ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

May 4, 2007 - 1:36pm — hamsanandi

ಏಳು ಸ್ವರವು ಸೇರಿ ಸಂಗೀತವಾಯಿತು- ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು - ಏಳು ದಿನವು ಸೇರಿ ಒಂದು ವಾರವಾಯಿತು - ಏಳು ತಾರೆ ಸಪ್ತಋಷಿಯ ಚಿಹ್ನೆಯಾಯಿತು ಎಂದು ಪಿ.ಸುಶೀಲಾ ಅವರು ಮಧುರವಾಗಿ ಹಾಡಿರುವ ಹಾಡನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಸ್ವರಗಳು ಏಳೇ ಏಕಿರಬೇಕು? ಇದಕ್ಕೆ ಉತ್ತರ ಹೇಳಲು ಸಾಧ್ಯವಾದರೂ, ಸ್ವಲ್ಪ ಕಷ್ಟ. (ಇಲ್ಲದಿದ್ದರೆ ಆ ಪಾಟಿ ಸಂಗೀತ ಲಕ್ಷಣ ಗ್ರಂಥಗಳು ಇರುತ್ತಿದ್ದವೇ!?) ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವುದನ್ನು ನಾವೆಲ್ಲ ವರ್ಣಚಕ್ರದಲ್ಲಿ ನೋಡೇ ಇದ್ದೇವೆ. ಏಳು ನಕ್ಷತ್ರಗಳು ಸೇರಿ ಆಕಾಶದಲ್ಲಿ ಚಿತ್ರಿಸುವ ಸಪ್ತಋಷಿ ಮಂಡಲ ಆಗಸದಲ್ಲಿ ಅತಿ ಸುಲಭವಾಗಿ ಗುರುತಿಸಬಲ್ಲಂತಹ ರಾಶಿಚಿತ್ರ (constellation).

ಇನ್ನು ಏಳುದಿನವು ಸೇರಿ ಒಂದು ವಾರವಾಗುವ ವಿಷಯವಂತೂ ಮೂರು ವರ್ಷದ ಮಗುವಿಗೂ ತಿಳಿದಿರುವ ವಿಷಯ. ಆದರೆ, ವಾರಕೆ ಏಕೆ ಏಳೇ ದಿನ? ಎಂಬ ಪ್ರಶ್ನೆಯನ್ನು ನಿಮಗೆ ನೀವು ಕೇಳಿಕೊಂಡಿದ್ದೀರಾ? ಅಲ್ಲದೆ, ಭಾನುವಾರವಾದ ಮೇಲೆ ಸೋಮವಾರ ಯಾಕೆ? ಬುಧವಾರ ಆದಮೇಲೆ ಗುರುವಾರ ಯಾಕೆ ಎಂದು ನಿಮ್ಮ ಮಗ/ಮಗಳು ಕೇಳಿದರೆ ಅದಕ್ಕೆ ಉತ್ತರ ಇದೆಯಾ ನಿಮ್ಮ ಬಳಿ?

ನಿಮಗೆ ಗೊತ್ತಿದ್ದರೆ ಒಳಿತು. ಇಲ್ಲದಿದ್ದರೆ,ನಾನೀಗ ಕೊಡುವ ತಿಳಿವು ನಿಮಗೆ ಎಂದಾದರೊಂದು ದಿನ ಉಪಯೋಗಕ್ಕೆ ಬರಬಹುದು ಎಂದುಕೊಂಡಿದ್ದೇನೆ.

ಎಲ್ಲಾ ಪುರಾತನ ನಾಗರೀಕತೆಗಳೂ, ಆಕಾಶವನ್ನು ನೋಡುತ್ತಾ, ಆಕಾಶಕಾಯಗಳಿಗೂ ಕಾಲಮಾನಕ್ಕೂ ಇರುವ ಸಂಬಂಧವನ್ನು ಕಂಡುಕೊಂಡಿದ್ದವರೇ. ನಮ್ಮ ದೇಶದಲ್ಲಿ ತಿಂಗಳುಗಳ ಎಣಿಕೆಗೆ ಚಂದ್ರನ ಚಲನೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು. ನಕ್ಷ್ಜತ್ರಗಳ ಹಿನ್ನಲೆಯಲ್ಲಿ ಚಲಿಸುವ ಚಂದ್ರ, ಆಕಾಶದಲ್ಲಿನ ಅದೇ ಸ್ಥಾನಕ್ಕೆ ಸುಮಾರು ೨೭-೨೮ ದಿನಗಳಲ್ಲಿ ಬರುವುದನ್ನು ತಿಳಿದ ಭಾರತೀಯರು (ಚೀನೀಯರು ಕೂಡ), ಆಕಾಶವನ್ನು ೨೭-೨೮ ಭಾಗಗಳಾಗಿ ವಿಂಗಡಿಸಿಕೊಂಡಿದ್ದರು. ನಾವು ಅಶ್ವಿನಿ, ಭರಣಿ ಮೊದಲಾದ ಹೆಸರಿಂದ ಕರೆಯುವ ನಕ್ಷತ್ರಗಳು ಇವೇ. ಮತ್ತೆ, ಒಂದು ಹುಣ್ಣೀಮೆಯಿಂದ ಹುಣ್ಣಿಮೆಗೆ ಸುಮಾರು ೨೯-೩೦ ದಿನಗಳಿರುವುದನ್ನೂ, ಅದರಲ್ಲಿ ಅರ್ಧಾ ಭಾಗ ಚಂದಿರ ಹೆಚ್ಚುವುದನ್ನೂ, ಇನ್ನ್ರರ್ಧ ಭಾಗ ಕಿರಿದಾಗುವುದನ್ನೂ ಗಮನಿಸಿದ ಅವರು, ಆ ಅಂತರವನ್ನೇ, ಎರಡು ಪಕ್ಷ (ಪಕ್ಷ= ಬದಿ)ಗಳಿರುವ ತಿಂಗಳು ಎಂದು ಕರೆದರು.ನಮ್ಮ ಹೆಚ್ಚಿನ ಹಬ್ಬಗಳೂ ಆಚರಣೆಗಳೂ. ಈ ತಿಥಿ ಹಾಗೂ ನಕ್ಷತ್ರಗಳನ್ನು ಅವಲಂಬಿಸಿಯೇ ಇರುತ್ತವೆ. ಅತಿ ಹಿಂದಿನ ಕಾವ್ಯಗಳಲ್ಲಿ (ರಾಮಾಯಣ/ಮಹಾಭಾರತ ಇತ್ಯಾದಿ) ವಾರಗಳ ಪ್ರಸ್ತಾಪ ಬರುವುದೇ ಇಲ್ಲ.

ವಾರಗಳ ಎಣಿಕೆ ಪ್ರಾರಭ್ಹವಾಗಿದ್ದು ಗ್ರೀಸಿನ ಆಸುಪಾಸಿನಲ್ಲಿ. ಆಕಾಶದಲ್ಲಿ , ನಕ್ಷತ್ರಗಳು ಯಾವಾಗಲೂ ಒಂದೇ ರೀತಿಯಾಗಿರುತ್ತವೆ (ಪರಸ್ಪರ ೨ ನಕ್ಷತ್ರಗಳ ನಡುವೆ ಕಣ್ಣಿಗೆ ಕಾಣುವ ಬದಲಾವಣೆ ಒಬ್ಬ ವ್ಯಕ್ತಿಯ ಜೀವನಕಾಲದಲ್ಲಿ ಕಾಣುವುದು ಕಷ್ಟ. ಆದರೆ, ಇನ್ನು ೭ ಆಕಾಶಕಾಯಗಳು ಮಾತ್ರ, ಈ ತಾರೆಗಳ ಹಿನ್ನಲೆಯಲ್ಲಿ ಚಲಿಸುತ್ತಿರುತ್ತವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಮತ್ತು ಶನಿ ಅವೇ ಈ ಕಾಯಗಳೆಂದು ಅವರು ಕಂಡುಕೊಂಡಿದ್ದರು. ಅದರಲ್ಲಿ, ಈ ಒಂದೊಂದು ಕಾಯವೂ ನಕ್ಷತ್ರಗಳ ಹಿನ್ನಲೆಯಲ್ಲಿ ಹೊರಟಲ್ಲಿಗೇ ಬರಲು ಬೇರೆಬೇರೆ ಸಮಯ ಬೇಕಾಗುತ್ತದೆ ಎನ್ನುವುದೂ ಅವರೆಗೆ ತಿಳಿದಿತ್ತು. ಚಂದ್ರ ಈ ಕೆಲಸಕ್ಕೆ ಮೂವತ್ತು ದಿನ ತೆಗೆದುಕೊಂಡರೆ, ಶುಕ್ರ ಗ್ರಹಕ್ಕೆ ಸುಮಾರು ಇನ್ನೂರೈವತ್ತು ದಿನ ಬೇಕು. ಮಂಗಳನಿಗೆ ಸುಮಾರು ಎರಡು ವರ್ಷ ಬೇಕಿದ್ದರೆ, ಬುಧನಿಗೆ ಮೂರು ತಿಂಗಳೇ ಸಾಕು. ಇನ್ನು, ಸೂರ್ಯನಿಗೆ ಒಂದು ವರ್ಷವಾದರೆ, ಗುರುಗ್ರಹಕ್ಕೆ ಹನ್ನೆರಡು ವರ್ಷ. ಶನಿಗಂತೂ ಕೇಳಲೇಬೇಡಿ. ಶುದ್ದ ಸೋಮಾರಿ ಆ ಗ್ರಹ. ಹೊರಟಲ್ಲಿಗೇ ಮರಳಲು ಮೂವತ್ತು ವರ್ಷ ಬೇಕು  ಅದಕ್ಕೆ...

ಈ ಸಮಸ್ತವೂ ಈ ಜನರು ತಿಳಿದುಕೊಂಡದ್ದು ನೂರಾರು ವರ್ಷ ಆಗಸವನ್ನು ವೀಕ್ಷಿಸಿದರ ಫಲ..

ಇದರ ಜೊತೆ ಇನ್ನೊಂದು ವಿಷಯವೂ ಅವರ ಗಮನಕ್ಕೆ ಬಂದಿತ್ತು. ಮತ್ತೆ ಮತ್ತೆ ಮರಳುವ ಕಾಲಗಳು ಸುಮಾರು ಮುನ್ನೂರ ಅರವತ್ತು ದಿನಗಳ ಅಂತರದಲ್ಲಿ ಬರುವುದು ಅವರಿಗೆ ಗೊತ್ತಾಗಿತ್ತು. ಸೂರ್ಯ ಒಂದು ಸಲ ಆಗಸದ ಸುತ್ತ ಸುತ್ತಲು ಬೇಕಾದ ಸಮಯ ಮುನ್ನೂರ ಅರವತ್ತೈದು ದಿನ ಎಂದು ಅವರು ಕಂಡುಕೊಂಡಿದ್ದನ್ನು ಆಗಲೇ ಹೇಳಿದೆ. ಈ ಕಾಲಕ್ಕೇ ಅವರು ವರ್ಷ ಎಂದದ್ದು. ಹಾಗಾದರೆ, ಕಾಲಗಳಿಗೂ, ಸೂರ್ಯನಿಗೂ ನಂಟು ಇದ್ದದ್ದು ತಿಳಿದುಬಂತು ಎನ್ನಿ. ಈ ಒಂದು ವರ್ಷದ ಅವಧಿಯಲ್ಲಿ ಚಂದ್ರ ಹನ್ನೆರಡು ಬಾರಿ ಕುಗ್ಗುವನು, ಮತ್ತೆ ಹನ್ನೆರಡು ಬಾರಿ ಹಿರಿದಾಗುವನು ಅಲ್ಲವೇ? ಅಂದರೆ ವರ್ಷಕ್ಕೆ ೨೪ ಪಕ್ಷಗಳಾದವು.

ಸೂರ್ಯ ಹುಟ್ಟಿ, ಮುಳುಗಿ , ಮತ್ತೆ ಹುಟ್ಟುವ ಕಾಲಾವಧಿಗೆ ಅವರು ದಿನ (day) ಎಂದರು. ಅನುಕೂಲಕ್ಕೆ ಇದನ್ನು ಸಣ್ಣ ಸಣ್ಣ ಅವಧಿಗಳಾಗಿ ವಿಂಗಡಿಸಿದರೆ, ಒಳಿತಲ್ಲವೇ? ಆಗ ಅವರಿಗೆ ನೆನಪಾಗಿದ್ದು ವರ್ಷದ ೨೪ ಚಂದ್ರನ ಪಕ್ಷಗಳು. ಹಾಗಾಗಿ, ದಿನವನ್ನೂ ಅವರು ೨೪ ಭಾಗಗಳಾಗಿ ಮಾಡಿದರೆ ಏಕರೂಪಿಯಾಗಿರಬಹುದೆಂದೆಣಿಸಿ, ದಿನಕ್ಕೆ ೨೪ ಗಂಟೆಗಳೆಂದು (hour) ನಿಗದಿ ಮಾಡಿದರು.

ಕಾಲಮಾನಕ್ಕೂ, ಆಕಾಶಕಾಯಗಳಿಗೂ ಹೀಗೆ ನಂಟು ಬೆಸೆದಮೇಲೆ, ಅವರು ದಿನದ ಪ್ರತಿ ಗಂಟೆಗೂ ಒಂದು ಆಕಾಶಕಾಯಕ್ಕೆ ಹೀಗೆ ಹಂಚಿಬಿಟ್ಟರು.

ಮೊದಲು ಈ ಎಲ್ಲ ಕಾಯಗಳೂ ಆಕಾಶದಲ್ಲಿ ಸುತ್ತುವ ಸಮಯದ ಇಳಿಕೆಯ ಪ್ರಕಾರ ಬರೆಯುತ್ತ ಹೋಗೋಣ. ಸುಮ್ಮನೆ, ಇವತ್ತಿನ ದಿವಸದ ಮೊದಲ ಘಂಟೆಯನ್ನು ಸೂರ್ಯನಿಗೆ ಕೊಟ್ಟರು ಎಂದುಕೊಳ್ಳೋಣ. ಕೆಳಗಿನ ಪಟ್ಟಿಯಲ್ಲಿ ಸೂರ್ಯನ ಮುಂದೆ ೧ ಬರೆದಿದ್ದೇನೆ. ಆಮೇಲೆ ಮುಂದಿನ ಗಂಟೆಯನ್ನು ಪಟ್ಟಿಯಲ್ಲಿ ತೋರಿಸಿರುವ ಹಾಗೆ ಶುಕ್ರನಿಗೆ ಕೊಡಬೇಕು. ಅದರ ಮುಂದಿನ ಗಂಟೆಯನ್ನು ಬುಧನಿಗೆ ಕೊಡಬೇಕು. ಹೀಗೇ ಹೋದರೆ, ದಿನದ ಇಪ್ಪತ್ತನಾಕನೆಯ, ಅಂದರೆ ಕೊನೆಯ ಗಂಟೆಯನ್ನು ಮತ್ತೆ ಬುಧನಿಗೇ ಸಲ್ಲಿಸಬೇಕು.

ಹಾಗಾದರೆ, ಪಟ್ಟಿಯ ಪ್ರಕಾರ ಹೋದರೆ ನಾಳೆಯ ಮೊದಲ ಗಂಟೆಯನ್ನು ಚಂದ್ರನಿಗೆ ಕೊಡಬೇಕು. ಮುಂದೆ ಹೋಗಿ ಇನ್ನೂ - ನಾಡಿದ್ದಿನ ಮೊದಲ ಗಂಟೆಯನ್ನು ಮಂಗಳನಿಗೆ ಕೊಡಬೇಕು.

 

ಆಕಾಶಕಾಯ ಸುತ್ತುವ ಸಮಯ                    
                       
ಶನಿ ೩೦ ವರ್ಷ     ೫ ೧೨ ೧೯ ೨ ೯ ೧೬ ೨೩  
ಗುರು ೧೨ ವರ್ಷ     ೬ ೧೩ ೨೦ ೩ ೧೦ ೧೭ ೨೪  
ಮಂಗಳ ~೬೮೦ ದಿನ     ೭ ೧೪ ೨೧ ೪ ೧೧ ೧೮ ೧  
ಸೂರ್ಯ ೩೬೫ ದಿನ   ೧ ೮ ೧೫ ೨೨ ೫ ೧೨ ೧೯ ೨  
ಶುಕ್ರ ~೨೫೦ ದಿನ   ೨ ೯ ೧೬ ೨೩ ೬ ೧೩ ೨೦    
ಬುಧ ~೯೦ ದಿನ   ೩ ೧೦ ೧೭ ೨೪ ೭ ೧೪ ೨೧    
ಚಂದ್ರ ೩೦ ದಿನ   ೪ ೧೧ ೧೮ ೧ ೮ ೧೫ ೨೨    
                       
                       
                       

ಹೀಗೇ ಏಳು ದಿನ ಹೋದರೆ, ಪ್ರತಿ ದಿನದ ಮೊದಲ ಗಂಟೆಯ ಅಧಿಪತಿ ನಿಮಗೆ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಮತ್ತೆ ಶನಿ ಆಗುತ್ತಾರೆ. ಶನಿಯ ನಂತರ ಮತ್ತೆ ಮಾರನೆಯ ದಿನ ಸೂರ್ಯನ ಸರತಿ.

ಈಗ, ಪ್ರತೀ ದಿವಸವನ್ನು ಆ ದಿನದ ಮೊದಲ ಗಂಟೆಯ ಅಧಿಪತಿ ಯಾರೋ ಅದರ ಹೆಸರಿನಲ್ಲಿ ಕರೆಯಲು ಪ್ರಾರಂಭ ಮಾಡಿದ್ದರಿಂದ, ವಾರಗಳು ಏಳಾದವು - ಭಾನುವಾರ ಸೋಮವಾರ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶನಿವಾರ!

ಅದಕ್ಕೇ ವಾರಕೆ ಏಳೇ ಏಳು ದಿನ. ಮತ್ತೆ ಸೋಮವಾರ ವಾದ ಮೇಲೆ, ಮಂಗಳವಾರವೇ ಬರಬೇಕು Smiling

ಈ ವಿಷಯ ತಿಳಿದಿಲ್ಲದಿದ್ದವರಿಗೆ ಈಗ ಮನದಟ್ಟಾಗಿರಬಹುದು. ತಿಳಿದಿದ್ದವರು, ಬಹುಶಃ ಓದಲಿಕ್ಕಿಲ್ಲ Eye-wink ಹಾಗಾಗಿ ಪರವಾಗಿಲ್ಲ!

  • ಮಾಹಿತಿ
  • ವಾರ
~.~
  • hamsanandi ರವರ ಬ್ಲಾಗ್
  • Login or register to post comments
  • 543 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 4, 2007 - 1:54pm — mahesha

ಉ: ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

mahesha's picture

ನನ್ನಿ ಹಂಸಾನಂದಿ!

ಇದನ್ನೇ ಅಲ್ವಾ ನಾನು ಹೇಳಿದುದು...

'ವಾರ' ಕನ್ನಡನೆಲದಲ್ಲಿ ಹುಟ್ಟಿದ ಉಂಕು ಅಲ್ಲ! ಅದಕ್ಕೆ ಕನ್ನಡದೊಳು 'ವಾರ'ಕ್ಕೆ ಒರೆಯಿಲ್ಲವೆಂದು.

ನೀವು ಈ ಸಂಗತಿಯನ್ನು ಬಿಡಿಸಿ, ಹೆಚ್ಚು ಅರಿಕೆಗಳೊಂದಿಗೆ ತಿಳಿಸಿದಕ್ಕೆ ನನ್ನಿ.!!! ಚಂಬರೆಪು!!

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 2:06pm — mahesha

ಉ: ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

mahesha's picture

"ವಾರ" ಅಂದರೆ ಸಕ್ಕದದಲ್ಲಿ "ಸರತಿ/ಸಲ/ಬಾರಿ/ಸಾರಿ" ಎಂದು ಅಲ್ವಾ?
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 9:16pm — smurthygr

ಉ: ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

smurthygr's picture

ಏಳು ಬಣ್ಣ ಅನ್ನುವುದು ಸರಿಯೇ? ಬಣ್ಣಗಳ ವಿಂಗಡಣೆ ಯಾರೋ ಮಾಡಿಟ್ಟದ್ದೇ? ಈಗ ಮೂರು ಬಣ್ಣ ಸೇರಿ ಎಲ್ಲಾ ಬಣ್ಣಗಳೂ ಅಗ್ತಾ ಇದ್ದಾವಲ್ಲಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 10:25pm — hamsanandi

ಉ: ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

hamsanandi's picture

ಹೌದು. ವಾರ ಎಂದರೆ ಮತ್ತೆ ಮತ್ತೆ ಎಂಬ ಅರ್ಥವೂ ಬರುತ್ತದೆ. ಯಾವರೀತಿ ವಾರದ ದಿನಗಳು ಮರಳಿ ಮರಳಿ ಅವೇ ಬರುತ್ತವೋ, ಆ ರೀತಿಯೇ.

ಮುತ್ತುಸ್ಚಾಮಿ ದೀಕ್ಷಿತರ ಮಂಗಳ ಗ್ರಹಪರವಾದ ಕೃತಿಯ ಪಲ್ಲವಿ (ಸುರುಟಿ ರಾಗದಲ್ಲಿ) ಹೀಗಿದೆ:

ಅಂಗಾರಕಮಾಶ್ರಯಾಮ್ಯಹಂ ವಿನತಾಶ್ರಿತ ಜನ ಮಂದಾರಂ ಮಂಗಳವಾರಂ ಭೂಮಿಕುಮಾರಂ ವಾರಂ ವಾರಂ

ಮತ್ತೆ ಮತ್ತೆ ಮಂಗಳನಿಗೆ ಮೊರೆಹೋಗುತ್ತೇನೆ ಎಂಬ ತಾತ್ಪರ್ಯ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 10:26pm — hamsanandi

ಉ: ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

hamsanandi's picture

ಮಹೇಶರೇ,

ಇನ್ನೂ ನನ್ನ ಬರಹ ಪೂರ್ಣವಾಗಿಲ್ಲ - ಇವತ್ತು ಆದರೆ ಮುಂದುವರೆಸಿ, ವಾರಗಳ ಸರತಿ ಹೀಗೇ ಏಕಿರಬೇಕು ಎಂಬುದನ್ನು ವಿವರಿಸುತ್ತೇನೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 1:14am — hamsanandi

ಉ: ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

hamsanandi's picture

ಆಸಕ್ತಿ ಇದ್ದವರಿಗೆ:

ಬರಹವನ್ನು ಈಗ ಪೂರ್ತಿಮಾಡಿದ್ದೇನೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 8:34pm — mahesha

ಉ: ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

mahesha's picture

ನನ್ನಿ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 6:04pm — savithru

ಉ: ಏಳು ಸ್ವರವು ಸೇರಿ ಸಂಗೀತವಾಯಿತು ಏಳು ದಿನವು ಸೇರಿ ಒಂದು ವಾರವಾಯಿತು ...

savithru's picture

ಹಂಸಾನಂದಿಯವರೆ
ತುಂಬ ಸರಳವಾಗಿಅರ್ಥವಾಗುವಂತೆ ವಿವರಿಸಿದ್ದೀರಿ.ಲೇಖನಕ್ಕೆ ವಂದನೆಗಳು.

ಮತ್ತೊಂದು ರೀತಿಯೂ ಈ ವಾರಗಳ ಸರಣಿಗೆ ಒಪ್ಪುತ್ತದೆ.

ಸೂರ್ಯನಿಂದ ಲೇಖ ಹಾಕುತ್ತ ಬಂದರೆ ನಾವು ಈ ರೀತಿ ಬರೆಯಬಹುದು.

ಸೂರ್ಯ
ಬುಧ
ಶುಕ್ರ
ಮಂಗಳ
ಚಂದ್ರ ( ಸೋಮ)
ಗುರು
ಶನಿ

ಇಲ್ಲಿ ಪ್ರತಿ ೫ ನೆ ಗ್ರಹದಂತೆ ಲೇಖ ಹಾಕಿದರೆ ನಮಗೆ ನಾವು ಎಣಿಸುತ್ತಿರುವ ಸರನಿಯನ್ತಿರುವ ವಾರಗಳು ಸಿಗುತ್ತವೆ. ಇಲ್ಲಿ ೫ಕ್ಕೆ ಏನು logical ಸಮಜಾಯಿಸಿ ಇದೆಯೋ ಗೊತ್ತಿಲ್ಲ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ್ರಿಕೆಟ್ ವಿಶ್ವಕಪ್ ೨೦೦೭ - ಮೊದಲ ಸುತ್ತಿನ ವೇಳಾಪಟ್ಟಿ - ಕನ್ನಡದಲ್ಲಿ
  • ಬುದ್ಧಿಗೆ ಕಸರತ್ತು: ಸಂಪದಬಂಧ - ೨
  • ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?
  • ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧
  • ಕಾವೇರಿ ತೀರ್ಪಿನ ಸತ್ಯಗಳು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator