ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ನಿಮ್ಮೆಲ್ಲರಂತೆ ನಾನೊಬ್ಬ ಕನ್ನಡಿಗ. ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wo...

ಬೆನ್ನು ತಟ್ಟಿದವರು :-)

ಯಾರಾದರೂ ಬೆನ್ನು ತಟ್ಟಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ?

ಅದೂ, ಅಪರಿಚಿತರು ಒಂದು ಒಳ್ಳೆ ಮಾತು ಹೇಳಿದರೂ ಮನಸ್ಸಿಗೆ ಹಿತವಾಗುವುದು ಸಹಜ. ಇದೇ ಕಾರಣಕ್ಕೆ, ಭಾರೀ ಸಂಗೀತಗಾರರೂ ಕೂಡ, ಕಾರ್ಯಕ್ರಮದ ನಂತರ ಒಬ್ಬ ಕೇಳುಗ ಅವರ ಬಳಿ ಹೋಗಿ ಇಂದಿನ ಕಾರ್ಯಕ್ರಮ ಚೆನ್ನಾಗಿತ್ತು, ಈ ರಾಗ ಈ ಕೃತಿ ಹಿಡಿಸಿತು ಎಂಬುದನ್ನು ಹೇಳಿದರೆ ಆನಂದಪಡುತ್ತಾರೆ. ಇದನ್ನು ಪ್ರಖ್ಯಾತ ಕಲಾವಿದೆಯರಾದ ಮೈಸೂರು ನಾಗಮಣಿ ಶ್ರೀನಾಥ್, ಸುಧಾ ರಘುನಾಥನ್ ಮೊದಲಾದವರು ಸ್ವತಃ ಹೇಳಿದ್ದನ್ನು ಕೇಳಿರುವೆ.

ಇಷ್ಟೆಲ್ಲ ಮಾತಿಗೆ ಕಾರಣವೇನು ಎಂದಿರಾ? ಇವತ್ತು ಕೆಂಡಸಂಪಿಗೆ ಪೋರ್ಟಲ್ ದಿನಪತ್ರಿಕೆಯ ದಿನದ ಬ್ಲಾಗ್ ಆಗಿ ಹಂಸ ನಾದ :) ಕಾಣಿಸಿಕೊಂಡಿದೆ.

-ಹಂಸಾನಂದಿ

(ನನ್ನ (mostly) ಇಂಗ್ಲಿಷ್ ಬ್ಲಾಗ್  ಅಲ್ಲಿದೆ ನಮ್ಮ ಮನೆ:- http://neelanjana.wordpress.com/ )

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬೆನ್ನು ತಟ್ಟಿದವರು :-)

Sunil Jayaprakash's picture

ಹಂಸಾನಂದಿಗಳೇ, ನನಗೆ ಈ ದಿನವಷ್ಟೇ ತಿಳಿಯಿತು. ಕೆಂಡಸಂಪಿಗೆಯವರು ನನ್ನ ಬ್ಲಾಗಿನ ಬಗ್ಗೆಯೂ ಬರೆದಿದ್ದಾರೆ. ಅದೂ ಮಾರ್ಚ್ ೧೨ರಷ್ಟು ಹಿಂದೆಯೇ. ಅಂದರೆ ಒಂದು ತಿಂಗಳ ಹಿಂದೆ.

ನಾನು ಈ ದಿನವಷ್ಟೇ ನೋಡಿದೆ. ನನಗೂ ತುಂಬಾ ಸಂತೋಷವಾಯಿತು.