ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ವೀಣಾ ರಾಜಾರಾಯರ ಶತಮಾನೋತ್ಸವ - ಜುಲೈ ಐದರಂದು ಕಲಾಕ್ಷೇತ್ರದಲ್ಲಿ

ಈ ಕಾರ್ಯಕ್ರಮದ ಬಗ್ಗೆ ಆಗಲೇ ಕಾರ್ಯಕ್ರಮ ಸೂಚಿಯಲ್ಲಿ ಹಾಕಿದ್ದೆ.ಇನ್ನಷ್ಟು ಜನರಿಗೆ ಕಾಣಲಿ, ಆಸಕ್ತರಿಗೆ ವಿಷಯ ತಲುಪಲಿ ಅನ್ನುವ ಕಾರಣಕ್ಕೆ ಇಲ್ಲಿಂದ ಒಂದು ಕೊಂಡಿ ಹಾಕುತ್ತಿರುವೆ.

ರವೀಂದ್ರ ಕಲಾಕ್ಷೇತ್ರದಲ್ಲಿ ವೀಣೆ ರಾಜಾರಾಯರ ಶತಮಾನೋತ್ಸವ

-ಹಂಸಾನಂದಿ

~.~

ವಸಂತಪುರಿ, ಕ್ಯಾಲಿಫೋರ್ನಿಯಾ

ಇದೇನಪ್ಪ ಅಂತ ಹುಬ್ಬೇರಿಸಬೇಡಿ. ಒರಿಸ್ಸಾದಲ್ಲಿರೋ ಪುರಿ ಗೊತ್ತು. ಇಲ್ಲ ಬೆಂಗಳೂರಲ್ಲೇ ಇರೋ ವಸಂತಪುರ ಗೊತ್ತು. ಹಾಗೇ ಟೆಕ್ಸಸ್ ನಲ್ಲಿ ಒಂದು Spring ಅನ್ನೋ ಹೆಸರಿನದೇ ಊರಿದೆಯಂತೆ. ವಾಷಿಂಗ್ಟನ್ ಡಿ.ಸಿ. ಬಗಲಲ್ಲೇ ಇರೋ Silver Spring ಅನ್ನೋ ಊರಿನ ಹೆಸರೂ ಕೇಳಿದ್ದೆ. ಆದ್ರೆ ಇದ್ಯಾವ್ದಿದು? ವಸಂತ ಪುರಿ, ಕ್ಯಾಲಿಫೋರ್ನಿಯಾ ಅಂದ್ರಾ?  ಮುಂದೆ ಓದಿ »

~.~

ತಾಳುವಿಕೆಗಿಂತನ್ಯ ತಪವು ಇಲ್ಲ

ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦)

ನ ದಾನತುಲ್ಯಂ ಧನಮನ್ಯದಸ್ತಿ
ನ ಸತ್ಯತುಲ್ಯಂ ವ್ರತಮನ್ಯದಸ್ತಿ |
ನ ಶೀಲತುಲ್ಯಂ ಶುಭಮನ್ಯದಸ್ತಿ  ಮುಂದೆ ಓದಿ »

~.~

ಬೆಲ್ಲದ ಕಟ್ಟೆಯ ಕಟ್ಟಿ...

ಬೆಲ್ಲದ ಬೆಟ್ಟದ ನಟ್ಟ ನಡು
ಬೇವಿನದೊಂದು ಬೀಜವ ನೆಟ್ಟು
ಸಾವಿರ ವರುಷ ಹಾಲ್ಮಳೆಗರೆಯಲು
ಸವಿಯಾದೀತೇ ಬೆಳೆಯುವ ಬೇವು?

ಸಂಸ್ಕೃತ ಮೂಲ:

गुलपर्वतमध्यस्थं निम्बबीजं प्रतिष्टितम्।
पयोवर्षसहस्रेण निम्बः किं मधुरं यते॥

ಕೊಸರು:
ಇದೇ ತಿಳಿವುಳ್ಳ ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಅನ್ನುವ ಬಸವಣ್ಣನವರ  ಮುಂದೆ ಓದಿ »

~.~
Syndicate content