19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪರೋಪಕಾರ

July 9, 2010 - 6:31am
hamsanandi

ಅರಳಿಸುವ ತಾವರೆಗಳ ಆ ನೇಸರ
ಬಿರಿಯಿಸುವ ನೈದಿಲೆಗಳನು ಚಂದಿರ
ಕೋರದೇ ಮಳೆಸುರಿಸೀತು ಮುಗಿಲು
ಹೆರವರೊಳಿತ ತಾವೇ ನಡೆಸುವರಗ್ಗಳರು

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಪದ್ಮಾಕರಂ ದಿನಕರೋ ವಿಕಚೀಕರೋತಿ
ಚಂದ್ರೋ ವಿಕಾಸಯತಿ ಕೈರವಚಕ್ರವಾಲಮ್

ನಾಭ್ಯಾರ್ಥಿತೋ ಜಲಧರೋSಪಿ ಜಲಂ ದದಾತಿ
ಸಂತಃ ಸ್ವಯಂ ಪರಹಿತೇ ನಿಹಿತಾಭಿಯೋಗಾಃ

पद्माकरं दिनकरो विकचीकरोति

चन्द्रो विकासयति कैरवचक्रवालम्
नाभ्यर्थितो जलधरोऽपि जलं ददाति
सन्तः स्वयं परहिते निहिताभियोगाः ॥

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Shrikantkalkoti on

ಹಂಸಾನಂದಿ ಯವರೇ
ಸುಂದರವಾದ ಅನುವಾದ..

ಸಂಸ್ಕೃತ ಮೂಲದ ಅರ್ಥ ತಿಳೀತು..ಆದರೆ ಈ ಕೊನೆಯ ಸಾಲಿನ ಶಬ್ದಗಳನ್ನು ಸ್ವಲ್ಪ ಬಿಡಿಸಿ ಹೇಳುವಿರಾ?
>ಹೆರವರೊಳಿತ< > ನಡೆಸುವರಗ್ಗಳರು<

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

<ಹೆರವರೊಳಿತ>
ಪರರ ಒಳಿತನ್ನು

<ನಡೆಸುವರಗ್ಗಳರು>
ಮಾಡುವರು ದೊಡ್ಡವರು
(ಅಗ್ಗಳ = ದೊಡ್ಡವ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shrikantkalkoti on

ಧನ್ಯವಾದಗಳು ಸುರೇಶರೆ
ಈ ಪದಗಳು ನನಗೆ ಹೊಸವು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಅಸು ಹೆಗ್ಡೆಯವರೆ,

ನನ್ನ ಪರವಾಗಿ ಶ್ರೀಕಾಂತರಿಗೆ ಕೊಟ್ಟ ಉತ್ತರಕ್ಕಾಗಿ ಧನ್ಯವಾದಗಳು :)

ಆದಷ್ಟೂ ಅಚ್ಚಕನ್ನಡದ ಪದಗಳನ್ನೇ ಬಳಸಬೇಕೆಂದು ಸ್ವಲ್ಪ ಯತ್ನಿಸಿ ಬರೆದಿದ್ದಿದು.

-ಹಂಸಾನಂದಿ

ಕೊ: ಚಂದಿರ ಅನ್ನುವ ಪದ ಕನ್ನಡ/ತಮಿಳು ಮೂಲದ್ದೇ, ಅದೇ ಸಂಸ್ಕೃತಕ್ಕೆ ಹೋಗಿ ಚಂದ್ರ ಆಗಿದೆ ಅಂತ ಹೇಳುವ ವಾದವೂ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ನಮೋ ಎನುವೆ ಸುರಸುಂದರ ಸುಭಾಷಿತದ ಪರಿಚಯಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಧನ್ಯವಾದಗಳು. ನಾನೂ ಈ ಸುಭಾಷಿತವನ್ನು ಓದಿದ್ದು ಇದೇ ಮೊದಲು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gvmt on

ಈ ಕ್ರಿಯಾಪದದ ಬಗ್ಗೆ ಕೊಂಚ ವಿವರಿಸುವರಾ? ಯಾವ ಧಾತು? ನಿಷ್ಪತ್ತಿ ಹೇಗೆ? ಈ ರೀತಿಯ ಪ್ರಯೋಗವನ್ನು ನಾ ಕಂಡದ್ದು ಇದೆ ಮೊದಲು. ಥ್ಯಾಂಕ್ಸು.

- ವೆಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ವೆಂಕಟೇಶಮೂರ್ತಿ ಅವರೆ,

ಕೊಲೊನ್ ನಿಘಂಟು ಹೀಗೆ ಹೇಳುತ್ತದೆ:

2 vikaca 2 mfn. ( %{kac} ; for 1. see p. 949 , col. 3) opened , blown Hariv. Ka1v. &c. ; shining , resplendent , brilliant , radiant with (comp.) MBh. Ka1v. &c. ; %{-zrI} mfn. having radiant beauty Ka1v. ; %{-cA7nana} mf(%{A})n. with a radiant face Katha1s. ; %{-cA7lambA} f. N. of Durga1 L

http://www.sanskrit-...

ನಾನೂ ಕೂಡ ಈ ಮೊದಲು ಈ ಪದವನ್ನು ಕೇಳಿರಲಿಲ್ಲ. ಅರಳಿಸು ಅನ್ನುವುದರ ಜೊತೆಗೆ ಮೆರುಗು ತರಿಸುವುದನ್ನೂ ಈ ಪದ ಸೂಚಿಸುವಂತೆ ಕಾಣುತ್ತದೆ ( ವಿಕಾಸ ಕ್ಕೆ ಹೋಲಿಸಿದರೆ). ಆದರೆ ನಾನು ಕನ್ನಡಿಸುವಲ್ಲಿ ಅದನ್ನು ಅಷ್ಟು ಚೆನ್ನಾಗಿ ತರಲಾಗಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.