ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಎರಡು ವಜ್ರಗಳು ಮತ್ತು ಯೇಸು ಕ್ರಿಸ್ತನ ಹುಟ್ಟು

February 2, 2008 - 6:06am — hamsanandi

ಇಂದು ಬೆಳಗ್ಗೆ ಎರಡು ವಜ್ರಗಳು ದೊರಕಿದ್ದವು ನನಗೆ.  ಒಂದು ನಾಕು ಕ್ಯಾರಟ್, ಒಂದು ಎರಡು ಕ್ಯಾರಟ್. ಹೋಗಿ ಎತ್ತಿಕೊಳ್ಳುವಷ್ಟರಲ್ಲಿ, ಹಾಳು ಸೂರ್ಯ ಮೇಲೆ ಬರತೊಡಗಿದ Eye-wink

ಹೌದು. ನಾನು ಮಾತಾಡತೊಡಗಿದ್ದು ಇಂದು ನಡೆದ ಗುರು-ಶುಕ್ರ ಗಳ ಗ್ರಹಕೂಟವನ್ನ ! ೨೦೦೮ರ ಮೊದಲ ಗ್ರಹಕೂಟ (conjunction) ಇಂದು ಇತ್ತು. ಅದರ ಬಗ್ಗೆ ಮೊದಲೇ ಬರೆಯಬೇಕೆಂದಿದ್ದೆ. ಆದರೆ, ಏಕೋ, ಸಂಪದಿಗರಿಗೆ ಆಕಾಶವೀಕ್ಷಣೆ ಬಗ್ಗೆ ಹೆಚ್ಚು ಅಕ್ಕರೆ ಇದೆಯೋ ಇಲ್ಲವೋ ಎಂಬ ಹಿಂಜರಿಕೆ ಒಂದುಕಡೆ ಆದರೆ, ಮತ್ತೊಂದೆಡೆ ಹೋದ ತಿಂಗಳು ಕ್ವಾಡ್ರಾಂಟಿಡ್ಸ್ ಉಲ್ಕಾವರ್ಷದ ದಿನ ಆದ ಗತಿಯೇ ಇಂದೂ ಆಗಿ, ಮೋಡ ಕವಿದು (ನನಗೆ) ನಿರಾಸೆಯಾದರೆ ಎನ್ನುವ ಯೋಚನೆ ಇನ್ನೊಂದು ಕಡೆ. ಅಂತೂ ಇಂತೂ ಮೊದಲು ಬರೆಯದೇ ಹೋದೆ.

ಆದರೆ, ಅದು ಹೇಗೋ ವಾರದಿಂದ ಹಿಡಿದ ಮಳೆರಾಯ, ಈ ಮುಂಜಾವು ನಾನೆದ್ದಾಗ ಬಿಡುಗಡೆ ಕೊಟ್ಟಿದ್ದ. ಹೊರ ಹೋಗಿ ನೋಡಿದರೆ, ಗುರು-ಶುಕ್ರ ಇಬ್ಬರೂ ಪಕ್ಕ ಪಕ್ಕ ಕೈ ಹಿಡಿದು ನಲಿಯುತ್ತಿದ್ದಾರೆ Smiling ನನಗಂತೂ ಬಹಳ ಖುಷಿಯಾಯಿತು.

ಶುಕ್ರ, ಈಗ ಭೂಮಿಗೆ ಹತ್ತಿರವಾಗಿರುವುದರಿಂದ ಸುಮಾರು -೪ ರ ಕಾಂತಿಯಿಂದ ಹೊಳೆಯುತ್ತಿದೆ. ಗುರುವೂ -೨ರ ಕಾಂತಿಯಿಂದ ಹೊಳೆಯುತ್ತಿದೆ. ಆಕಾಶಕಾಯಗಳ ಕಾಂತಿಯನ್ನು ಅಂಕೆಯಲ್ಲಿ ಹೇಳುವಾಗ, ಅದು ಕಡಿಮೆ ಇದ್ದಷ್ಟೂ, ಪ್ರಕಾಶ ಹೆಚ್ಚು. ( -೪ , -೨ ಕ್ಕಿಂತ ಸಣ್ಣ ಅಂಕೆ ಎನ್ನುವುದನ್ನು ಮರೆಯಬೇಡಿ). ಬರಿಗಣ್ಣಿಗೆ ಕಾಣುವ ಅತಿ ಪ್ರಕಾಶಮಾನವಾದ ತಾರೆ -೧.೫ರ ಕಾಂತಿ ಹೊಂದಿದೆ.

ಈ ವಿಷಯಗಳಿಗೂ ಯೇಸುಕ್ರಿಸ್ತನಿಗೂ ಏನು ಸಂಬಂಧ? ಇಮಾಂ ಸಾಬರಿಗೂ, ಗೋಕುಲಾಷ್ಟಮಿಗೂ ಇದ್ದಷ್ಟೇ ಎಂದಿರಾ?

ಕ್ರಿಸ್ತನು ಹುಟ್ಟಿದ  ಸಮಯದಲ್ಲಿ, ಪೂರ್ವ ದಿಕ್ಕಿಂದ ಬಂದ ಮೂರು ಮೇಧಾವಿಗಳು ಪ್ರಕಾಶಮಾನವಾದ ಕ್ರಿಸ್ಮಸ್ ತಾರೆಯನ್ನು ಹಿಂಬಾಲಿಸಿ ಬಂದರು ಎನ್ನುವ ಕಥೆ ಇದೆಯಲ್ಲ - ಆ ಕ್ರಿಸ್ಮಸ್ ತಾರೆ-( ಸ್ಟಾರ್ ಆಫ್ ಬೆಥ್ಲೆಹೆಮ್ ), ಗುರು ಶುಕ್ರರು ಪರಸ್ಪದ ಬಹಳ ಹತ್ತಿರದಲ್ಲಿ ಕಂಡ ಒಂದು ಗ್ರಹಕೂಟ ಎನ್ನುವ ಮಾತನ್ನು ಹಲವು ವಿದ್ವಾಂಸರು ಮುಂದಿಟ್ಟಿದ್ದಾರೆ. ಈ ಗ್ರಹಕೂಟ ಕ್ರಿ.ಪೂ. ಮೂರನೇ ವರ್ಷದಲ್ಲಿ ನಡೆದಿತ್ತು.

ಗುರು-ಶುಕ್ರ ಗ್ರಹಕೂಟಗಳು ಅಂತಹ ಅಪರೂಪವಲ್ಲದಿದ್ದರೂ, ಇವತ್ತು ನಡೆದ ಗ್ರಹಕೂಟ ಸ್ವಲ್ಪ ವಿಶೇಷವೇ ಆಗಿತ್ತು. ಏಕೆಂದರೆ ಎರಡರ ನಡುವೆ ಅರ್ಧ ಡಿಗ್ರಿ ಅಂತರ ಮಾತ್ರ, ಮತ್ತೆ ಸೂರ್ಯನಿಂದ ಸುಮಾರು ಮೂವತ್ತು ಡಿಗ್ರಿ ದೂರದಲ್ಲಿ ನಡೆದ ಇಂತಹ ಗ್ರಹಕೂಟವನ್ನು ಮತ್ತೆ ನೋಡಲು ನಾವು ಸುಮಾರು ೨೦೧೪ರ ವರೆಗೆ ಕಾಯಬೇಕಾಗುತ್ತೆ.

-ಹಂಸಾನಂದಿ

 

 

  • Star of Bethlehem
  • ಆಕಾಶ
  • ದಿನ-ಪ್ರತಿದಿನ
  • ಯೇಸು ಕ್ರಿಸ್ತ
~.~
  • hamsanandi ರವರ ಬ್ಲಾಗ್
  • Login or register to post comments
  • 296 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 3, 2008 - 9:59pm — cmariejoseph

ಉ: ಎರಡು ವಜ್ರಗಳು ಮತ್ತು ಯೇಸು ಕ್ರಿಸ್ತನ ಹುಟ್ಟು

cmariejoseph's picture

ಇದೊಂದು ಬಲು ಅದ್ಭುತವಾದ ವಿಚಾರ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 5, 2008 - 12:53am — benaka

ಉ: ಎರಡು ವಜ್ರಗಳು ಮತ್ತು ಯೇಸು ಕ್ರಿಸ್ತನ ಹುಟ್ಟು

benaka's picture

ಪ್ರಿಯ ಹಂಸಾನಂದಿ,

ಜ್ಯೋತಿಷಶಾಸ್ತ್ರದ ರೀತಿಯಲ್ಲೂ ಗುರು-ಶುಕ್ರ ಸಂಯುತಿ ಒಂದು ಒಳ್ಳೆಯ "ಯೋಗ"ವನ್ನು ತೋರುತ್ತದೆ. ದೇವ-ದಾನವ ಗುರುಗಳ ಮಿಲನ ಧಾರ್ಮಿಕವಾಗಿಯೂ ರಾಜಕೀಯವಾಗಿಯೂ ಶುಭದಾಯಕವೇ ಆಗುವುದೆಂಬ ನಂಬಿಕೆಯಿದೆ. ಬುಧ-ಗುರು-ಶುಕ್ರರನ್ನು ಜ್ಯೋತಿಷದಲ್ಲಿ ನೈಸರ್ಗಿಕ ಶುಭಗ್ರಹಗಳೆಂದು ಕರೆಯುತ್ತಾರೆ. ಈ ಮೂರೂ ಗ್ರಹಗಳು ಪಶ್ಚಿಮದಲ್ಲಿ ಕಾಣುವಾಗ, ಅಂದರೆ ಜ್ಯೋತಿಷದಂತೆ ಜನ್ಮಲಗ್ನದಿಂದ ೬, ೭, ೮ ನೇ ಮನೆಗಳಲ್ಲಿದ್ದರೆ, ವಿಶೇಷವಾದ "ಅಧಿಯೋಗ" ಉಂಟಾಗುತ್ತದೆ. ಈ ಅಧಿಯೋಗ /ಲಗ್ನಾಧಿಯೋಗದಲ್ಲಿ ಜನಿಸುವವನು ಪ್ರಖ್ಯಾತನೂ, ರಾಜಸಮಾನನೂ, ಸುಜ್ಞಾನಿಯೂ ಆಗುತ್ತಾನೆಂದು ಜ್ಯೋತಿಷಗ್ರಂಥಗಳು ಹೇಳುತ್ತವೆ.

ಕ್ರಿಸ್ತನ ಜನ್ಮಕಾಲದ ಯುತಿಯಲ್ಲಿನ ಗ್ರಹಗಳು ಇವೇ ಇರಬೇಕೆಂದು ಹಲವರ ಮತವಾದರೂ, ಹೊಸ ಒಡಂಬಡಿಕೆಯಲ್ಲಿ ಮಾಥ್ಯೂ ಹೇಳುವಂತೆ (ಮ್ಯಾಥ್ಯೂ ೨-೯) ಕಾಂತಿಯುಕ್ತವಾದ ನಕ್ಷತ್ರವು ರಾತ್ರಿಯಲ್ಲಿ ಪೂರ್ವದಿಂದ ಮೆಲ್ಲನೆ ಏರಿ/ಜಾರಿ ಹೋಗುತ್ತಾ, ಬಾಲಕನು ಜನಿಸಿದೆಡೆಯಲ್ಲಿ ಐಕ್ಯವಾದಂತೆ ಮಾಯವಾಯಿತು! ಅಂದರೆ, ರಾತ್ರಿಯ ಕತ್ತಲಲ್ಲಿ ಆಗಸದಲ್ಲಿ ಚೆನ್ನಾಗಿಯೇ ಗೋಚರಿಸುತ್ತಿದ್ದುದರಿಂದ, ಅದು ಬುಧನೂ ಅಲ್ಲ; ಶುಕ್ರನೂ ಅಲ್ಲವೆಂಬ ತರ್ಕವೂ ಇಲ್ಲದಿಲ್ಲ! ಏಕೆಂದರೆ ಇವೆರಡೂ ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸುವುದು ಸೂರ್ಯೋದಯಾಸ್ತ ಕಾಲದ ಕೊಂಚ ಹಿಂದೆಮುಂದೆ ಮಾತ್ರ! ಮೂವರು ಯಹೂದಿ ಪುರೋಹಿತರು ತಾರೆಯನ್ನು ಕಂಡು ಹಿಂಬಾಲಿಸಿಕೊಂದು ಬಂದ ಕಾಲ ಸರಿಯಾಗಿ ತಿಳಿಯದಾಗಿರುವುದರಿಂದ ಅದು (ಬುಧ+)ಗುರುಶುಕ್ರಯುತಿ ಹೌದೋ ಇಲ್ಲವೋ ಹೇಳುವುದು ಕಷ್ಟ! ಕ್ರಿಸ್ತನ ಜಾತಕದಲ್ಲಿ ಅಧಿಯೋಗ ಇರಲಿ, ಬಿಡಲಿ ಆತ ಪ್ರಖ್ಯಾತನೂ ರಾಜಸಮಾನನೂ ಸುಜ್ಞಾನಿಯೂ ಆಗಿದ್ದರಲ್ಲಿ ಸಂದೇಹವಿಲ್ಲ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 5, 2008 - 2:26am — hamsanandi

ಉ: ಎರಡು ವಜ್ರಗಳು ಮತ್ತು ಯೇಸು ಕ್ರಿಸ್ತನ ಹುಟ್ಟು

hamsanandi's picture

ಹೌದು ಬೆನಕರೆ, ಈ ವಿಷಯವನ್ನು ನಾನೂ ಓದಿದ್ದೇನೆ - ಅದಕ್ಕೇ ಇದು ಕೆಲವರ ಅಭಿಪ್ರಾಯ ಎಂದು ಹೇಳಿದೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಳಿಯ, ಅನಿಷ್ಟ ಮತ್ತು ಗ್ರಹಚಾರ!
  • ವಕ್ರನಾದ ಶುಕ್ರ?
  • ಸುಲಭವಲ್ಲವೋ ಮಹದಾನಂದ ...
  • ಗುರುಗ್ರಹ, ಅತಿ ಹತ್ತಿರದಲ್ಲಿ
  • ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator