ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹಂಸಾನಂದಿ
ಪರಿಚಯ
ನಿಮ್ಮೆಲ್ಲರಂತೆ ನಾನೊಬ್ಬ ಕನ್ನಡಿಗ. ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wo...
ಕೆಲವು ಸುಭಾಷಿತಗಳು
ನಾನು ರೂಪಾಂತರಿಸಿದ (ಭಾಷಾಂತರ ಎನ್ನುವುದಕ್ಕಿಂತ ಇದು ಉತ್ತಮ ಪದವೇನೋ ಎಂಬುದು ನನ್ನ ಭಾವನೆ) ಕೆಲವು ಸಂಸ್ಕೃತ ಸುಭಾಷಿತಗಳು ಇಲ್ಲಿವೆ. ಓದಿ ನೋಡಿ, ಏನೆನಿಸಿತೋ ತಿಳಿಸಿ; ಕೆಲವು ಮೂಲ ಶ್ಲೋಕಗಳನ್ನೂ, ಕನ್ನಡ ಲಿಪಿಯಲ್ಲೇ ಸೇರಿಸಿದ್ದೇನೆ. ಇದು ದೇವನಾಗರಿಯಲ್ಲಿದ್ದರೆ ಒಳಿತೇನು? ತಿಳಿಸಿ. ಮಿಕ್ಕ ಶ್ಲೋಕಗಳನ್ನೂ ಒಂದೊಂದಾಗಿ ಸೇರಿಸುತ್ತೇನೆ.
-----------------------------------------------------------------------------------------
ಉದ್ಯಮೇ ನ್ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಸಂತಿ ಮುಕೇ ಮೃಗಾಃ||
ಮನಕೆ ಬಂದ ಮಾತ್ರಕೆ
ಕಾರ್ಯಗತವಾದೀತೇ ?
ಮಲಗಿದ ಸಿಂಹದ ಬಾಯಿಗೆ
ಜಿಂಕೆ ಬಂದು ಬಿದ್ದೀತೇ ?
------------------------------------------------------------
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ | ಯೋ ನ ದದಾತಿ ನ ಭುಂಕ್ತ್ತೇ ತಸ್ಯ ತೃತೀಯಾ ಗತಿರ್ಭವತಿ||
ಅನುಭವಿಸು ಇಲ್ಲ ದಾನ ಕೊಡು ಅಥವ
ವಿನಾಶವೆಂದು ಹಣಕಿದೆ ಮೂರು ಗತಿ
ಒಂದನೆಯದು ಎರಡನೆಯದೂ ಮಾಡದೆ
ಹೋದರೆ ಮೂರನೆ ಗತಿಯೇ ಪ್ರಾಪ್ತಿ
------------------------------------------------------------
ಇರಲಿ ಆಸಕ್ತಿ ಸಾಹಿತ್ಯ ಸಂಗೀತ
ಅಥವಾ ಇನ್ನಾವುದೋ ಕಲೆಯ ಮೇಲೆ
ಇಲ್ಲದೆ ಹೋದರೆ ಅವ ಪಶುವೇ ಸರಿ
ಬಾಲ ಕೊಂಬು ಎರಡಿಲ್ಲದೆಲೆ!
ಹುಲ್ಲನು ತಿನ್ನದೇ ಜೀವಿಸಬಲ್ಲವ
-ನೆಂಬುದೆ ಪುಣ್ಯ ಪ್ರಾಣಿಗಳಿಗೆ!
------------------------------------------------------------
ನೀಚರಿಗೆ ಮಾಡಿದುಪಕಾರ
ಆಗೇ ಆಗುವುದು ಅಪಕಾರ
ಹಾವಿಗೆ ಕುಡಿಸಿದ ಹಾಲು ಸಹ
ಆಗುವುದಲ್ಲವೆ ಘೋರ ವಿಷ
---------------------------------------------------------------
ಗುಣಗಳ ಗುಂಪಲಿ ಒಂದೇ ಕೊರತೆ
ಚಂದ್ರನ ಬೆಳಕಲಿ ಕಲೆಯಂತೆ
ಮುಚ್ಚೀತೆಂದ ಕವಿ ತಾ ಕಾಣನು
ಲೋಕದ ನಿಜರೂಪದ ಮೋರೆ;
ಸಾವಿರ ಗುಣಗಳ ಮುಚ್ಚಿ ಹಾಕದೆ
ಬಡತನವೆಂಬೊಂದು ಕೊರೆ ?
----------------------------------------------------------------
ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನ ಚ ದೃಶ್ಯತೇ
ಬಾಲೇ ತವ ಮುಖಾಂಬೋಜೇ ದೃಶ್ಯಮಿಂದೀವರದ್ವಯಂ
ಕಮಲದಲಿ ಕಮಲ ಹುಟ್ಟಿದುದ
ಕಾಣೆನು ಕೇಳೆನು ಎನ್ನದಿರು
ಓ ಗೆಳತೀ ನಿನ್ನೀ ಮುಖಕಮಲದಲಿ
ಜನಿಸಿರಲು ಕಣ್ಣೆಂಬ ಕಮಲವೆರಡು
ಕೇಳಿರಿ ಚಿಂತೆಗೂ ಚಿತೆಗೂ
ವ್ಯತ್ಯಾಸವಂತೂ ಬರಿ ಸೊನ್ನೆ
ಸುಟ್ಟರೆ ಚಿತೆ ಹೋದವನನ್ನು
ಚಿಂತೆ ಸುಟ್ಟೀತು ಇದ್ದವನನ್ನೆ
ದುಷ್ಟರ ಜೊತೆಯಲಿ ದ್ವೇಷವು ಬೇಡ
ಮಾಡದಿರು ನೀ ಅತಿ ಪ್ರೀತಿ
ಕೆಂಡವು ಬಿಸಿಯಲಿ ಕೈಯನು ಸುಡುವುದು
ತಣಿದಿದ್ದರೆ ಆಗುವುದು ಮಸಿ
ಹಲ್ಲು ಉಗುರು ಕೂದಲು ಮನುಜರು
ಇರಬೇಕಾದಲ್ಲೆ ಶೋಭಿಪರು
ಅದಕೆಂದೇ ಉತ್ತಮ ಜನರು
ತಮ್ಮ ಸ್ಥಾನವ ಬಿಡದಿಹರು
ಚೇಳಿನ ವಿಷವದು ಬಾಲದ ಕೊಂಡಿಲಿ
ನೊಣಕ್ಕದು ಬಾಯಲ್ಲೆಲ್ಲಾ
ಹಾವಿನ ಹಲ್ಲಲಿ ತುಂಬಿದೆ ಆ ವಿಷ
ಕೆಟ್ಟವನಿಗೋ ಮೈಯಲ್ಲೆಲ್ಲಾ
ಲಕ್ಷ್ಮಿಯು ಬಳಿಯಿದ್ದವನರಿಯನು
ಪ?ರಿಗಾಗುವ ವೇದನೆ
ಭೂಮಿಯ ಭಾರವ ಹೊತ್ತಿರೆ ಶೇಷನು
ಮಲಗಿಹ ನಾರಾಯಣ ಸುಮ್ಮನೆ
ಸ್ವಯಂಪ್ರಜ್ಞೆ ಇಲ್ಲದವನಿಗೆ
ಕಲಿಕೆ ಏನು ಮಾಡೀತು ?
ಕಣ್ಣೇ ಇಲ್ಲದ ಹುಟ್ಟುಕುರುಡಗೆ
ಕನ್ನಡಿಯಿಂದೇನಾದೀತು ?
ಪ್ರಿಯವಾಕ್ಯ ಪ್ರದಾನೇನೆ ಸರ್ವೇ ತುಷ್ಯಂತಿ ಮಾನವಾಃ
ಏತದ್ ತದೈವ ವಕ್ತವ್ಯಮ್, ವಚನೇ ಕಿಮ್ ದರಿತ್ರತಾ?
ಒಳ್ಳೆಯ ಮಾತನು ಕೇಳಲು
ಎಲ್ಲರು ಸಂತಸ ಹೊಂದುವರು
ಅದಕೇ ಅಂಥಾ ಮಾತನೆ ನೀ ನುಡಿ
ಬರೀ ಮಾತಿಗೇನು ಬಡತನವು
ಕಟ್ಟಿಗೆಯಲ್ಲಿಲ್ಲ ಅವನು
ಕಲ್ಲಲಿ ಮಣ್ಣಲಿ ಅವನಿಲ್ಲ
ಮನದಲಿ ಇಹನು ಆ ಜಗದೊಡೆಯನು
ಭಾವವೆ ಎಲ್ಲಕು ಕಾರಣವು
ಕಾಕಃ ಕೃಷ್ಣಃ ಪಿಕ: ಕೃಷ್ಣಃ ಕೋ ಭೇದಃ ಪಿಕ ಕಾಕಯೋಃ?
ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ
ಕಾಗೆಯು ಕಪ್ಪು ಕೋಗಿಲೆ ಕಪ್ಪು
ಎಲ್ಲಿದೆ ಏನಿದೆ ವ್ಯತ್ಯಾಸ ?
ವಸಂತಕಾಲವು ಬಂದಿರೆ ತಾನು
ಆಗುವುದು ಖಂಡಿತ ಭಾಸ
-ಹಂಸಾನಂದಿ
- hamsanandi's blog
- Login or register to post comments
- 1600 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
Re: ಕೆಲವು ಸುಭಾಷಿತಗಳು
ವರ್ಡ್ ನಿಂದ ಇಲ್ಲಿಗೆ ತರುವಾಗ, ಸಾಲುಗಳ ಅಂತರ ಹೆಚ್ಚ್ಜು-ಕಡಿಮೆಯಾಗಿದೆ - ಇದನ್ನು ಸರಿಮಾಡುವುದು ಹೇಗೆ ? ಯಾರಾದರೂ ತಿಳಿಸುವಿರಾ?
ದಯವಿಟ್ಟು ಯೂನಿಕೋಡ್ ಬಳಸಿ
ಇತ್ತೀಚೆಗೆ ಸಂಪದದಲ್ಲಿ ಬರೆಹಗಳನ್ನು ಹಾಕುವ ಹಲವರು "ಬರಹ"ದ ANSI ಫಾಂಟ್ ಗಳನ್ನು ಬಳಸುತ್ತಿದ್ದಾರೆ. ಹಂಸಾನಂದಿಯವರೆ ತಾವೂ ವರ್ಡ್ ಡಾಕ್ಯುಮೆಂಟ್ ನಲ್ಲಿ "ಬರಹ" ಬಳಸಿ ಟೈಪಿಸಿದ್ದನ್ನು ನೇರವಾಗಿ "ಸಂಪದ"ಕ್ಕೆ ಪೇಸ್ಟ್ ಮಾಡಿದ್ದೀರಿ. ಸದ್ಯಕ್ಕೆ ನಾನಿದನ್ನು ಯೂನಿಕೋಡ್ ಗೆ ಪರಿವರ್ತಿಸಿದ್ದೇನೆ. ಇನ್ನು ಮುಂದೆ ತಮ್ಮ ಬರೆಹವನ್ನು ಸಂಪೂರ್ಣವಾಗಿ ಯೂನಿಕೋಡ್ ನಲ್ಲಿ ಇರುವಂತೆ ನೋಡಿಕೊಳ್ಳುತ್ತೀರೆಂದು ನಂಬಿದ್ದೇನೆ. ಇದಕ್ಕಾಗಿ ನೀವು ಮತ್ತೊಮ್ಮೆ ಟೈಪಿಸುವ ಅಗತ್ಯವಿಲ್ಲ. ಬರಹ-6 ಮತ್ತು ಬರಹ-7 ತಂತ್ರಾಂಶಗಳ ಜತೆ ಲಭ್ಯವಿರುವ Baraha convert ಸೌಲಭ್ಯವನ್ನು ಬಳಸಿ ನಿಮ್ಮ ಬರೆಹವನ್ನು ಸುಲಭವಾಗಿ ANSIನಿಂದ ಯೂನಿಕೋಡ್ ಗೆ ಪರಿವರ್ತಿಸಬಹುದು. ವರ್ಡ್ ಡಾಕ್ಯುಮೆಂಟ್ ಗಳಿಂದ ನೇರವಾಗಿ ಕಾಪಿ-ಪೇಸ್ಟ್ ಮಾಡುವುದರಿಂದ ಆಗುವ ತೊಂದರೆಗಳ ಬಗ್ಗೆ ಎಚ್ .ಪಿ. ನಾಡಿಗ್ ಮತ್ತು ಸುನಿಲ್ ಜಯಪ್ರಕಾಶ್ ವಿವರವಾಗಿ ಬರೆದಿದ್ದಾರೆ. ಇದನ್ನು ನೀವು ಓದಿಕೊಳ್ಳಿ. ಹಾಗೆಯೇ ಸಂಪದದಲ್ಲಿ ಬರೆಯುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಕುರಿತ ಮಾಹಿತಿಯನ್ನೂ ಓದಿಕೊಳ್ಳಿ.
ನಿಮ್ಮ ಅನುವಾದಗಳು ಚೆನ್ನಾಗಿವೆ. ಇನ್ನಷ್ಟು ಅನುವಾದಗಳು ನಿಮ್ಮಿಂದ ಬರಲಿ ಎಂದು ಹಾರೈಸುತ್ತೇನೆ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net
Re: ದಯವಿಟ್ಟು ಯೂನಿಕೋಡ್ ಬಳಸಿ
ಇಸ್ಮಾಯಿಲ್ ಅವರೆ,
ವರ್ಡ್ ನಿಂದ ನೇರವಾಗಿ ತಂದದ್ದಕ್ಕೆ ಕ್ಷಮೆ ಇರಲಿ. ನೀವು ಯುನಿಕೋಡ್ ಗೆ ಬದಲಾಯಿಸಿದ್ದಕ್ಕೆ ಧನ್ಯವಾದಗಳು. ಇದು ಹಿಂದೆ ಯಾವಾಗಲೋ ಮಾಡಿದ್ದವುಗಳು, ಹಾಗಾಗಿ ವರ್ಡ್ ನಲ್ಲಿದ್ದವು. ಬರಹ ಕನ್ವರ್ಟ್ ಬಗ್ಗೆ ನನಗೆ ತಿಳಿದಿರಲಿಲ್ಲ. ಇನ್ನು ಮುಂದೆ ಹೀಗಾಗದೆಂದು ಭರವಸೆ ಕೊಡುತ್ತೇನೆ.
-ಹಂಸಾನಂದಿ
ಬರಹ ಕನ್ವರ್ಟರ್
http://dev.sampada.net/wiki/Baraha_Converter_on_Windows_XP
http://dev.sampada.net/wiki/Baraha_IME
http://dev.sampada.net/wiki/Kannada-Unicode-on-Windows-XP
http://dev.sampada.net/wiki/Enabling_Clear_type_on_Windows_XP
:)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಕೆಲವು ಸುಭಾಷಿತಗಳು
ನಂದಿಯವರೆ ನಿಮ್ಮ "ಕೆಲವು ಸುಭಾಷಿತಗಳು" ಸೊಗಸಾಗಿವೆ ಇದರ ಜೊತೆಯಲ್ಲೇ ಸಂಸ್ಕೃತ ಶ್ಲೋಕವನ್ನೂ ಬರೆದಿದ್ದರೆ ಸೂಕ್ತವಾಗಿತ್ತು.ಬರೆಯುತ್ತೀರಿತಾನೆ ಹಾಗೆ ಸಾಲುಗಳ ಅಂತರದ ಬಗ್ಗೆ ನೀವು ಕೇಳಿದ್ದೀರಿ ನೀವು ನೇರ ಬರಹ ದಲ್ಲಿ ಬರೆದು (paeview)(ತಿದ್ದಿ)ನೋಡಿ ನಿಮಗೆ ಸಾಲುಗಳ ಅಂತರ ಸರಿಯಾಗಿದ್ದರೆ (submit )ಮಾಡಿ.
ಕೃಷ್ಣಮೊರ್ತಿಅಜ್ಜಹಳ್ಳಿ ಐ ಇ ಎಂ ಬಿ ಎಂ ಎಸ್ ಸಿ ಇ
Re: ಕೆಲವು ಸುಭಾಷಿತಗಳು
ಎಡಿಟರ್ ನಲ್ಲಿ, ಎಂಟರ್ ಹಾಕಿ ಮುಂದಿನ ಸಾಲಿಗೆ ಹೋದರೆ, ಸಾಲುಗಳ ಮಧ್ಯ ಇರುವ ಅಂತರ ಹೆಚ್ಚಾಗುತ್ತಲ್ಲ ಏಕೆ? ಮುಂದಿನ ಪ್ಯಾರಾಗ್ರಾಫ್ ಗೆ ಹೋಗದೆ, ಮುಂದಿನ ಸಾಲಿಗೆ ಹೋಗಲು ಯಾವುದಾದರೂ ಕಂಟ್ರೋಲ್ ಸಂಜ್ಝೆ ಬಳಸಬೇಕೇ? ಉದಾಹರಣೆಗೆ ನೋಡಿ - ನನ್ನ ಮೊದಲ ಪೋಸ್ಯ್ ಅನ್ನು ತಿದ್ದಿ, ಸಂಸ್ಕೃತ ಮೂಲ ಹಾಕಲು ಪ್ರಯತ್ಸಿಸಿದಾಗ, ಮುನ್ನೋಟದಲ್ಲಿ ಸರಿಯಾಗಿ ಕಂಡರೂ, ನಂತರ ಸಾಲುಗಳು ಸರಿಯಾಗಿ ಕಾಣುತ್ತಿಲ್ಲ.
(ಒಂದು ಶ್ಲೋಕದಲ್ಲಿ, ಎಂಟರ್ ಒತ್ತಿದ್ದೆ, ಇನ್ನೊಂದರಲ್ಲಿ, ಸ್ಪೇಸ್ ಬಳಸಿ ಮುಂದಿನ ಸಾಲಿಗೆ ಹೋಗಿದ್ದೆ)
ಇದರ ಬಗ್ಗೆ ಮಾಹಿತಿ ಇದೆಯೇ?
-ಹಂಸಾನಂದಿ
ಉ: ಕೆಲವು ಸುಭಾಷಿತಗಳು
ಕೆಲವು ತಪ್ಪೊಪ್ಪು
ಉದ್ಯಮೇನ ಹಿ ಸಿಧ್ಯನ್ತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶನ್ತಿ ಮುಖೇ ಮೃಗಾಃ||
ಮುಖಾಂಬೋಜೇ ಬದಲು ಮುಖಾಂಭೋಜೇ ಸರಿ
ಪ್ರಿಯವಾಕ್ಯ ಪ್ರದಾನೇನೆ ಸರ್ವೇ ತುಷ್ಯಂತಿ ಮಾನವಾಃ
ಏತದ್ ತದೈವ ವಕ್ತವ್ಯಮ್, ವಚನೇ ಕಿಮ್ ದರಿತ್ರತಾ?
ಈ ಸಂಪೂರ್ಣ ಶ್ಲೋಕ ಈ ರೀತಿಯಿದೆ.
ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ (ಮಾನವಾಃ ಕೂಡ ಸರಿ)
ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||
ಹಾಗೆಯೇ
ಹಸ್ತಾದಪಿ ನ ದಾತವ್ಯಂ ನ ದಾತವ್ಯಂ ಗೃಹಾದಪಿ
ಪ್ರಿಯವಾಕ್ಯಂ ಚ ವಕ್ತವ್ಯಂ ವಚನೇ ಕಾ ದರಿದ್ರತಾ||
ಅರ್ಥ: ಕೈಯಿಂದ ಕೊಡಬೇಕಾಗಿಲ್ಲ. ಮನೆಯಿಂದ ತಂದು ಕೊಡಬೇಕಾಗಿಲ್ಲ (ಯಾರ ಮನೆಯ ಗಂಟೂ ಕರಗದು). ಒಳ್ಳೆಯ ಮಾತನ್ನಾಡಬೇಕು. ಮಾತಿಗೆ ಬಡತನವೇಕೆ? ಒಳ್ಳೆಯ ಮಾತಾಡಿ.
ಉ: ಕೆಲವು ಸುಭಾಷಿತಗಳು
ನೀವು ಬರೆದ ಒರಿಜಿನಲ್ ದಿನಾಂಕವೂ ಹಾಗೇ ಬಂದಿದೆ (ಮಾರ್ಚ್-೨೦೦೭) ಅಂತ.
ಸುಭಾಷಿತಗಳು ಚೆನ್ನಾಗಿವೆ!
~ಮೀನ.