ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

May 2, 2007 - 2:31am — hamsanandi

ಕೆಲದಿನಗಳ ಹಿಂದೆ ಪುರಂದರದಾಸರ ಸುಲಭವಲ್ಲವೋ ಎನ್ನುವ ಕೃತಿಯ ಬಗ್ಗೆ ಬರೆದಿದ್ದೆ. ಸುನಿಲ್ ಅವರು ಅದಕ್ಕೆ ಚೆನ್ನಾಗೆ ವ್ಯಾಖ್ಯಾನ ಕೂಡ ಮಾಡಿದ್ದರು. ಇವತ್ತು ಪುರಂದರ ದಾಸರದ್ದೇ ಇನ್ನೊಂದು ದೇವರನಾಮ. ಸುಲಭವಲ್ಲವೋ  ಮಹದಾನಂದ ಎನ್ನುವ ರಚನೆ ನನಗೆ ಸ್ವಲ್ಪವಾದರೂ ಅರ್ಥವಾಗಿತ್ತು. ಆದರೆ, ಇದು ಪೂರ್ತಿ ಒಗಟಾಗಿದೆ!

ಈ ರಚನೆ ಇಲ್ಲಿದೆ. ಇದರ ಅರ್ಥ ಹೇಳಬಲ್ಲವರು ಖಂಡಿತ ಬರೆಯಿರಿ.

೧:  ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ
೨:  ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
೩:  ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ
೪:  ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ
೫:  ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
೬:  ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ
೭:  ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು(?) ಒಬ್ಬಗೆ ಕೈಯೇ ಇಲ್ಲ
೮:  ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ
೯:  ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ
೧೦:  ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
೧೧:  ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ(?) ಎರಡು ಸೋಕವು ಒಂದು ತಾಕಲೇ ಇಲ್ಲ
೧೨:  ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ
(ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ!

ಇದನ್ನು ವಿದ್ಯಾಭೂಷಣರವರ ಧ್ವನಿಯಲ್ಲಿ ಈ ತಾವಿನಲ್ಲಿ ನೀವು ಕೇಳಬಹುದು

 ಮುಳ್ಳುಕೊನೆಯ ಮೇಲೆ

 -ಹಂಸಾನಂದಿ

  • ಒಗಟು
  • ದಾಸ ಸಾಹಿತ್ಯ
  • ಪುರಂದರ ದಾಸ
  • ಸಮಸ್ಯೆ
~.~
  • hamsanandi ರವರ ಬ್ಲಾಗ್
  • Login or register to post comments
  • 621 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 2, 2007 - 6:48pm — ರಘುನಂದನ

ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

ರಘುನಂದನ's picture

ಸಂತ ಏಕನಾಥರೋ ಅಥವಾ ನಾಮದೇವರೋ ಬರೆದಿರುವ ಮರಾಠೀಕೃತಿಯೊಂದರ ಅನುವಾದವಿದ್ದರೂ ಇರಬಹುದೀಕೃತಿ, ಪುರಂದರದಾಸರು ಬರೆದಿರಲಿಕ್ಕಿಲ್ಲ ಎಂದು ಹಾವನೂರು ಶ್ರೀನಿವಾಸರು ಬರೆದಿದ್ದನ್ನು ಎಲ್ಲೋ ಓದಿದ ನೆನಪು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 3, 2007 - 10:51pm — hamsanandi

ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

hamsanandi's picture

ಹೌದೇ? ಈ ವಿಷಯ ನಾನು ಓದಿಲ್ಲ. ಆದರೂ, ಶೈಲಿಯನ್ನು ನೋಡಿದರೆ, ಪುರಂದರ ದಾಸರು ಬರೆದಿದ್ದರೂ ಆಶ್ಚರ್ಯವಿಲ್ಲ ಅನ್ನಿಸುತ್ತೆ. ಅಲ್ಲದೆ, ಸಾಧಾರಣವಾಗಿ, ಪುರಂದರರ ರಚನೆಗಳ ಮುದ್ರಿತ ಪ್ರತಿಗಳಲ್ಲೆಲ್ಲ ಇದು ಕಂಡುಬರುತ್ತದೆ.

ಒಂದು ವೇಳೆ, ಇದರ ವಿಷಯ ಹೆಚ್ಚಾಗಿ ತಿಳಿದುಬಂದರೆ ಬರೆಯಿರಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 4, 2007 - 12:16am — Sunil Jayaprakash

ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

Sunil Jayaprakash's picture

ಹಂಸಾನಂದಿಯವರೆ, ಈ ಪದ್ಯ ಎಷ್ಟು ಅರ್ಥವಾಯಿತೋ ಬಿಟ್ಟಿತೋ ಆದರೆ ಕೆಲವು ಹೊಸಪದಗಳನ್ನು ತಿಳಿದುಕೊಳ್ಳುವಂತಾಯಿತು. ಮಹಾತ್ಮರು ಊ-ಕಾಲಘಟ್ಟದಲ್ಲಿ, ಊ-ಉತ್ಸಾಹದಲ್ಲಿ ಇದನ್ನು ಬರೆದಿದ್ದರೋ ತಿಳಿಯುವುದು ಕಷ್ಟ. ನಮ್ಮ ಮಿಶ್ರಿಕೋಟಿಗಳು ಆಗಾಗ ಹೇಳುತ್ತಿರುತ್ತಾರೆ ಎಲ್ಲದಕ್ಕೂ ಅರ್ಥ ಹುಡುಕುವುದಕ್ಕೆ ಹೋಗಬಾರದು, ಕೆಲವೊಮ್ಮೆ ಬರೆದವರಿಗೇ ತಿಳಿದಿರುವುದಿಲ್ಲ ಅಂತ Eye-wink ಇರಲಿ ಪದ್ಯದ ಅರ್ಥಕ್ಕೆ ಮುಂಚೆ, ಈ ಪದಗಳನ್ನು ನೋಡಿ.

೧. ಚೊಂಚ - ಡೊಂಕು ಕೈಯುಳ್ಳವ, ಮೊಂಡ ಕೈಯವ (ಕಸ್ತೂರೀ ಕೋಶದಿಂದ), ಕೈಯಿಲ್ಲದವನು.
೨. ಟೊಣಪ - ನಾ. ಕಾಡುಮನುಷ್ಯ, ಅಡಮುಟ್ಟ, ಮಂದಮತಿ, ದಡಿಯ, ದಾಂಡಿಗ.
೩. ಟೊಣಪೆ - ನಾ. ದೊಣ್ಣೆ, ದಪ್ಪವಾದ ಬಡಿಗೆ. ೨ ಮತ್ತು ೩ ರ ಬೇರೆತನ ಗಮನಿಸಿ.
೪. ಟೊಣೆ - ಧಾ. ನುಂಗು, ಉಗುಳು, ಪೆಟ್ಟು, ಹಾಕು, ಸೀಳು, ಮೋಸ ಮಾಡು, ವಂಚಿಸು, ಅಗೆಯು, ತಪ್ಪಿಸಿಕೊಳ್ಳು,
ಪ್ರ. ಕ್ಷಣ ಹದುಳವಿರದೆ ಬಾಯ ಟೊಣೆದೇ ಹೋಯಿತ್ತೆನ್ನ ಭಕ್ತಿ(ಬ.ವ.)

ಎಲ್ಲವೂ ಕಸ್ತೂರೀ ಕೋಶದಿಂದ. ನಾವು ಚಿಕ್ಕವರಿದ್ದಾಗ ತುಂಬಾ ದಪ್ಪಗಿರುವವರನ್ನು ಅದೇನ್ "ಟೊಣೆಯ ಅಪ್ಪ ಅವನು" ಅಂತ ಹೇಳುತ್ತಿದ್ದೆವು.
೫. ತೊಣೆ ಎಂಬ ಬಳಕೆಗಳೂ ಇದೆ. ಬೇರೆ ದ್ರಾವಿಡ ಭಾಷೆಗಳ ಹೋಲಿಕೆಯಿಂದ ತೊಣೆಪೆ ಅಂದರೆ ಹೂಮಾಲೆ, ಹೂಗೊಂಚಲು, ಹಣ್ಣುಗೊಂಚಲು ಎಂದು ಅರ್ಥೈಸಬಹುದು.
೬. ಕನ್ನಡದಲ್ಲಿ ತೊಣೆ - ಧಾ.ಸೇರು, ಹೋಲಿಕೆ, ಎಣೆ, ಸರಿ, ಸಮೀಪಿಸು, ನಾ.ಸರಿಸಮಾನತೆ, ಹೋಲಿಕೆ, ಜೋಡು, ಒರೆ, ದೊರೆ, ತೂಗಾಡು. ಅಂದ ಹಾಗೆ ನಾನು ಇದೇ ಹಾಡನ್ನು ಕನ್ನಡಆಡಿಯೋ.ಕಾಂನಿಂದ ಕೇಳಿದೆ. ನನಗೆ ಅದು ಕಣಪೆ ಅಂತ ಕೇಳಿಸುತ್ತಾ ಇತ್ತು. ಸರಿ ಏನಾದರೂ ಆಗಲಿ ಅಂತ ಅದನ್ನೂ ಹುಡುಕಿದಾಗ ಸಿಕ್ಕಿದ್ದು, ಕಣಪೆ = ಕಹಿಯಾದದ್ದು, ಔಷಧಿ ಅಂತ ತಿಳಿದು ಬಂತು. ಪದ್ಯದ ಅರ್ಥ ಅಥವಾ ವಿವರಣೆ ಎನ್ನುವುದಕ್ಕಿಂತ ಒಂದು ವಿಚಾರ ಹೊಳೆಯಿತು. ಈ "ಕಣಪೆ" ಎಂಬುದನ್ನು ಇಟ್ಟುಕೊಂಡು ಪದ್ಯದ ಅರ್ಥವನ್ನು ಹೀಗೆ ಹೇಳಬಹುದೇ ? ನೀವುಗಳು ಶಂಕರಾಚಾರ್ಯರ, "ಭಜ ಗೋವಿಂದಂ, ಭಜ ಗೋವಿಂದಂ, ಗೋವಿಂದಂ ಭಜ ಮೂಢಮತೇ, ಸಂಪ್ರಾಪ್ತೆ ಸನ್ನಿಹಿತೆ ಕಾಲೆ ನಹಿ ನಹಿ ರಕ್ಷತಿ ಡುಕ್ರುಂಕರಣೆ" ಕೇಳಿರಬಹುದು". ಇಲ್ಲಿ ಡುಕ್ರುಂಕರಣೆ ಎಂಬುದು ಸಂಸ್ಕೃತದಲ್ಲಿ ಒಂದು ವ್ಯಾಕರಣ ನಿಯಮ, "ಕಡೇಗಾಲ ಸಮೀಪಿಸುತ್ತಿದ್ದಾಗ ಮಂಕೆ, ಗೋವಿಂದನನ್ನು ಭಜಿಸು ಅದನ್ನು ಬಿಟ್ಟು ವ್ಯಾಕರಣ ನಿಯಮಗಳನ್ನು ಯಾಕೆ ಓದುತ್ತಾ ಇದ್ದೀಯಾ" ಅಂತ ಅರ್ಥ. ಶಂಕರಾಚಾರ್ಯರು ವೇದಾಂತಿಗಳು. ಭಕ್ತಿ ಮಾರ್ಗಕ್ಕೆ ಶಂಕರಾಚಾರ್ಯರ ಕೊಡುಗೆ ಕಮ್ಮಿ ಎಂದು ಕೆಲವರು ಹೇಳುತ್ತಾರೆ. ಶಿವಾನಂದಲಹರೀ ಕೂಡ ವೇದಾಂತಮಯ ಎಂಬ ಮಾತಿದೆ. ಆದರೆ ದಾಸರು ಭಕ್ತಿ ಪರಂಪರೆಯವರು. ಒಂದೇ ಸಾಲಿನ ವೇದಾಂತದ ಸಾರವನ್ನು, ಜನರ ಮನತಾಗುವಂತೆ, ದಾಸರ ಕಾಲದ ಸಮಾಜದ ರೀತಿರಿವಾಜುಗಳಿಗೆ(ಹೊನ್ನು, ಎಮ್ಮೆ ನೀಡುವುದು, ಊರುಗಳನ್ನು ನೀಡುವುದು) ಸರಿದೂಗುವಂತೆ ಸರಳ ನುಡಿಯಲ್ಲಿ, ಏನೇ ತೊಂದರೆಯಿದ್ದರೂ(ಒಡ್ಡರು, ಕುಂಟರು, ಕುರುಡರು, ಚೊಂಚರು, ಹಸಿವಿಲ್ಲದೆ ಬಳಲುತ್ತಿರುವವರು(ಇದು ಒಂದು ರೋಗ) ) ವಿಠಲರಾಯನಲ್ಲಿ ಮೊರೆಹೋಗಿ, ಅವನು ಸದ್ಗತಿಯನ್ನು ಈಯುತ್ತಾನೆ ಎಂದು ಹೇಳಲು ಜತುನಗೈದಿರಬಹುದೇ? ತುಂಬಾ ತುಂಬಾ ಕಷ್ಟ ಕಣ್ರೀ. "ಹಲ್ಲಿದ್ದವರಿಗೆ ಕಡಲೆಯಿಲ್ಲ, ಕಡಲೆಯಿದ್ದವರಿಗೆ ಹಲ್ಲಿಲ್ಲ", ಸಮಾನತೆ ಬೇಕೆಂದರೆ ವಿಠಲರಾಯನಲ್ಲಿ ಮೊರೆಹೋಗಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 4, 2007 - 10:29am — mahesha

ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

mahesha's picture

ಅಲಲಾ!! ಸುನಿಲ...

ಬೊಂಬಾಟಾಗಿ ಬರೆದಿದ್ದೀಯಿ!!!

ಚೆನ್ನಾಗಿದೆ ನಿನ್ನ ಬಿಡಿಸು!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 4, 2007 - 3:03pm — gvmt

ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

gvmt's picture

ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಯವರು ಈ ಪದ್ಯವನ್ನು ವ್ಯಾಖ್ಯಾನಿಸಿದ್ದಾರೆ. ಅದು ಕ್ಯಾಸೆಟ್ ಸಹ ಆಗಿದೆ.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 4, 2007 - 4:06pm — Sunil Jayaprakash

ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

Sunil Jayaprakash's picture

ಅರಳು ಮಲ್ಲಿಗೆ ಪಾರ್ಥಸಾರಥಿಯವರು ನೀಡಿರುವ ವ್ಯಾಖ್ಯಾನದ ಬಗ್ಗೆ ಕುತೂಹಲವಿದೆ. ಇದರ ಬಗ್ಗೆ ಇನ್ನಷ್ಟು ವಿವರ ನೀಡಲು ಸಾಧ್ಯವೇ ?

೧. ಇಲ್ಲೊಬ್ಬರು ಇದರ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆದಿದ್ದಾರೆ.
೨. ಈ ಹಾಡಿನ ಸುತ್ತ ಅಲೆಯುತ್ತಿದ್ದಾಗ, ಕನ್ನಡಆಡಿಯೋ.ಕಾಂನಲ್ಲಿ ಘಮ ಘಮ ಎನ್ನುವ ಒಂದು ಕಲ್ಪು ಸಿಕ್ಕಿತು. ಆ ಕಲ್ಪಿನಲ್ಲಿ(=ಆಲ್ಬಮ್ಮಿನಲ್ಲಿ) ಈ ಹಾಡು ವಿಶಿಷ್ಟ ರೀತಿಯಲ್ಲಿದೆ. ವೆಸ್ಟರ್ನ್ ರಿದಮ್ ಜೊತಿಗಿರುವ ಈ ಪ್ರಯೋಗ ಮೊದಲ ಸಲಿಗೇ ನನಗೆ ತುಂಬಾ ಇಷ್ಟವಾಯಿತು. ಈಗಾಗಲೇ ಐದಾರು ಸಲ ಕೇಳಿ ಕೇಳಿ ಆನಂದಿಸಿರುವೆ. ಎಲ್ಲರಿಗೂ ಇಷ್ಟವಾಗಬಹುದು ಆ ಪ್ರಯೋಗ. ಅದರಲ್ಲಿ ಟೊಣ(ಣೆ)ಪೆ ಎಂಬ ಬಳಕೆಯಿದೆ. ಇದು ಅವರ ಹೋಮ್‌ಪೇಜ್ ಅನ್ನಿಸುತ್ತೆ.

ಇಂದೇ ಮನೆಗೆ ಹೋಗುವಾಗ ಆ ಘಮ ಘಮ ಸಿ.ಡಿ ಸಿಗುವುದೇ ವಿಚಾರಿಸಿಕೊಂಡು ಹೋಗುವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 4, 2007 - 10:36pm — hamsanandi

ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

hamsanandi's picture

ನಿಮಗೆ ನೆನಪಿದ್ದರೆ, ಅವರ ವ್ಯಾಖ್ಯಾನದ ಸಾರಾಂಶವನ್ನು ಬರೆಯುತ್ತೀರಾ?

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 25, 2007 - 2:32pm — Sunil Jayaprakash

ಉ: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

Sunil Jayaprakash's picture

ಹಂಸಾನಂದಿಯವರೆ,
ಈ ದಿನ ನನಗೆ ಇನ್ನೊಂದು ವರ್ಶನ್ ಸಿಕ್ಕಿತು. ೧೯೬೩ರಲ್ಲಿ ಪ್ರಕಟವಾಗಿರುವ ಪುರಂದರದಾಸರ ಕೀರ್ತನೆಗಳು ಎಂಬ ಪುಸ್ತಕದಲ್ಲಿ ಈ ಪದವಿದೆ. ರಾಗ ಫರಜು, ಆದಿತಾಳ ಅಂತ ಇದೆ.

ಈ ಪದದಲ್ಲಿ ಮತ್ತಷ್ಟು "ಹೊಸಪದ"ಗಳಿವೆ. ಚೊಂಟ, ಹಂಜಕ್ಕಿ, ಚಾಲು. ಈ ಪದದ ಕೊನೆಯ ಸಾಲು ಹೀಗಿದೆ :- "ಇನ್ನು ಈ ಅರ್ಥಗಳೆಲ್ಲ ಪುರಂದರವಿಠರ ಬಲ್ಲ | ಅನ್ಯರ್ಯಾರೂ ತಿಳಿದವರಿಲ್ಲ". ಪದವನ್ನು ಓದಲು ಇಲ್ಲಿ ಎಡತಾಗಿ. ಮುಳ್ಳು ಮೊನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?
  • ಸುಲಭವಲ್ಲವೋ ಮಹದಾನಂದ ...
  • ವಯಸ್ಸು
  • ಕೊಸರಿನ ಕಮಲ
  • ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
  • hpn
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 3:11am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 74 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator