ಭೀಮಸೇನ ಜೋಶಿ - ಈಗ ಭಾರತ ರತ್ನ!
ಭೀಮಸೇನ ಜೋಶಿಯವರಿಗೆ ಭಾರತರತ್ನ ಪ್ರಶಸ್ತಿ ಕೊಡುವ ಸುದ್ದಿ ಕೇಳಿ ಬಲು ಹಿತವಾಯಿತು!
ಸಂಗೀತಗಾರರೊಬ್ಬರಿಗೆ ಸಂದಿರುವ ಈ ಗೌರವದಿಂದ ಸಂಗೀತಪ್ರೇಮಿಗಳಿಗೂ ಕನ್ನಡಿಗರಿಗೂ ಬಹಳ ಸಂತೋಷವಾಗುವುದಂತು ಖಂಡಿತ!
ಈ ಸಂದರ್ಭದಲ್ಲಿ ಅವರ ಕೆಲವು ಹಾಡುಗಳನ್ನು ಕೇಳಿ ಸಂತಸ ಪಡುವುದಕ್ಕಿಂತ ಹೆಚ್ಚಿನ್ನೇನು ಬೇಕು? ನನ್ನ ಮೆಚ್ಚಿನ ಕೆಲವು ಹಾಡುಗಳು ಇಲ್ಲಿವೆ :
ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರದಲ್ಲಿ ಪುರಂದರ ದಾಸರ ರಚನೆ (ರಾಗ ಪೂರಿಯಾ ಧನಾಶ್ರೀ)
ಸಂಧ್ಯಾ ರಾಗ ಚಿತ್ರದ - ನಂಬಿದ ನಿನ್ನ ನಾದದೇವತೆಯೆ (ರಾಗ ಪೂರ್ವಿ ಕಲ್ಯಾಣಿ)
ಅದೇ ಚಿತ್ರದ ಇನ್ನೊಂದು ಸುಮಧುರ ರಚನೆ - ಪುರಂದರ ದಾಸರ ಈ ಪರಿಯ ಸೊಬಗು (ರಾಗ ಸೋಹಿನಿ)
ಸಂತ ರಾಮದಾಸರ ಒಂದು ಸುಂದರ ಅಭಂಗ - ಆರಂಭೀ ವಂದೀನ ಅಯೋಧ್ಯೇಚಾ ರಾಜಾ (ರಾಗ ಕಲಾವತಿ)
ಸಂಧ್ಯಾರಾಗ ಚಿತ್ರದ್ದೇ ಇನ್ನೊಂದು ಗೀತೆ - ಕನ್ನಡತಿ ತಾಯಿ ಬಾ ( ರಾಗಮಾಲಿಕೆ: ಕೇದಾರ್, ಗೋರಖ್ ಕಲ್ಯಾಣ್, ಬಿಭಾಸ್ ??)
-ಹಂಸಾನಂದಿ
- hamsanandi's blog
- Login or register to post comments
- 724 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಭೀಮಸೇನ ಜೋಶಿ - ಈಗ ಭಾರತ ರತ್ನ!
ಮೊದಲ ಮೂರು ಹಾಡುಗಳು ನನಗೂ ತುಂಬಾ ಇಷ್ಟ...
ಇಂತಿ ನಿಮ್ಮ,
ಅನಿಲ್ ರಮೇಶ್.
ಉ: ಭೀಮಸೇನ ಜೋಶಿ - ಈಗ ಭಾರತ ರತ್ನ!
ಹಂಸಾನಂದಿ ಅವರೆ,
ಪಂಡಿತಜೀ ಅವರಿಗೆ "ಭಾರತ ರತ್ನ" ನೀಡಲಾಗಿದೆ ಎಂದು ಮುಂಜಾನೆ ರೇಡಿಯೊ ವಾರ್ತೆಯಲ್ಲಿ ಕೇಳಿದಾಗ ಬಹಳ ಸಂತೋಷವಾಯಿತು. ಅವರಿಗೆ ಸಲ್ಲಲೇಬೇಕಾದ ಗೌರವ ಇದು. ಜೋಷಿ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂಧನೆಗಳು.
ನಾ ಮೆಚ್ಚಿದ ಹಾಡುಗಳನ್ನು ಇಲ್ಲಿ ಕೇಳಿ ಎಂದಿರುವಿರಿ ಆದರೆ ಅಲ್ಲಿ ಖಾಲಿ ಜಾಗವಷ್ಟೆ ನಮಗೆ ಕಾಣುತ್ತಿದೆ ಹೀಗೇಕೆ ? ನಮಗೂ ಕೇಳುವ ಭಾಗ್ಯ ನೀಡಿ.
ಉ: ಭೀಮಸೇನ ಜೋಶಿ - ಈಗ ಭಾರತ ರತ್ನ!
>>ನಾ ಮೆಚ್ಚಿದ ಹಾಡುಗಳನ್ನು ಇಲ್ಲಿ ಕೇಳಿ ಎಂದಿರುವಿರಿ ಆದರೆ ಅಲ್ಲಿ ಖಾಲಿ ಜಾಗವಷ್ಟೆ ನಮಗೆ ಕಾಣುತ್ತಿದೆ ಹೀಗೇಕೆ ?
ಅಡೋಬ್ ಫ್ಲ್ಯಾಶ್ ಪ್ಲೇಯರ್ ಡೌನ್ ಲೋಡ್ ಮಾಡಿ. ಆಗ ಕಾಣುತ್ತೆ.
ಇಂತಿ ನಿಮ್ಮ,
ಅನಿಲ್ ರಮೇಶ್.
ಉ: ಭೀಮಸೇನ ಜೋಶಿ - ಈಗ ಭಾರತ ರತ್ನ!
ಕರ್ನಾಟಕಕ್ಕೆ ಬಂಪರ್ ಕೊಡುಗೆ
೧. ಕರ್ನಾಟಕದ ಕುವರ ಅರವಿಂದ ಅಡಿಗರಿಗೆ "ಬೂಕರ್ ಪ್ರಶಸ್ತಿ"
೨. ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ
೩. ಕರ್ನಾಟಕದ ಮತ್ತೊರ್ವ ಕುವರ "ಪಂಡಿತ್ ಭೀಮಸೇನ್ ಜೋಷಿ " ಅವರಿಗೆ "ಭಾರತ ರತ್ನ"
೨೦೦೮ - ಸುವರ್ಣ ಕರ್ನಾಟಕಕ್ಕೆ ಸುವರ್ಣ ಕೊಡುಗೆ ಅಲ್ಲವೆ.