ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಸಂಪದ ಬಳಗಕ್ಕೆ ಬಂದಾಗಿನಿಂದ ಹಲವರನ್ನು ನೋಡುತ್ತಾ ಬಂದಿದ್ದೇನೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ವಿಶೇಷ ವ್ಯಕ್ತಿಗಳೇ.
ನನ್ನ ಮಟ್ಟಿಗೆ ಹೇಳುವುದಾದರೆ, ಅಂತರ್ಜಾಲದ ಸಮುದಾಯವೊಂದು ಒಬ್ಬರ ಮನಸ್ಸಿನಲ್ಲಿ, ವ್ಯಕ್ತಿತ್ವದಲ್ಲಿ ತರಬಹುದಾದ ಬೆಳವಣಿಗೆಗೆ ಒಂದು ಉದಾಹರಣೆಯಾಗಿ ಬೆಳೆದಿದೆ ಸಂಪದ. ದೇಶಕಾಲಾತೀತವಾಗಿ, ಕನ್ನಡಿಗರಿಗೆಲ್ಲ ಒಂದೇ ಮನೆ ಎಂಬ ಭಾವನೆ ತರುವುದರಲ್ಲಿ ಗೆದ್ದಿದೆ.
ಆದರೆ ಸಮುದಾಯವೊಂದರ ತಳಹದಿ ಅಲ್ಲಿರುವ ಜನರೇ ಅಲ್ಲವೇ? ಜನರೇ ಇಲ್ಲದೇ ಸಮುದಾಯ ಕಟ್ಟುವುದೆಂತು?
ಅದಕ್ಕೆಂದೇ, ಸಂಪದಕ್ಕೆ ಬರುವ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಇಂದು ಸಲ್ಲಿಸೋಣ ಎನ್ನಿಸಿತು.
ಅಥವಾ, ಇವತ್ತು ತ್ಯಾಗರಾಜರ ನೆನಪಿನ ದಿನವಲ್ಲವೇ (ಜನವರಿ, ೬) ? ಅದಕ್ಕೇ , ಅವರ ಮಾತಿನಲ್ಲಿ ಹೇಳುವುದಾದರೆ
"ಎಂದರೋ ಮಹಾನುಭಾವುದು, ಅಂದರಿಕಿ ವಂದನಮುಲು"
"ಎಲ್ಲೆಲ್ಲೂ ಇರುವ ಮಹಾನುಭಾವರಿಗೆಲ್ಲ ತಲೆಬಾಗಿ ಮಣಿವೆ ನಾನಿಂದು"
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 693 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹಂಸಾನಂದಿ
ಪರಿಚಯ
ಹುಟ್ಬೆಳ್ದಿದ್ದೆಲ್ಲ ಹಾಸ್ನ. ನಾಕಾರ್ಹೊಳೆ ನೀರ್ಕುಡ್ದು ಸದ್ಯಕ್ಕೀಗ್ ಟುಲಾಮಿ ನದೀ ನೀರ್ಕುಡೀತಿದೀನಿ. ನಂಗಿಷ್ಟ್ವಾದ್ ವಿಷಯ್ಗಳ್ಬಗ್ಗೆ ಸುಮ್ನೆ ಬರೀತೀನಷ್ಟೇ. ಮನೆ ಚಿಕ್ದಾಗಿದ್ರೂ ಪರ್ವಾಗಿಲ್ಲ, ಮನಸ್ಸು ದೊಡ್ದಾಗಿರ್ಬೇಕು ಅನ್ನೋದ್ನ ನಂಬ್ತೀನಿ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಸಂಕೇತಿ, ವಿಎಚ್ಡಿಎಲ್ಲ್, ವೆರಿಲಾಗ್ ಇಷ್ಟ್ಭಾಷೆ ಚೆನ್ನಾಗ್ಮಾತಾಡ್ಬಲ್ಲೆ. ಸಂಸ್ಕೃತ, ಮರಾಠಿ ಸಿಸ್ಟಮ್ವೆರಿಲಾಗ್ಮೊದ್ಲಾದ್ಮಾತ್ಗಳೆಲ್ಲ ಇಲ್ಲ ಅನ್ನದ್ಹಾಗ್ಸ್ವಲ್ಸ್ವಲ್ಪ ಬರತ್ತೆ ಬಿಡಿ! ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wordpress.com/



RSS:
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಒಳ್ಳೆಯ ಯೋಚನೆ.
*ಅಶೋಕ್
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
http://www.hariharapurasridhar.blogspot.com
ನಿಜವಾಗಲೂ ಒಳ್ಳೆಯ ಮನಸ್ಸುಗಳು ಒಂದೆಡೆ ಸೇರಿವೆ.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಶ್ರೀಧರ ಅವರೆ,
ಹಾಸನದಲ್ಲಿ ನೀವು ಎಲ್ಲಿದ್ದೀರಿ?
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
http://www.hariharapurasridhar.blogspot.com
ಹಂಸಾನಂದಿ ಯವರೇ,
ನಮಸ್ತೆ, ಹಂಸಾನಂದಿ ನಿಮ್ಮ ಹೆಸರೋ? ಕಾವ್ಯನಾಮವೋ? ಏನದು? ಪರಿಚಯ ಹೆಚ್ಚಾದಾಗ ಹೆಸರು ತಿಳಿದುಕೊಂಡಿದ್ದರೆ ಒಳ್ಳೆಯದು,ಎಂಬುದು ನನ್ನ ಭಾವನೆ.
ಹಾಸನದಲ್ಲಿ ಹೌಸಿಂಗ್ ಬೋರ್ಡ್ ಕೇಳಿದ್ದೀರಲ್ಲಾ? ಅದಕ್ಕೆ ಹೊಂದಿಕೊಂಡಂತೆ ಹೊಯ್ಸಳ ನಗರವೆಂಬ ಒಂದು ಪೋಲೀಸ್ ಕಾಲೊನಿ.ಅದರ ಮುಖ್ಯರಸ್ತೆಯಲ್ಲಿ ನನ್ನ ಮನೆಇದೆ.ಹಾಸನ ಪರಿಚಿತ ವೆಂದು ಕಾಣುತ್ತೆ?
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಶ್ರೀಧರ್ ಆವರೆ,
ನಾನೂ ಕೂಡ ಹಾಸನದವನೆ. ಹಂಸಾನಂದಿ@ಜಿಮೆಯ್ಲ್.ಕಾಮ್ ಗೊಂದು ಸಾಲು ಬರೆಯಿರಿ, ವಿವರವಾಗಿ ಮಾತಾಡೋಣ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಹಂಸಾನಂದಿಗಳೇ
"ಎಲ್ಲೆಲ್ಲೂ ಇರುವ ಮಹಾನುಭಾವರಿಗೆಲ್ಲ ತಲೆಬಾಗಿ ಮಣಿವೆ ನಾನಿಂದು"
ಅಂದ ಹಾಗೆ ರಾಕೇಶ್ ಶೆಟ್ಟಿ ಕೂಡ ಹಾಸನದ ಹುಡುಗ
ರಾಕೇಶ್ ಶೆಟ್ಟಿ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ನನ್ನನ್ನ ಬಿಡಬೇಡ್ರೀ, ನಾನೂ ಮೂಲತಃ ಹಾಸನ್ದವನು
ಸಂಪದ ನಿಜಕ್ಕೂ ಒಂದು ಅದ್ವಿತೀಯ ಸಂಪರ್ಕ, ಮಾಹಿತಿ ಮಾಧ್ಯಮವಾಗಿ ಬೆಳೆದಿದೆ. ಸಂಪದಕ್ಕೂ, ಸಂಸ್ಥಾಪಕ - ನಿರ್ವಾಹಕರಾದ ನಾಡಿಗರಿಗೂ ಅನಂತ ಧನ್ಯವಾದಗಳು
- ಅರವಿಂದ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
http://www.hariharapurasridhar.blogspot.com
ಹಾಸನದಲ್ಲಿ ಎಲ್ಲಿ, ಅರವಿಂದ್?
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಸಾರ್,
ನಾವು ಬೇಲೂರಿನವರು. ಈಗ ಬೆಂಗಳೂರಲ್ಲಿದ್ದೀವಿ.
- ಅರವಿಂದ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಶ್ರೀಧರ್ ಅವರೆ,
ನಾನೂ ಹಾಸನದವನು. ಹಾಸನದಿಂದ ೩ ಗಂಟೆ ದಾರಿ ಚಾರ್ಮಾಡಿಘಾಟಿಯಾಚೆ ಇದ್ದೆ ಮೊದಲು..
ಈಗ ಹಾಸನದಿಂದ ೩ ಗಂಟೆ ದಾರಿ ಈಚೆಗೆ ಇದ್ದೇನೆ.
-ಗಣೇಶ.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
shreedar avare,
Enu mODi maaDibiTree ivarigellaa? ellarU "naanU haasanadavanE, nannannu biDabEDi, naanu haasanadiMda swalpa aachegiddeeni aMtidaare".
naanEnO modalE nimage hELidde "haasana namage tavarUriddaMge" aMta.
'haasanada mahaanubhaavarige, haasanetara mahaanubhaavarige, saMpadada itara mahaanubhaavarigellarigu vaMdanaamulu" haMsaanaMdiyavaru hELidaMte.
ellarigu
"hosavaruShada haardika shubhaashayagaLu"!!!!!
ಧನ್ಯವಾದಗಳು!
ರಸಿಕತೆ - ನನ್ನ ಬ್ಲಾಗ್: ರಂಗುರಂಗಿನರಸಿಕತೆಯಕಡಲು! ಸಂಪದದಲ್ಲಿ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಹಿರಿಯರಿಗೆ ವಂದನೆಗಳು.
ತ್ಯಾಗರಾಜರನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಎಲ್ಲ ಮಹಾನುಭಾವರಿಗೆ ನನ್ನ ನಮಸ್ಕಾರಗಳು.
-ಅನಿಲ್.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಎಂದರೋ ಮಹಾನುಭಾವುಲು ಅಂದರಿಕಿ ನಾ.. ವಂದನಮುಲು
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
"ಶ್ರೀ" ರಾಗದ ಈ ಹಾಡು ಬಲು ಚಂದ. ನೆನಪಿಸಿದಕ್ಕೆ ಧನ್ಯವಾದಗಳು ಹಂಸಾನಂದಿ ಅವರೇ. ಹಾಗೆಯೇ "ಹಂಸಾನಂದಿ" ಎಂಬುದೂ ಒಂದು ರಾಗ ಅಲ್ಲವೇ
ಕಳೆದ ವರ್ಷ ತಿರುವಯ್ಯುರಿಗೆ ನನ್ನ ಚಿಕ್ಕಪ್ಪ ಹೋಗಿದ್ದರು. ೩ ದಿನ ಅಲ್ಲಿ ಇದ್ದು ಸಂಗೀತವನ್ನು ಆಸ್ವಾದಿಸಿದರು (ಪಂಚರತ್ನ ಕೀರ್ತನೆ ಸಹಿತ).
ಎಲ್ಲ ಸಂಪದ ಮಹಾನುಭಾವರಿಗೂ ವಂದನೆಗಳು.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಗುಣವಜ್ಜನ ಸಂಸರ್ಗಾತ್ ಯಾತಿ ಸ್ವಲ್ಪೋಪಿ ಗೌರವಂ
ಎನ್ನುವ ತೆರದಲ್ಲಿ ನಿಮ್ಮಂತ ಪ್ರಾಜ್ಞರ ಭಾಗವಹಿಸುವಿಕೆಯಿಂದ ನಾನು ಕೂಡ ಸಂಪದಿಗ ಎನ್ನಲು ಹೆಮ್ಮೆಯಾಗುತ್ತಿದೆ.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
"ఎందరో మహానుభావులు అందరికి వందనములు" ಎಂದು ಯಾರು ಎಂದರೋ ಅವರಿಗೆ (=ತ್ಯಾಗರಾಜರಿಗೆ, ಆ ಕೀರ್ತನೆಯನ್ನು ಇದುವರೆಗೆ ಹಾಡಿದವರೆಲ್ಲರಿಗೆ, ಆ ಸಾಲನ್ನು ಇಲ್ಲಿ ಬರೆದ ಹಂಸಾನಂದಿಯವರಿಗೆ, ಅದಕ್ಕೆ ಪ್ರತಿಕ್ರಿಯೆ ಬರೆದು ಸಮ್ಮತಿ ವ್ಯಕ್ತಪಡಿಸಿದವರಿಗೆ) ನನ್ನ ವಂದನೆಗಳು.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಎಲ್ಲ ಸಂಪದಿಗರಿಗೂ ವಂದನೆಗಳು, ಅಭಿನಂದನೆಗಳು, ಹೊಸ ವರ್ಷದ (belated) ಶುಭಾಶಯಗಳು!
ಶಾಮಲ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಹಂಸಾನಂದಿ ಅವರೆ,
ಸಂಪದ ನಮಗೆ ಆಪ್ತವಾದದ್ದು. ಇದರಲ್ಲಿ ಮನ ಬಿಚ್ಚಿ ಬರೆಯಲು, ಸ್ನೇಹಿತರ ಭಾವನೆಗಳೊಂದಿಗೆ ಸ್ಪಂಧಿಸಲು ವೇದಿಕೆಯನ್ನು ಕೊಟ್ಟಿದೆ. ಅದಕ್ಕಾಗಿ ನಿಮಗೆಲ್ಲಾ ಕೋಟಿ ನಮನಗಳು.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ನಮ್ಮೆಲ್ಲ ಮನದಾಳದ ಮಾತು, ಭಾವನೆ, ಅನಿಸಿಕೆ, ನಿಲುವುಗಳನ್ನು ಎಲ್ಲ ಸಹೃದಯ ಸ೦ಪದಿಗರೊ೦ದಿಗೆ ಹ೦ಚಿಕೊಳ್ಳುವುದೇ ಒ೦ದು ರಸಮಯ ಅನುಭವ. ಹೌದು ಈ ಸ೦ಪದ ನಮಗೆಲ್ಲ ಒ೦ದು ರೀತಿಯ ಒ೦ದು ಸ೦ಪತ್ತೇ. ಸ೦ಪದದ ಗುಣಮಟ್ಟವನ್ನು ಮಾತ್ರ ಕಾಪಾಡುವ ಹೊಣೆ "ಅನ್ನಿ ಮಹಾನುಭಾವುಲುಕಿ ಉ೦ದಿ"
ಡಾ|| ಜ್ಞಾನದೇವ್ ಮೊಳಕಾಲ್ಮುರು
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಹಂಸಾನಂದಿ,ಹರಿ,ಮಹೇಶ,ವೈಭವ,ಶ್ರೀಕಾಂತ ಮಿಶ್ರಿಕೋಟಿ,ಸೋಮಶೇಖರಯ್ಯ, ವಸಂತಕಜೆ, ಅನಿವಾಸಿ,ಮುರಳಿ,ಹರಿಹರಪುರಶ್ರೀಧರ್,ಆಸುಹೆಗ್ಡೆ,ಕನ್ನಡಕಂದ,ಸವಿತೃ,ಸಂಗನಗೌಡ,ವೆಂಕಟೇಶ,ಸುನಿಲ್,
ಓಂ, ನಾಸೋಮೇಶ್ವರ, ಹರ್ಷವರ್ಧನ, ಜ್ಞಾನದೇವ, ಚಾಮರಾಜ, ಅನಿಲ್, ಅರವಿಂದ್, ಅಶೋಕ್, ಪಾಲಚಂದ್ರ, ನಗೆಸಾಮ್ರಾಟ್,ಶ್ರೀನಿವಾಸ್,ಬಷೀರ್,ಮಾಧವ, ಗುರುಬಾಳಿಗ, ಮರಿಜೋಸೆಫ್, ರೂಪಾ, ಸವಿತಾ, ಕಲ್ಪನ, ಶೈಲಾಸ್ವಾಮಿ,ಪಲ್ಲವಿ,ರೇಖಾ,ಜಯಲಕ್ಷ್ಮೀ,ರಸಿಕತೆ...
ಅಂದರಿಕಿ ವಂದನಮುಲು
ಉಳಿದ ಸಂಪದಿಗರೆಲ್ಲರಿಗೂ,
ಸಂಪದವನ್ನು ಆಸಕ್ತಿಯಿಂದ ಓದುವ ಗಣ್ಯರಿಗೂ ಧನ್ಯವಾದಗಳು.
-ಗಣೇಶ.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ನಿಮಗೂ ಧನ್ಯವಾದಗಳು
ರೂಪ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಈ ಕೀರ್ತನೆಯನ್ನು ಕನ್ನಡಕ್ಕೆ ತರಬಹುದೇ?
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಹಂಸಾನಂದಿಯವರಿಗೆ ಸಂಗೀತ ಸಾಹಿತ್ಯ ಎರಡು ಒಲಿದಿರುವುದರಿಂದ ಅವರೇ ಪ್ರಯತ್ನಿಸಿ ಕನ್ನಡಕ್ಕೆ ತರಬಹುದೇನೋ ಅಲ್ಲವೆ?
ಶೈಲಾಸ್ವಾಮಿ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಪಂಚರತ್ನ ಕೃತಿಗಳಂತಹವನ್ನು ಅನುವಾದಿಸುವುದು (ನನ್ನಂಥವರಿಗೆ) ಬಹಳ ಕಷ್ಟ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಕಾನಿ ಪ್ರಯತ್ನಂ ಚೈ ವಚ್ಚು ಕಾದ ಹಂಸಾನಂದಿಗಾರು.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಮೂರು ದಿನ ಮೌನ ವಹಿಸಿದ್ದೆ.
"ಎಲ್ಲೆಲ್ಲೂ ಇರುವ ಮಹಾನುಭಾವರಿಗೆ ವಂದನೆಗಳು" ಇದಕ್ಕೆ ಹೇಗೆ ಪ್ರತಿಕ್ರಯಿಸಲಿ ಎಂದು ಯೋಚನಾ ಮಗ್ನನಾಗಿ ಬಿಟ್ಟಿದ್ದೆ.
ಪ್ರತಿಕ್ರಯಿಸಿ ಧನ್ಯವಾದ ಅಂತ ಬಾಯಿತುಂಬಾ ಹೇಳಿ ಬಿಟ್ಟರೆ, ನಾನು ನನ್ನನ್ನು ಒಬ್ಬ ಮಹಾನುಭಾವ ಅಂತ ಒಪ್ಪಿಕೊಂಡ ಹಾಗಾಗುತ್ತದೆ.
ಇದಕ್ಕೆ ನನ್ನ ಮನೆಯಾಕೆ ಒಪ್ಪಿಯಾಳೆ?
ಪ್ರತಿಕ್ರಯಿಸದೆ ಸುಮ್ಮನಿದ್ದರೆ, ನಾನು ಒಬ್ಬ ಮಹಾನುಭಾವ ಅಲ್ಲ ಅಂತ ಒಪ್ಪಿಕೊಂಡ ಹಾಗಾಗಬಹುದೇನೋ ಅನ್ನುವ ಯೋಚನೆ.
ಅಲ್ಲದೆ ಎಲ್ಲರ ನಡುವೆ ಧ್ವನಿಯೆತ್ತದೆ, ಎಲ್ಲರೊಂದಿಗೆ ಧ್ವನಿಗೂಡಿಸದೇ ಹಿಂದುಳಿದು ಹೇಡಿಯೆನಿಸಿಕೊಳ್ಳಲೇ?
ಎಲ್ಲಕ್ಕೂ ಮೇಲಾಗಿ, ಇದನ್ನೂ ನನ್ನ ಮನೆಯಾಕೆ ಸಹಿಸಿಯಾಳೆ?
ಕೊನೆಗೂ ಬಂಡು ಧೈರ್ಯ ಮಾಡಿಕೊಂಡು ಸಂಪದಿಗರ ಚಾವಡಿಗೆ ಇಳಿದು ಬಿಟ್ಟಿದ್ದೇನೆ.
ಹಂಸಾನಂದಿಯವರಿಗೆ ಅಲ್ಲದೆ ಇನ್ನಿತರ ಸಾವಿರಾರು ಸಂಪದಿಗರಿಗೆ ನನ್ನ ಕಡೆಯಿಂದಲೂ ಶುಭ ಹಾರೈಕೆಗಳು. ಅಭಿನಂದನೆಗಳು.
೨೦೦೯ರಲ್ಲಿ ಇನ್ನಷ್ಟು ಹೊಸ ಹೊಸ ವಿಷಯಗಳ ಬಗ್ಗೆ, ವಿಚಾರಗಳ ಬಗ್ಗೆ ಮಂಥನ ನಡೆಯಲಿ.
ಸಂಪದಿಗರ ಸಂಖ್ಯೆ ಬೆಳೆಯಲಿ. ಸಂಪದಿಗರೆಲ್ಲಾ ಇನ್ನಷ್ಟು ಕನ್ನಡ ಸಂಪದಿಗರಾಗಲಿ.
-ಆಸು ಹೆಗ್ಡೆ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
"ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು"
ಇದು
"ಎಂದರೋ ಮಹಾನುಭಾವುಡು ಅಂದರಿಕಿ ವಂದನಮುಲು"
ಆಗಬೇಕೇನೋ...?
-ಆಸು ಹೆಗ್ಡೆ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಆಸು ಹೆಗ್ಡೆಯವರಿಗೆ ನಮಸ್ಕಾರ.
ನನಗೆ ತಿಳಿದ ಅಷ್ಟಿಷ್ಟು ತೆಲುಗು ವ್ಯಾಕರಣದಂತೆ
"ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು" ಎನ್ನುವುದೇ ಸರಿ.
ಅರ್ಥ- "ಎಷ್ಟೋ ಮಂದಿ ಮಹಾನುಭಾವರು ಅವರೆಲ್ಲರಿಗೆ ನನ್ನ ವಂದನೆಗಳು"
ನೀವು ಬರೆದಂತೆ "ಎಂದರೋ ಮಹಾನುಭಾವುಡು ಅಂದರಿಕಿ ವಂದನಮುಲು" ಎಂದು ಹೇಳಿದರೆ ಏನಾಗುತ್ತದೆಯೆಂದರೆ
"ಎಷ್ಟೋ ಮಂದಿ ಮಹಾನುಭಾವ. ಅವರಿಗೆಲ್ಲ ನನ್ನ ವಂದನೆಗಳು". ತಪ್ಪಾಗುತ್ತದೆ. ಮಹಾನುಭಾವುಡು ಏಕವಚನ. ಮಹಾನುಭಾವುಲು ಬಹುವಚನ.
(ನನ್ನ ತೆಲುಗು "ಪಾಂಡಿತ್ಯ"(??)ದ ಬಗ್ಗೆ ಆಸಕ್ತರಿಗಾಗಿ- ನಾನು ತೊಂಬತ್ತರ ದಶಕದಲ್ಲಿ ನಾಲ್ಕೈದು ವರ್ಷಗಳ ಕಾಲ ಸಿಕಂದರಾಬಾದ್‌ನಲ್ಲಿ ಉದ್ಯೋಗದಲ್ಲಿದ್ದೆ. ಆಗ ತೆಲುಗು ಅರ್ಥಮಾಡಿಕೊಳ್ಳಲು, ಮಾತಾಡಲು, ಓದಲು, ಬರೆಯಲು ಕಲಿತೆ. ತೆಲುಗು ದಿನಪತ್ರಿಕೆ ’ಈನಾಡು’ ಮತ್ತು ವಾರಪತ್ರಿಕೆ ’ಸ್ವಾತಿ’ ಓದುತ್ತಿದ್ದೆ. ಅದರಲ್ಲಿ ಪದಬಂಧ ತುಂಬುವ ಪ್ರಯತ್ನ ಮಾಡುತ್ತಿದ್ದೆ. ಸಹೋದ್ಯೋಗಿಯೊಬ್ಬರು ಬರೆದುಕೊಟ್ಟ ತೆಲುಗು ಕವಿತೆಯನ್ನು ಆಕಾಶವಾಣಿ ಹೈದರಾಬಾದ್‌ನಲ್ಲಿ ವಾಚಿಸಿದ್ದೆ. ಇದನ್ನು "ಮಹಾ" ಎಂದು ಇಲ್ಲಿ ಹೇಳುತ್ತಿಲ್ಲ. ತೆಲುಗು ವ್ಯಾಕರಣದ ಬಗ್ಗೆ ನೀನ್ಯಾವನಯ್ಯ ಹೇಳೋಕೆ ಎಂದು ಯಾರಿಗಾದರೂ ಪ್ರಶ್ನೆ ಬಂದರೆ (ಸಂಪದದಲ್ಲಿ ಅಂಥವರು ಇಲ್ಲ ಎಂದು ನನ್ನ ಅಂಬೋಣ
ಅವರಿಗೆ ಮೊದಲೇ ಉತ್ತರ ಸಿಗಲಿ ಎಂದು)
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಸತ್ಯಂ ಉದ್ಯೋಗಿಯಾಗಿದ್ರಾ ಹೇಗೆ?
*ಅಶೋಕ್
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಸತ್ಯ(ಮ್)way ಭವವಂತನೆಂದ ಪಾಪಕೋಟಿಯ ಕತೆಯಿದು...
* ಸತ್ಯಮ್way = ನನ್ನ ಕಾರ್ಯಾಲಯಕ್ಕೆ ಹೋಗುವ ದಾರಿಯಲ್ಲಿ ಸತ್ಯಮ್ ಇತ್ತು. ಹಾಗಾಗಿ ನಾನು ಸತ್ಯದ ಹಾದಿ ತುಳಿದವನು.
** ಸತ್ಯಮ್wayಭವ = "ಸತ್ಯಮ್ ಆಫೀಸ್ ಇರುವ ಮಾರ್ಗವಾಗಿಯೇ ಹೋಗಿ" (ಸಿಕಂದರಾಬಾದ್‌ನಲ್ಲಿ ಮೊದಲ ದಿನ ನನ್ನ ಕಾರ್ಯಾಲಯಕ್ಕೆ ಹೋಗುವ ದಾರಿ ಕೇಳಿದಾಗ ದಾರಿಹೋಕರೊಬ್ಬರಿಂದ ಸಿಕ್ಕಿದ್ದ ಸುಸಂಸ್ಕೃತ ಉತ್ತರ ಎಂದಿರಲಿ).
*** ಸತ್ಯಮ್wayಭವವಂತ = "ಸತ್ಯಮ್ ಆಫೀಸ್ ಇರುವ ಮಾರ್ಗವಾಗಿಯೇ ಹೋಗಿ" ಎಂಬ ಮಾತನ್ನು ಕೇಳಿದವನು (= ನಾನು)
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಧನ್ಯವಾದಗಳು ಶ್ರೀವತ್ಸರೇ, ಕಸ್ತೂರಿಯ ಕಂಪಿಗೆ ಜೇನಿನ ಲೇಪನ ಹಚ್ಚಿದ್ದಕ್ಕೆ.
ನನ್ನಲ್ಲಿ ಅನುಮಾನ ಇತ್ತು. ಪೂರ್ಣ ಜ್ಞಾನ ಇದ್ದಿರಲಿಲ್ಲ (ಇಲ್ಲ ಕೂಡ). ಹಾಗಾಗಿ ತಿಳಿದುಕೊಳ್ಳುವ ಇಚ್ಚೆಯಿಂದ ಅಭಿಪ್ರಾಯ ವ್ಯಕ್ತಪಡಿಸಿದೆ.
-ಆಸು ಹೆಗ್ಡೆ
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
’ಎಂದರೋ ಮಹಾನುಭಾವುಲು ಅಂದರಿಕಿ ವಂದನಂ(ಮು)ಲು’ ನನ್ನ ಪ್ರಕಾರ ಎಷ್ಟೋ ಮಹಾನುಭಾವರು ಅಷ್ಟೂ ಜನರಿಗೆ ನನ್ನ ವಂದನೆಗಳು.
ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
http://www.musicindiaonline.com/lr/1/1160/