Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › H.S.R.Raghavendra Rao ರವರ ಬ್ಲಾಗ್

ಅನುಭವ - ಆಲೋಚನ-ಭಾಷೆ

December 23, 2006 - 4:45pm — H.S.R.Raghavend...

ಆಲೋಚನೆ ಮತ್ತು ಭಾವನೆ ಇವೆರಡೂ ಒಟ್ಟಿಗೆ ಇರಲು ಸಾಧ್ಯವೇ ಎನ್ನುವುದು ನನ್ನನ್ನು ಬಹು ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಆಲೋಚನೆಯ ಬದಲು ಅನುಭವ ಎಂಬ ಪದವನ್ನೂ ಸೇರಿಸಬಹುದು. ಆಲೋಚನೆಯಲ್ಲಿ ನಿರತವಾದಾಗ ಉಳಿದ ಎರಡೂ ಆಗದೆ ಇರಬಹುದೇ? ಇದು ಕೇವಲ ಸಾಹಿತ್ಯವನ್ನು ರಚಿಸುವವರ ಸಮಸ್ಯೆಯಲ್ಲ. ನಮ್ಮ ಸ್ವಂತ ಬದುಕಿನಲ್ಲೂ ಈ ಸವಾಲು ಹುಟ್ಟುತ್ತದೆ. ಕೇವಲ ಇಂದ್ರಿಯಗಳ ನೆಲೆಯಲ್ಲಿ ಭಾಷೆಯ ಹಂಗೂ ಇಲ್ಲದೆ ಅನುಭವಿಸುತ್ತೇವಲ್ಲ ಅದು ಮಾತ್ರ ನಿಜವೇ? ಸರಿಯಾದ ಉತ್ತರ ನನಗೂ ತಿಳಿಯದು. ಸಾಹಿತ್ಯವಿರಲಿ, ಮಾತಿರಲಿ ಎಲ್ಲವೂ ವಾಸ್ತವದ ಪ್ರತಿಬಿಂಬವೋ ಮರುಸೃಷ್ಟಿಯೋ? ಓದುಗರ ಪ್ರತಿಕ್ರಿಯೆಗಳು ಈ ಚಚೆಯನ್ನು ಬೆಳೆಸಬಹುದು.

Ornamental seperator
  • H.S.R.Raghavendra Rao ರವರ ಬ್ಲಾಗ್
  • Login or register to post comments
  • 589 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 23, 2006 - 11:15pm — kannadiga_1956

Re: ಅನುಭವ - ಆಲೋಚನ-ಭಾಷೆ

kannadiga_1956's picture

H.S.R ಅವ್ರೆ,

ನಾನು ಇವತ್ತು ನಿಮ್ಮ ಒಂದು ಪ್ರಶ್ಣೆ ಮಾತ್ರ ಉತ್ತರಿಸೋಕೆ ಪ್ರಯತ್ನ ಪಡ್ತಿನಿ.

ಆಲೋಚನೆ ಮತ್ತು ಭಾವನೆ ಇವೆರಡೂ ಒಟ್ಟಿಗೆ ಇರಲು ಸಾಧ್ಯವೇ ?

ನನ್ನ ಉತ್ತರ "ಹೌದು". ಆಲೋಚನೆ ಮತ್ತು ಭಾವನೆ ಇವೆರ್ಡೂ ಯಾವಾಗ್ಲೂ ಒಟ್ಟಿಗೆ ಇರುತ್ತೆ. ನಮ್ಮ ಮೆದುಳು ಯಾವುದೇ ವಿಷಯನ Store ಮಾಡ್ಬೇಕಾದ್ರೆ, ಆ ವಿಷಯದ ಜೊತೆಗಿರೋ ಭಾವನೆನೂ Store ಮಾಡುತ್ತೆ. ಇದನ್ನ ಎಲ್ಲೋ ಓದಿದ್ದೆ. ಉದಹರಣೆ : ನಾವು OOTYಗೆ ಹೋಗಿರ್ತೀವಿ, ಅಲ್ಲಿ ಏನೋ ದುರಂತ ನೆಡೆದಿರುತ್ತೆ. ಮತ್ತೆ ನಾವು OOTY ಆಲೋಚಿಸಿದಾಗ, ಅದೇ ದುಃಖದ ಬಾವನೆ ಬರುತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ
December 24, 2006 - 12:34am — bhatpp

Re: ಅನುಭವ - ಆಲೋಚನ-ಭಾಷೆ

bhatpp's picture

ಸಾಹಿತ್ಯವಿರಲಿ, ಮಾತಿರಲಿ ಎಲ್ಲವೂ ವಾಸ್ತವದ ಪ್ರತಿಬಿಂಬವೋ ಮರುಸೃಷ್ಟಿಯೋ?

ಯೋಚಿಸಿ ನೋಡಿ; ಇವೆಲ್ಲವೂ ವಾಸ್ತವದ ಪ್ರತಿಬಿಂಬ ಹೇಗಾಗುವವು? ವಾಸ್ತವವು ಮಾತು, ಭಾಷೆ, ಅಥವಾ ಸಾಹಿತ್ಯದಿಂದ ಹೊರಗಿಲ್ಲವೆ? ಮಾತಿನಿಂದ ನಾವು ಯಾವುದೇ ಘಟನೆಯಾಗಲಿ, ಸಂಗತಿಯಾಗಲಿ, ಅವುಗಳಿಗೆ ನಮ್ಮದೇ ಆದ ಸ್ವಂತ ನಂಬಿಕೆ/ದೃಷ್ಟಿಯಿಂದ ವಿವರಣೆ ಕೊಡುವುದಿಲ್ಲವೆ? ಆದ್ದರಿಂದ, ಮಾತು ನಮ್ಮ ಸೃಷ್ಟಿ--ವಾಸ್ತವವಲ್ಲ!

  • Login or register to post comments
  • link
  • Email this ಪ್ರತಿಕ್ರಿಯೆ
December 24, 2006 - 11:57am — olnswamy

ವಾಸ್ತವವೆಂದರೆ ಭಾಷೆಯೇ ಅಲ್ಲವೇ!

olnswamy's picture

ಸಂಪದ ಬಳಗಕ್ಕೆ ಎಚ್.ಎಸ್.ಆರ್. ಅವರಿಗೆ ಸ್ವಾಗತ. ನಿಮ್ಮ ಬರಹದಿಂದ ಸಂಪದದ ಆಳ, ಘನತೆ ಹೆಚ್ಚುತ್ತದೆ.
ನೀವು ಎತ್ತಿರುವ ಪ್ರಶ್ನೆ ಬಲು ದೊಡ್ಡದು. ಹೀಗೂ ಆಗಬಹುದಲ್ಲವೆ? ಭಾಷೆಯ ಹಂಗಿಲ್ಲದೆ ವಾಸ್ತವ ಕೂಡ ಇಲ್ಲ. ನಾವು ಯಾವುದನ್ನು ವಾಸ್ತವ ಅನ್ನುತ್ತೇವೋ ಅದು ಭಾಷೆಯಲ್ಲಿ ನಾವು ಕಟ್ಟಿಕೊಂಡದ್ದೇ ಅಲ್ಲವೇ? ತೆಂಗಿನ ಮರಕ್ಕೆ ತಾನು ತೆಂಗಿನ ಮರ ಅಂತ ಗೊತ್ತೇ ಇಲ್ಲ. ಮನುಷ್ಯರು, ಕನ್ನಡ ಮಾತಾಡುವ ಮನುಷ್ಯರು, ಅದಕ್ಕೆ ತಮ್ಮ ಭಾಷೆಯಲ್ಲಿ ತೆಂಗಿನ ಮರ ಎಂದು ಹೆಸರಿಟ್ಟು ತಮ್ಮ ವಾಸ್ತವದ ಭಾಗ ಮಾಡಿಕೊಂಡಿದ್ದಾರೆ. ವಾಸ್ತವ ಅನ್ನುವುದು ಸಂಪೂರ್ಣವಾಗಿ ಭಾಷೆಯದೇ ಸೃಷ್ಟಿ. ಭಾಷೆಯ ಹಂಗಿಲ್ಲದೆ ನೋಡಲು ಅನುಭವಿಸಲು ಸಾಧ್ಯವೇ ಅನ್ನುವುದು ಮನುಷ್ಯನ ದೀರ್ಘ ಕಾಲದ ಹುಡುಕಾಟ. ಹಾಗಾದರೆ ವಾಸ್ತವವೇ ಭಾಷೆಯ ಪ್ರತಿಬಿಂಬ, ವಾಸ್ತವವೇ ಕಲ್ಪನೆ! ಅಲ್ಲವೆ!?

  • Login or register to post comments
  • link
  • Email this ಪ್ರತಿಕ್ರಿಯೆ
December 25, 2006 - 9:01pm — bhatpp

ವಾಸ್ತವವೇ ಕಲ್ಪನೆ!

bhatpp's picture

olnswamy wrote:
ವಾಸ್ತವವೇ ಕಲ್ಪನೆ! ಅಲ್ಲವೆ!?

ಹೌದು! ಈ ಮೇಲಿನ ಉದಾಹರಣೆಯಲ್ಲಿ ನಾವು ಯಾವುದನ್ನು ವಾಸ್ತವವೆನ್ನುತ್ತಿದ್ದೇವೊ ಅದು ನಮ್ಮ ಕಲ್ಪನೆ, ನಮ್ಮ ಸೃಷ್ಟಿ; ತೆಂಗಿನ ಮರವನ್ನು "ತೆಂಗಿನ ಮರ" ಎಂದು ಕರೆಯುವುದರ ಮೂಲಕ ನಮ್ಮ-ನಿಮ್ಮ ವ್ಯವಹಾರದಲ್ಲಿ ಬಳಸಿಕೊಳ್ಳುತ್ತಿದ್ದೇವೆಯಷ್ಟೆ; ವ್ಯವಹಾರಕ್ಕೆ ಸಂಬಂಧಪಟ್ಟಂತೆ, "ತೆಂಗಿನ ಮರ" ಎಂಬ ಪದವೂ ಮತ್ತು ತೆಂಗಿನ ಮರವೂ ಎರಡೂ ಒಂದೆ, ಆದರೆ, "ತೆಂಗಿನ ಮರ" ಎಂಬ ಪದವು ನಿಜವಾದ ವಸ್ತುವಲ್ಲ--ನಿಜವಾದ ವಸ್ತುವು ಈ ಪದ ಬಳಕೆಗಳಿಂದ ಹೊರತಿದೆಯಲ್ಲವೆ?

ಆದ್ದರಿಂದ, "ವಾಸ್ತವವು ಭಾಷೆಯ ಪ್ರತಿಬಿಂಬ (ಅಥವಾ ಭಾಷೆಯೇ) ಆದೀತು--ಭಾಷೆಯು ನಿಜ ವಸ್ತು ಸಂಗತಿಯ ಪ್ರತಿಬಿಂಬವಲ್ಲ!"

ಓ. ಎಲ್. ಎನ್ ಹೇಳಿದಂತೆ, ಇದು ಗಹನವಾದ ವಿಷಯ; ಬಹುಷ:, ಇದನ್ನು ಭಾಷೆಯ ಮೂಲಕ ಚರ್ಚಿಸುವುದಾಗಲಿ--ಅರ್ಥೈಸುವುದಾಗಲಿ--ಸಾಧ್ಯವಿಲ್ಲವೇನೊ!

  • Login or register to post comments
  • link
  • Email this ಪ್ರತಿಕ್ರಿಯೆ
December 28, 2006 - 9:42pm — muralihr

Re: ವಾಸ್ತವವೇ ಕಲ್ಪನೆ!

muralihr's picture

ಭಾವನೆ ಹೃದಯಕ್ಕೆ ಸ೦ಬ೦ಧ ಪಟ್ಟದ್ದು, ಆಲೋಚನೆ ಮನಸ್ಸಿಗೆ ಅ೦ದರೆ
ತಲೆಗೆ ಸ೦ಭ೦ದ ಪಟ್ಟದ್ದು. ನಿಮ್ಮಗೆ ಯಾವಾಗಾದರೂ ತು೦ಬಾ
ದು:ಖವಾದಾಗ ಯಾವುದೆ ಯೋಚನೆ ಮಾಡದೆ ಅಳುತ್ತೀರಾ ತಾನೇ,
ಅವಾಗ ನಿಮ್ಮ ದು:ಖ ಸ್ವಲ್ಪ ಕಡಿಮೆಯಾಗುತ್ತೆ.
ಅದೇ ನೀವು ಆಲೋಚನೆ ಮಾಡ್ತೀರಾ ಅ೦ದ್ಕೋಳಿ, ಅವಾಗ ನೀವು ದು:ಖಕ್ಕೆ
ಅ೦ಟಿಕೊ೦ಡಿರುತ್ತೀರಿ.

ಆದರಿ೦ದ ಆಲೋಚನೆಯಿ೦ದ ದು:ಖ.
ಆಲೋಚನೆಯಿಲ್ಲದೆ ಪೂರ್ಣ ಭಾವನೆಯನ್ನು (ಯಾವುದೇ ಆಗಲಿ)
ಸ್ವೀಕರಿಸಿದಾಗ ಸು:ಖವಗಲಿ ದು:ಖವಗಲಿ ಮನಸ್ಸು ಮಾತ್ರ ಚೈತನ್ಯವಾಗಿರುತ್ತದೆ.
ಬಹುಶ: ಮನುಷ್ಯ ಭಾಷೆಯನ್ನು ಕಲಿತ ನ೦ತರ ಅವನ ಭಾವಿಸುವ ಶಕ್ತಿ
ಕಡಿಮೆ ಯಾಗಿದೆ ಅನ್ನ ಬಹುದು.
ಈಗ ತ೦ತ್ರ ಗಿ೦ತ್ರ ಬ೦ದು ಭಾವನೆ ಪೂರ್ಣ ಶೂನ್ಯ.
ನಮ್ಮ ಕೆಲವು ನೆ೦ಟರು ಸತ್ತು ಹೋದರು, ಆಗ ಎಲ್ಲರೂ
ದು:ಖದ ಬಾವನೆಯನ್ನು ವ್ಯಕ್ತ ಪಡಿಸುವ ಶಕ್ತಿಯನ್ನು ಕಳೆದುಕೊ೦ಡಿದ್ದರು.
ಅದೇ ೧೦ ವರ್ಷದ ಹಿ೦ದೆ ನಮ್ಮ ತಾತ ಸತ್ತಾಗ ಎಲ್ಲರೂ ಪೂರ್ಣವಾಗಿ
ದು:ಖ ಪಟ್ಟು ತಾತನನ್ನು ಮರೆತರು.

  • Login or register to post comments
  • link
  • Email this ಪ್ರತಿಕ್ರಿಯೆ
December 29, 2006 - 1:54pm — ಸಂಗನಗೌಡ

Re: ಅನುಭವ - ಆಲೋಚನ-ಭಾಷೆ

ಸಂಗನಗೌಡ's picture

ನಮ್ಮ ಊರಿಗೆ ಇತ್ತೀಚೆಗೆ ಕೆಲ ಮಹಾತ್ಮರು ಬಂದಿದ್ದರು, ಅದರಲ್ಲೊಬ್ಬರು ನಿಜಗುಣ ಶಿವಯೋಗಿಗಳ ಕೆಲ ಬರೆಹಗಳನ್ನು ಹೇಳುತ್ತಿದ್ದರು,

ಅದರಂತೆ,

ನಮ್ಮ ಮನಸ್ಸಿಗೆ ಮೂರು ಸ್ತಿತಿಗಳಿವೆ,

೧) ಎಚ್ಚರ

೨) ಸುಪ್ತಿ

೩) ಸುಸುಪ್ತಿ.

ದೇವತೆಗಳು ಯಾವಾಗಲೂ ಎಚ್ಚರದ ಸ್ತಿತಿಯಲ್ಲಿರುತ್ತಾರೆ, ಪ್ರಾಣಿ, ಹಕ್ಕಿಗಳು ಸುಪ್ತಿಯಲ್ಲಿರುತ್ತವೆ, ಕಲ್ಲು,ಮರ ಮುಂತಾದವು ಸುಸುಪ್ತಿಯಲ್ಲಿ

ಇರುತ್ತವೆ.

ಮನುಷ್ಯರು ಎಚ್ಚರ, ನಿದ್ದೆಯಲ್ಲಿ ಕನಸು ಕಾಣುವಾಗ ಸುಪ್ತಿ ಮತ್ತು ಗಾಢ ನಿದ್ದೆಯಲ್ಲಿ ಸುಸುಪ್ತಿಯ ಸ್ತಿತಿಯಲ್ಲಿರುತ್ತಾರೆ.

ಹಾಗಾಗಿ ನಾವು ಮನುಷ್ಯನಾಗಿ ಹುಟ್ಟುವದು ನಮ್ಮ ಹಿಂದಿನ ಜನ್ಮದ ಪುಣ್ಯದಿಂದಾಗಿ. Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನುಭವ
  • ಅನುಭವ
  • ಇವರಿಗೆ ಏನಾಗಿದೆ
  • ಕನ್ನಡವೇ ಜಾತಿ-ಧರ್ಮ-ದೇವರು ?
  • ಪ್ರಶ್ನೆ - ಉತ್ತರ
Syndicate content

ಲೇಖಕರು

H.S.R.Raghavendra Rao's picture

ಪರಿಚಯ

I am a college professor, teaching Kannada literature. Literary Criticism, transltion Studies and Culture studies are areas of mu special interest. Crcket, detective fiction and travel are my hobbies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.

ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator