ಹೀಗೊಂದು ಧನ್ಯವಾದ ಸಮರ್ಪಣೆ
ಇವತ್ತು ಬೆಳಗ್ಗೆ ಶ್ರೀಕಾಂತ ಮಿಶ್ರಿಕೋಟಿಯವರು ಹರಿದಾಸ ಸಂಪದಕ್ಕೆ ನಮ್ಮ ಬಳಿ ಇದ್ದ ಎಲ್ಲ ಪುರಂದರ ದಾಸರ ರಚನೆಗಳನ್ನು ಹಾಕಿ ಆಯಿತು ಅಂತ ಹೇಳಿದಾಗ ಸಿಕ್ಕಾಪಟ್ಟೆ ಖುಷಿಯಾಯಿತು ನನಗೆ. ಶ್ರೀಕಾಂತರಿಗೂ, ಮತ್ತೆ ಈ ಕೆಲಸದಲ್ಲಿ ನೆರವಾದ ಎಲ್ಲ ಸಂಪದಿಗರಿಗೂ ನನ್ನ ಧನ್ಯವಾದಗಳು.
ಈ ಸಂದರ್ಭದಲ್ಲಿ ಇನ್ನೊಬ್ಬರು ಮಹನೀಯರನ್ನು ನಾನು ನೆನೆಯಲೇ ಬೇಕು. ಅವರೇ ಟೊರಾಂಟೋನಲ್ಲಿರುವ ಶ್ರೀ ಲಕ್ಷ್ಮಣ್. ನಾವು ತಿದ್ದುಪಡಿ ಮಾಡಿ ಇಲ್ಲಿ ಹಾಕಲು ಉಪಯೋಗಿಸಿದ್ದು ಅವರು ಕೊಟ್ಟ ಇ-ಟೆಕ್ಸ್ಟ್. ಸಂಗೀತ ರಚನೆಗಳ ಬಗ್ಗೆ ಅತೀವ ಆಸಕ್ತರಾದ ಅವರು ಕರ್ನಾಟಕ ಸಂಗೀತದಲ್ಲಿ ಹಾಡುವ ಹಾಡಿರಬಹುದಾದ, ಹಾಡಬಹುದಾದ ಸಾವಿರಾರು ರಚನೆಗಳನ್ನು e-text ಆಗಿ ತಂದಿದ್ದ್ದಾರೆ. ಶ್ರೀ ಲಕ್ಷ್ಮಣ್ ಅವರು ಕೊಟ್ಟ ದಾಸರ ಹಾಡುಗಳ ಡೇಟಾಬೇಸ್ ಇಂಗ್ಲಿಷ್ ಲಿಪಿಯಲ್ಲಿತ್ತು. ಮತ್ತು ಲಕ್ಷ್ಮಣ್ ಅವರಿಗೆ ಸ್ವತಃ ಕನ್ನಡ ಬರದಿರುವ ಕಾರಣ ಕೆಲವು ತಪ್ಪುಗಳೂ ನುಸುಳಿದ್ದವು. ಆದರೆ, ಈ ಇ-ಟೆಕ್ಸ್ಟ್ ಇದ್ದಿದ್ದರಿಂದ ಕನ್ನಡದಲ್ಲಿ ಟೈಪಿಸುವ ಕೆಲಸ ಎಷ್ಟೋ ಮಟ್ಟಿಗೆ ಸುಲಭವಾಯಿತು ಅಂತ ಹೇಳಬೇಕು.
ಇದರ ಬಗ್ಗೆ ಇನ್ನೊಂದುಚೂರು ವಿವರವಾಗಿ ಇಲ್ಲಿ ಬರೆದಿರುವೆ - ಆಸಕ್ತರು ನೋಡಬಹುದು: http://neelanjana.wo...
-ಹಂಸಾನಂದಿ
- hamsanandi's blog
- Login or register to post comments
- 311 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಹೀಗೊಂದು ಧನ್ಯವಾದ ಸಮರ್ಪಣೆ
ಹರಿದಾಸ ಸಂಪದದ ಕೆಲಸ ಮಾಡಿದ ಹಂಸಾನಂದಿಯವರಿಗೂ, ಶ್ರೀಕಾಂತ್ ಅವರಿಗೂ, ಶೈಲಾಸ್ವಾಮಿಯವರಿಗೂ, ಹರಿ ಅವರಿಗೂ, ಮತ್ತೆಲ್ಲರಿಗೂ ಅಭಿನಂದನೆಗಳು, ಧನ್ಯವಾದಗಳು
ಶಾಮಲ
ಉ: ಹೀಗೊಂದು ಧನ್ಯವಾದ ಸಮರ್ಪಣೆ
ದಾಸರ ಹಾಡುಗಳನ್ನು ಎಲ್ಲರಿಗೂ ದೊರಕುವಂತೆ ಮಾಡಿದ ಎಲ್ಲರಿಗೂ ಧನ್ಯವಾದಗಳು .... ನಂಬಲ್ಲೂ ಭಾಳ ಹಾಡುಗಳು ಇವೆ ...ಟೈಮ್ ಮಾಡ್ಕೊಂಡು ಹಾಕ್ತಿನಿ ....
ಒಂದು ರಿಕ್ವೆಸ್ಟ್... ಹರಿದಾಸ ಸಂಪದದಲ್ಲಿರೋ ಎಲ್ಲಾ ಹಾಡುಗಳನ್ನ ನೊಡೋದ್ ಹೇಗೆ ? ಅಂದ್ರೆ ನಾನು ಎಲ್ಲ ಪೇಜ್ ವಿಸಿಟ್ ಮಾಡ್ದೆ ..ಒಂದು ಲಿಸ್ಟ್ ಥರ ಹಾಡುಗಳ ಪಟ್ಟಿ ಸಿಕ್ರೆ ಯಾವ್ದ್ ಇಲ್ವೊ ಅದನ್ನ ಹಾಕಕ್ಕೆ ಅನುಕೂಲ ಆಗುತ್ತೆ ....
@ಹಂಸಾನಂದಿ ಅವರೆ,
"Thanksgiving, in April!" ಟೈಟಲ್ ಚೆನ್ನಾಗಿದೆ :)