ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಮರೆಯಲಾರದ ಸಣ್ಣ ಕಥೆಗಳು

September 5, 2007 - 4:17am — hamsanandi

ಕೆಲವು ಕಥೆಗಳಿರುತ್ತವೆ. ಎಷ್ಟು ಬಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬಹುದಾದಂತಹ ಹಥೆಗಳವು. ರಾಮಾಯಣ, ಮಹಾಭಾರತ, ಅಥವ ಶಾಕುಂತಲ ಅಂತಹ ಕತೆಗಳವು. ಗೊತ್ತಿದ್ದರೂ, ಮತ್ತೊಮ್ಮೆ ಅವಕಾಶ ಸಿಕ್ಕರೆ, ಸಿನಿಮಾವೋ, ನಾಟಕವೋ, ಯಕ್ಷಗಾನವೋ, ಮತ್ತೊಂದೋ ಎಲ್ಲಾದರೂ ಆ ಕಥೆಗಳು ಮತ್ತೆ ಮತ್ತೆ ಬಂದರೂ, ಬೇಸರಿಸದೇ ನೋಡುತ್ತೇವೆ. ಮುಂದೇನಾಗುವುದು ಎಂಬ ಕುತೂಹಲವಿಲ್ಲದಿದ್ದರೂ.

ಇನ್ನು ಕೆಲವು ಕಥೆಗಳಿರುತ್ತವೆ. ಒಮ್ಮೆ ಓದಿದ ನಂತರ ಎಷ್ಟೋ ವರ್ಷಗಳವರೆಗೆ, ಮತ್ತೆ ಓದದೆಯೂ, ಕೇಳದೆಯೂ ನೆನಪಿನಲ್ಲಿ ಉಳಿಯುವಂತಹವು ಆ ಕಥೆಗಳು. ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶಯ್ಯಂಗಾರರ  ಅನೇಕ ಕಥೆಗಳು ಈ ಗುಂಪಿಗೆ ಸೇರುತ್ತವೆ ಎಂದು ನನ್ನ ಎಣಿಕೆ.

ಆದರೆ, ಇವತ್ತು ನಾನು ನೆನಪಿಸಿಕೊಂಡ ಕಥೆಗಳೇ ಬೇರೆ. ಅವುಗಳಲ್ಲೊಂದು ಅಶ್ವತ್ಥರ ನಾಸೀಂ ಬೇಗಂ ಎಂಬ ಕಥೆ. ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿನ  (ಅಥವಾ ಇನ್ನೂ ಮೊದಲದ್ದೇ ಇರಬಹುದು) ಕಾಶ್ಮೀರದ ಚಿತ್ರಣ ಕೊಡುವ ಈ ಕಥೆ ವಿಶಿಷ್ಟವಾದ್ದು. ಕಥೆ ಆರಂಭವಾಗುವಾಗ, ಪಾಕೀಸ್ತಾನೀ ಯೋಧರು ಕಾಶ್ಮೀರಕ್ಕೆ ಮಾರು ವೇಷದಿಂದ ಬಂದು ಬಿಟ್ಟಿರುವ ಸುದ್ದಿ ಬಂದಿದೆ. ನಾಸೀಂ ಬೇಗಂ, ಗಡಿಯ ಬಳಿಯ ಹಳ್ಳಿಯೊಂದರಲ್ಲಿ ಚಹಾ ಮಾರುವ ಪೆಟ್ಟಿಗೆಯಂಗಡಿಯೊಂದನ್ನು ಇಟ್ಟಿರುವ ಇಳಿವಯಸ್ಸಿನ ಮುದುಕಿ. ಈ ಸಮಯದಲ್ಲಿ, ಅವಳ ಅಂಗಡಿಯಲ್ಲಿ ಚಾ ಕುಡಿಯಲು, ಭಾರತದ ಸೈನಿಕರ ಸಮವಸ್ತ್ರ ಧರಿಸಿದ ಐದಾರು ಸೈನಿಕರು ಬರುತ್ತಾರೆ. ಅವರಿಗೆ ಚಹಾ ಮಾಡುತ್ತ, ಅವರ ಮಾತಿನ ಧಾಟಿಯನ್ನು ಕೇಳಿದ ನಾಸೀಮಳಿಗೆ, ಇವರು ಮಾರುವೇಷದಲ್ಲಿರುವ ವಿರೋಧಿ ಪಡೆಯವರು ಎಂದು ಅರ್ಥವಾಗಿಬಿಡುತ್ತೆ. ತಕ್ಷಣ ಮಾಡುತ್ತಿದ್ದ ಚಹಾಗೆ ಅವಳು ವಿಷ ಬೆರೆಸುತ್ತಾಳೆ. ಅವರಿಗೆ ಅದನ್ನು ನೀಡುವಾಗ, ಸೈನಿಕರು, ಮೊದಲು ನೀನು ಕುಡಿ, ಇಲ್ಲದೇ ನಮಗೆ ನೀನು ಮೋಸ ಮಾಡಿದರೆ ಎಂದಾಗ, ಧೈರ್ಯವಾಗಿ ಅದನ್ನು ಕುಡಿಯುತ್ತಾಳೆ; ನಂತರ ಸೈನಿಕರೂ ಅದನ್ನು ಕುಡಿದು ಹೊರಟು ನಾಲ್ಕಾರು ಹೆಜ್ಜೆಹಾಕುವಲ್ಲಿ, ಅವರಿಗೆ ನಡೆದ ವಿಷಯ ಅರ್ಥವಾಗುತ್ತೆ. ಆಗ ನಾಸೀಂ, ನನ್ನ ದೇಶ ನನ್ನ ಜೀವಕ್ಕಿಂತ, ನನ್ನ ನಂಬಿಕೆಗಿಂತ ಹೆಚ್ಚೆಂದು ಹೇಳಿ ಜೀವಬಿಡುತ್ತಾಳೆ. ಕ್ಷಣಗಳಲ್ಲೆ, ಎಲ್ಲಾ ವೈರಿ ಸೈನಿಕರೂ ಸಾಯುತ್ತಾರೆ.

ಕೆಲವು ಸಮಯದ ನಂತರ, ಅಲ್ಲಿಕೆ ಬಂದ ಭಾರತೀಯ ಸೈನಿಕರಿಗೆ, ಈ ಹೆಣಗಳು ಏಕೆ ಹೀಗೆ ಬಿದ್ದಿವೆ ಎಂದು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ.

ಅಶ್ವತ್ಥರ ಹಲವು ಕಥೆಗಳನ್ನು ಬಹಳ ಹಿಂದೆ ಓದಿದ್ದೆ - ಸುಮಾರು ಇಪ್ಪತ್ತೈದು ವರ್ಷಗಳ ನಂತರವೂ ನಾನು ಮರೆಯಲಾರದ ಕಥೆಗಳಲ್ಲೊಂದು - ನಾಸೀಂ ಬೇಗಂ.

-ಹಂಸಾನಂದಿ

  • ಕನ್ನಡ ಕಥೆ
~.~
  • hamsanandi ರವರ ಬ್ಲಾಗ್
  • Login or register to post comments
  • 578 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 5, 2007 - 9:53am — udayshanbhag

ಉ: ಮರೆಯಲಾರದ ಸಣ್ಣ ಕಥೆಗಳು

udayshanbhag's picture

ಅದ್ಭುತವಾದ ಕತೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2007 - 11:47am — shreekant.mishrikoti

ಉ: ಮರೆಯಲಾರದ ಸಣ್ಣ ಕಥೆಗಳು

shreekant.mishrikoti's picture

ಹಿಂದೊಮ್ಮೆ ನನಗೆ ಅಶ್ವತ್ಥರ ಕಥಾಸಂಕಲನದ ಒಂದು ಸಂಪುಟ - ಸುಮಾರು ಸಾವಿರ ಪುಟಗಳದ್ದು - ಸೆಕಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಸಿಕ್ಕಿತು . ಅದರಲ್ಲಿರುವ ಕಥೆಗಳು ಬಹುತೇಕ ಚೆನ್ನಾಗಿದ್ದವು . ಇನ್ನೊಮ್ಮೆ ಓದಬೇಕಿದೆ. ನನಗೆ ಒಂದು ಕಥೆ ನೆನಪಿನಲ್ಲುಳಿದಿದೆ .

೩೦-೪೦ ವರ್ಷಗಳ ಹಿಂದಿನ ಕತೆ ; ಆಗ ಗಂಡ ಸರಕಾರೀ ಅಧಿಕಾರಿ ; ಪತ್ನಿ ಗರ್ಭಿಣಿ ; ಗರ್ಭಪಾತವಾಗುತ್ತದೆ ; ಡಾಕ್ಟರರು ’ನೀವು ಇನ್ನು ಮೇಲೆ ಎಚ್ಚರದಿಂದಿರಬೇಕು ;ಆಕೆ ಇನ್ನೊಮ್ಮೆ ಗರ್ಭಿಣಿಯಾದರೆ ಅವಳ ಜೀವಕ್ಕೆ ಅಪಾಯ’ ಎನ್ನುತ್ತಾರೆ . ಅವರು ಹೇಳಿದ ರೀತಯೇ ಯಾವ ರೀತಿಯ ಎಚ್ಚರ ವಹಿಸಬೇಕು ಎಂದು ತಿಳಿಸುವಂತಿತ್ತು ; ’ಸೂಕ್ತ ಆಪರೇಶನ್ ಮಾಡಬಲ್ಲೆ ’ ಎಂದೂ ಸೂಚಿಸುತ್ತಾರೆ ; ಆಗ ಅಧಿಕಾರಿ ಗಂಡ - ಅಂಥದೇನೂ ಅಗತ್ಯವಿಲ್ಲ ; ನಾವು ಎಚ್ಚರ ವಹಿಸುತ್ತೇವೆ’ ಎನ್ನುತ್ತಾರೆ . ವೈದ್ಯರು ಮತ್ತೆ ಮತ್ತೆ ತಿಳಿ ಹೇಳಿದರೂ ಇವರು ಕೇಳರು . ತಮ್ಮ ಮೇಲೆ ಅಷ್ಟು ಆತ್ಮವಿಶ್ವಾಸ ಅವರಿಗೆ . ಡಾಕ್ಟರರಾದರೂ ಇನ್ನೇನು ಮಾಡಿಯಾರು ? ಅಧಿಕಾರಿಯ ಮನಸ್ಸಿನ ವಿರುದ್ಧ ಚಿಕಿತ್ಸೆ / ಆಪರೇಶನ್ ಮಾಡಲು ಸಾಧ್ಯವೇ ?

ನಂತರ ಮೂವತ್ತು ವರ್ಷಗಳು ಉರುಳಿವೆ ; ಈ ಮಧ್ಯೆ ಈ ದಂಪತಿಗಳು ಬಹಳೇ ಮಾನಸಿಕ ಕೋಲಾಹಲಕ್ಕೆ ಒಳಗಾಗಿದ್ದಾರೆ . ಸಣ್ಣ ಸಣ್ಣ ವಿಷಯಗಳಿಗೂ ಪರಸ್ಪರ ಕಿರಿಕಿರಿ , ಜಗಳ , ಮನಸ್ತಾಪ ಮಾಡಿಕೊಂಡು ಬಹಳೇ ಕಷ್ಟದಿಂದ ತಮ್ಮನ್ನು ನಿಯಂತ್ರಿಸಿಕೊಂಡಿದ್ದಾರೆ . ಇದೀಗ ರೈಲು ಪ್ರಯಾಣದಲ್ಲಿ ಆ ಹಳೆಯ ಡಾಕ್ಟರರನ್ನು ಅಕಸ್ಮಾತ್ ಭೇಟಿಯಾಗಿ ಹಳೆಯದೆಲ್ಲವನ್ನು ನೆನಪಿಸಿಕೊಂಡಿದ್ದಾರೆ . ಮಾತಿನಲ್ಲಿ ಆ ಡಾಕ್ಟರರು ಹೇಳುತ್ತಾರೆ - ನಿಮಗೆ ತೊಂದರೆಯಾಗಬಾರದೆಂದು ನಿಮ್ಮ ಇಷ್ಟಕ್ಕೆ ವಿರುದ್ಧವಾಗಿದ್ದರೂ ನಿಮ್ಮ ಒಳ್ಳೆಯದಕ್ಕೆ ಆ ಆಪರೇಷನ್ ಆಗಲೇ ಮಾಡಿ ಮುಗಿಸಿದೆ.

ಅಯ್ಯೋ ದುರ್ದೈವವೇ , ಇದು ಅವರಿಗೆ ಗೊತ್ತಿದ್ದರೆ ಇಷ್ಟೆಲ್ಲ ಕಷ್ಟ ಪಡುವದು, ಅದೂ ಮೂವತ್ತು ವರ್ಷ ಕಾಲ , ತಪ್ಪುತ್ತಿತ್ತೇ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರೆಯಲಾರದ ಸಣ್ಣಕಥೆಗಳು -೨
  • ಮರೆಯಲಾರದ ಸಣ್ಣ ಕಥೆಗಳು - ೩ : ರಂಗನಹಳ್ಳಿ ರಾಮ
  • ಪ್ರೇಮದ ಓಲೆ
  • ಮನದ ಮುಂದಣ ಮಾಯೆ
  • ಮುಲ್ಲಾ ನಸ್ರುದ್ದೀನ್:೬.ಸಾಗಿಸಿದ್ದು ಏನು? ೭. ಅದ್ಭುತವಾದ ಬೇಟೆ ೮. ಮುಖವನ್ನು ಕದ್ದಾರು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 53 ಅತಿಥಿಗಳು ಆನ್ಲೈನ್ ಇರುವರು.


ಸಾಕೋದನ್ ಅರಿತಾತ - ಸಾವಿರ ಜನಕ್ ತ್ರಾತ

— ಟಿ ಪಿ ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator