21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಋಣಂ ಕೃತ್ವಾ ಘೃತಂ ಪಿಬೇತ್

June 5, 2009 - 4:04am
hamsanandi
ಮರಳಿ ಬರುವ ದಾರಿಯಿದೆಯೆ
ಉರಿದು ಬೂದಿಯಾದ ಒಡಲು?
ಇರಲಿ ಅದಕೆ ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಉರಿದು ಬೂದಿಯಾದ ಒಡಲು
ಮರಳಿ ಬರುವ ದಾರಿಯೆಲ್ಲಿ?
ಇರಲೇಬೇಕು ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಸಂಸ್ಕೃತ ಮೂಲ (ಚಾರ್ವಾಕನದ್ದು ಎಂದು ಹೇಳುವುದುಂಟು- ಸರಿಯೋ ತಪ್ಪೋ ಕಾಣೆ):

ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ |
ತಸ್ಮಾತ್ ಸರ್ವ ಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ ||

-ಹಂಸಾನಂದಿ

ಸರಣಿ: 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by srinivasps on
ಅನುವಾದ ಚೆನ್ನಾಗಿದೆ! ಬರೀ ತುಪ್ಪ ತಿನ್ನೋದು ನನಗೆ ಅಷ್ಟೇನು ಇಷ್ಟ ಇಲ್ಲ... ಆದ್ರೂ, ನಾನು ಒಂದು ಭಾವಾನುವಾದ ಮಾಡಿಬಿಟ್ಟೆ :) ಬೂದಿಯಾದ ಒಡಲು ಮರಳಿ ಬರುವುದೇನೋ, ಬೆಪ್ಪ! ತಿಣುಕಿ ಸಾಲ ಮಾಡಿಯಾದ್ರೂ ತಿನ್ನೋ ತುಪ್ಪ! --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ambika on
"ಸಾಲ ಮಾಡಿಯಾದರೂ ತುಪ್ಪ ತಿನ್ನು" ಅನ್ನೋ ನುಡಿಗ ಟ್ಟನ್ನು ಕೇಳಿದ್ದೆ. ಸಿನಿಮಾ ಹಾಡಿನಲ್ಲಿ ಉಪಯೋಗವಾದ ನಂತರ ಹೆಚ್ಚು ನೆನಪಿನಲ್ಲಿಯುಳಿಯುವಂತಾಗಿದೆ. ಪೂರ್ಣ ಶ್ಲೋಕ ತಿಳಿದಂತಾಯ್ತು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ಸತ್ತಮೇಲೆಲ್ಲಿ ಮತ್ತೆ ಬರುವೆಯೋ ಮೂಢ| ಸಾಲ ಮಾಡಿಯಾದರೂ ತುಪ್ಪವ ತಿನ್ನದೇ ಇರಬೇಡ||
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ಬೂದಿಯಾಗಿ ಹೋದ ದೇಹ ಎಂದಿಗೂ ಮರಳಿ ಬಾರದನ್ನು ಶ್ರಮದಿಂದಾಗದೊಡೆ ಸಾಲ ಮಾಡಿಯಾದರೂ ನೀ ತುಪ್ಪ ತಿನ್ನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on
ಹಂಸಾನಂದಿ, ಇದೊಂದು "ಜನಪ್ರಿಯ" ಒಕ್ಕಣೆ. ಇದನ್ನು ಚಾರ್ವಾಕನಿಗೆ ಆರೋಪಿಸಲಾಗಿದೆ. ಆದರೆ ಎಲ್ಲಿಯೂ ಇದರ ಮೂಲ ಸಿಕ್ಕಿರಲಿಲ್ಲ. ನಿಮಗೆ ಇದು ಚಾರ್ವಾಕನದೇ ಎಂದು ಯಾವು ಮೂಲದಲ್ಲಿ ಸಿಕ್ಕಿತು ಎಂದು ಕುತೂಹಲ. ದಯವಿಟ್ಟು ತಿಳಿಸುವಿರಾ? ಅನುವಾದದಲ್ಲಿ ಕನ್ವಿಕ್ಷನ್ ಇಲ್ಲ ಅನಿಸಿತು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಅನಿವಾಸಿಯವರೇ, ಕುತೂಹಲಕ್ಕೆ... >....ಇದನ್ನು ಚಾರ್ವಾಕನಿಗೆ ಆರೋಪಿಸಲಾಗಿದೆ ... ಇಲ್ಲಿ 'ಆರೋಪ' ಅನ್ನೋ ಬಳಕೆ ಯಾಕೆ? > ಅನುವಾದದಲ್ಲಿ ಕನ್ವಿಕ್ಷನ್ ಇಲ್ಲ ಅನಿಸಿತು ಅನುವಾದದಲ್ಲಿ 'ಕನ್ವಿಕ್ಷನ್' ಇಲ್ಲ ಅಂತ ಯಾವ ಅರ್ಥದಲ್ಲಿ ಹೇಳ್ತಿದೀರಿ? --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಆರೋಪಿಸಲಾಗಿದೆ ಅನ್ನೋ ಶಬ್ದದ ಬಳಕೆ ಇಂಗ್ಲೀಷಿನ ಇಂಪ್ಯೂಟೆಡ್ ಅರ್ಥದಲ್ಲಿ . ಇವನು ಈ ಮಾತು ಹೇಳಿದ್ದಲ್ಲ ; ಬೇರೆ ಯಾರೋ ಹೇಳಿದ್ದು , ಆದರೆ ಇವನೇ ಈ ಮಾತು ಹೇಳಿದ್ದು ಅಂತ ಇವನ ತಲೆಗೆ ಕಟ್ಟ್ಟಿದ್ದಾರೆ ಅನ್ನೋ ಭಾವ ಈ ಶಬ್ದದ ಬಳಕೆಯಲ್ಲಿದೆ. ಅಪರಾಧ/ನ್ಯಾಯ/ಕಾನೂನು ಕ್ಷೇತ್ರದ ಆರೋಪ ಅಲ್ಲ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ನಾನೂ ಜನಪ್ರಿಯ ಒಕ್ಕಣೆಯನ್ನ , ಹಿಂದೆ ಯಾವಾಗಲೋ ಸಂಸ್ಕೃತ ಮೇಷ್ಟ್ರ ಬಾಯಲ್ಲಿ ಕೇಳಿದ್ದನ್ನ ಬರೆದಿರೋದೇ. ಇಲ್ಲಿ ಒಳ್ಳೇ ಪುಸ್ತಕ ಸಂಗ್ರಹ ಇರೋವ್ರ ಹತ್ತಿರ ವಿಚಾರಿಸುವೆ. ನನ್ನ ಹತ್ತಿರ ಇರುವ ಪುಸ್ತಕಗಳಲ್ಲಿ ಇದು ಇಲ್ಲ. ನಾನು ಹೊಡೆದು ಹಾಕಿ ಬರೆದಿದ್ದರಿಂದ ನಿಮಗೆ ಕನ್ವಿಕ್ಷನ್ ಇಲ್ಲ ಅನ್ನಿಸ್ತೇನೋ :) ಅಲ್ವಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on
ಶ್ರೀನಿವಾಸ್, ಸಂಸ್ಕೃತ ಮೂಲ ಚಾರ್ವಾಕನ ಮಾತು ಎನ್ನುವ ಬಗ್ಗೆ ಅನುಮಾನ ಇರುವುದರಿಂದ. ಇನ್ನು ಕನ್ವಿಕ್ಷನ್ ಬಗ್ಗೆ- ಮೂಲದ ಮಾತಿನಲ್ಲಿರುವ ಹರಿತ ಅನುವಾದದಲ್ಲಿ ಚಂದವಾಗಿಸಿದಂತೆ ಅನಿಸಿತು. ಒಡಲು, ಜತುನ, ಉಣಲು ಎಂಬ ಪದಗಳನ್ನು ಬಳಸಿದ್ದರಿಂದ ತುಂಬಾ ಮೆದುವಾಯಿತು ಅನಿಸಿತು... "ಉರಿದು ಬೂದಿಯಾದ ಒಡಲು" => "ಸುಟ್ಟು ಮೈ ಬೂದಿಯಾಗಿ" ಇಲ್ಲಿ ಸುಟ್ಟು ಹಾಗು ಮೈ ಪಕ್ಕಪಕ್ಕವಿದ್ದರೆ ಪರಿಣಾಮ ಬೇರೆ/ತೀವ್ರ ಅಂತ ನನ್ನ ಅನಿಸಿಕೆ. ನಡುವಲ್ಲಿ ಬೂದಿ ಅವನ್ನು ಬೇರ್ಪಡಿಸುತ್ತವೆ, ಪರಿಣಾಮ ಕಡಿಮೆಯಾಗುತ್ತದೆ ಅನಿಸುತ್ತದೆ. ಇದು ಚಾರ್ವಾಕರ ಒಂದು ವಿಶಾಲ ತತ್ವದ ಬಗ್ಗೆ ಕೂಡ ಇಣುಕುನೋಟ ಕೊಡುವ ಮಾತು. ಹಾಗೆಯೇ "ತುಪ್ಪ ತಿನ್ನು" ರೂಪ ಹೆಚ್ಚು ಹರಿತ ಅಲ್ಲವೆ - "ತುಪ್ಪವುಣಲು" ಎಂಬುದಕ್ಕಿಂತ? ಮೂಲದ active voice, ಅನುವಾದದಲ್ಲಿ passive ಆಗಿದೆಯೆ? ....ಹೀಗೆಲ್ಲಾ ತಲೆ ಓಡಿ, ಒಟ್ಟಾಗಿ ಹೀಗಾಗಲು ಕನ್ವಿಕ್ಷನ್ ಇಲ್ಲದ್ದು ಕಾರಣವಿರಬೇಕು ಅನಿಸಿತು :) ಹೊಡೆದು ಹಾಕಿದ್ದರಲ್ಲೂ ಹೆಚ್ಚು ಕಡಿಮೆ ಇದೇ ಪದಜೋಡಣೆ ಇರೋದ್ರಿಂದ ಆ ಕಾರಣಕ್ಕೆ "ಕನ್ವಿಕ್ಷನ್" ಮಾತಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ವಾರೆ ವ್ವಾ ಅನಿವಾಸಿಯವರೆ- ನಿಮ್ಮ ಅನಾಲಿಸಿಸ್ ಬಹಳ ಚೆನ್ನಾಗಿದೆ :) ಅಡ್ಡಬಿದ್ದೆ! ನೀವು ಇಷ್ಟೆಲ್ಲ ವಿವರಿಸಿದ ಮೇಲೆ, ನನಗೆ ಕನ್ವಿಕ್ಷನ್ ಇರಲೇ ಇಲ್ಲವೇನೊ ಅನ್ನಿಸತೊಡಗಿತು! ಇದ್ದರೂ ಇರಬಹುದು ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ಸಾಮಾನ್ಯರ ದೇಹ ಬೆಂಕಿಗೆ ಹೋದರೆ ಅದು ಮರಳುವುದಿಲ್ಲ. ಆದರೆ ನಮ್ಮ ಹಿಂದಿನ ಋಷಿ ಮುನಿಗಳು ಬೆಂಕಿಯಿಂದ ದೇಹವನ್ನು ಮರಳಿ ಪಡೆಯಲು ವಿಧಾನವನ್ನು ಕಂಡುಹಿಡಿದುಕೊಂಡಿದ್ದರು. ಮತ್ತು ಆ ವಿಧಾನ ತುಂಬಾ ವೈಜ್ಞಾನಿಕ ವಾಗಿತ್ತು. "ಆ ವಿಧಾನವೆಂದರೆ ತುಪ್ಪ ತಿನ್ನುವುದು"!. ಇದು ನಮ್ಮ ಸನಾತನ ಋಷಿಗಳ ಸಾಧನೆ. ತುಪ್ಪವನ್ನು ಶಾಸ್ತ್ರೋಕ್ತವಾಗಿ ಸೂಕ್ತಸಮಯದಲ್ಲಿ ಸೇವಿಸಬೇಕು. ತುಪ್ಪ ತಿನ್ನಲು ವಿಧಾನಗಳು. ೧. ಸಾಲ ಮಾಡಿ ತುಪ್ಪ ಕೊಳ್ಳಬೇಕು. ( ದುಡಿದು ಕೊಳ್ಳಬಾರದು, ಮನೆಯದ್ದಾಗಿರಬಾರದು) ೨. ತುಪ್ಪವನ್ನು ಕುಡಿಯಬೇಕು (ತಿನ್ನ ಬಾರದು) 3. ಸರ್ವ ಪ್ರಯತ್ನಗಳನ್ನು ಮಾಡಿ ಕುಡಿಯಬೇಕು. ( ಆರಾಮವಾಗಿ ಕುಳಿತು / ನಿಂತು ಅಲ್ಲ). ............................. ಹೀಗೆ ತಾನೇ ನಾವು ಸಂಸ್ಕೃತದ ಅನೇಕ ಮಂತ್ರಗಳನ್ನು / ಶ್ಲೋಕಗಳನ್ನು ಅರ್ಥ ಮಾಡಿಕೊಂಡಿರುವುದು. ;) ಬೇಜಾರು ಮಾಡ್ಕೋಬೇಡಿ, ಸ್ವಲ್ಪ ವಿಡಂಬನೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ನಿಮ್ಮನಿಸಿಕೆ ತಕ್ಕುದಾಗಿದೆ. ಮೋಸ್ಟ್‌ಲಿ ಈ ಶ್ಲೋಕ ಯಾವ ಸನ್ನಿವೇಶದಲ್ಲಿ ಬಂದಿದೆ ಎಂದು ಅರಿತರೆ ಒಳಿತು. ಪಿಬೇತ್ = ಕುಡಿಯತಕ್ಕದ್ದು. ಎಂದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ನನ್ನೀ ಒಂದು ವೇಳೆ ಈ ಮಾತು ಯಾರದ್ರೂ ಆಚಾರ್ಯರಿಗೆ ಅತ್ವ ಋಷಿಗಳಿಗೆ ಆರೋಪಿಸಲ್ಪಟ್ಟಿದ್ದಿದ್ದರೆ, ಬಹುಶ ಈ ಶ್ಲೋಕದ ವ್ಯಾಖ್ಯಾನ ನಾನು ಬರೆದಿದ್ದಕ್ಕಿಂತ ಬೇರೆ ಇರ್ತ ಇರಲಿಲ್ಲ ಅನ್ಸುತ್ತೆ. ;) ಮೇಲಿನ "ಭಾಷ್ಯವನ್ನು" ೧. "ತುಪ್ಪದ ಬಗ್ಗೆ" ಅಲೋಪತಿಯ ಮತ್ತು ಆಯುರ್ವೇದದ ಲಿಂಕ್ ಕೊಟ್ಟು ೨. "ಸರ್ವ ಪ್ರಯತ್ನ"ಕ್ಕೆ ರಾಜಯೋಗದ ಮತ್ತು ಆಧುನಿಕ ವ್ಯಾಯಾಮದ ಲಿಂಕ್ ಕೊಟ್ಟು ಇನ್ನೂ ಉತ್ತಮಗೊಲಿಸುತ್ತಿದ್ದರೆನೋ? ಅಲ್ಲದೆ ಕುಡಿಯುವುದು ಸರಿಯೋ ಅತ್ವ ತಿನ್ನುವುದು ಸರಿಯೋ ಅನ್ನುವುದರ ಬಗ್ಗೆ ಅನೇಕ ಮತ ಪಂತಗಳು ಹುಟ್ಕೋತ ಇದ್ವೇನೋ! ;) ತುಪ್ಪವನ್ನು ಕುಡಿಯದೆ, ಬೇರೆ ಆಹಾರಕ್ಕೆ ಬೇರೆಸಿತಿಂದವರು ಆಚಾರವಂತರಲ್ಲ ಅಂತ ಮೂದಲಿಸಿ, ನಿಕೃಷ್ಟವಾಗಿ ಕಂಡು, ತಾವು ಮಾತ್ರ most orthodox community ಅಂತ ಬೀಗ್ತಾ ಇದ್ರೇನೋ?!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ತುಪ್ಪ ಮತ್ತು ಚಾರ್ವಾಕರ ವಿಚಾರಧಾರೆ ಕುರಿತು ತಿಳಿಯಲು http://sampada.net/b... ನೋಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ಯಾವ ಚಾರ್‍ವಾಕಗ್ರಂಥದ ಶ್ಲೋಕವಿದು? ನನ್ನರಿವಂತೆ ಇದೊಂದು ಆಂಧ್ರಕವಿಯ ಶ್ಲೋಕ. ಬಂಡಾಯ ಶ್ಲೋಕಗಳಿಗೆ ಆಂಧ್ರಕವಿಗಳು ಹಿಂದಿನಿಂದಲೂ ಹೆಸರುವಾಸಿ. ದಯವಿಟ್ಟು ಈ ಗೊಂದಲವನ್ನಳಿಸಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ಕ್ಷಮಿಸಿ, ನೀವೆಲ್ಲ ತುಂಬಾ ಗಂಭೀರ ಚರ್ಚೆ ಮಾಡ್ತಾ ಇದ್ದೀರ.... ಚಾರ್ವಾಕ, ಋಷಿಗಳು.. ಅದೂ ಇದೂ ಅಂತ. ಸ್ವಲ್ಪ ಈ ಕಾಮೆಂಟ್ ನೋಡಿ, ಆಮೇಲೆ ಚರ್ಚೆ ಮುಂದುವರೆಸಿ. ನನಗೆ ಈ ಕವನವನ್ನು ಓದಿದಾಗ ನೆನಪಾದದ್ದು ದುನಿಯಾ ಸಿನಿಮಾದ ಈ ಹಾಡು. ಸಾಲ ಮಾಡಿಯಾದ್ರು ತುಪ್ಪ ತಿನ್ನು, ಓಳು(ಗೋಳು) ಪರದಾಟ ಸಾಕಿನ್ನು, ಬದುಕೋದ್ ಕಲಿಯೋ ಬಿಕನಾಸಿ, ನಗೋದಿಕ್ಕು ಯಾಕೋ ಚೌಕಾಸಿ, ನಗಿಸಿ ನಗುವುದೇ ಖುಷಿ. ಇದರಲ್ಲಿ ಒಂದು ಸಾಲು ಬರುತ್ತದೆ.... ಸನ್ಯಾಸಿಗೆ ಜೈ, ಬ್ಯೇವಾರ್ಸಿಗೂ ಜೈ, ಇಬ್ರಿಂದ್ಲು ಕಲಿ ಪಾಠ. ಆ ದ್ಯಾವ್ರಿಗೂ ಜೈ, ಈ ದ್ಯಾವ್ರಿಗೂ ಜೈ, ನಮ್ ದ್ಯಾವ್ರೆ ಈ ಊಟ. ಸಾಲ ಮಾಡಿಯಾದ್ರು ತುಪ್ಪ ತಿನ್ನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on
ಹಂಸಾನಂದಿ, ಮೂಲ ಖಾತ್ರಿಯಾಗುವವರೆಗೆ "ಚಾರ್ವಾಕ"ದ ಪಕ್ಕ ಒಂದು "?" ಹಾಕುವುದು ಒಳ್ಳೆಯದಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.