ಜೈಲಿನ ಬಡಗಿಗಳು
ನಾನು ತುಂಬ ಹಿಂದೆ ಲಂಕೇಶ್ ನಲ್ಲಿ ಒಂದು ಕವನ ಓದಿದ್ದೆ
ಅದು ನೆನಪಿಲ್ಲ ಆದರೆ ಭಾವ ಹೀಗಿತ್ತು.
ಜೈಲ್ ನಲ್ಲಿರೋ ಕೈದಿಗಳಿಗೆ ಕೆಲಸ ಕೊಡ್ತಾರಲ್ಲ, ಬಡಗಿ ಕೆಲಸ ಕೊಟ್ರಂತೆ.
ಅವರು ಮಾಡಿದ ಫರ್ನಿಚರ್ ಎಲ್ಲ ಒಂದ್ಸರಿ ಮಾರಕ್ಕೆ ಇಟ್ರಂತೆ
ಆದರೆ ಮಾಡಿದ್ದೆಲ್ಲ ಅಧ್ವಾನ
ಖುರ್ಚಿಲಿ ಕುಳಿತರೆ ಕೈ ಇಡೋದು ಬಹಳ ಅಗಲ, ನೆಲಕ್ಕೆ ಕಾಲು ತಾಕ್ತಾನೆ ಇರ್ಲಿಲ್ಲಂತೆ,
ಮಂಚ ಆರು ಜನ ಮಲಗುವಷ್ಟು ದೊಡ್ಡದು.... ಹೀಗೆ ಎಲ್ಲ ಎಕ್ಸ್ ಎಕ್ಸ್ ಎಕ್ಸ್ ಎಲ್.
ಅಂದ್ರೆ ಅವರು ಸ್ವಾತಂತ್ರ್ಯಕ್ಕೆ ಎಷ್ಟು ಹಂಬಲಿಸ್ತಾರೆ ಅಂತ ಇದ್ರಲ್ಲಿ ಗೊತ್ತಾಗತ್ತೆ ಅಂತ ಕವಿ ಬರಿತಾನೆ.
ಈ ಕವನ ಯರತ್ರಾದ್ರೂ ಇದ್ರೆ ದಯವಿಟ್ಟು ಕೊಡಿ.
ಅದನ್ನು ಓದಿ ಒಂದು ವಿಷಯ ನೆನಪಾಗಿತ್ತು.
ನನ್ನಜ್ಜಿ ಮಾಡೋ ಹಪ್ಪಳ ಎಷ್ಟು ದೊಡ್ದದಗಿರ್ತಿತ್ತು, ಅಷ್ಟು ದೊಡ್ಡದು ಈಗ ಯಾರೂ ಮಾಡಲ್ಲ.
ಅವರು ಮಾಡೋ ರವಿ ಉಂಡಿ, ದೂದಪೇಡ, ಅಂಬಡೆ, ಎಲ್ಲ ದೊಡ್ಡದೇ
ನನ್ನ ಅಮ್ಮ ಹೇಳ್ತಾ ಇದ್ರು ಅವರ ಕೈ ದೊಡ್ಡದು ಅಂತ.
- gurubaliga's blog
- Login or register to post comments
- 273 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS: