24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಜಿಂಕೆ ಕಣ್ಣವಳು ಮಾಡಿದ ತಪ್ಪು

February 10, 2011 - 7:36am
hamsanandi

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿ
ಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವ
ತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರು
ತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಏತಾಶ್ಚಲದ್ವಲಯ ಸಂಹತಿ ಮೇಖಲೋತ್ಥ
ಝಂಕಾರನೂಪುರ ಪರಾಜಿತ ರಾಜಹಂಸ್ಯಃ |
ಕುರ್ವಂತಿ ಕಸ್ಯ ನ ಮನೋ ವಿವಶಂ ತರುಣ್ಯೋ
ವಿತ್ರಸ್ತ ಮುಗ್ಧಹರಿಣೀಸದೃಶೈಃ ಕಟಾಕ್ಷೈಃ ||

-ಹಂಸಾನಂದಿ

ಕೊ: ಪೂರ್ತಿ ಪದಶಃ ಅನುವಾದವಲ್ಲದಿದ್ದರೂ ಭಾವವನ್ನು ಉಳಿಸಿದ್ದೇನೆ ಎಂದುಕೊಂಡಿದ್ದೇನೆ.

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gopaljsr on

ತುಂಬಾ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghumuliya on

ಬಹು ಸೊಗಸಾದ ಶೃ೦ಗಾರಭರಿತ ಗಾನ.ಬರಿಯ ಶತಕವೇಕೆ? ಸಹಸ್ರವಿರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಧನ್ಯವಾದಗಳು.

ಶತಕವೇಕೆಂದರೆ :-) ಭರ್ತೃಹರಿ ಬರೆದಿದ್ದು ನೂರು ತಾನೇ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghumuliya on

ಅದೇ, ಸೊಗಸಾದ ಶತಕ ಬರೆದ ಕವಿ ಸಹಸ್ರ ಬರೆದಿದ್ದರೆ ಚೆನ್ನಾಗಿತ್ತಲ್ಲಾ ಅ೦ದುಕೊ೦ಡೆ.ಹುಡುಕಿ ಉತ್ತಮ ಸಾಹಿತ್ಯವನ್ನು ಹಂಚುತ್ತಿರುವ ನಿಮಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.