19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗಳಿಸುವ ರೀತಿ

November 5, 2009 - 8:18am
hamsanandi

ಜಾಣರು ಮುಪ್ಪು ಸಾವಿಲ್ಲವದರ ತೆರದಿ
ಹಣವನ್ನೂ ಅರಿವನ್ನೂ ಗಳಿಸುತಿರಬೇಕು;
ಮುಂದಲೆಯನೇ ಯಮನು ಹಿಡಿದೆಳೆದಿರುವಂತೆ
ಒಳ್ಳೆಯ ಕೆಲಸಗಳನೇ ಮಾಡುತಿರಬೇಕು!

ಸಂಸ್ಕೃತ ಮೂಲ:

ಅಜರಾಮರವತ್ ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್ ||

-ಹಂಸಾನಂದಿ

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ananthesha nempu on

>>ಜಾಣರು ಮುಪ್ಪು ಸಾವಿಲ್ಲವರ ತೆರದಿ>>
ಸಾವಿಲ್ಲದವರ ತೆರದಿ - ಎಂದಾಗಬೇಕಿತ್ತಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ತಿದ್ದಿದ್ದೇನೆ ಈಗ. ಗಮನಿಸಿ ಹೇಳಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on

>>ಜಾಣರು ಮುಪ್ಪು ಸಾವಿಲ್ಲವರ ತೆರದಿ>>
'ಕಾಮಗಳು' ಬೇಡವೇ?
ಕಾಮ, ಹೈಫನ್, ಕೋಲನ್, ಸೆಮಿಕೋಲನ್ ಇವೆಲ್ಲವೂ ಸೇರಿ 'ಕಾಮಗಳು'.
'ಕಾಮಗಳ' ಸೇರಿಸಿದ್ದಿದ್ದರೆ - " ಜಾಣರು ಮುಪ್ಪು ಸಾವಿಲ್ಲದರ ತೆರದಿ "

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.