'' ಚುಟುಕುಗಳು ''
ಸಪ್ತಪದಿ
ಸಪ್ತಪದಿ
ಬದುಕಿನ ಅನೇಕ ಪ್ರಶ್ನೆಗಳಿಗೆ
ಉತ್ತರಗಳೇ ಇರುವುದಿಲ್ಲ
ಹಾಗೆಯೆ ಅನೇಕ ಸಮಸ್ಯೆಗಳಿಗೆ
ಪರಿಹಾರಗಳೂ ಇರುವುದಿಲ್ಲ
ಪರಿಹಾರವಿಲ್ಲದ ಪ್ರಶ್ನೆ ಸಮಸ್ಯೆಗಳಿಗೆ
ತಲೆ ಕೆಡಿಸಿಕೊಂಡು ಕೂಡ್ರಬಾರದು
ಜೀವನವೊಂದು ನಿರಂತರ ಜಂಗಮ
ಹಾಳು ಹಂಪಿ ಎಲ್ಲಿ ನೋಡಿದರಲ್ಲಿ
ಕಲ್ಲು ಬಂಡೆಗಳು ಭಗ್ನ ಶಿಲ್ಪಗಳು
ದೇಗುಲಗಳ ಶಿಥಿಲ ಅವಶೇಷಗಳು
ವಿಜಯ ನಗರ ಸಾಮ್ರಾಜ್ಯದ
ಗತ ವೈಭವದ ಪಳಿಯುಳಿಕೆಗಳು
ನಿಟ್ಟುಸಿರಿಡುತಿದೆ ಸಾಮ್ರಾಜ್ಯವೊಂದರ
ಅವನತಿ ಕಂಡು
ಆಯತಾಕಾರದ ವಿಶಾಲ ಪುಷ್ಕರಣಿ
ನಾಲ್ದೆಶೆಗೂ ಶಿಥಿಲ ಶಿಲಾ ಮೆಟ್ಟಿಲುಗಳು
ಹಸಿರುಗಟ್ಟಿ ಮಲೆತ ನೀರು
ಹಬ್ಬಿದೆ ತಾವರೆ ಬಳ್ಳಿಗಳ ಜಾಲ
ಮಧ್ಯೆ ನಿಂತಿದೆ ನಾಲ್ಗಂಬಗಳ ಗೋಪುರ
ಕಾಲನ ಹೊಡೆತಕೆ ಹಣ್ಣಾಗಿ
ಯಾವ ದೇವ ದೇವಿಯರು
ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಡುತ್ತಿದ್ದರೋ
ಯಾವ ಮತಾಂಧನಿಗೆ ಬಲಿಯಾದರೋ! Read more about " ಸುವರ್ಣ ಕರ್ನಾಟಕದ ಕನಸು "
ದೇವರು ಕಣ್ಮುಂದೆ ಚಲಿಸುವ
2012 ರ ಅಕ್ಟೋಬರ್ 21 ರ ಸಂಧ್ಯಾಕಾಲ ಮುಂಬೈನ ಲೀಲಾವತಿ ಆಸ್ಪತ್ರೆ ಮತ್ತೊಬ್ಬ ದಿಗ್ಗಜರ ಸಾವಿಗೆ ಸಾಕ್ಷಿಯಾಯಿತು. ಬಾಲಿವುಡ್ನ ಮೊದಲ ಸೂಪರ್ ಸ್ಟಾರ್ ' ರಾಜೇಶ ಖನ್ನಾನ ' ಸಾವನ್ನು ಅರಗಿಸಿ ಕೊಳ್ಳುವ ಮುನ್ನವೆ ಮತ್ತೊಬ್ಬ ಪ್ರತಿಷ್ಟಿತ ನಿಮರ್ಾಪಕ, ನಿದರ್ೇಶಕ, ಪಟಕಥಾ ಬರಹಗಾರ ಯಶರಾಜ ಛೋಪ್ರಾ ಡೆಂಗ್ಯೂ ಜ್ವರಕ್ಕೆ ಬಲಿಯಾಗಿ ಚಲನಚಿತ್ರ ರಂಗ ಮಂಚದ ತಮ್ಮ ಪಾತ್ರ ಮುಗಿಸಿ ವೇಷ ಭೂಷಣ ಕಳಚಿಟ್ಟು ರಂಗಕ್ಕೆ ವಿದಾಯ ಹೇಳಿ ನೇಪಥ್ಯಕ್ಕೆ ಸರಿದು ಹೋಗಿದ್ದಾರೆ. ನನಗೆ ನಿನ್ನೆ ಸಾಯಂಕಾಲ ಈ ಸುದ್ದಿ ದೃಶ್ಯ ಮಾಧ್ಯಮದ ಮೂಲಕ ತಿಳಿದು ಬಂದಾಗ ನನಗೆ ಮೊದಲು ಯಶರಾಜ ನೆನಪಿಗೆ ಬಂದದ್ದು ತನ್ನ ಅಣ್ನ ಬಿ.ಆರ್.ಛೋಪ್ರಾ ಬ್ಯಾನರ್ನಲ್ಲಿ ಅದ್ಭುತ ವೆನ್ನುವಂತಹ ಚಿತ್ರಗಳನ್ನು ನಿದರ್ೇಶಿಸಿದವನೆಂದು. Read more about " ಡೆಂಗ್ಯೂ ಮಾರಿಗೆ ಬಲಿಯಾದ ಹಿಂದಿ ಚಿತ್ರ ರಂಗದ ದಿಗ್ಗಜ ಯಶರಾಜ್ ಛೋಪ್ರಾ"