ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಯಾ ಕುಂದೇಂದು ತುಷಾರಹಾರ ಧವಳಾ ...

August 4, 2007 - 3:55am — hamsanandi

ನೆನ್ನೆ ಮಹೇಶರು ಗಿಳಿಗೈಯೆ, ಶ್ರಿಂಗೇರಿ ಶಾರದೆಯ ಒಂದು ಸ್ತುತಿಯನ್ನು ಬಲು ಸೊಗಸಾಗಿ ಕನ್ನಡಯಿಸಿದ್ದರು.

ಅದರದ್ದೇ ಹುರುಪಿನಲ್ಲಿ, ನಾನು ಇನ್ನೊಂದು ಪ್ರಸಿದ್ಧ ಸರಸ್ವತಿಯ ಪ್ರಾರ್ಥನೆಯನ್ನು ಕನ್ನಡಕ್ಕೆ ತಂದಿದ್ದೇನೆ - ಬಹಳ ಪ್ರಖ್ಯಾತ ಸ್ತುತಿ ಇದು. ಎಲ್ಲರಿಗೂ ಪರಿಚಿತವಾದ್ದು.

ಸಂಸ್ಕೃತ ಮೂಲ:

ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ
ಕನ್ನಡಕ್ಕೆ, ನನ್ನ ಪ್ರಯತ್ನ:
ಕಾಯದಲಿ ನೀ ಬೆಳ್ಪು ಮಂಜುಮಲ್ಲಿಗೆತಿಂಗಳನಿತು; ಬಿಳಿಯುಟ್ಟು
ಕೈಯಲಿ ಪೊಳೆವ ವರವೀಣೆ ಪಿಡಿದು ನಿಂದೆ ನೀ ಬೆಳ್ದಾವರೆಯಲಿ
ತಾಯೆ! ಆ ಬೊಮ್ಮಹರಿಶಿವರಿಂದಲೂ ಸಲ್ಲುವುದು ಪೂಜೆ ನಿನಗೆ!
ಕಾಯೆ ಸರಸತಿಯೆ ಇಂದೆನ್ನ ಕೈಬಿಡದೆ ಉಳಿಸದೇ ಜಡತೆಯನ್ನು
(ಮೂಲದ third person ಅನ್ನು ನಾನು first person ಗೆ ಬದಲಿಸಿಬಿಟ್ಟಿದ್ದೇನೆ - ಮನ್ನಿಸಿರಿ)
ಆಗುವುದು ಪೂಜೆಯಿಂದಾದ ಅವಾಂತರಗಳ ನಂತರ, ಅದು ಸಲ್ಲುವುದು ಪೂಜೆಯಾಗಿ ಮಾರ್ಪಾಟಾಗಿದೆ Smiling
-ಹಂಸಾನಂದಿ
  • ಕವನ
~.~
  • hamsanandi ರವರ ಬ್ಲಾಗ್
  • Login or register to post comments
  • 467 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 4, 2007 - 6:09am — venkatesh

ಉ: ಯಾ ಕುಂದೇಂದು ತುಷಾರಹಾರ ಧವಳಾ ...

venkatesh's picture

ಮಹೇಶರೆ,

ಅನುವಾದ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 10:00am — mahesha

ಉ: ಯಾ ಕುಂದೇಂದು ತುಷಾರಹಾರ ಧವಳಾ ...

mahesha's picture

ವೆಂಕಟೇಶ ಅಜ್ಜ,

ಇದನ್ನು ಹಂಸಾನಂದಿಯವರು ಕನ್ನಡಯಿಸಿದುದು.

ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 11:38am — shreekant.mishrikoti

ಉ: ಯಾ ಕುಂದೇಂದು ತುಷಾರಹಾರ ಧವಳಾ ...

shreekant.mishrikoti's picture

ಅನುವಾದಿಸುವದಕ್ಕೆ ಕನ್ನಡಯಿಸು ಅಂತಾ ಇದ್ದೀರಿ ; ಕನ್ನಡಿಸು ಎನ್ನುವದೇ ಹೆಚ್ಚು ಸರಿ , ಸಹಜ , ಈಗಾಗಲೇ ಬಳಕೆಯಲಿರುವದೂ ಅಲ್ಲವೇ ? ;

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 5:30pm — mahesha

ಉ: ಯಾ ಕುಂದೇಂದು ತುಷಾರಹಾರ ಧವಳಾ ...

mahesha's picture

ಕನ್ನಡಿಸು/ಕಣ್ಣಡಿಸು ಅಂದರೆ to mirror to copy ಪ್ರತಿ ಮಾಡು ಅಂತ ಇದೆ. ಕನ್ನಡಿಕೆ/ಕಣ್ಣಡಿಕೆ duplication
Ka. kannaḍi, kanaḍi mirror, pane of glass, lens of spectacles, pair of spectacles; kanaḍaka pair of spectacles; kannaḍisu to mirror, appear.

http://dsal.uchicago.edu/cgi-bin/philologic/getobject.pl?c.0:1:1187.burr...
ಉವರು ಹೇಳಿದಂತೆ ಕಣ್ಣಡಿ, ಕಣ್ಣಡಕ( ಕಣ್ಣಿಗೆ ಅಡಕವಾದುದು) ಇವು ಸರಿಯಂತೆ.

ಅದಕ್ಕೆ ನಾನು ಕನ್ನಡಯಿಸು/ಕನ್ನಡೈಸು, ತಮಿಳಿಸು, ತೆಲುಗಿಸು, ಹಿಂದಿಸು, ಇಂಗಲೀಸಿಸು, ಅಂತ ಬಳಸಲು ತೊಡಗಿದ್ದೇನೆ. ಇದು ತಪ್ಪಲ್ಲ ಅಂತ ನಂನ ಅನಿಸಿಕೆ.

ಹಾರಯಿಸು, ಮೇಳಯಿಸು ಈ ಒರೆಗಳು ಹೀಗೆ ಅಲ್ಲವೇ!!

ಇರಲಿ, ನಾನು ಕನ್ನಡಿಸು ಅಂನುವ ಒರೆಯನ್ನು ಸಂನಿವೇಸ/ಪಾಡಿಗೆ ತಕ್ಕಂತೆ ತಿಳಿದುಕೊಳ್ಳವೆನು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 9:59am — mahesha

ಉ: ಯಾ ಕುಂದೇಂದು ತುಷಾರಹಾರ ಧವಳಾ ...

mahesha's picture

ಹಂಸಾನಂದಿಯರೆ,

ಚನ್ನಾಗಿದೆ...

೧)ಬರಹದ ಹೆಸರು ಕನ್ನಡದಲ್ಲಿ ಇರಲಿ, ಇಲ್ಲಿ ’ಬಿಳಿಯಮ್ಮ, ಬಿಳಿಯೆ, ವೀಣೆಗೈಯ್ಯೆ,’ ಹೀಗೆ ಹೇಳಬೋದು.
೨) ಕಾಯ(ಸಂಸ್ಕೃತ), ಮತ್ತು ಕಾಯೆ, ಇಂತಹ ಹೋಲುವ ಬೇರೆ ನುಡಿಯ ಒರೆಗಳ ತಿಳಿಯಲು ಗೊಂದಲ. ಕಾಯದ ಮಾಱು/ಬದಲು ತನುವಿನಲಿ, ಮೈಗೆ, ಬಳಕೆ ಚನ್ನಾಗಿರುತ್ತದೆ.
೩)ಜಡತೆಯ ಮಾಱು ಅಲಪು, ಸೋಮಾರಿತ, ಅಲಸೆ ಇವನ್ನು ಬಳಸಬಹುದು.

ಬೊಮ್ಮಹರಿಶಿವರಿಂದಲೂ = ಹರಿಹರಬೊಮ್ಮರಿಂದಲೂ ( ಇದು ಚನ್ನಾಗಿರುತ್ತದೆ )

"ನೀ ಬೆಳ್ಪು ಮಂಜುಮಲ್ಲಿಗೆತಿಂಗಳನಿತು;" ಇದು ತುಂಬ ಚನ್ನಾಗಿದೆ..

ನನ್ನಿ! ಹೀಗೆ ಬರೆಯಿರಿ, ಒಳ್ಳೇದಾಗಲಿ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 11:30am — muralihr

ಉ: ಯಾ ಕುಂದೇಂದು ತುಷಾರಹಾರ ಧವಳಾ ...

muralihr's picture

ರಾಗದಲ್ಲಿ ಹಾಡೋಕ್ಕೆ ಕಷ್ಟ. ರಾಗ ಹೊ೦ದಾಣಿಕೆ ಮಾಡೋದು ಇನ್ನೂ ಕಷ್ಟ.
ಸುಮ್ಮನೇ ಪದದಿ೦ದ ಪದ ಅನುವಾದ ಮಾಡಿದರೆ ಪ್ರಯೋಜನವಿಲ್ಲಾ.
ಭಾವವನ್ನು ಗ್ರಹಿಸಿ ಜೀರ್ಣಿಸಿ ಅನುವಾದ ಮಾಡುವುದು ಒಳ್ಳೆಯದು.
"ಆಗುವುದು ಪೂಜೆ ನಿನಗೆ!" ಇದು ಓದಿದ ಮೇಲೆ ನಗು ಬರುತ್ತೆ .
ಕಾರಣ ಕನ್ನಡದಲ್ಲಿ "ಆಗುತ್ತೆ ಇರು ಪೂಜೆ ನಿ೦ಗೆ Smiling:)Smiling " ಅನ್ನುವ ಭಾವ ಬರುತ್ತೆ.
ಅದರಿ೦ದ ನಮ್ಮ ಭಕ್ತಿ ಗೀತೆ ಹೊಸದಾಗಿ ಬರೆಯುವುದು ಲೇಸು - ಪುರ೦ದರ ದಾಸರನ್ನೇ ನೋಡಿ ಹಳೆ ಸ್ಲೋಕ ಗಳಿಗಿನ್ನಾ
ಶಕ್ತಿ ಹೆಚ್ಚಾಗಿರುವ ಹಾಡುಗಳನ್ನು ರಚಿಸಲಿಲ್ಲವೇ ?
ಆದರೂ ಪ್ರಯೋಗ ಮೆಚ್ಚುವ೦ತಹುದೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 11:30am — muralihr

ಉ: ಯಾ ಕುಂದೇಂದು ತುಷಾರಹಾರ ಧವಳಾ ...

muralihr's picture

ರಾಗದಲ್ಲಿ ಹಾಡೋಕ್ಕೆ ಕಷ್ಟ. ರಾಗ ಹೊ೦ದಾಣಿಕೆ ಮಾಡೋದು ಇನ್ನೂ ಕಷ್ಟ.
ಸುಮ್ಮನೇ ಪದದಿ೦ದ ಪದ ಅನುವಾದ ಮಾಡಿದರೆ ಪ್ರಯೋಜನವಿಲ್ಲಾ.
ಭಾವವನ್ನು ಗ್ರಹಿಸಿ ಜೀರ್ಣಿಸಿ ಅನುವಾದ ಮಾಡುವುದು ಒಳ್ಳೆಯದು.
"ಆಗುವುದು ಪೂಜೆ ನಿನಗೆ!" ಇದು ಓದಿದ ಮೇಲೆ ನಗು ಬರುತ್ತೆ .
ಕಾರಣ ಕನ್ನಡದಲ್ಲಿ "ಆಗುತ್ತೆ ಇರು ಪೂಜೆ ನಿ೦ಗೆ Smiling:)Smiling " ಅನ್ನುವ ಭಾವ ಬರುತ್ತೆ.
ಅದರಿ೦ದ ನಮ್ಮ ಭಕ್ತಿ ಗೀತೆ ಹೊಸದಾಗಿ ಬರೆಯುವುದು ಲೇಸು - ಪುರ೦ದರ ದಾಸರನ್ನೇ ನೋಡಿ ಹಳೆ ಸ್ಲೋಕ ಗಳಿಗಿನ್ನಾ
ಶಕ್ತಿ ಹೆಚ್ಚಾಗಿರುವ ಹಾಡುಗಳನ್ನು ರಚಿಸಲಿಲ್ಲವೇ ?
ಆದರೂ ನೀವು ಮಾಡಿದ ಪ್ರಯೋಗ ಮೆಚ್ಚುವ೦ತದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 2:02pm — Sunil Jayaprakash

ಉ: ಯಾ ಕುಂದೇಂದು ತುಷಾರಹಾರ ಧವಳಾ ...

Sunil Jayaprakash's picture

ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ, ಇದನ್ನು ನಮ್ಮ ಮನೆಗಳಲ್ಲಿ, "ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾನ್ವಿತಾ" ಅಂತ ಹೇಳ್ತಾರೆ. ಛಂದಸ್ಸಿಗೆ ಎರಡೂ ಹೊಂದುತ್ತದೆ.

ಆ ಬೊಮ್ಮಹರಿಶಿವರಿಂದಲೂ ಆಗುವುದು ಪೂಜೆ ನಿನಗೆ!

ಹಂಸಾನಂದಿಯವರೇ, ಗಮ್ಮತ್ತಾಗಿದೆ Sticking out tongue

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 8:56am — hamsanandi

ಉ: ಯಾ ಕುಂದೇಂದು ತುಷಾರಹಾರ ಧವಳಾ ...

hamsanandi's picture

ಎಲ್ಲ ಪ್ರತಿಕ್ರಿಯೆಗಳಿಗೂ, ಸಲಹೆಗಳಿಗೂ ಧನ್ಯವಾದಗಳು

ಇಂತಹ ಅನುವಾದ ಬೇಕೇ ? ಎಂಬುದು ಪ್ರಶ್ನೆ ನಿಜ. ಆದರೆ, ತಪ್ಪಿಲ್ಲ ಎಂದು ನನ್ನ ಭಾವನೆ. ಭಾವಾನುವಾದಕ್ಕೆ ಒಂದು ಚಂದವಾದರೆ, (ಕೆಲವೆಡೆಗಳಲ್ಲಾದರೂ) ಪದಶಃ ಅನುವಾದಕ್ಕೆ ಸ್ವಲ್ಪವಾದರೂ ಸ್ಥಾನ ಇದೆ. ಎಸ್.ವಿ.ಪರಮೇಶ್ವರಭಟ್ಟರ ಕೆಲವು ಅನುವಾದಗಳನ್ನು ನೋಡಿದ ಮೇಲೆ ಇದು ನನ್ನ ಅನಿಸಿಕೆ. ( ಹಾಗಂತ ನನ್ನ ಅನುವಾದವನ್ನು ಅವರ ಅನುವಾದಕ್ಕೆ ಹೋಲಿಸುವುದಿಲ್ಲ ಮತ್ತೆ!)

ಆಗುವುದು ಪೂಜೆ ನಿನಗೆ -> ಎನ್ನುವುದರಲ್ಲಿ ನೀವೆಲ್ಲ ಕಂಡ ಹಾಸ್ಯ ಸ್ವಾರಸ್ಯವಾಗಿತ್ತು Smiling - ಸಲ್ಲುವುದು ಎಂದರೆ ಸ್ವಲ್ಪ ವಾಸಿ.

