ಇನ್ನೇನು ೦೮-೦೮-೦೮ ಬಂದಾಯ್ತು. ಈ ಎಂಟು ಅನ್ನೋ ಅಂಕೆ ನಮ್ಮೂರಲ್ಲಿ ಬಹಳ ಇರೋ ಚೀನೀಯರಿಗೆ ಬಹಳ ಆಗಿಬರೋ ಅಂಕೆಯಂತೆ. ಅದಕ್ಕೇ ಇಲ್ಲಿ ಮನೆ ಮಾರೋವಾಗ ಕ್ರಯವನ್ನ $೮೮೮,೮೮೮ ಅಥ್ವಾ $೬೦೮,೮೮೮ ಇನ್ನು ಮುಂತಾಗಿ ಹಾಕಿರೋದುಂಟು. ಅದೇ ಏಕೆ, ಇನ್ನೇನು ಬೀಜಿಂಗ್ ನಲ್ಲಿ ಶುರುವಾಗೋ ಒಲಂಪಿಕ್ಸ್ ಕೂಡ, ಆಗಸ್ಟ್ ೦೮, ೨೦೦೮, ಇವತ್ತು ಈ ಗಳಿಗೇಲಿ ಶುರು ಆಗೋದಕ್ಕೆ ಈ ಮೂರೆಂಟರ ಮಹಿಮೆಯ ಬಗ್ಗೆ ಚೀನೀಯರಿಗಿರುವ ನಂಬುಗೆಯೇ ಕಾರಣ ಅನ್ನಬಹುದು!
ಒಂದೆರಡು ದಿನದ ಹಿಂದೆ ರೇಡಿಯೋಲಿ ಕೇಳಿದ ಮಾತಿದು. ಶುಕ್ರವಾರ ೦೮-೦೮-೦೮ ರಂದು ಮದುವೆಯಾಗಬೇಕೆಂದು ಬಂದಿರುವ ಅರ್ಜಿಗಳು ಮಾಮೂಲಿಗಿಂತ ಮೂರುನಾಕರಷ್ಟು ಹೆಚ್ಚಿಗೆ ಇವೆಯಂತೆ.
ಎಂಟರ ನಂಟಿಂದ, ಈ ದಿನ ಮದುವೆಯಾದ ಜೋಡಿಗಳಿಗೆ ತಮ್ಮ ನಂಟು ಕರದಂಟಿನಷ್ಟು ಸವಿಯಾಗಿರಲಿ ಅನ್ನುವ ಆಸೆಯುಂಟೇನೋ ಅವರಿಗೆ.
ಹೀಗೂ ಉಂಟೇ ಎನ್ನಲೇ?
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 329 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಲೇಖಕರು
ಪೂರ್ಣ ಹೆಸರು
ಹಂಸಾನಂದಿ
ಪರಿಚಯ
ಹುಟ್ಬೆಳ್ದಿದ್ದೆಲ್ಲ ಹಾಸ್ನ. ನಾಕಾರ್ಹೊಳೆ ನೀರ್ಕುಡ್ದು ಸದ್ಯಕ್ಕೀಗ್ ಟುಲಾಮಿ ನದೀ ನೀರ್ಕುಡೀತಿದೀನಿ. ನಂಗಿಷ್ಟ್ವಾದ್ ವಿಷಯ್ಗಳ್ಬಗ್ಗೆ ಸುಮ್ನೆ ಬರೀತೀನಷ್ಟೇ. ಮನೆ ಚಿಕ್ದಾಗಿದ್ರೂ ಪರ್ವಾಗಿಲ್ಲ, ಮನಸ್ಸು ದೊಡ್ದಾಗಿರ್ಬೇಕು ಅನ್ನೋದ್ನ ನಂಬ್ತೀನಿ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಸಂಕೇತಿ, ವಿಎಚ್ಡಿಎಲ್ಲ್, ವೆರಿಲಾಗ್ ಇಷ್ಟ್ಭಾಷೆ ಚೆನ್ನಾಗ್ಮಾತಾಡ್ಬಲ್ಲೆ. ಸಂಸ್ಕೃತ, ಮರಾಠಿ ಸಿಸ್ಟಮ್ವೆರಿಲಾಗ್ಮೊದ್ಲಾದ್ಮಾತ್ಗಳೆಲ್ಲ ಇಲ್ಲ ಅನ್ನದ್ಹಾಗ್ಸ್ವಲ್ಸ್ವಲ್ಪ ಬರತ್ತೆ ಬಿಡಿ! ಇಂಗ್ಲಿಷಲ್ಲೇನಾದ್ರೂ ಗೀಚ್ಬೇಕೂನ್ಸ್ದಾಗ ಇಲ್ಬರೀತೀನ್ನೋಡಿ: http://neelanjana.wordpress.com/



RSS:
ಉ: ಎಂಟರ ನಂಟು
ಹಂಸಾನಂದಿಗಳೇ,
ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಇಂದು ಮುಂಜಾನೆ ಎಸ್.ಎಮ್.ಎಸ್ ಬಂದಿತ್ತು...
ಮಾಹಿತಿಗಾಗಿ ನನ್ನಿ...
ಇಂತಿ,
ಅನಿಲ್ ರಮೇಶ್.
ಉ: ಎಂಟರ ನಂಟು
ಇಂತಿ,
ಅನಿಲ್ ರಮೇಶ್.
ಉ: ಎಂಟರ ನಂಟು
ಹಂಸಾ ನಂದಿಯವರೇ
ಏಳು --ಬೀಳು ಅನ್ನೋ ಮಾತಿನಂತೆ ಎಂಟು --ಗಂಟು ಅನ್ನೋ ಮಾತೂ ಬಾಳ ಫೇಮಸ್ಸು!
ನಮ್ಮ "ಎಂಟಿಗೂ" ಚೀನಾದ ನಗುವ ಬುದ್ದನ "ಗಂಟಿಗೂ" ಅದೇನು "ನಂಟು" ಇದೆಯೆಂದು ನೀವೇ ಬರೆಯಬೇಕಾಗಿ ಕೋರಿಕೆ
ಸವಿತೃ
ಉ: ಎಂಟರ ನಂಟು
ವ್ಯವಹಾರಸ್ಥರಿದನ್ನೆಲ್ಲಾ ಹೇಗೆ ಬಳಸಿಕೊಳ್ತಾರೆ ಎನ್ನೋದಕ್ಕೆ ಒಂದು ಉದಾಹರಣೆ:
ಎಲ್ ಐ ಸಿ ಹೊರಡಿಸಿರುವ(ದಲ್ಲಾಳಿಗಳೂ ಹೊರತಂದಿರುವ ಸಾಧ್ಯತೆಯಿದೆ) ಜಾಹೀರಾತಿನಲ್ಲಿ ಈ ಶುಭದಿನ ವಿಮೆ ಮಾಡಿಸಿ,ದೀರ್ಘಾಯುಸ್ಸು ಪಡಯಿರಿ ಅಂತಿದೆ. (ದೀರ್ಗಾಯುಸ್ಸು ಇರೋದಾದ್ರೆ ವಿಮೆ ಯಾಕೆ ಎನ್ನುವ ಪ್ರಶ್ನೆಯೂ ಬರಬಹುದು.)
*ಅಶೋಕ್
ಉ: ಎಂಟರ ನಂಟು
ಹಂಸಾನಂದಿ ಅವರೆ,
ಎಂಟು ಶನಿ ಮಹಾತ್ಮನ ಸಂಖ್ಯೆಯಂತೆ? ಇದು ಅಶುಭ ಸಂಖ್ಯೆಯಂತೆ! ಆದರೆ ಭಾರತೀಯರಿಗೆ.. ಅಷ್ಟ ಮಹಾಸಿದ್ದಿಗಳು, ಅಷ್ಟಾಂಗ ಯೋಗ,ಅಷ್ಟದಿಕ್ಕು, ದಿಕ್ಕ್ಪಪಾಲಕರು ಇರುವುದು ಸತ್ಯ. ಹೀಗಿರುವಾಗ ಎಂಟು ಹೇಗೆ ಅಶುಭ ಅಲ್ಲವೆ!?
ಉ: ಎಂಟರ ನಂಟು
ಎಂಟರ ನಂಟು ನನಗಂತೂ ಆಗಿ ಬರಲಿಲ್ಲ.. ಮೊದಲ ಬಾರಿಗೆ ನನ್ನ ಗಾಡಿಯಿಂದ ಬಿದ್ದು ಕಾಲು ಮುರಿದುಕೊಂಡೆ