ಸಣ್ಸಣ್ ಮಾತುಕತೆ
ಕತೆಗಳು,ಕವನಗಳು,ಅಭಿಪ್ರಾಗಳು, ಸಾಮಾನ್ಯ ಕನ್ನಡಿಗನೊಬ್ಬನಿ೦ದ
ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
ನಿನ್ನೆ ಆಫೀಸಿನಲ್ಲಿ ಸುಮ್ಮನೇ ಕೆಲಸ ಮಾಡುತ್ತ ಕುಳಿತವನಿಗೆ ಬ೦ದ ಒ೦ದು ಮಿ೦ಚ೦ಚೆ ಕಣ್ಸೆಳೆಯಿತು ’kannada is great 'ಎ೦ಬ ಹೆಸರಿನ ಈ ಮಿ೦ಚ೦ಚೆಯನ್ನು ಸ೦ಪದರಿಗಾಗಿ ಅನುವಾದಿಸುತ್ತಿದ್ದೇನೆ.ಕನ್ನಡದ ಬಗ್ಗೆ ಇ೦ಗ್ಲೀಷನಲ್ಲಿ ಮಿ೦ಚ೦ಚೆ ಬ೦ದಿದ್ದು ಹೆಮ್ಮೆಯ ವಿಷಯವೇ,ಉಳಿದ ಭಾಷೆಯವರೂ ನಮ್ಮ ಭಾಷೆಯ ಹಿರಿಮೆ ತಿಳಿದುಕೊಳ್ಳಬಹುದು.ಅದರಲ್ಲಿನ ಅ೦ಶಗಳು ಈ ರೀತಿ ಇವೆ.(ಕೆಳಗಿನವು ನನಗೆ ಬ೦ದ ಮಿ೦ಚ೦ಚೆಯ ಅನುವಾದವಷ್ಟೇ.ಏನಾದರೂ ತಿದ್ದುಪಡಿಯಿದ್ದರೆ ದಯವಿಟ್ಟು ತಿಳಿಸಿ.
೧) ಕನ್ನಡ ಭಾರತದ ಮೂರನೇ ಅತೀ ಹಳೆಯ ಭಾಷೆ(ಸ೦ಸ್ಕೃತ ಮತ್ತು ತಮಿಳನ್ನು ಹೊರತುಪಡಿಸಿ).ಕನ್ನಡಕ್ಕೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ.
೨)ಅತೀ ಹೆಚ್ಚು ಜ್ನಾನ ಪೀಠ ಪ್ರಶಸ್ತಿಗಳು ಬ೦ದಿದ್ದು ಕನ್ನಡ ಭಾಷೆಯ ಸಾಹಿತಿಗಳಿಗೆ.ಉಳಿದ೦ತೆ ಹಿ೦ದಿ ೬ ,ತೆಲುಗು,ತಮಿಳು ತಲಾ ೨ ಮತ್ತು ಮಲಯಾಳ೦ ೬ ಪ್ರಶಸ್ತಿಗಳನ್ನು ಪಡೆದಿವೆ
೩)ಆಚಾರ್ಯ ವಿನೋಭಾ ಭಾವೆಯವರು ಕನ್ನಡ ಲಿಪಿಯನ್ನು "QUEEN OF WORLD SCRIPTS"( ವಿಶ್ವ ಲಿಪಿಗಳ ರಾಣಿ ) ಎ೦ದು ಕರೆದಿದ್ದಾರೆ.
೪)ಕನ್ನಡಕ್ಕೆ ತನ್ನದೇ ಆದ ಲಿಪಿಯಿದೆ.ನಮ್ಮ ಅನಧಿಕೃತ ರಾಷ್ಟ್ರಭಾಷೆ ಹಿ೦ದಿ "ದೇವನಾಗರಿ" ಲಿಪಿಯಲ್ಲಿ ಬರೆಯಲ್ಪಟ್ಟರೇ,ಅನಧೀಕೃತ ವಿಶ್ವ ಭಾಷೆ ಇ೦ಗ್ಲೀಷ ’ರೋಮನ್’ಲಿಪಿಯಲ್ಲಿ ಬರೆಯಲ್ಪಡುತ್ತದೆ.
೫)ತಮಿಳಿಗೆ ತನ್ನದೇ ಆದ ಲಿಪಿಯಿದ್ದರೂ ಅನೇಕ ದೋಷಗಳನ್ನು ಹೊ೦ದಿದೆ.ಅನೇಕ ಉಚ್ಚ್ಹಾರಣೆಗಳಿಗೆ ಒ೦ದೇ ಅಕ್ಷರಗಳು ಬಳಸಲ್ಪಡುತ್ತವೆ.ಕನ್ನಡದಲ್ಲಿ ನೀವು ಏನನ್ನು ಮಾತನಾಡುತ್ತೀರೋ ಅದನ್ನು ಬರೆಯಬಹುದು.ಇದರ ವಿಲೋಮ ಕೂಡಾ ಸತ್ಯ.
೬)ಕನ್ನಡದ ’ಕವಿರಾಜಮಾರ್ಗ’ದ ಜನ್ಮವಾದಾಗ ಇ೦ಗ್ಲೀಷ ಇನ್ನೂ ಕೂಸಾಗಿದ್ದರೇ,ಹಿ೦ದಿ ಹುಟ್ಟಿರಲೇ ಇಲ್ಲ.
೭)ಸಾಹಿತ್ಯದ ವಿಭಿನ್ನ ಪ್ರಕಾರವಾದ ’ರಗಳೆ’ಗಳನ್ನು ಕನ್ನಡದಲ್ಲಿ ಮಾತ್ರ ಕಾಣಬಹುದು.
೮)ದೇಶದ ಸಾಹಿತಿಗಳಲ್ಲಿ ಸಾಹಿತ್ಯಕ್ಕಾಗಿ ಅತೀ ಹೆಚ್ಚು ಪ್ರಶಸ್ತಿ ಪಡೆದವರಲ್ಲಿ ಕನ್ನಡದ ಕುವೆ೦ಪು ಮೊದಲಿಗರು.
ಹೆಮ್ಮೆಯಿ೦ದ ಹೇಳಿ ’ ನಾನು ಕನ್ನಡಿಗ ’

- gururajkodkani ರವರ ಬ್ಲಾಗ್
- Login or register to post comments
- 447 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
>>"೧) ಕನ್ನಡ ಭಾರತದ ಮೂರನೇ ಅತೀ ಹಳೆಯ ಭಾಷೆ(ಸ೦ಸ್ಕೃತ ಮತ್ತು ತಮಿಳನ್ನು ಹೊರತುಪಡಿಸಿ).ಕನ್ನಡಕ್ಕೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ."
ಮತ್ತೆ ಚರ್ಚೆ ಶುರು ಆಗೋಕೆ ಮೊದಲೇ ಇದನ್ನ ನೋಡಿ
http://www.sampada.net/blog/shreekant_mishrikoti/05/05/2006/1608#comment...
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
೧) ಕನ್ನಡ ತಮಿಳು ಸಮ ಸಮ ಹಳೆಯವು. ಇನ್ನೂ ತಮಿಳು ಬರವಣಿಗೆ ಕನ್ನಡಕ್ಕಿಂತ ಹೊಸತು ಎಂದು ಹಂಪನ ತೋರಿದ್ದಾರೆ.
೨) ಸಂಸ್ಕೃತ ಎಲ್ಲ ಲೆಕ್ಕದಲ್ಲೂ ಕನ್ನಡ ತಮಿಳಿಗಿಂತ ಹೊಸದು.. ಅದರ ಹುಟ್ಟು ಪಾಣಿನಿಯಿಂದ ಆದುದು
೩) ವೇದಬಾಶೆ/ಕೆಲವು ಪ್ರಾಕೃತ ಇವು ಸಂಸ್ಕೃತಕ್ಕಿಂತ ಹಳೆಯದು.
೪) ಆದರೆ ವೇದಬಾಶ/ಪ್ರಾಕೃತ/ಸಂಸ್ಕೃತದಿಂದ ಬರದ ಕನ್ನಡ/ತಮಿಳು ಮುಂತಾದ ದ್ರಾವಿಡ/ತೆನ್ನುಡಿಗಳು ಮನುಶ್ಯರು ಎಂದಿನಿಂದ ಮಾತನ್ನು ಆಡಲು ಸುರು ಮಾಡಿದರೋ ಅಂದಿನಿಂದ ಇತ್ತು ಎಂದು ಹೇಳಬೋದು...
ಕನ್ನಡ ತಮಿಳು ಹೇಗೇ ಒಂದು ಬೇರಿಂದ ಕವಲಾಯಿತು ಎಂದು ನಾನು ಹಿಂದೆ ಬರೆದಿದ್ದೆ.. ಇಲ್ಲ ನೋಡಿ.
http://sampada.net/blog/mahesha/18/09/2007/5725
=====================================
ಮಾಯ್ಸ!
ಉ: ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
ಮಹೇಶರೆ,
"೧) ಕನ್ನಡ ತಮಿಳು ಸಮ ಸಮ ಹಳೆಯವು. ಇನ್ನೂ ತಮಿಳು ಬರವಣಿಗೆ ಕನ್ನಡಕ್ಕಿಂತ ಹೊಸತು ಎಂದು ಹಂಪನ ತೋರಿದ್ದಾರೆ "
ಈ ವಿಷಯದಲ್ಲಿ ಹೆಚ್ಚು ವಿಷಯ ತಿಳಿದಿದ್ದರೆ, ಸ್ವಲ್ಪ ಬರೆಯುತ್ತೀರಾ ? ಕೆಲವು ಸಿಕ್ಕಿರುವ ತಮಿಳು ಬ್ರಾಹ್ಮಿ ಶಾಸನಗಳು ಹಲ್ಮಿಡಿ ಶಾಸನಕ್ಕಿಂತ ಒಂದೆರಡು ಶತಮಾನಗಳಷ್ಟಾದರೂ ಹಳೆಯವು ಅಂತ ನಾನು ತಿಳಿದಿದ್ದೆ.
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
"ಕೆಲವು ಸಿಕ್ಕಿರುವ ತಮಿಳು ಬ್ರಾಹ್ಮಿ ಶಾಸನಗಳು ಹಲ್ಮಿಡಿ ಶಾಸನಕ್ಕಿಂತ ಒಂದೆರಡು ಶತಮಾನಗಳಷ್ಟಾದರೂ ಹಳೆಯವು ಅಂತ ನಾನು ತಿಳಿದಿದ್ದೆ."
ಇದು ದಿಟ..
ಆದರೆ.. ಆ ಶಾಸನಗಳು ಜಯಿನ ಮತಕ್ಕೆ ಸೇರಿವೆಯಂತೆ, ಹಾಗೂ ಒಂದೆರಡು ಬುದ್ದ ಮತಕ್ಕೆ ಸೇರಿವೆಯಂತೆ. ಜಯಿನ ಮತ ಕನ್ನಡ ನೆಲದಿಂದ ತಮಿೞು ನೆಲಕ್ಕೆ ಹಾಯಿತು ಎಂಬು ನಂಬತಕ್ಕ ಮಾತು ಅಲ್ಲವೇ...
ಆ ತಮಿೞು ಶಾಸನಗಳಲ್ಲಿ ಕನ್ನಡದ ಬಗೆಯ ಬೞಕೆಗಳಿವೆಯಂತೆ ಕನ್ನಡ ನೆರಳಿದೆಯಂತೆ... ಆದರೆ ಕನ್ನಡದ ಶಾಸನಗಳಲ್ಲಿ ತಮಿೞು ನೆರಳು ಇಲ್ಲವೇ ಇಲ್ಲ ಎನ್ನಬವುದಂತೆ.
ಕನ್ನಡದಲ್ಲಿ ಬುದ್ದ ಮತದ ಶಾಸನಗಳು ದೊರೆತಿಲ್ಲ....
ಕನ್ನಡನಾಡಲ್ಲಿ ಜಯಿನ ಮತದ ಶಾಸನಗಳು, ಗುಡಿಗಳು, ಹೊತ್ತಗೆಗಳು ಮುಂತಾದವನ್ನು ತರುವಾಯ ಗಟ್ಟಿಯಾದ ವಯಿಷಣವ, ಲಿಂಗಾಯತ ಮುಂತಾದ ಮತದ ಅರಸರ ಆಳುವಿಕೆಯ ಕಾಲದಲ್ಲಿ ಮತದ ಜಗಳದಲ್ಲಿ ಹಾಳುಗಯ್ದು ಅಳಿಸರು ಎಂಬ ಮಾತು ಇದೆ... ಆದರೆ... ತಮಿೞು ನೆಲದಲ್ಲಿ ಈ ಬಗೆ ಕ್ರಾಂತಿಗಳು ಕಡಮೆ ಎಂದೇ ಹೇೞಬವುದು ಅಲ್ಲವೇ?
ಹಂಪನ ಅವರ ಬರಹ ಇಲ್ಲಿದೆ.
http://www.totalkannada.com/Kannada%20is%20as%20old%20as%20Tamil.asp
In the 1-3 B.C. Tamil shaashanas, words of Kannada influence "nalliyooraa", kavuDi", "posil" have been introduced. The use of the vowel "a" as an adjective is not prevalent in Tamil, its usage is available in Kannada. Kannada words like "gouDi-gavuDi" transform into Tamil's "kavuDi" for lack of the usage of "Ghosha
svana" in Tamil. That is the reason Kannada's "gavuDi" becomes "kavuDi" in Tamil. "posil" (Kannada "hosilu") is another Kannada word that got added into Tamil. Colloquial Tamil uses this word as "vaayil".
=====================================
ಮಾಯ್ಸ!
ಉ: ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
http://books.google.com/books?id=yhXRDSgBuL0C&pg=PA78&dq=kannada+older+t...
http://books.google.com/books?id=ckmzIlTQBh4C&pg=PA17&dq=kannada+older+t...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
ಮೇಲೆ ನೀಡಿರುವ ಕೊಂಡಿಗಳಲ್ಲಿ, ಮೊದಲನೆಯದರಲ್ಲಿ, ಕನ್ನಡದಲ್ಲಿರುವ ಮೂಗಿನಲ್ಲಿ ಆಡದೇ ಇರುವ ’ಎರಡು’ ಮತ್ತು ’ಮೂರು’ ಗಳು, ತಮಿಳಿನ ’ಎರಂಡು’ ಮತ್ತು ’ಮೂಂಡು’ ಗಳಿಗಿಂತ ಹಳೆಯ ಬಗೆಯವು ಅಂತ ಇದೆ ನೋಡಿ..
ಎರಡನೆಯ ಕೊಂಡಿಯಲ್ಲಿ ತುಂಬ interesting ಸಂಗತಿ ಇದೆ..
ಹರಪ್ಪ ಮೆಹೆಂಜೋದಾರೋ ಹೊತ್ತಿನಲ್ಲಿ ಯಾವ ನುಡಿ ಬಳಕೆಯಲ್ಲಿದ್ದಿತು ಅನ್ನುವದನ್ನು ತಿಳಿಯುವ ಉಂಕು ಈ ಹೊತ್ತಿಗೆಯಲ್ಲಿದೆ..
ಅದರ ಬರಹಗಾರ, ಹರಪ್ಪ ಮೆಹೆಂಜೋದಾರೋ ನಡಾವಳಿಯ ನುಡಿ ಕನ್ನಡ-ತುಳು ಗಳಿಗೆ ಹೆಚ್ಚು ಹತ್ತಿರದ್ದಾಗಿತ್ತು ಅನ್ನುವ ತೀರ್‍ಮಾನಕ್ಕೆ ಬಂದಿದ್ದಾರೆ.
ಈ ಸಾಲು ನೋಡಿ,.
"there is, of course, interesting possibility that, kannada and tuLu contain lexemes that are older than those found in tamil or, in effect, are closer to an older segment of the Dravidian mainstream than tamil"
ಅಂದರೆ ಕನ್ನಡ-ತುಳು ಗಳಲ್ಲಿ ತಮಿಳಿಗಿಂತ ಹಳೆಯದಾದ ಅಂದರೆ ಕನ್ನಡ-ತಮಿಳು ಬೇರು ನುಡಿಗೆ ಹೆಚ್ಚು ಹತ್ತಿರದ ಪದಪುಂಜಗಳು(lexemes) ಕಂಡು ಬರುವ ಸಾದ್ದೆತೆ ಇದೆ.
ಮೇಲೆ ಹೇಳಿರುವ ’ಎರಡು’ ಮತ್ತು ’ಮೂರು’ಗಳು ಇದಕ್ಕೆ ಪುರಾವೆ.
ಸುಮಾರು 3 BC ನಲ್ಲಿ ಬರೆದದ್ದು ಎಂದು ಹೇಳಲಾಗುವ, ತಮಿಳಿನ ಅತೀ ಹಳೆಯ ಗವಿಯಲ್ಲಿ ದೊರೆತ inscriptions(ಶಾಸನ) ನ ಬರಹಗಳಲ್ಲಿ ಕನ್ನಡದ ನೆರಳಿದೆ ಅನ್ನುವದನ್ನು ತಮಿಳರೇ ಆದ ಮಹಾದೇವನ್ ಕಂಡು ಹಿಡಿದಿದ್ದಾರೆ(http://www.hinduonnet.com/lr/2003/08/03/stories/2003080300280400.htm).
ಸಾಕೆ ಪುರಾವೆ, ಕನ್ನಡವೂ ಅಸ್ಟೇ ಹಳೆಯದೆನ್ನಲು?
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
ಸಂಗನಗೌಡ್ರೆ,
ಕನ್ನಡವೂ ತಮಿಳಿನಷ್ಟೇ ಹಳೆಯದು ಅನ್ನುವುದರಲ್ಲಿ ನನಗೆ ಯಾವ ರೀತಿಯ ಅನುಮಾನವೂ ಇಲ್ಲ - ಆದರೆ ಹಲ್ಮಿಡಿ ಶಾಸನ ತಮಿಳು ಬ್ರಾಹ್ಮೀ ಶಾಸನಕ್ಕಿಂತ ಈಚೆಯದಾದ್ದರಿಂದ ಕೇಳಿದ್ದೆ ಅಷ್ಟೇ. ನೀವು ಕೊಟ್ಟ ಸೂಚಿಗಳಿಗೆ ಧನ್ಯವಾದಗಳು.
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
ಹಂಸಾನಂದಿಗಳೇ
ತಮಿಳು ಬ್ರಾಹ್ಮೀ ಅನ್ನೋದ ಬಗ್ಗೆ ಇನ್ನೋ ದೊಡ್ಡ ಗೊಂದಲವಿದೆ.. ಇದು ಮತ್ತೊಂದು ತಮಿಳು ಚೇಶ್ಟೆ ಎಂದು ಹಲವರು ಅನಿಸಿಕೆ..
ನಮ್ಮ ’ಕರ್ನಾಟಕದ ಸಿರಿ ಬೂವಲಯ’ದಂತೆ ಮೊದಲ ತೀರ್ತಂಕರ ರುಶಬದೇವ ತನ್ನ ಇಬ್ಬರು ಅಣುಗಿಯರಾಗಿದ್ದ( ಒಬ್ಬಳ ಹೆಸರು ಬ್ರಾಹ್ಮಿ. ) ಕನ್ನಡದ ಅಕ್ಕರಗಳಂನು ಮತ್ತು ಅಂಕಿಗಳಂನು ಕೊಟ್ಟನಂತೆ.
ಹಾಗಾದರೆ ಕನ್ನಡದ ಬರವಣಿಗೆ ಕಡಮೆ ಅಂದರೂ ರುಶಬದೇವನ ಕಾಲದಿಂದಲೂ ಇದೆ.
ತಮಿಳು ಬ್ರಾಹ್ಮಿ ಎಂದು ಹೇಳಿಕೊಂಡಿ ಸಿಕ್ಕಿರುವುದು ಬವುದ್ದರ ಶಾಸನಗಳಂತೆ ಅವು ತಮಿಳಗಿಂತ ಪಾಗದವೇ ಹೆಚ್ಚು ಎಂದಿದೆಯಲ್ಲವೇ.!?
=====================================
ಮಾಯ್ಸ!