ಮತ್ತೆ ಕಾಯೆ-ಕಾಯ ಇಂತಹ ಪ್ರಯೋಗವನ್ನು ಎರಡನೇ ಅಕ್ಷರಪ್ರಾಸವನ್ನು (ಬಲವಂತವಾಗಿ) ತರಲು ಮಾಡಬೇಕಾಯಿತು.

ಇನ್ನು ಇದನ್ನು ಹಾಡಲು ಸಾಧ್ಯವೇ ? ಎಂದು ಮುರಳಿಯವರು ಕೇಳಿದ್ದಾರೆ. ಸುಮ್ಮನೆ ಸಂಸ್ಕೃತ ಶ್ಲೋಕ ಹೇಳುವ ಧಾಟಿಯಲ್ಲಿ ಹೇಳಲು ನನ್ನ ಅನುವಾದಕ್ಕೆ ತಕ್ಕ ಛಂದೋಬದ್ದತೆ ಇಲ್ಲ. ಆದರೆ, ಶಾಸ್ತ್ರೀಯ ರಾಗವೊಂದನ್ನು ಹೊಂದಿಸಿ ಕಾವ್ಯವೊಂದನ್ನು ವಾಚಿಸುವ ರೀತಿಯಲ್ಲಿ ಹಾಡಲು ಯಾವ ತೊಡಕೂ ಇಲ್ಲ. ನನಗೆ ತಕ್ಕ ಮಟ್ಟಿಗೆ ಸಂಗೀತ ಬರುವುದರಿಂದ ಈ ಮಾತನ್ನು ಧೈರ್ಯವಾಗಿ ಹೇಳಬಲ್ಲೆ. Smiling

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 11:48am — ವೈಭವ

ಉ: ಯಾ ಕುಂದೇಂದು ತುಷಾರಹಾರ ಧವಳಾ ...

ವೈಭವ's picture

"...ಇಂತಹ ಅನುವಾದ ಬೇಕೇ ? ಎಂಬುದು ಪ್ರಶ್ನೆ ನಿಜ...."

ಈ ಶ್ಲೋಕಗಳನ್ನ ಏಟೋ ಸಕ್ಕದ ಗೊತ್ತಿಲ್ಡೆ ಇರೋ ಮಂದಿ(ನನ್ನ ತರ) ಕೂಡ ದಿನಾಲು ಹೇಳ್ತಾರೆ. ಈ ತರ ಕನ್ನಡಯಿಸಿದ್ದು ಸಿಕ್ಕರೆ ಕನ್ನಡದಲ್ಲೆ
ಹೇಳ್ಕಬೌದು. ಅರ್ತ ಗೊತ್ತಾಗದೇ, ತಪ್ಪುತಪ್ಪಾಗಿ ಸಕ್ದದದಲ್ಲಿ ಹೇಳುವ ಬದಲು ಕನ್ನಡದಲ್ಲೇ ಅರ್ತ ಮಾಡಿಕೊಂಡು ತಪ್ಪಿಲ್ಲದೇ ಹೇಳುವುದು ಸಲೀಸು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 4, 2007 - 5:58pm — ವೈಭವ

ಉ: ಯಾ ಕುಂದೇಂದು ತುಷಾರಹಾರ ಧವಳಾ ...

ವೈಭವ's picture

ಚೆನ್ನಾಗಿದೆ ಹಂಸಾನಂದಿ.

ಈಟು ದಿನ ಸಕ್ಕದದಲ್ಲಿ ಹೇಳುತ್ತಿದ್ದ ಶ್ಲೋಕವನ್ನು ನಾನು ಇನ್ ಮೇಲೆ ಕನ್ನಡದಲ್ಲೇ ಹೇಳುತ್ತೇನೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ನಾನು ಯಾವ ಆತ್ಮ
  • ಕನಸ್ಸು
  • ಪುಟ್ಟಿಯ ಜೊತೆ ಸಂಭಾಷಣೆ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 59 ಅತಿಥಿಗಳು ಆನ್ಲೈನ್ ಇರುವರು.


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator