gvmt ರವರ ಬ್ಲಾಗ್
ಜಪಾನಿನ ಕಥೆಗಳು - ೧ : ಅವೊತೊ ಫುಜಿತ್ಸುನ
November 20, 2006 - 7:21am — gvmt೧೯ನೆ ಶತಕದ ಅಂತ್ಯಭಾಗದಲ್ಲಿ ಬ್ರಿಟಿಷ್ ಮ್ಯೂಸಿಯಂನ ಪರವಾಗಿ ಜಪಾನಿನಲ್ಲಿ ಯಾತ್ರೆ ಕೈಗೊಂಡ ರಿಚರ್ಡ್ ಗಾರ್ಡನ್ ಸ್ಮಿತ್ ಎಂಬಾತನು ಅಲ್ಲಿ ಕೇಳಿ ಸಂಗ್ರಹಿಸಿದ ಕಥೆಗಳಲ್ಲಿ ಕೆಲವನ್ನು ಪುಸ್ತಕವಾಗಿ ೧೯೦೮ರಲ್ಲಿ ಪ್ರಕಟಿಸಿದನು. ಅವುಗಳಲ್ಲಿ ಕೆಲವನ್ನು ಆರಿಸಿ ಅನುವಾದಿಸಿ ಇಲ್ಲಿ ಕನ್ನಡದ ಓದುಗರಿಗೆ ಪರಿಚಯಿಸುತ್ತಿದ್ದೇನೆ. ಮೊದಲನೆಯ ಕಂತಾಗಿ ಅವೊತು ಫುಜಿತ್ಸುನ ಎಂಬ ಪ್ರಾಮಾಣಿಕನ ಕಥೆಯನ್ನು ಅನುವಾದಿದ್ದೇನೆ. ಈ ಕೊಂಡಿಯನ್ನು ಅನುಸರಿಸಿ ಇಡಿಯ ಕಥೆಯನ್ನು ಓದಬಹುದು. ಮುಂದೆ ಓದಿ »

- Login or register to post comments
- 608 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ದ್ವ್ರಿರುಕ್ತಿ ದ್ವಿರುಕ್ತಿ - ೪ : ಭೋಜರಾಜನ ಅಕ್ಷರಲಕ್ಷ
August 6, 2006 - 4:11am — gvmt[ ನನ್ನ ಬ್ಲಾಗಿನಿಂದ ಮರುಪ್ರಕಟನೆ - ವೆಂ. ]
ಭೋಜರಾಜ ಚಾರಿತ್ರಿಕ ವ್ಯಕ್ತಿ, ಸುಮಾರು ೧೧ನೆಯ ಶತಮಾನದವನು. ಆದರೂ ೫-೬ನೆಯ ಶತಮಾನದ ಕಾಳಿದಾಸನ ಹೆಸರಿನೊಂದಿಗೆ ಭೋಜನ ಹೆಸರು ಜೋತುಬಿದ್ದಿದೆ. ಚಾರಿತ್ರಿಕ ಭೋಜನಂತೆಯೆ ಕಾಳಿದಾಸನ ಭೋಜನೂ ಕವಿತಾಪಕ್ಷಪಾತಿ. ಆಗಾಗ ಕವಿಗಳನ್ನು ತನ್ನಲ್ಲಿಗೆ ಕರೆಸಿಕೊಂಡು ಗೋಷ್ಟಿಗಳನ್ನು ನಡೆಸಿ ಬಹುಮಾನಮಾಡಿ ಕಳಿಸುತ್ತಿದ್ದನು. ಆಗಾಗ ಕವಿತೆ ಕಟ್ಟುವ ಯಾರಿಗೂ ತನ್ನ ಆಸ್ಥಾನದ ಬಾಗಿಲುಗಳನ್ನು ತೆರೆದು ಅಕ್ಷರಲಕ್ಷವನ್ನು ನಡೆಸುತ್ತಿದ್ದನು. ಅಕ್ಷರಲಕ್ಷವೆಂದರೆ ಕವಿತೆಯ ಅಕ್ಷರವೊಂದಕ್ಕೆ ಲಕ್ಷ ಹೊನ್ನುಗಳಷ್ಟು ಬಹುಮಾನಿಸುವುದು. ಯಾರು ಬೇಕಾದರು ಆಸ್ಥಾನಕ್ಕೆ ಬಂದು ತಾವೆ ಕಟ್ಟಿದೆ ಕವಿತೆಯನು ಹಾಡಿ ಬಹುಮಾನ ಪಡೆಯಬಹುದಾಗಿತ್ತು. ಇಂತಹ ರಾಜನಿದ್ದಾಗ ಕಾಳಿದಾಸಾದಿಗಳಿಗೆ ಯಾವ ಕೊರತೆಯೂ ಇದ್ದಿರಲಾರದು. "ತ್ವಯಿ ದಾತರಿ ರಾಜೇಂದ್ರ ಸುದ್ರುಮಾಂ ನಾಶ್ರಯಾಮಹೇ" (ನೀನಿದ್ದಾಗ ಕಲ್ಪತರು ಬೇರೆ ಬೇಕೆ?) ಎಂದು ಅಷ್ಟಲ್ಲದೆ ಹೊಗಳಿದರೆ? ಮುಂದೆ ಓದಿ »

- Login or register to post comments
- 574 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಭಾರತಕ್ಕೆಂದೆ ಪ್ರತ್ಯೇಕವಾದ ಜಿ.ಪಿ.ಎಸ್ ವ್ಯವಸ್ಥೆ - ಬೇಕೆ, ಬೇಡವೆ?
July 1, 2006 - 11:09pm — gvmtನಿಮ್ಮಲ್ಲಿ ಹಲವರಿಗೆ ಇದು ಹಳಸಲು ಸುದ್ದಿಯೇನೊ ಆದರೆ ನನಗೆ ಇತ್ತೀಚಿಗೆ ತಿಳಿಯಿತು, ಇಸ್ರೋದವರು ಭಾರತಕ್ಕೆಂದೆ ಪ್ರತ್ಯೇಕವಾದ, ೮ ಉಪಗ್ರಹಗಳುಳ್ಳ ಜಿ.ಪಿ.ಎಸ್ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ; ಅಂದಾಜು ವೆಚ್ಚ ೨೦೦೦ ಕೋಟಿ ರೂ.
ಅಮೇರಿಕೆಯ ಜಿ.ಪಿ.ಎಸ್ ವ್ಯವಸ್ಥೆ ಭದ್ರವಾಗಿ ತಳವೂರಿದೆ; ಒಂದು ಕಾಲದಲ್ಲಿ ಅಮೇರಿಕೆಯ ಸೇನೆಯವರಿಗೆ ಮಾತ್ರ ಕೊಡಲಾಗುತ್ತಿದ್ದ ಕರಾರುವಾಕ್ಕಾದ ಮಾಹಿತಿಯನ್ನು ಎಲ್ಲರಿಗೂ ಕೊಡುವಂತೆ ಕ್ಲಿಂಟನ್ ಸರ್ಕಾರದವರು ಏರ್ಪಡಿಸಿಯಾಗಿದೆ. ರಷ್ಯಾದ ಗ್ಲೋನಾಸ್ ವ್ಯವಸ್ಥೆಯ ಉಪಗ್ರಹಗಳನ್ನು ಭಾರತದಿಂದ ಉಡಾವಣೆ ಮಾಡುವಂತೆಯೂ, ಭಾರತದಲ್ಲಿ ಸೇನೆಯವರೂ ಸಾರ್ವಜನಿಕರೂ ಆ ವ್ಯವಸ್ಥೆಯನ್ನು ಬಳಸಲಾಗುವಂತೆಯೂ ಒಪ್ಪಂದವೇರ್ಪಟ್ಟಿದೆ. ಸಾಲದ್ದಕ್ಕೆ ಯೂರೋಪಿನ ಇ.ಎಸ್.ಎ ಸಂಸ್ಥೆಯವರ ಗೆಲಿಲೆಯೋ ವ್ಯವಸ್ಥೆಯಲ್ಲೂ ಭಾರತ ಪಾಲ್ಗೊಳ್ಳುವಂತೆ ಒಪ್ಪಂದವಾಗಿದೆ. ಇಷ್ಟಿದ್ದೂ ಮತ್ತೊಂದು ವ್ಯವಸ್ಥೆ ಬೇಕೆ? ಇದರಿಂದ ಯಾವ ಹೊಸ ಪ್ರಯೋಜನವಾದೀತು? ಎಲ್ಲ ತಿಳಿದೂ ಯೋಜನೆ ತಯಾರಿಸಿದ ಇಸ್ರೋದವರ ಉದ್ದೇಶವಾದರೂ ಏನಿರಬಹುದು?
ಒಂದು ವೇಳೆ ಸರ್ಕಾರದವರು ಮಂಜೂರು ಮಾಡಿದರೆ ಹೊಸ ವ್ಯವಸ್ಥೆಗೊಂದು ಹೆಸರು ಬೇಕಲ್ಲ? ನಕ್ಷತ್ರ ಚೆನ್ನಾಗಿ ಒಪ್ಪುತ್ತೆ, ಏನಂತೀರಿ?
[ ನ್ಯಾಯವಾಗಿ ಜಿ.ಪಿ.ಎಸ್ ಅಮೇರಿಕೆಯ ವ್ಯವಸ್ಥೆಯ ಹೆಸರು ಮಾತ್ರ; ಉಳಿದವನ್ನು ಆ ಹೆಸರಿನಿಂದ ಕರೆಯಲು ಬಾರದು; ಆದರೆ "ಉಪಗ್ರಹಾಧಾರಿತ ಯಾನವ್ಯವಸ್ಥೆ" ಎನ್ನುವುದರ ಬದಲಾಗಿ ಜಿ.ಪಿ.ಎಸ್ ಎನ್ನುವುದು ಸುಲಭ. ಇದರಿಂದ ಯಾರಾದರೂ ನೊಂದಿದ್ದರೆ ದಯವಿಟ್ಟು ಕ್ಷಮಿಸಿ. ]
ವೆಂ.

- Login or register to post comments
- 782 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ದ್ವಿರುಕ್ತಿ ದ್ವಿರುಕ್ತಿ - ೩ : ಚಾತಕ
March 2, 2006 - 8:55am — gvmt[ ನನ್ನ ಸೈಟಿನಿಂದ ಬರಹವನ್ನು ಆಗಾಗ ತೆಗೆದು ಸಂಪದಕ್ಕೆ ಹಾಕುವ (ದುರ್)ಅಭ್ಯಾಸ ಬೆಳೆದುಬಿಟ್ಟಿದೆ. ಇದೂ ಸೇರಿ ಮೂರನೆಯ ಬಾರಿ ಹಾಗೆ ಹಾಕುತ್ತಿರುವುದು. ಅಂತಲೆ, ಇದು ದ್ವಿರುಕ್ತಿ; ಮುಂದೂ ಮಾಡಬಹುದಾದ್ದರಿಂದ ಇದು ಒಂದು ಮಾಲಿಕೆ; ಸದ್ಯದ್ದು ಮೂರನೆಯದು ]
ಕಾತರಿಸಿ ಕಾಯುವವರನ್ನು ಚಾತಕನಿಗೆ ಹೋಲಿಸುವುದು ಕವಿಸಮಯ. ಚಾತಕ ಪಕ್ಷಿಯು ನೆಲದ ಮೇಲೆ ಬಿದ್ದ ನೀರನ್ನು ಕುಡಿಯುವುದಿಲ್ಲವಂತೆ. ಮಳೆಯ ಹನಿ ನೇರವಾಗಿ ಗಂಟಲೊಳಗೆ ಇಳಿದರೆ ನೀರುಂಟು, ಇಲ್ಲವಾದರಿಲ್ಲ. ಅಂತಲೆ, ಚಾತಕವು ಮಳೆಯ ಮೋಡವನ್ನು ಕಾಯುತ್ತ, ಮೋಡ ಕಂಡೊಡನೆಯೆ ದೀನಸ್ವರದಲ್ಲಿ ಹಾಡುವುದಂತೆ. ಹಾಗೊಂದು ಚಾತಕನಿಗೆ ಭರ್ತೃಹರಿಯ ಕೆಳೆತನದ ಕಿವಿಮಾತು ಇದು:
रॆ रॆ चातक सावधानमनसा मित्र क्शणं श्रूयतां ।
अंभॊदाः बहवॊ वसंति गगने सर्वॆऽपि नैकादृशाः ।
कॆचिद्वृष्टिभिरार्द्रयंति वसुधां गर्जंति कॆचिद्वृथा ।
यं यं पश्यसि तस्य तस्य पुरतः मा ब्रूहि दीनं वचः ॥
ಎಲೆಲೆ ಗೆಳೆಯ ಚಾತಕನೆ, ಕೆಳೆಯ ನುಡಿಯ ಕೇಳು
ಬಾನಿನಲ್ಲಿ ತೇಲುವವು ಮೋಡಗಳು ಹಲವು
ಹನಿಸಿ ನೀರು ನೆಲವ ತೊಯ್ಸಿ ಸಾರುವವು ಕೆಲವು
ಧ್ವನಿಸಿ ಸುಳ್ಳೆ ಹುಸಿಯ ಆಶೆ ತೋರುವವು ಕೆಲವು
ನಿನ್ನ ದೈನ್ಯ ಎಲ್ಲರಲ್ಲಿ ಫಲಿತಕ್ಕೆ ಬಾರದು
[ ಕವಿ अंभॊदाः ಎಂದಿರುವುದನ್ನು ಗಮನಿಸಿರಿ: ಸುಳ್ಳೆ ಗುಡುಗಿದ ಮೋಡದಲ್ಲಿ ನೀರಿಲ್ಲವೆಂದಲ್ಲ, ಕೊಡುವ ಮನಸ್ಸಿಲ್ಲ ಅಷ್ಟೆ ]

- Login or register to post comments
- 688 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಬೇಡಿಕೆ
February 3, 2006 - 10:03pm — gvmtಪಡುಗಾಳಿ, ಬೀಸೆಯಾ?
ಸೋನೆ ಮಳೆ ಬಿದ್ದು
ನಲ್ಲೆಯಪ್ಪುಗೆಯಲ್ಲಿ
ಬೆಚ್ಚಗೆ
ನಾ ಮಲಗಬಹುದು
ಅಜ್ಞಾತ ಆಂಗ್ಲಕವಿಯೊಬ್ಬನ ಬೇಡಿಕೆಯ ಕನ್ನಡೀಕರಣ ಮುಂದೆ ಓದಿ »

- Login or register to post comments
- 809 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: