ಇ-ಲೈಫ್!!
ಅಂದು ಅತ್ತಿಂದಿತ್ತ ಇತ್ತಿಂದತ್ತ ಓಲಾಡುತಿತ್ತು
ಹುಡುಗಿಯರ ಬೆನ್ನ ಹಿಂದೆ
ಉದ್ದನೆಯ ಜಡೆ!!
ಇಂದು ಅತ್ತಿಂದಿತ್ತ ಇತ್ತಿಂದತ್ತ
ಓಲಾಡುತ್ತಿರುತ್ತೆ ಹುಡುಗಿಯರ ಮುಂದೆ
ಐಟಿ ಕಂಪನಿಯ ಐಡಿ ಕಾರ್ಡ್ ಟ್ಯಾಗ್!!
ಅಂದು ಕಟ್ಟು-ಪಾಡು ಸಂಪ್ರದಾಯ!
ಇಂದು ಕಟ್ಟು, ಬಾಬ್-ಕಟ್ಟು ಸಮ್-ಆದಾಯ!!
ಜನಪದ, ಗೀಯಪದ, ಹಾಡು-ಹಸೆ
ಜಾವ, ಸ್ಯಾಪ್, ಚಾಟ್, ಎಸ್ಸೆಮ್ಮೆಸ್ಸೆ!!
ಸೀರೆ, ದಾವಣಿ, ಕಾಲುಗೆಜ್ಜೆ, ಥಯ್ ಥಕ!
ಇವೆಲ್ಲ ವೇಷ ಫ್ಯಾನ್ಸಿ ಶೋ ಕಂಟೆಸ್ಟಿಗೆ!!
ಬಹುಮಾನಕ್ಕೆ! ಬಿಗುಮಾನಕ್ಕೆ!!
ಸಂಕೇತ್ ಗುರುದತ್ತ, ಹೈದರಾಬಾದ್

- Gurudatta N S ರವರ ಬ್ಲಾಗ್
- Login or register to post comments
- 385 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: