24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎಳೆ ಗೋಡಂಬಿ ಪಲ್ಯ

April 28, 2009 - 5:27pm
gurubaliga
ನಾವು ಸ್ವಲ್ಪ ಮುಂದೆ ಬಂದಾಗಿದೆ. ಇದನ್ನು ನಿಮಗೆ ನಾನು ಯುಗಾದಿಯ ಆಸುಪಾಸಿನಲ್ಲಿ ಹೇಳಬೇಕಿತ್ತು. ಇರಲಿ ಮುಂದಿನ ವರ್ಷ ನೆನಪಿನಿಂದ ಮಾಡಿ ತಿನ್ನಿ. :) ಯುಗಾದಿ ಇನ್ನೇನು ಕೆಲವು ದಿನಗಳಿವೆ ಅನ್ನುವಾಗ ಗೋಡಂಬಿ ಮರಗಳನ್ನು ಸಲಹುವ ದಕ್ಷಿಣ ಕನ್ನಡದ ಬಾಯಮ್ಮರು (ಕ್ರಿಸ್ತಮ ಅಕ್ಕಂದಿರು : ಬಾಯಿ ಅಂದರೆ ತಂಗಿ/ಅಕ್ಕ ಎಂದರ್ಥ) ಗೋಡಂಬಿಯನ್ನು ಮರದಿಂದ ಕೀಳುವುದೇ ಇಲ್ಲ. ಬಾಯಿ ಚಪಲದ ಕೊಂಕಣಿಗಳು ಯುಗಾದಿ ಹಬ್ಬಕ್ಕೆ ಎಷ್ಟು ಬೆಲೆ ತೆತ್ತಾದರೂ ಎಳೆ ಗೋಡಂಬಿ ಪಲ್ಯವನ್ನು (ಬಿಬ್ಬೆ ಉಪ್ಕರಿ: ಬಿಬ್ಬೋ ಅಂದರೆ ಹಸಿ ಗೋಡಂಬಿ) ಮಾಡಿ ತಿನ್ನುವರು. ಹಾಗಾಗಿ ಕ್ರಿಸ್ತಮ ಬಾಯಮ್ಮರಿಗೂ ಯುಗಾದಿ ಹಬ್ಬವೇ. ಚಿತ್ರದಲ್ಲಿ ತೋರಿಸಿದ ಗಾತ್ರವಿರುವಾಗ ಗೋಡಂಬಿಗಳನ್ನು ಕಿತ್ತು ಬಿಡಿಸಿದರೆ ಎಳೆ ಗೋಡಂಬಿ ದೊರಕುತ್ತದೆ. ಅದಕ್ಕೊಂದು ಕಂದು ಬಣ್ಣದ ಸಿಪ್ಪೆ ಮೈಗಂಟಿ ಕೊಂಡಿರುತ್ತದೆ. ಇದನ್ನು ನೂರು ಇನ್ನೂರು ಎಂದು ಎಣಿಸಿ ಮಾರಲಾಗುತ್ತದೆ. ನೂರು ಹಸಿ ಗೋಡಂಬಿಗೆ ೧೨೦ ರೂಪಾಯಿವರೆಗೂ ಬೆಲೆಯಾಗುವುದುಂಟು. ಎಳೆ ಗೋಡಂಬಿ ಪಲ್ಯವನ್ನು ಮಾಡುವ ವಿಧಾನ. ಎಳೆ ಗೋಡಂಬಿಯನ್ನು (ಬಿಬ್ಬೋ: ಕೊಂಕಣಿ) ಅಥವಾ ಹಸಿ ಗೇರುಬೀಜವನ್ನು ಹಿಂದಿನ ರಾತ್ರಿಯೇ ನೀರಿನಲ್ಲಿ ನೆನೆಸಿಡಿ. ಮರು ದಿನ ಬೆಳಗ್ಗೆ ಸುಲಲಿತವಾಗಿ ಸಿಪ್ಪೆ ಸುಲಿಯಲು ಬರುವುದು. ಅಂತೆಯೇ ಸಿಪ್ಪೆ ಸುಲಿದು ಈ ದ್ವಿದಳದ ಎರಡೂ ದಳಗಳನ್ನು ಬಿಡಿಸಿ. ಬೇಕಾದ ಸಾಮಾಗ್ರಿ: ಹಸಿ ಗೋಡಂಬಿ: ೧೦೦ ಗೋಡಂಬಿ ಅಂದರೆ ಇನ್ನೂರು ದಳಗಳು ಒಗ್ಗರಣೆಗೆ ತೆಂಗಿನೆಣ್ಣೆ. ಕರಿ ಬೇವು ಸೊಪ್ಪು ಒಂದು ಎಸಳು (ಸುಮಾರು ಹತ್ತು ಎಲೆಗಳು) ಸಾಸಿವೆ: ಒಂದಿಷ್ಟು ಹಸಿ ಮೆಣಸು:೪-೬ (ಚಾಕುವಿನಿಂದ ಮೆಣಸಿನ ಹೊಟ್ಟೆ ಸೀಳಿಡಿ) ಹಿಂಗು ಕದಡಿದ ನೀರು: ಒಂದು ಗುಟುಕು ತೆಂಗಿನ ಕಾಯಿ ತುರಿ: ಒಂದು ಸೌಟು ರುಚಿಗೆ ತಕ್ಕಷ್ಟು ಉಪ್ಪು :) ನೀರು ಪ್ರಿಯರೆ, ಬಾಣಲೆಯನ್ನು ಬೆಂಕಿಯ ಮೇಲಿಟ್ಟು ಒಗ್ಗರಣೆಗೆ ತೆಂಗಿನೆಣ್ಣೆ ಸುರಿಯಿರಿ. ಸಾಸಿವೆ ಕಾಳು ಹಾಕಿ ಚಟಪಟಿಸಲು ಕರಿಬೇವು ಸೊಪ್ಪು ಬಾಣಲೆಗೆ ಎಸೆಯಿರಿ. ಅದೂ ಚರ್ರೆನ್ನಲು ಹಸಿ ಮೆಣಸುಗಳನ್ನು ಹಾಕಿ ಕದಡಿಸಿ. ಮೆಣಸುಗಳು ಬಾಡಿದ ಕೂಡಲೇ ಸುಲಿದಿಟ್ಟ ಹಸಿ ಗೋಡಂಬಿಯ ದಳಗಳನ್ನು ಬಾಣಲೆಗೆ ವರ್ಗಾಯಿಸಿ. ಹಿಂಗು ಕದಡಿದ ನೀರನ್ನು ಚಿಮುಕಿಸಿ ಸಟ್ಟುಗದಿಂದ ಮಗುಚಿ. ಅರೆ ಪಾವು ನೀರನ್ನು ಸುರಿದು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಕಿ. ಸಣ್ಣ ಉರಿಯಲ್ಲಿ ಮುಚ್ಚಿಡಿ. ನೀರು ಇಂಗಿದ ಬಳಿಕ ಬೆಂಕಿಯಿಂದ ಇಳಿಸಿ, ಕಾಯಿ ತುರಿ ಸಿಂಪಡಿಸಿ ಕಲಸಿರಿ. ಪೂರಿಗಳನ್ನೂ ಕರಿದು ಎಳೆ ಗೋಡಂಬಿಯ ಪಲ್ಯವನ್ನು ತುಂಡು ಪೂರಿಯಲ್ಲಿ ಸುತ್ತಿ ಬಾಯಿಗಿಟ್ಟರೆ ಅಹೋ! ಏನು ವೈಭವವದು!
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by palachandra on
ನೀವ್ಬಿಡಿ ಶ್ರೀಮಂತ್ರು, ನಮ್ಮಂತವರು ೧೦೦ ತೊಂಡೇಕಾಯಿ ಜೊತೆ ಎಲ್ಲೋ ೩೦-೪೦ ಗೋಡಂಬಿ ಹಾಕಿ ಈ ಪಲ್ಯ ಮಾಡ್ತಾರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಎಳೆ ತೊಂಡೆಯೂ ಭಾಗ್ಯವನ್ತರಿಗಷ್ಟೇ ಲಭ್ಯ. :) ಎಳೆ ತೊಂಡೆಯೂ ಕರಂಡೆ ಕಾಯಿಯೂ ಹಾಕಿದ ಉಪ್ಪಿನ ಕಾಯಿ ಬಾಟಲಿಗೆ ಏನು ಬೆಲೆಯಾದರೂ ಕೊಟ್ಟೇನು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಅರ್ಧ ರಾಜ್ಯ? >>ಕರಂಡೆ ಕಾಯಿಯೂ ಗೊತ್ತಾಗ್ಲಿಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಉಪ್ಪಿನಕಾಯಿಗೆ ಕರಂಡೆ ಕಾಯಿ ಮಿಶ್ರಣವಾಗಿ ಬಳ್ಸುತ್ತಾರೆ. ತುಂಬಾ ಚೆನ್ನಗಿರುತ್ತೆ. ಒಂದು ಚಿತ್ರ ಹಾಕಿದ್ದೇನೆ ನೋಡಿ http://www.sampada.n...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ನಂದಕುಮಾರರ ಚಿತ್ರಕ್ಕೆ ಪೂರಕ ಮಾಹಿತಿ. ಒಂದು ಕರಂಡೆ ಕಾಯಿ ಗಾತ್ರದಲ್ಲಿ ಸಣ್ಣ ಮಣಿಯಂತೆ ಇರುತ್ತದೆ. ಒಗರು ಮಿಶ್ರಿತ ಹುಳಿ ರುಚಿಯ ಈ ಕಾಯಿ ಒಳಗೆ ಬೆಳ್ಳಗಿದ್ದು ಕಚ್ಚಿದಾಗ ಬಿಳಿ ಅಂಟು ಜಿನುಗುತ್ತದೆ. ಇದನ್ನು ಎಳೆ ತೊಂಡೆಯ ಜೊತೆಗೆ ಉಪ್ಪಿನ ಕಾಯಿ ಹಾಕುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
>>ನಾವು ಸ್ವಲ್ಪ ಮುಂದೆ ಬಂದಾಗಿದೆ. ಇದನ್ನು ನಿಮಗೆ ನಾನು ಯುಗಾದಿಯ ಆಸುಪಾಸಿನಲ್ಲಿ ಹೇಳಬೇಕಿತ್ತು. ಇರಲಿ ಮುಂದಿನ ವರ್ಷ ನೆನಪಿನಿಂದ ಮಾಡಿ ತಿನ್ನಿ. >ಪಲ್ಯವನ್ನು ತುಂಡು ಪೂರಿಯಲ್ಲಿ ಸುತ್ತಿ ಬಾಯಿಗಿಟ್ಟರೆ ಅಹೋ! ಏನು ವೈಭವವದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಊರಲ್ಲಿ ಅಲ್ಲಲ್ಲಿ ವಿಚಾರಿಸಿದರೆ ಈಗಲೂ ಎಳೆ ಗೋಡಂಬಿ ಸಿಗಬಹುದು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಮುಂಚೆ ತುಂಬಾ ಮರಗಳಿದ್ದವು. ಈಗ ಇಲ್ಲ. ಆವಾಗ ಗೋಭಂಬಿ ಹಣ್ಣು ಬೀಜನ ಸುಟ್ಟು ತಿನ್ನುತ್ತಿದ್ದೆವು. ಚೆನ್ನಾಗಿತ್ತು. ಪಲ್ಯ ನಾವು ಹೆಚ್ಚಾಗಿ ಮಾಡುವುದಿಲ್ಲ. ಪೂರಿಗೆ ನಾವು ಹೆಚ್ಚಾಗಿ ಮಾವಿನ ಹಣ್ಣಿನ ರಸಾಯನ ಮಾಡುತ್ತೇವೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಪೂರಿಗೆ ಜನಪ್ರಿಯ ಜುಗಲಬಂದಿಗಳು : ಪೂರಿ ಶ್ರೀಖಂಡ ಪೂರಿ ರಸಾಯನ ಪೂರಿ ಶಿರಾ ಪೂರಿ ಬಾಜಿ ಪೂರಿ ಸಾಗು ಪೂರಿ ಕಡ್ಲೆ+ಅವಲಕ್ಕಿ ಪೂರಿ ಎಳೆ ಗೋಡಂಬಿ ಪಲ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by naasomeswara on
>>ಪೂರಿಗಳನ್ನೂ ಕರಿದು ಎಳೆ ಗೋಡಂಬಿಯ ಪಲ್ಯವನ್ನು ತುಂಡು ಪೂರಿಯಲ್ಲಿ ಸುತ್ತಿ ಬಾಯಿಗಿಟ್ಟರೆ ಅಹೋ! ಏನು ವೈಭವವದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ನಂನಿ. ಹೊಟ್ಟೆ ಉರಿತಕ್ಕೆ ಉಪ್ಪು ಹಾಕಿದ ತಣ್ಣಗೆ ನೀರ್ಮಜ್ಜಿಗೆ ರುಚಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by naasomeswara on
ಇದು ಖಾಲಿ ನೀರ್ಮಜ್ಜಿಗೆಯಿಂದ ಶಮನವಾಗುವ ಹೊಟ್ಟೆ ಉರಿಯಲ್ಲ. ಪೊಗದಸ್ತಾಗಿ ಪೂರಿ ಎಳೇ ಗೋಡಂಬಿ ಪಲ್ಯಾನೇ ಆಗಬೇಕು!! :) -ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ನನ್ನ ಬಾಯಲ್ಲಿನ ನೀರು ಜಿನುಗು ಜಿನುಗಿ ನೆಲದ ಮೇಲೆ ಹರಿತಾ ಇದೆ. ಇನ್ಥಾವೆಲ್ಲ ಹಾಕಿ ಹೊಟ್ಟೆ ಉರಿಸ್ತಿರಲ್ಲ ನಿಮ್ಮ ಲೇಖನಾನ ಫ್ಲಾಗಿಸಿಬಿಡ್ತೇನೆ. ಪ್ರಾಯಶ್ಚಿತ್ತ ಅಂದ್ರೆ ಮನೆಗೆ ಕರ್ದು ಮಾಡಿ ಬಡಿಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಹಣಮಂತ ಸ್ವಾಮಿ ಹಗ್ಗ ತಿನ್ನುವಾಗ ಪೂಜಾರಿ ಶ್ಯಾವಿಗೆ ಬೇಡಿದನಂತೆ. ಅಂದಂಗಾಯಿತು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Deeparavishankar on
ಥೂ ನಿಮ್ಮ ರೆಸಿಪಿ ಓದೀನೇ ಎರೆಡು ಸುತ್ತು ಅಗಲ ಆಗಿದೀನಿ. ಇನ್ನು ಜಿಮ್ ಖರ್ಚು ಯಾರು ಕೊಡ್ತಾರೆ? ಅಂದ ಹಾಗೆ ಮಾವಿನ ಹಣ್ಣಿನ ರಸಾಯನ ಚಪಾತಿ ಜೊತೆಗೂ ಚೆನ್ನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಬರಿಯಕ್ಕಿ/ನೀರ್ ದೋಸೆ ಜೊತೆಗೂನೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಬಿಸಿ ಚಪಾತಿಯನ್ನು ಅಇಸ್ಕ್ರೀಮ್ ಗೆ ಸುತ್ತಿ ತಿಂದು ನೋಡಿ. :) ಆದರೆ ಇದು ತೆಳ್ಳಗಾಗಲು ರೆಸಿಪಿ ಅಲ್ಲ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srani on
ಗೋಡಂಬಿ ಹಣ್ಣು ಅಷ್ಟೇ ತುಂಬಾ ಚೆನ್ನಾಗಿರುತ್ತೆ.. ಬೇಸಿಗೆ ರಜೆಯಲ್ಲಿ ನಾವು ಮಾಡುತ್ತಿದ್ದುದು ಗೋಡಂಬಿ ಹಣ್ಣು ಹುಡುಕಿ ತಿನ್ನುವುದು, ಬೀಜಗಳನ್ನು ಸಂಗ್ರಹಿಸುವುದು. ನಮ್ಮ ತಾತನ ಕಾಫಿ ತೋಟದಲ್ಲಿ ಬೇಕಾದಷ್ಟು ಗೋಡಂಬಿ ಗಿಡಗಳಿರುತಿದ್ದವು. ಆದರೆ ನಮ್ಮ ಕಡೆ ಪಲ್ಯಮಾಡಲು ಉಪಯೋಗಿಸುತ್ತಿರಲ್ಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಹಣ್ಣು ತಿಂದು ಬೀಜ ಸಂಗ್ರಹಿಸಿ ಪಾಕೆಟ್ ಮನಿ ಗಳಿಸಿದ ಬೇಸಿಗೆಯ ರಜೆಗಳು ನೆನಪಾದವು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಗುರು, ಗೇರು ಹಣ್ಣು ತಿನ್ನದೇ ವರ್ಷಗಳಾಗಿತ್ತು. :( ಈಗ ಎಳೆ ಗೋಡಂಬಿ ಪಲ್ಯ ಬೇರೆ ನೆನಪಿಸಿದಿರಿ... ಸದ್ಯಕ್ಕೆ ಪಾಲರು ಹೇಳಿದಂತೆ ತೊಂಡೆ+ಗೇರುಬೀಜ ಪಲ್ಯನೇ ಗತಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಕಲೆಗಳಲ್ಲಿ ಮಲ್ಲ ಕಲೆ ಗೊಂಕುದ ಕಲೆ ಎನ್ನುವುದನ್ನು ನೀವು ಮರೆತಿಲ್ಲವೆಂದು ಖಂಡಿತವಿದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಗೋಡಂಬಿಯನ್ನು ಅಮ್ಮ ಸಿಹಿತಿನಿಸುಗಳಿಗೆ ಉಪಯೋಗಿಸ್ತಾರೆ. ಕೆಲವೊಮ್ಮೆ ಖಾರ ಪೊಂಗಲ್ ಗೆ ಗೋಡಂಬಿ ಹಾಕ್ತಾರೆ. ಅದು ಬಿಟ್ರೆ, ಹಾಗೇ ಗೋಡಂಬಿಯನ್ನು ತಿನ್ತೀವಿ. ಅಮ್ಮನಿಗೆ ಗೋಡಂಬಿ ಪಲ್ಯ ಮಾಡಕ್ ಹೇಳ್ಬೇಕು. -ಅನಿಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinutha.mv on
ಛೆ! ಬೆ೦ಗಳೂರಲ್ಲೂ ಇದು ಸಿಗೋ ಹಾಗಿದ್ರೆ, ಇವತ್ತೇ ಮಾಡಿ ಬಿಡ್ತಾ ಇದ್ದೆ. (ಸಿಗತ್ತೆ ಅನ್ನೋದಾದ್ರೆ ಎಲ್ಲಿ ಅ೦ತ ಗೊತ್ತಿದ್ದೋರು ಸ್ವಲ್ಪ ಹೇಳಿ ಪುಣ್ಯ ಕಟ್ಕೊಳಿ :) ) ಬರಿ ಒಣಗೋಡ೦ಬಿ ತಿ೦ದು ಗೊತ್ತಿರೋದು, ಬಿಟ್ರೆ ಗೇರು ಹಣ್ಣಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಅನಿಲ್: ಪಲ್ಯಕ್ಕೆ ಎಳೆ ಗೋಡಂಬಿಯೆ ಚೆನ್ನ. ವಿನುತಾ: ಬೆಂಗಳೂರಲ್ಲಿ ಒಣಗಿಸಿದ ಎಳೆ ಗೋಡಂಬಿಯೂ ಲಭ್ಯ. ನೆನೆಸಿ ಸುಲಿದರೆ ಹಸಿಯಷ್ಟು ಏಳಸಲ್ಲದಿದ್ದರೂ ಒಣ ಗೋಡಂಬಿಯಷ್ಟು ಗಟ್ಟಿಯೂ ಇರದು. ಫಾಲ್ಗುಣಿ ಕ್ಯಾಶ್ಯೂಸ್ ನಲ್ಲಿ ಸಿಗಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.