ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಬೆಂಗಳೂರು v/s Bangalore
ಇಂದು ಬರುವಾಗ ಎನ್.ಪಿ.ಆರ್ (www.npr.org) ರೇಡಿಯೋನಲ್ಲಿ The World ಕಾರ್ಯಕ್ರಮವನ್ನು ಕೇಳುತ್ತಿದ್ದೆ. ಅಲ್ಲಿ ಬರುವ ದೈನಂದಿನ ರಸಪ್ರಶ್ನೆ (Geo Quiz) ಇದ್ದದ್ದು ಹೀಗೆ:
"This state in south India is bordered by the Arabian sea on the west, and the state of Andhra pradesh on the east. It's capital is the high-tech city of Bengalooru. Besides 50 million people, it is also home to about about 2000 tigers"
ಇದಕ್ಕೆ ಉತ್ತರವನ್ನೇನೂ ನಾನು ಕೊಡಬೇಕಿಲ್ಲ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, npr ನವರು ಕರ್ನಾಟಕವನ್ನು ಕರ್ನಾಟಕವೆಂದೇ, ಬೆಂಗಳೂರನ್ನು ಬೆಂಗಳೂರು ಎಂದೇ ( ಅವರಿಗೆ ಸಾಧ್ಯವಾಗುವಷ್ಟು ಮಟ್ಟಿಗೆ) ಕರೆಯುತ್ತಿದ್ದಾರೆ. ಇದಕ್ಕೆ ಕಾರಣ, ಬರವಣಿಗೆಯಲ್ಲಿ ಅದು Bengalooru ಎಂದು ಬರೆದಿರುವುದೇ ಆಗಿದೆ. ಅದು Bangalore ಎಂದಿದ್ದರೆ, ನಮ್ಮಜ್ಜನಾಣೆ npr ನವರಿಗೇ ಆಗಲಿ, ಇನ್ನಾವ ಬೇರೆ ದೇಶದವರಿಗೇ ಆಗಲಿ, ಅದನ್ನು ಬೆಂಗಳೂರು ಎಂಬ ಸರಿಯಾದ ಹೆಸರಿಂದ ಕರೆಯಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲವೇ?
ಆದರೆ, ನಮ್ಮವರಿಗೇ ಕೆಲವರಿಗೆ ಬೆಂಗಳೂರಿಗೆ Bengalooru ಎಂದು ಬರೆದರೆ ಪಥ್ಯವಾಗುತ್ತಿಲ್ಲವಲ್ಲ? ಇನ್ನು ಕೆಲವರಂತೂ, ಕನ್ನಡ ಮಾತಾಡುವಾಗಲೂ Bangalore ಅಂತಲೇ ಅನ್ನುತ್ತಾರಲ್ಲ! ಇದೇನು ವಿಪರ್ಯಾಸ ಅನ್ನೋಣ?
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 331 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಬೆಂಗಳೂರು v/s Bangalore
"ಕನ್ನಡ ಮಾತಾಡುವಾಗಲೂ Bangalore ಅಂತಲೇ ಅನ್ನುತ್ತಾರಲ್ಲ!"
ಇಂತಿಪ್ಪರಲ್ಲಿ ನಾನೂ ಒಬ್ಬ
.. ಅದೆಪ್ಪೋ ಬಾಯಿಂದ ಬ್ಯಾಂಗಲೊರ್ ಅಂತ ಬಂದುಬಿಡ್ತದೆ.. ಅದೂ ಅಮೆರಿಕೆಯವರೊಡ ಮಾತಿದ್ರೇ, ನಿಕ್ಕುವ ಹಾಗಾಗ್ತದೆ !!
ಈಗೀಗ ಬಲು ಜೋಕೆಯಿಂ 'ಬೆಂಗಳೂರು' ಎಂದು ಹೇಳ್ತೀನಿ
.
ಉ: ಬೆಂಗಳೂರು v/s Bangalore
bengaluru ಮಾಡಿದಾರೆ, ಮಾಡೋದ್ ಮಾಡಿದ್ರು bengalooru ಅಂತ ಮಾಡಿದ್ದಿದ್ರೆ ಅಗದಿ ಪಕ್ಕ ಸರಿ ಇರೋದಲ್ವಾ...
ಉ: ಬೆಂಗಳೂರು v/s Bangalore
ಇವು ನನ್ನ ಪ್ರಯತ್ನ ವಿಲ್ಲದೇ ನನ್ನಿಂದ ಬರುವ ನುಡಿಗಳು.
ಕನ್ನಡದಲ್ಲಿ ಮಾತಾಡುವಾಗ ಬೆಂಗಳೂರು ಅಂತೀನಿ!
ಇಂಗ್ಲೀಷಿನಲ್ಲಿ ಮಾತಾಡುವಾಗ ಬೆಂಗ್ಳೋರ್/ಬೆಂಗ್ ಳೋರ್ ಅಂತೀನಿ.
ಬಹುಶ: ನಮ್ಮ ಸುತ್ತಮುತ್ತಲಿನ ಜನರ ಪ್ರಭಾವ ಇಲ್ಲಿ ಕೆಲಸ ಮಾಡುತ್ತೆ.