ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೊನ್ನೆ ಯಾರೋ ಕೇಳಿದ್ರು - ಯಾಕೆ ಹಂಸಾನಂದಿ ಅನ್ನೋ ಹೆಸರಲ್ಲಿ ಬರೀತೀಯ ಅಂತ. ಅದಕ್ಕೇ ಹೇಳಿದೆ, ಎರಡು ಕಾರಣ. ಒಂದು ಅದು ಒಳ್ಳೇ ರಾಗ. ಮತ್ತೆ ಇನ್ನೊಂದು ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಈ ರಾಗದ ಹೆಸರಲ್ಲೂ ಬರತ್ತೆ ಅಂತ. ಮತ್ತೆ ಹಾಗಾದ್ರೆ "ಹಂಸನಾದ ಅಂದ್ರೇನು?" ಅಂದ್ರು. ಹ್ಹ ಹ್ಹ - ಅದೂ ಒಂದು ಒಳ್ಳೇ ರಾಗ, ಮತ್ತೆ ಅದರ ಹೆಸರಲ್ಲೂ ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಬರತ್ತೆ ಅಂದೆ.

ಅದಿರಲಿ. ಏನೋ ನೋಡ್ತಿದ್ದಾಗ ಈ ವಿಡಿಯೋ ಸಿಕ್ತು. ನೀವೂ ಕೇಳಿ ಅಂತ ಹಾಕ್ತಿದೀನಿ. ನುಡಿಸಿರೋದು ಕೊಳಲು ಮೇಧಾವಿ ಶಶಾಂಕ್. ಅಂದಹಾಗೆ, ಇವರೂ ಮೊದಲಿಗೆ ನಮ್ಮೂರಿನೋರೇ ಅನ್ನೋದು ನನಗೊಂದು ಹೆಮ್ಮೆಯೇ. ನುಡಿಸ್ತಾ ಇರೋ ರಚನೆ, ಹಂಸನಾದ ರಾಗದಲ್ಲಿರೋ ತ್ಯಾಗರಾಜರ ರಚನೆ - ಬಂಟುರೀತಿಕೊಲುವಿಯವಯ್ಯ ರಾಮ.

 

 

ಹಂಸನಾದವನ್ನು ಕೇಳಿಸಿದಮೇಲೆ, ಹಂಸಾನಂದಿಗೆ ಯಾಕೆ ಮೋಸ ಮಾಡ್ಬೇಕಲ್ವಾ? ಇಲ್ಲಿ ನೋಡಿ, ಸಂಧ್ಯಾರಾಗ ಚಿತ್ರದಿಂದ ’ಈ ಪರಿಯ ಸೊಬಗು’ ಎನ್ನುವ ಪುರಂದರ ದಾಸರ ರಚನೆ. ಹಾಡಿರೋದು ಭಾರತರತ್ನ ಭೀಮಸೇನ ಜೋಶಿ ಮತ್ತು ಡಾ.ಬಾಲಮುರಳೀಕೃಷ್ಣ. ದಕ್ಷಿಣಾದಿ ಮತ್ತು ಉತ್ತರಾದಿ - ಎರಡೂ ಬಗೆಗಳ ಸಮ್ಮಿಳಿತ.

-ಹಂಸಾನಂದಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹಂಸನಾದ

srivathsajoshi's picture

ಹಂಸಾನಂದಿ/ಹಂಸನಾದ/ಹಾಸನದವರೇ,

ಹೆಸರಿನ ವಿಶ್ಲೇಷಣೆ, ಮತ್ತು ವಿಡಿಯೊಗಳಿಗಾಗಿ ಧನ್ಯವಾದ.

ಹಂಸಾನಂದಿ ರಾಗ ಎಂದೊಡನೆ ನನಗೆ ನೆನಪಾಗುವುದು ಸಾಗರಸಂಗಮಂ ಚಿತ್ರದ ಈ ಅದ್ಭುತಗೀತೆ (ಇದೂ ಹಂಸಾನಂದಿ ರಾಗದಲ್ಲೇ ಇದೆಯೋ ಇಲ್ಲವೋ ನನಗೆ ತಿಳಿಯದು, ನೀವು ತಿಳಿಸಿ)

ವೇದಂ ಅಣುವಣುವುಲ ನಾದಂ
ವೇದಂ ಅಣುವಣುವುಲ ನಾದಂ
ನಾ ಪಂಚಪ್ರಾಣಾಲ ನಾಟ್ಯ ವಿಯೋಗಂ
ನಾಲೋ ರೇಗೇ ಎನ್ನೋ ಹಂಸಾನಂದಿ ರಾಗಾಲೈ...
ವೇದಂ ಅಣುವಣುವುಲ ನಾದಂ...

ಹಾಡಿನ ವಿಡಿಯೋ ಇಲ್ಲಿದೆ.

ಉ: ಹಂಸನಾದ

hamsanandi's picture

ಹೌದು - ಈ ಹಾಡು ಹಂಸಾನಂದಿ ರಾಗದಲ್ಲೇ ಇದೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಹಂಸನಾದ

hariharapurasridhar's picture

ಹಂಸಾನಂದಿಯವರೇ,
ಹಾಡು ಕಟ್ ಆಗುತ್ತಲ್ಲಾ?
ಅಂತೂ ಹಾಡು ಕೇಳಿಸಿದ್ದಕ್ಕೆ ಧನ್ಯವಾದಗಳು.

ಹರಿಹರಪುರಶ್ರೀಧರ್

ಉ: ಹಂಸನಾದ

nkumar's picture

ಅಣ್ಣಾವ್ರು ಹಾಡಿದ "ನಾದಮಯ"ದ ಕೊನೆಯ ಸ್ವರಗಳು (ಸನಿದಮಗಮ ದಾಮಗರಿನಿರಿಸ....) ಹಂಸಾನಂದಿ ರಾಗದಲ್ಲಿ ಇದೆ ಅಲ್ಲವೇ?

-- ನಂದಕುಮಾರ

ಉ: ಹಂಸನಾದ

hamsanandi's picture

ನನ್ನ ನೆನಪಲ್ಲಿರುವಂತೆ, ಹೌದು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಹಂಸನಾದ

anil.ramesh's picture

"ಹಂಸನಾದ" ಮತ್ತು "ಹಂಸಾನಂದಿ" ರಾಗಗಳಲ್ಲಿರುವ ರಚನೆಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

-ಅನಿಲ್.

ಉ: ಹಂಸನಾದ

benaka's picture

ಹಂಸಾನಂದಿ ಎಂದೊಡನೆ ಇಂದು ನನಗೆ ಫಕ್ಕನೆ ನೆನಪಾಗಿದ್ದು

ಪಡೆಯಪ್ಪ ಚಿತ್ರದ "ಮಿನ್ಸಾರ ಕಣ್ಣ, ಎನ್ ಮನ್ನಾ..." (ಶ್ರೀನಿವಾಸ್ ಹಾಗೂ ನಿತ್ಯಶ್ರೀ ಮಹದೇವನ್) ಹಾಡು.
ಅಲ್ಲಲ್ಲಿ "ವಸಂತ" ರಾಗ ಹಾಗೂ "ಸುನಾದವಿನೋದಿನಿ" ರಾಗದ ಛಾಯೆ, ಛಾಪು ಮೂಡುವಂತೆ ನಿತ್ಯಶ್ರೀ ಹಾಡಿರುವ
ಶೈಲಿ ಅತ್ಯದ್ಭುತ! ಮೊದಲ ಬಾರಿ ನಾನಿದನ್ನು ಕೇಳಿದ್ದೂ ಜಪಾನಿನ ರಜನೀಕಾಂತ ಅಭಿಮಾನಿಸಂಘ ನನಗೆ ಸದಸ್ಯತ್ವ ನೀಡಿ
ಉಡುಗೊರೆಯಾಗಿ ಕೊಟ್ಟ ಸಿ.ಡಿ.ಯಲ್ಲಿ!!! ಆದರೆ, ಯಾವುದೋ ಕವಿಸಮಯದ ಕನಸು ಕಂಡಿದ್ದ ನನಗೆ ಚಿತ್ರ ನೋಡಿ ನಿರಾಸೆಯಾಯಿತು!
ಆದರೆ ನಿತ್ಯಶ್ರೀ ಕಂಠಸಿರಿಯ ಪರಿಚಯವಾದದ್ದು ಇದರಿಂದಲೇ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

ಉ: ಹಂಸನಾದ

manjunath s reddy's picture

ನನಗೆ ರಾಗದ ವಿಶೇಷತೆಗಳ ಬಗ್ಗೆ ಅರಿವಿಲ್ಲ.. ಆದ್ರೆ ಇಬ್ಬರು ಗಂದರ್ವರು ಒಂದೇ ಹಾಡಿನಲ್ಲಿ ಹಾಡಿರೋದು ಗೊತ್ತಿರಲಿಲ್ಲ..
ಸಾಗರಸಂಗಮಂ ಹಾಡು ಮತ್ತು ಪಡೆಯಪ್ಪ ಚಿತ್ರದ ಹಾಡು ಇದೇರಾಗದಲ್ಲಿ ಇರೋದು ತಿಳಿದು ಖುಷಿಯಾಯಿತು.. ಇವು ನನ್ನ ಮೆಚ್ಚಿನ ಹಾಡುಗಳು..
ಹಂಸಾನಂದಿ ಯವರಿಗೆ, ಶ್ರೀವತ್ಸಜೋಶಿಯವರಿಗೆ,ಬೆನಕರವರಿಗೆ ನನ್ನೀ. :)
manjunath s reddy

ಉ: ಹಂಸನಾದ

hamsanandi's picture

ಬೆನಕರೆ,
ಈ ಪಡೈಯಪ್ಪ ಸಿನೆಮಾ ಹಾಡು ಕೇಳಿಲ್ಲ ನಾನು - ಹುಡುಕಿ ನೋಡ್ತೀನಿ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಹಂಸನಾದ

rasikathe's picture

idaralli e-pariya sobagu, (uttaraadi, dakShiNaadi aMdare, hiMdustaani, karnaaTak music shaili aMtaayita? ) haagaadare, haMsanaadi hiMdUstaani yallU pramukhvaagi haaDtaraa? (kelavu raagaLaMte, kalyaaNi, Bhiravi?

video clips ge dhanyavaadagaLu.

ಧನ್ಯವಾದಗಳು!
ರಸಿಕತೆ - ನನ್ನ ಬ್ಲಾಗ್: ರಂಗುರಂಗಿನರಸಿಕತೆಯಕಡಲು! ಸಂಪದದಲ್ಲಿ

ಉ: ಹಂಸನಾದ

Pavan's picture

ಮೀನಾವ್ರೇ

ನನಗೆ ತಿಳಿದಿರುವಂತೆ ಹಿಂದೂಸ್ಥಾನಿಯಲ್ಲಿ ಹಂಸಾನಂದಿಯ equivalent 'ಪೂರಿಯಾ' ರಾಗವಾಗುತ್ತೆ.

ಉ: ಹಂಸನಾದ

hamsanandi's picture

ಹಂಸಾನಂದಿಗೆ ಹತ್ತಿರವಾದ ಹಿಂದೂಸ್ತಾನಿಯ ರಾಗ ಅಂದರೆ ಸೋಹಿನಿ- ಸ್ವರಗಳು ಪೂರಿಯಾದಲ್ಲೂ ಅದೇ ಇದ್ದರೂ, ಅದರ ಒಟ್ಟಾರೆ ರೂಪ ಬೇರೆ.

ಉ: ಹಂಸನಾದ

shylaswamy's picture

ಪ್ರಿಯ ಹಂಸಾನಂದಿಯವರೇ,
ತಮ್ಮ ಪೆನ್ ನೇಮ್ ಬಗ್ಗೆಯ ವಿವರಣೆ ಮಜವಾಗಿದೆ. ತಮಗೆ ಹಾಸನದ ಮೇಲಿನ ಅಭಿಮಾನ ಚೆನ್ನಾಗಿ ವ್ಯಕ್ತವಾಗುತ್ತದೆ. ಜೊತೆಗೆ ರಾಗಗಳ ಹೆಸರು ಆಗಿರೊದು ನೀವು ನಿಮ್ಮ ಸಂಗೀತ ಮತ್ತು ತವರೂರಿನ ಪ್ರಿತಿಗಳನ್ನು ಬೆರೆಸಿ ಸವಿಯಾದ ರಸಾಯನ ತಯಾರಿಸಿದಂತಿದೆ.
ಆದರೆ ವೀಡಿಯೋ ಕೇಳಲಾಗಲಿಲ್ಲ. "Sorry, this video is no longer available" ಎಂದು ಬಂತು. ಆದರೆ ‘ಬಂಟುರೀತಿ’ ಕೃತಿಯನ್ನು ಮತ್ತು ಸಂಧ್ಯಾರಾಗ ಸಿನಿಮಾ ಹಾಡನ್ನು ಸಾಕಷ್ಟು ಸಲ ಕೇಳಿರುವುದರಿಂದ ಮತ್ತೆ ಬೇರೆ ಕಡೆ ಕೇಳಲು ಸಾಧ್ಯವೂ ಇರುವುದರಿಂದ ಪರವಾಗಿಲ್ಲ, ತುಂಬಾ ನಿರಾಶೆ ಆಗಲಿಲ್ಲ.
ಶೈಲಾಸ್ವಾಮಿ