗ್ಲಿಷಿನಲ್ಲಿ ನೋ ಮೆನ್ಶನ್ ! ಕನ್ನಡದಲ್ಲಿ ಏನು ಹೇಳ್ಬೇಕು?
ಛೆ ಛೆ ! ಅದೆಲ್ಲ ಯಾಕೆ? ಎನ್ನೋಣವೇ! ಮೀನಗುಂಡಿ ಸುಬ್ರಮಣ್ಯಮ್ ಅಡ್ಡ ಬರ್ತಾರೆ. ಅವರ ಟಿ.ಎ. ಪ್ರಕಾರ ನಾವು ಥ್ಯಾಂಕ್ಸ್ ಅನ್ನು ಪೂರ್ತಿ ಸ್ವೀಕರಿಸಿ ಆನಂದ ಪಡಬೇಕು. ಅದನ್ನು ತಿರಸ್ಕರಿಸಬಾರದು.

ಸ್ವಾಗತ (ವೆಲ್ಕಂ) ಎಂದರೆ ತೀರ ಯುರೋಪ್ ನನ್ಮಗಂದು ಹಿಂದ್ಗಡೆ ನಲಿತಾ ಇರತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 12:25pm — mahesha

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

mahesha's picture

ಸೊಲ್ಮೆ ಒಂದು ಬಗೆಯಲ್ಲಿ ತಲೆಬಾಗುವೆ ಎಂಬ ತಿಳಿವೀಯತ್ತೆ ಅನ್ನಿಸ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 24, 2008 - 12:50pm — gurubaliga

ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ

gurubaliga's picture

ಪ್ರಿಯ ಮಾಯ್ಸರವರೆ

ಪುರುಷೋತ್ತಮ ಬಿಳಿಮಲೆ ಯವರ ಬಳಿ ಮಾತನಾಡಿದೆ.

ಸೊಲ್ಮೆ ಮೂಲತಹ ಪರ್ಷಿಯನ್ ಭಾಷೆಯ ಸಲಾಂ ನಿಂದ ತುಳುವಿಗೆ ನುಸುಳಿದ್ದು. ಮೂರನೇ ಶತಮಾನದಲ್ಲೇ ಇದು ಆಗಿರುವ ಸಾಧ್ಯತೆ ಇದೆ. ಈ ಶಬ್ದದ ಉಲ್ಲೇಖ ತುಳು ಪಾಡ್ದನಗಳಲ್ಲೂ ಇದೆ. ಅಂತ ಅವರು ಹೇಳಿದ್ರು.

ಹಾಗಾಗುವಾಗ ನಿಮ್ಮ ಅಭಿಪ್ರಾಯ ಸರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 2. ಮದುವೆಯ ಹಬ್ಬ : ಕೆಣಕು ಅಭಿಯಾನ
  • ಉತ್ತರ ಕರ್ನಾಟಕದಲ್ಲಿ ಕನ್ನಡ-೪
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
Syndicate content

ಲೇಖಕರು

gurubaliga's picture

ಪೂರ್ಣ ಹೆಸರು
ಗುರು ಬಾಳಿಗ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನಗಲಿಕ್ಕೊಂದು ಚಿತ್ರ 10
  • ಕನ್ನಡೀಕರಿಸಿದ ಶ್ಲೋಕಗಳು - ೨
  • ಹಾಸ್ಯ - ೭
  • ಕನ್ನಡೀಕರಿಸಿದ ಶ್ಲೋಕಗಳು - ೧
  • ನವೆಂಬರ್ ೧೮
  • ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
  • ಕಾಸ್ಟ್ ಕಟ್ಟಿಂಗ್ .......ಬದಲಾವಣೆಗಳು.
  • ಓದಿದ್ದು ಕೇಳಿದ್ದು ನೋಡಿದ್ದು-84 ಕದ್ದು ಕ್ಲಿಕ್ಕಿಸುವವರು
  • ಹುರುಪುಳ್ಳವರಿಗೆ ಮಾಡಲಾಗದ್ದೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shaamala
    ಉ: ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...
    November 20, 2008 - 4:06am
  • hpn
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 20, 2008 - 1:12am
  • hpn
    ಉ: ಹುಟ್ಟು ಹಬ್ಬದ ಶುಭಾಶಯಗಳು
    November 20, 2008 - 12:59am
  • hpn
    ಉ: ನಿತ್ಯ ಹುಟ್ಟಿ ಮುಳುಗುವ ರವಿ.
    November 20, 2008 - 12:36am
  • ಸಂಗನಗೌಡ
    ಉ: ನವೆಂಬರ್ ೧೮
    November 20, 2008 - 12:32am
  • palachandra
    ಉ: ನವೆಂಬರ್ ೧೮
    November 20, 2008 - 12:22am
  • hpn
    ಉ: ನವೆಂಬರ್ ೧೮
    November 20, 2008 - 12:09am
  • shylaswamy
    ಉ: ನವೆಂಬರ್ ೧೮
    November 20, 2008 - 12:09am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 20, 2008 - 12:09am
  • hpn
    ಉ: ನವೆಂಬರ್ ೧೮
    November 20, 2008 - 12:03am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 126 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator