ಪ್ರೀತಿ.............ನಿನ್ನ ನೆನಪಿನಲಿ
ನಿನ್ನ ನೆನಪಿನಲಿ ನನ್ನ ಉಸಿರಿರಲಿ ನೆನೆಪೇ ಬದುಕು ನಮಗೆ
ನಿನ್ನ ನೆನಪಿನಲಿ ನನ್ನ ಬದುಕಿರಲಿ ನೆನೆಪೇ ಬದುಕು ಕೊನೆಗೆ............ವಿಜಯಹೆಮ್ಮರಗಾಲ
ತಿಂಗಾ ತಿಂಗಳಿಗೂ ಚೆಂದ ನಂಜನಗೂಡು
ತಿಂಗಾ ತಿಂಗಳಿಗೂ ಚೆಂದ ನಂಜನಗೂಡು
ಗಂಧ ತುಂಬೈತೆ ಉಡಿಗೆಲ್ಲಾ
ಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋ
ಅಪ್ಪಾ ನಂಜುಂಡೋ ನೆಲೆಗೊಂಡು
ಅಪ್ಪಾ ನಂಜುಂಡೋ ನೆಲೆಗೊಂಡು ||
ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆ
ಆನೆ ಬಂದಾವೆ ಅರಮನೆಗೇ
ಆನೆ ಬಂದಾವೆ ಅರಮನೆಗೆ ನಂಜುಂಡೋ
ಭಕ್ತ್ರು ಬಂದವ್ರೇ ದರುಶನಕೇ
ಭಕ್ತ್ರು ಬಂದವ್ರೇ ದರುಶನಕೇ ||
ಮಂದಿ ಮಂದೀಯೆಂದು ಮಂದಿ ನಂಬಲುಹೋದೆ
ಮಂದಿ ಬಿಟ್ಟಾರೋ ನಡುನೀರಾ
ಮಂದಿ ಬಿಟ್ಟಾರೋ ನಡುನೀರ ನಂಜುಂಡೋ
ಅಪ್ಪಾ ನನ್ ಕೈಯಾ ಬಿಡಬ್ಯಾಡ
ಅಪ್ಪಾ ನನ್ ಕೈಯಾ ಬಿಡಬ್ಯಾಡ ||
********************************ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ

- gvijaihemmaragala ರವರ ಬ್ಲಾಗ್
- Login or register to post comments
- 113 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: