ಈಗಿನಂತೆ 7 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಊರೊಳಗೊಂದು ಧನ್ವಂತರಿ ವನ
hpn's picture
ಹರಿ ಪ್ರಸಾದ್ ನಾಡಿಗ್
22
Dec
2011
ಲೇಖನ

ದೊಂದು ದಿನ ಮೇಡಂ ನಮಗೆ ದಾರಿ ಹುಡುಕಿ ಹೇಳಲು ಮೊಬೈಲಿನಲ್ಲಿ ಮ್ಯಾಪ್ ನೋಡುತ್ತಿರುವಾಗ ಬೆಂಗಳೂರಿನೊಳಗೊಂದು...

ಪ್ರತಿಕ್ರಿಯೆಗಳು: 7
ಹಿಟ್ಸ್ : 259
ನವರಾತ್ರಿ
patwarikantu's picture
ಕಾ0ತು ಬಾಗಲವಾಡ‌
27
Sep
2011
ಲೇಖನ

 ಭಾರತದೇಶದಲ್ಲಿ 9 ದಿನಗಳ ಪರ್ಯಂತ ಆಚರಿಸುವ ಕೆಲವು ಹಬ್ಬಗಳಿವೆ....

ಪ್ರತಿಕ್ರಿಯೆಗಳು: 6
ಹಿಟ್ಸ್ : 242
ವಚನದಲ್ಲಿ ಆರೋಗ್ಯ - ಗಾಯನ ಮತ್ತು ವ್ಯಾಖ್ಯಾನ
naasomeswara's picture
ನಾ.ಸೋಮೇಶ್ವರ
24
Dec
2010
ಲೇಖನ

ಮೊದಲ ಬಾರಿಗೆ ಒಂದು ಪ್ರಯತ್ನವನ್ನು ನಡೆಸುತ್ತಿದ್ದೇನೆ.

 

ಶಿವಶರಣರ ವಚನಗಳ ಗಾಯನ ಹಾಗೂ ವ್ಯಾಖ್ಯಾನ ಹೊಸದೇನಲ್ಲ.

ಆದರೆ ಮೊದಲ ಬಾರಿಗೆ ವಚನಗಳಲ್ಲಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 597
ರಾಮಾಯಣದಲ್ಲೊಂದು ಮಹಾಭಾರತ!
hamsanandi's picture
ಹಂಸಾನಂದಿ
18
Mar
2012
ಬ್ಲಾಗ್ ಬರಹ

 ರಾಮಾಯಣದ ಕಥೆ ಕೇಳದ ಕನ್ನಡಿಗರು ಯಾರಿದ್ದಾರೆ? ಹಾಗೇ ರಾಮಾಯಣವನ್ನ ಬರೆದ   ವಾಲ್ಮೀಕಿಯ ಕಥೆಯೂ ಸುಪರಿಚಿತವೇ....

ಪ್ರತಿಕ್ರಿಯೆಗಳು: 9
ಹಿಟ್ಸ್ : 448
ಕಾಲದ ಕನ್ನಡಿ_ ``ಭಾರತದಲ್ಲಿ ನಕ್ಸಲೀಯರ ರಕ್ತ ಸಿಕ್ತ ಇತಿಹಾಸ``
ksraghavendranavada's picture
ksraghavendranavada
11
Apr
2010
ಪುಟ

 ನಕ್ಸಲ್ ಚಳುವಳಿಯ ಹುಟ್ಟು:...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,056
ಸರ್ವದೇವ ಪ್ರದಕ್ಷಿಣ ಯಾತ್ರೆ!
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
12
Nov
2009
ಪುಟ

  ಓಂ ಶ್ರೀ ಗಣೇಶಾಯ ನಮಃ.
  (ಗಣಪತಿಗೆ ವಂದಿಸಿಯೇ ಯಾವ ಕೆಲಸವನ್ನೇ ಆಗಲೀ ಪ್ರಾರಂಭ ಮಾಡಬೇಕು.)

  ವರ್ತುಲ ರಸ್ತೆ ಎಂದರೆ ರಿಂಗ್ ರೋಡ್. ’...

ಪ್ರತಿಕ್ರಿಯೆಗಳು: 1
ಹಿಟ್ಸ್ : 971
ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
09
Jul
2006
ಪುಟ
ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್,...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,547
"ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ
guruve's picture
Guruprasad D N
19
Jun
2011
ಲೇಖನ

 ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ ಮತ್ತು ಪೆನ್ ಸರ್ಕಲ್ ಗೌರವಾರ್ಪಣೆ

...

ಪ್ರತಿಕ್ರಿಯೆಗಳು: 1
ಹಿಟ್ಸ್ : 356
ಸ್ಯಾನ್ ಹೋಸೆ ಅನುಭವ
arunkumar.th's picture
ಅರುಣ್‍ಕುಮಾರ್ ಧನ್ವ೦ತ್ರಿ
10
Jun
2010
ಪುಟ

"ಎರಡೇ ನಿಮಿಷ ಸಮಯ ಕೊಟ್ಟು ನನ್ನನು ಒಪ್ಪಿಸಿದ ನಮ್ಮ ಮ್ಯನೇಜರ್ಗೆ ಭೇಶೆನ್ನ ಬೇಕು" (ವ್ಯ೦ಗ್ಯ)
ಇದರ ಹಿನ್ನಲೆ ನಿಮಗೆ ಮೊದಲು ಹೇಳಬೇಕು:
ಆ೦ದು ಗುರುವಾರ ರಾತ್ರಿ ೯:೫೫...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,117
ಆಂಡ್ರಾಯ್ಡ್ ಮತ್ತು ಕನ್ನಡ
hpn's picture
ಹರಿ ಪ್ರಸಾದ್ ನಾಡಿಗ್
02
Dec
2011
ಲೇಖನ

ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಬಹಳ ಜನಪ್ರಿಯವಾಗುತ್ತಿವೆ. ಕೈಗೆಟುಕುವ ಬೆಲೆಯಲ್ಲಿ ಆಂಡ್ರಾಯ್ಡ್ ಫೋನುಗಳು ಲಭ್ಯವಾಗುತ್ತಿರುವಂತೆ ಹೆಚ್ಚಿನ ಜನ ಇದನ್ನೇ...

ಪ್ರತಿಕ್ರಿಯೆಗಳು: 11
ಹಿಟ್ಸ್ : 363

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ

ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ

ಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.

ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?

(ಚಿತ್ರ: http://www.karnatik.com/ ಕೃಪೆ)


ಈ ಪ್ರಶ್ನೆಗೆ ನನ್ನಲ್ಲಿ ಖಚಿತ ಉತ್ತರವಿಲ್ಲ. ಆದರೆ, ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ ತ್ಯಾಗರಾಜರು ಪುರಂದರ ದಾಸರನ್ನು ನೆನೆದಿರುವುದೂ, ಮತ್ತು ಹಲವಾರು ತ್ಯಾಗರಾಜರ ರಚನೆಗಳು ಪುರಂದರ ದಾಸರ ರಚನೆಗಳನ್ನು ಹೋಲುವುದೂ ನಿಜವಾದ ಸಂಗತಿ.


ಉದಾಹರಣೆಗೆ ಹೇಳುವುದಾದರೆ, ಪುರಂದರದಾಸರು "ಸಕಲಗ್ರಹಬಲನೀನೆ ಸರಸಿಜಾಕ್ಷ” ಎಂದರೆ, ತ್ಯಾಗರಾಜರು "ಗ್ರಹಬಲಮೇಮಿ? ರಾಮಾನುಗ್ರಹಮೇ ಬಲಮು" (ಗ್ರಹಬಲವೇನದು? ರಾಮನ ಅನುಗ್ರಹವೇ ಬಲ) ಅನ್ನುತ್ತಾರೆ. ಪುರಂದರ ದಾಸರು "ಕೇಳನೋ ಹರಿ ತಾಳನೋ, ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ" ಎಂದು ಹಾಡಿದರೆ, ತ್ಯಾಗರಾಜರು "ಸಂಗೀತ ಜ್ಞಾನಮು ಭಕ್ತಿವಿನಾ ಸನ್ಮಾರ್ಗಮು ಗಲದೇ!" ಅನ್ನುತ್ತಾರೆ.


ನನಗೆ ಹಿಡಿಸಿರುವ ಪುರಂದರ ದಾಸರ ಒಂದು ಉಗಾಭೋಗ ಹೀಗಿದೆ:

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಾನೇ ಸ್ವದೇಶಿ ನೀನೇ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ ಪುರಂದರ ವಿಠಲ!

ತ್ಯಾಗರಾಜರು ತಮ್ಮ ಜಿಂಗಲ ರಾಜದ ಕೃತಿಯೊಂದರಲ್ಲಿ ಹೀಗೆ ಹಾಡುತ್ತಾರೆ.

ಪಲ್ಲವಿ:

ಅನಾಥುಡನು ಗಾನು ರಾಮ ನೇ ||ನನಾಥುಡನುಗಾನು ||

ಅನುಪಲ್ಲವಿ:

ಅನಾಥುಡವು ನೀವನೆ ನಿಗಮಜ್ಞುಲ ಸನಾತನುಲ ಮಾಟವಿನ್ನಾವು ನೇ ||ನನಾಥುಡನುಗಾನು||

ಚರಣ:

ನಿರಾದರವು ಜೂಚಿ ಈ ಕಲಿ ನರಾಧಮುಲನೆದರು

ಪುರಾಣಪುರುಷ ಪುರರಿಪುನುತ ನಾಗರಾಜ ಶಯನ ತ್ಯಾಗರಾಜನುತ ನೇ|| ನನಾಥುಡನು ಗಾನು ||


 

ಇದನ್ನೇ ಕನ್ನಡದಲ್ಲಿ ಓದುವ ಹಂಬಲ ನನಗೆ - ಅದಕ್ಕೆಂದು ಇದನ್ನು ಹೀಗೆ ಕನ್ನಡಿಸಿದ್ದೇನೆ.

ಪಲ್ಲವಿ:

ಅನಾಥನಾಗಿಲ್ಲ! ರಾಮ ನಾ ||ನನಾಥನಾಗಿಲ್ಲ ||

ಅನುಪಲ್ಲವಿ:

ಅನಾಥ ನೀನೆಂದು ನಿಗಮಗಳನರಿತ
ಸನಾತನರು ಪೇಳ್ವುದ ಕೇಳಿಹೆ! ನಾ ||ನನಾಥನಾಗಿಲ್ಲ||

ಚರಣ:

ಆದರಿಪರು ಎನಗಿರದೆ ಮನುಜರು ಕಲಿಕಾ-
ಲದಿ ಅನಾಥ ನೀಯೆಂಬರು! ಅ-
ನಾದಿಪುರುಷ ತ್ರಿಪುರಾರಿನುತನ
ಸದಾ ಈ ತ್ಯಾಗರಾಜ ಮಣಿದಿರೆ, ನಾ ||ನನಾಥನಾಗಿಲ್ಲ||

ಇಲ್ಲಿ ಪುರಂದರರು, ಮತ್ತು ತ್ಯಾಗರಾಜರ ಭಾವನೆಗಳ ಹೋಲಿಕೆಗಳು ಎಷ್ಟು ಚೆನ್ನಾಗೆ ಎದ್ದು ತೋರುತ್ತಿವೆ. ಅಲ್ಲವೇ? ಇನ್ನೂ ತ್ಯಾಗರಾಜರ ಬಗ್ಗೆ ಮಂಥನ ಮಾಡುವಂತಹದ್ದು ಬೇಕಾದಷ್ಟಿದೆ. ಸ್ವಲ್ಪವನ್ನಾದರೂ ಪುಷ್ಯ ಬಹುಳ ಪಂಚಮಿಯ ತ್ಯಾಗರಾಜ ಆರಾಧನೆಯ ದಿವಸಕ್ಕೆ ಬಾಕಿ ಇರಿಸಿಕೊಳ್ಳುತ್ತೇನೆ :) ಅಷ್ಟು ದಿನ ಕಾಯಲು ಇಷ್ಟವಿಲಲ್ವೆ? ಇಂಗ್ಲಿಷ್ ನಲ್ಲಿರುವ ಈ ಬರಹವನ್ನು ಓದುತ್ತಿರಿ! ನಿಮಗೆ ಹಿಡಿಸಲೂಬಹುದು!

ಸದ್ಯಕ್ಕೆ ತ್ಯಾಗರಾಜರ ನುಡಿಮುತ್ತಿನೊಂದಿಗೆ ಈ ಬರಹಕ್ಕೆ ಮಂಗಳ ಹಾಡುವೆ - "ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು".

-ಹಂಸಾನಂದಿ
No votes yet
1587 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
rameshbalaganchi's picture
06
Jan
2008
9:27

ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜಉಗಾಭೋಗ ಅನ್ನುವ ಪದ ಯಾವುದಕ್ಕೆ ಅನ್ವಯಿಸುತ್ತದೆ? ಕೃತಿಯ ಸ್ವರೂಪಕ್ಕೋ ಅಥವಾ ಅದರ ತಿರುಳಿಗೋ? ದಯಮಾಡಿ ತಿಳಿಸಿ
aniljoshi's picture
07
Jan
2008
6:24

ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜಹಂಸಾನಂದಿ ಅವರೆ, ಚನ್ನಾಗಿದೆ ನಿಮ್ಮ ನುಡಿನಮನ. ಪುರಂದರದಾಸರು ಮತ್ತು ತ್ಯಾಗರಾಜರ ಕೃತಿಗಳ ಉದಾಹರಣೆಗಳು ಎಸ್.ಕೆ.ರಾಮಚಂದ್ರ ಅವರು ಬರೆದ 'ದಾಸಸಾಹಿತ್ಯ ಮತ್ತು ಸಂಸ್ಕೃತಿ' ಎನ್ನುವ ಪುಸ್ತಕವನ್ನು ನೆನಪಿಸಿತು. ಅನಿಲ
hamsanandi's picture
07
Jan
2008
10:26

ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜಅನಿಲ ಜೋಷಿ, ಮೆಚ್ಚುಗೆಗೆ ಧನ್ಯವಾದಗಳು. ಎಸ್.ಕೆ.ಆರ್ ಅವರ ಈ ಪುಸ್ತಕವನ್ನು ನಾನೂ ಓದಿದ್ದೇನೆ. ವಿ.ಎಸ್.ಸಂಪತ್ಕುಮಾರಾಚಾರ್ಯರ ಪುಸ್ತಕ ( ತ್ಯಾಗರಾಜ-ಜೀವನ-ಸಾಧನೆ ಎಂದೇನೋ ಹೆಸರು ಎಂದು ನೆನಪು) ಸಿಕ್ಕರೆ ಓದಿ. ಚೆನ್ನಾಗಿದೆ. ರಮೇಶರೆ, ಉಗಾಭೋಗ ಎನ್ನುವುದು ಹರಿದಾಸರು ಮಾಡಿರುವ ರಚನೆಗಳಲ್ಲಿ ಒಂದು ಬಗೆ. ಪದ ಮತ್ತು ಸುಳಾದಿಗಳು ಇತರ ಬಗೆಗಳು. ಪದ, ಸುಳಾದಿಗಳಲ್ಲಿ ಪಲ್ಲವಿ-ಅನುಪಲ್ಲವಿ-ಚರಣ ಎಂಬ ಭಾಗಗಳಿರುತ್ತವೆ. ಪದಗಳಲ್ಲಿ ಕಡೇ ಪಕ್ಷ ಒಂದು ಚರಣ ಇರುತ್ತದೆ. ೨೦-೩೦ ಚರಣಗಳಿರುವ ಪದಗಊ ಇವೆ. ಸುಳಾದಿಗಳಿಗೆ ತಾಳದ ರಚನೆ ಹೀಗೇ ಇರಬೇಕು ಎನ್ನುವ ಕಟ್ಟುಪಾಡಿದೆ,ಮತ್ತಲ್ಲದೆ ಚರಣಗಳು ೪-೫-೬-೭ ಸಂಖ್ಯೆಯಲ್ಲೇ ಇರಬೇಕು. ಮತ್ತೆ ಈ ಎರಡೂ ಪ್ರಕಾರಗಳಿಗೂ, ಕವಿತೆಗಳಿಗೆ ಇರಬೇಕಾದ ಪ್ರಾಸ-ಯತಿ ಮೊದಲಾದ ಛಂದಸ್ಸಿನ ಬಂಧವೂ ಇದೆ. ಉಗಾಭೋಗಗಳಿಗೆ ತಾಳದ ಕಟ್ಟು, ಛಂದಸ್ಸಿನ ಹಂಗು ಎರಡೂ ಇಲ್ಲ. ಕೆಲವುಕಡೆ ದ್ವಿತೀಯಾಕ್ಷರ ಪ್ರಾಸ ಕಂಡುಬರುವುದಾದರೂ (ಉದಾಹರಣೆಗೆ, ನಾನು ಮೇಲಿನ ಬರಹದಲ್ಲಿ ಕೊಟ್ಟಿರುವ ನಿನ್ನಂಥ ಸ್ವಾಮಿ ಎನಗುಂಟು ಎನ್ನುವ ಉಗಾಭೋಗ), ಎಲ್ಲ ಉಗಾಭೋಗಗಳಲ್ಲೂ ಅದು ಕಾಣದು. ಹಾಗಾಗಿ, ಅದರ ಅಗತ್ಯ ಇದ್ದೇ ಇದೆ ಎಂಬ ಕಟ್ಟುಪಾಡಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಉಗಾಭೋಗಗಳಲ್ಲಿ ಪಲ್ಲವಿ-ಅನುಪಲ್ಲವಿ ಮೊದಲಾದ ಕೃತಿ ವಿಭಾಗಗಳಿಲ್ಲ. ಇದನ್ನು ಹಾಡುವಾಗಲೂ, ತಾಳವಿಲ್ಲದೇ (ಗಮಕ ವಾಚನ/ಕಾವ್ವ್ಯ ವಾಚನದಂತೆ) ವಿಸ್ತಾರ ಮಾಡಿ ಹಾಡುವುದು ಪದ್ಧತಿ. ಅಲ್ಲದೆ, ಹಾಡುವಾದ, ಉಗಾಭೋಗವೊಂದನ್ನು ಹಾಡಿ, ನಂತರ ಅದರ ಅರ್ಥಕ್ಕೆ- ಮೂಲ ಯೋಚನೆಗೆ ಹೊಂದುವಂತಹ, ದೇವರನಾಮ(ಪದ್) ವೊಂದನ್ನು ಹಾಡುವುದು ರೂಢಿ. ಬರೀ ಉಗಾಭೋಗವೊಂದನ್ನು stand-alone ಹಾಡುವುದನ್ನು ನಾನು ಕೇಳಿಲ್ಲ. ಆದರೆ, ಅದು ಪರಂಪರಾಗತವಾಗಿ ಬಂದದ್ದೇ ಅಲ್ಲವೇ ಎನ್ನುವುದಕ್ಕೆ ನನ್ನಲ್ಲಿ ಉತ್ತರವಿಲ್ಲ. ಉಗಾಭೋಗಗಳಿಗೆ ಅತಿ ಹತ್ತಿರದ ಸಂಬಂಧಿ ಎಂದರೆ ಶಿವ ಶರಣರ ವಚನಗಳು. ಆದರೆ, ನನಗೆ ತಿಳಿದ ಮಟ್ಟಿಗೆ ವಚನಗಳು ಹೇಳುವಂತಹವು (ವಚನ -> ಮಾತು). ಆದರೆ, ಉಗಾಭೋಗಗಳು ಹಾಡುವಂತಹವು (ಹರಿದಾಸ ಪರಂಪರೆಯ ಎಲ್ಲ ರಚನೆಗಳಂತೆ). -ಹಂಸಾನಂದಿ
mahesha's picture
07
Jan
2008
10:51

ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜಚನ್ನಾಗಿದೆ ಗಾನು ಅಂದ್ರೆ ಆಗೆನು/ಆಗನು ಅಂತ ಅಲ್ವ?
muralihr's picture
08
Jan
2008
12:59

ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜಶತಾವಧಾನಿ ಗಣೇಶ್ ಮತ್ತು ವಿದ್ವಾನ್ ಶ೦ಕರ್ ರವರು - ಗೋಖಲೆ ಸ೦ಸ್ಥೆಯಲ್ಲಿ ಪ್ರವಚನ ಮಾಡುತ್ತಿದ್ದಾರೆ, ವಿಷಯ - ತ್ಯಾಗರಾಜ ಸ೦ಗೀತದಲ್ಲಿ ಆಧ್ಯಾತ್ಮ. ತು೦ಬಾ ಚೆನ್ನಾಗಿತ್ತು .. ನೀವು ಬರೆದಿರೋದನ್ನೇ ಅವರು ಹೇಳಿದ್ದೂ..:) ಎ೦ದರೋ ಮಹಾನುಭಾವುಲು... ಮುರಳಿ..
rameshbalaganchi's picture
09
Jan
2008
6:34

ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜವಂದನೆಗಳು ಹಂಸಾನಂದಿಯವರೆ, ಬಹಳ ಚೆನ್ನಾಗಿ ವಿವರಣಾತ್ಮಕ ಉತ್ತರ ನೀಡಿದ್ದೀರಿ. ಉಪಕಾರ ಸ್ಮರಿಸುತ್ತೇನೆ.