ಹಂಸ ನಾದ
ಹಂಸ ನುಡಿದರೆ, ಹಂಸನಾದ!
ದೆಹಲಿ ದೂದ ಹಾಗೂ ನೆನಪುಗಳು!
ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ದಟ್ಸ್ ಕನ್ನಡದಲ್ಲಿದ್ದ ವರದಿಗೂ ಕೊಂಡಿ ಹಾಕಿದ್ರು. ನಾನೂ ಹಿನ್ನಲೆ ಗಾಯನಕ್ಕೆ ಯಾರಿಗೆ ಬಂದಿದೆ ಈ ಸರ್ತಿ ಪ್ರಶಸ್ತಿ ಅಂತ ನೋಡ್ದೆ. ಪಂಜಾಬಿ ಸಿನೆಮಾದಲ್ಲಿ ಗುರುದಾಸ್ ಮಾನ್ ಗೆ ಪ್ರಶಸ್ತಿ ಬಂದಿದೆ! ಆಗ ಹಿಂದೆ ನಮಗೆಲ್ಲ ಟಿ.ವಿ. ಅಂದ್ರೆ ಬರೀ ಹಿಂದಿ ದೂರದರ್ಶನ ಆಗಿದ್ದ ಕಾಲ ನೆನಪಾಯ್ತು. ನಮ್ಮೂರಲ್ಲಿ ಟಿ.ವಿ. ಸ್ಟೇಷನ್ ಶುರುವಾದ ಹೊಸತು. ದಿನಾ ಬೆಳಗೂ ಸಂಜೆ ಬರೀ ಹಿಂದಿ ಅಷ್ಟೆ. ಭಾನುವಾರ ಮಧ್ಯಾಹ್ನ ಒಂದು ಪ್ರಾದೇಶಿಕ ಚಿತ್ರ ಅಂತ ಹಾಕೋರು. ಕನ್ನಡದ ಸರತಿ ಎರಡೋ ಮೂರೋ ತಿಂಗಳಿಗೆ ಒಮ್ಮೆ. ಆದ್ರೆ, ಅದು ಹೇಗೋ ನಮ್ಮ ಮನೆಗೆ ಟಿ.ವಿ.ತಂದ ದಿನವೇ ಕನ್ನಡ ಚಿತ್ರ ಸಂಧ್ಯಾರಾಗ ಬಂದಿತ್ತು. ಅದ್ದ್ಯಾವ್ದೋ ಶ್ರೀವಾಸ್ತವ ಅನ್ನೋ ನಿರ್ವಾಹಕಿ "ಅಬ್ ದೇಖಿಯೇ ಕನ್ನಡ್ ಚಿತ್ರ್ ಸಾಂಧ್ಯ್ ರಾಗ್" ಅಂತ ತಪ್ಪು ತಪ್ಪಾಗಿ ಉಲಿದಿದ್ದಳು. ಈ ಪ್ರಾದೇಶಿಕ ಚಿತ್ರದ ಸಾಲಿನಲ್ಲೇ ಎಷ್ಟೋ ಒಳ್ಳೆ ಮಲೆಯಾಳಮ್, ತಮಿಳು ಚಿತ್ರಗಳನ್ನೂ ನೋಡಿದ ನೆನಪಿದೆ.
ಇದಲ್ಲದೆ, ಟಿ.ವಿ.ಯಲ್ಲಿ ಕನ್ನಡ ಏನಾರೂ ಕೇಳ್ಬೇಕಂತಿದ್ರೆ, ಎರಡುವಾರಕ್ಕೊಂದು ಸಲ ರಾತ್ರಿ ೧೦:೧೦ ಕ್ಕೋ ಏನೋ ( ಅದ್ಯಾಕೆ ಈ ಸಮಯ ಇಟ್ಕೊಂಡಿದ್ರೋ ಗೊತ್ತಿಲ್ಲ, ಬೇರೆ ಭಾಷೆಯವರಿಗೆ ತಾನೇ, ತಡ ಆದ್ರೂ ಕಾಯ್ತಾರೆ ಅಂತಿರ್ಬೋದು), ಚಿತ್ರಮಾಲಾ ಅಂತ ಒಂದು ಕಾರ್ಯಕ್ರಮ. ಅದರಲ್ಲಿ ಹಿಂದಿ ಬಿಟ್ಟು ಬೇರೆಬೇರೆ ಭಾಷೆಯ ಚಿತ್ರಗೀತೆ ಹಾಕೋರು. ಒಂದು ತರಹದಲ್ಲಿ ಈ ಚಿತ್ರಗೀತೆ ಕಾರ್ಯಕ್ರಮಕ್ಕೇ ಪರವಾಗಿಲ್ಲ, ಸ್ಪೆಶಲ್ ಟ್ರೀಟ್‍ಮೆಂಟ್ ಅಂದ್ಕೋಬಹುದು. ಯಾಕಂದ್ರೆ, ತಿಂಗಳಿಗೋ ಎರಡು ತಿಂಗಳಿಗೋ ಬರ್ತಿದ್ದ ಶಾಸ್ತ್ರೀಯ ಸಂಗೀತ ಬರ್ತಾ ಇದ್ದದ್ದು ಇನ್ನೂ ತಡವಾಗಿ - ರಾತ್ರಿ ಹತ್ತೂ ಐವತ್ತಕ್ಕೋ ಏನೋ!
ಸರಿ, ಎಲ್ಲೆಲ್ಲೋ ಹೋಗ್ತಿದೀನಿ. ಇದೆಲ್ಲ ನೆನಪಾಗಿದ್ದು ಗುರ್ದಾಸ್ ಮಾನ್ ನಿಂದ. ಚಿತ್ರಮಾಲ ಅಂತ ಹೇಳಿದ್ನಲ್ಲ, ಅದರಲ್ಲಿ ಒಂದಾದ್ರೂ ಕನ್ನಡ ಹಾಡು ಬರತ್ತಾ ಅಂತ ನಾವೆಲ್ಲ ಕಣ್ಣು ಬಾಯಿ ಬಿಟ್ಕೊಂಡು ಕೂತಿರ್ತಿದ್ವಿ. ತೊಗೋಪ್ಪಾ ಶುರುವಾಗೋದು ಒಂದು ಪಂಜಾಬಿ ಹಾಡು! ಶುರುವಾದರೇ ಮುಗೇವೇ ಒಲ್ದು. ಎರಡು ಚರಣ- ಮೂರು ಚರಣ- ನಾಕು ಚರಣ - ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಪುನಃ ಪೂಜಾಂ ಸಮರ್ಪಯಾಮಿ ಅನ್ನೋ ತರಹ "ಬಲ್ಲೇ ಬಲ್ಲೇ" ಕಾರಗಳೂ ಕೂಡ
ಒಟ್ಟಲ್ಲಿ, ಈ ಗುರುದಾಸ್ ಮಾನ್ ಬಂತು ಅಂದ್ರೆ ರೇಗಿ ಹೋಗ್ತಿತ್ತು. ಈತ ಪಾಪ ಹಾಡೋದೂ ಅಲ್ದೆ ಕುಣೀತಾ ಬೇರೆ ಇರ್ತಿದ್ದ. ಆಗೇನೋ ನನಗೆ ರೇಗ್ತಿತ್ತು - ಆದ್ರೆ ಒಳ್ಳೇ ಗಾಯಕ ಇದ್ರೂ ಇರಬಹುದು ಅಂತ ಈಗ ಅನಿಸ್ತಿದೆ. ಗೊತ್ತಿಲ್ಲ, ಯಾಕಂದ್ರೆ ಅವನ ಕಂಠ ಕೇಳಿ ಅದೆಷ್ಟು ದಿವಸವಾಯ್ತೊ! ಇರ್ಲಿ.
ಇನ್ನು ಅತ್ಯುತ್ತಮ ಗಾಯಕಿ ಅಂತ ಯಾರಿಗೆ ಬಂದಿದೆ ಅಂತ ನೋಡಿದ್ರೆ, ದಟ್ಸಕನ್ನಡದಲ್ಲಿ ಹಾಕಿರೋ ಹೆಸ್ರು "ಆರತಿ ಅಂಕ್ಳೀಕರ್ ಮತ್ತು ಟಿಕೇಕರ್" ಅಂತ! ನೋಡಿ ನಗು ತಡೆಯಕ್ಕಾಗ್ಲಿಲ್ಲ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮದುವೆಯಾದ ಹೆಂಗಸ್ರು ತಮ್ಮ ತಂದೆ ಮನೆ ಹೆಸ್ರು, ಗಂಡನ ಮನೆ ಹೆಸ್ರು ಎರಡನ್ನೂ ಇಟ್ಕೋಳೋದು ಪದ್ಧತಿ ಆಗಿದೆಯಂತೆ. ಹಿಂದಾದ್ರೆ ತವರು ಮನೆ ಹೆಸರು ಬಿಟ್ಟು ಗಂಡನ ಮನೆ ಹೆಸ್ರು ಇಟ್ಕೊಳ್ತಿದ್ರು. ಆರತಿ ಅಂಕ್ಳೀಕರ್ ಅನ್ನೋವ್ರು ಟಿಕೇಕರ್ ಅಂತ ಕೊನೆ ಹೆಸ್ರಿರೋ ಗಂಡನ್ನ ಮದ್ವೆ ಆಗಿ, ತಮ್ಮ ಹೆಸರನ್ನ ಆರತಿ ಅಂಕ್ಳೀಕರ್ ಟಿಕೇಕರ್ ಅಂತ ಮಾಡ್ಕೊಂಡಿದ್ದಾರೆ. ಇದೇ ತರಹ ಅಶ್ವಿನಿ ಭ್ಹಿಡೆ ದೇಶ್ಪಾಂಡೆ ಅಂತಲೂ ಒಬ್ರು ಸಂಗೀತಗಾರ್ತಿ ಇದ್ದಾರೆ. ಅದನ್ನ ದಟ್ಸಕನ್ನಡದವರು "ಆರತಿ ಅಂಕ್ಳೀಕರ್ ಮತ್ತು ಟಿಕೇಕರ್" ಅಂತ ಇಬ್ರ ಹೆಸರಿನ ತರಹ ಮಾಡ್ಬಿಟ್ಟಿದ್ದಾರಲ್ಲಾ! ಇಂದಿರಾ ಗಾಂಧಿನ ಇಂದಿರಾ ಪ್ರಿಯದರ್ಶಿನಿ ಪಂಡಿತ್ ಮತ್ತು ಗಾಂಧಿ ಅನ್ನೋ ಹಾಗೆ!!
ಅದಿರಲಿ - ಆರತಿ ಒಬ್ಬರು ಬಹಳ ಒಳ್ಳೇ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ. ಬಹಳ ಒಳ್ಳೇ ಕಂಠ, ಶೈಲಿ ಎರಡೂ ಇವೆ ಅವರಿಗೆ. ಪುಣೆಯಲ್ಲಿ ಅವರ ಕೆಲವು ಕಚೇರಿಗಳನ್ನ ಕೇಳಿದ ನೆನಪಾಯಿತು. ಆವರಿಗೆ ಈ ಸಲ ಒಂದು ಕೊಂಕಣಿ ಸಿನೆಮಾಗೆ ಪ್ರಶಸ್ತಿ ಬಂದಿದ್ಯಂತೆ.
ಒಟ್ನಲ್ಲಿ ಈ ಸಲ ಪ್ರಶಸ್ತಿ ಬಂದೋರ್ಗೆಲ್ಲ ನನ್ನ ಕಡೆಯಿಂದ್ಲೂ ಒಂದಷ್ಟು ಅಭಿನಂದನೆಗಳು
ಎಲ್ಲಾರ್ಗೂ ಒಳ್ಳೇದಾಗ್ಲಿ!
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 733 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ದೆಹಲಿ ದೂದ ಹಾಗೂ ನೆನಪುಗಳು!
ಹಂಸಾನಂದಿಯವರೆ,
ಹಳೇ ನೆನಪುಗಳು ನಿಮ್ಮಿಂದಾಗಿ ಮರುಕಳಿಸಿದವು.
ದೂರದರ್ಶನ ಪ್ರಾರಂಭದಲ್ಲಿ ಹಾಡುಗಳನ್ನು ಕೇಳಲಿಕ್ಕಾಗಿ ರವಿವಾರ 'ರಂಗೋಲಿ' ಮತ್ತು ಬುಧವಾರ (?)ಚಿತ್ರಹಾರ್ ಗೆ ಕಾಯುತ್ತಿದ್ದೆವು.
ಗುರುದಾಸ್ ಮಾನ್ ಹಾಡು ಕುಣಿತಗಳು, ರೆಮೊ ಹಾಡುಗಳು, ಜಸ್ಪಾಲ್ ಭಟ್ಟಿ ಹಾಸ್ಯಗಳು ಆಗಿನ ಕಾಲಕ್ಕೆ ಹಿಟ್.
ಈಗ ಯೋಚಿಸಿದರೆ ನಗು ಬರುತ್ತದೆ.
-ಗಣೇಶ.
ಉ: ದೆಹಲಿ ದೂದ ಹಾಗೂ ನೆನಪುಗಳು!
ಗಣೇಶ್,
ಹಂಗೆ ಶುಕ್ರವಾರದ ಚಿತ್ರಮಂಜರಿ, ಶನಿವಾರ ಟಿಪ್ಪು ಸುಲ್ತಾನ್, ಭಾನುವಾರದ ಚಂದ್ರಕಾಂತಾ, ಕಾರ್ಟೂನ್-ಗಳಾದ ಡಕ್ಸ್-ಟೇಲ್, ಟೇಲ್-ಸ್ಪಿನ್, ಜಂಗಲ್-ಬುಕ್., ರಾತ್ರಿ ಸುರಭಿ..,
ಇನ್ನೂ ಹಿಂದಕ್ಕೆ ಹೋದ್ರೆ, ಹೀ-ಮ್ಯಾನ್, ಇಂಗ್ಲೀಶ್ ಧಾರಾವಾಹಿಗಳಾದ ನೈಟ್-ರೈಡರ್.... ಇನ್ನೂ ಎಷ್ಟೋಂದು ನೆನಪಿಗೆ ಬರ್ತಿಲ್ಲಾ...
ಆವಾಗ ಟಿ.ವಿ ನೋಡೊದು ಅಂದ್ರೆ ಎಷ್ಟೋಂದು ಮಜಾ ಇತ್ತು.........
ಉ: ದೆಹಲಿ ದೂದ ಹಾಗೂ ನೆನಪುಗಳು!
ಅಲ್ವ? ಬಹಳ ಮಜ ಇರುತ್ತಿತ್ತು ಟಿ ವಿ ನೋಡೋದು. ಈಗ ಬರೇ ಚ್ಯಾನಲ್ ಬದಲಾಯಿಸೋದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದೆಹಲಿ ದೂದ ಹಾಗೂ ನೆನಪುಗಳು!
>>ಈಗ ಬರೇ ಚ್ಯಾನಲ್ ಬದಲಾಯಿಸೋದು.
ಈಗಷ್ಟೇ ಎರಡು ರೌಂಡ್ ಚಾನಲ್ ಬದಲಾಯಿಸಿ,ಯಾವ ಪ್ರೋಗ್ರಾಮ್ ಇಷ್ಟವಾಗದೇ ಎದ್ದು ಬಂದೆ.
ಅದೇ, ಸಂಪದ ನೋಡುತ್ತಿದ್ದರೆ ಟೈಮ್ ಹೋದುದೇ ಗೊತ್ತಾಗುವುದಿಲ್ಲ.
ಇಲ್ಲಿನ ಎಲ್ಲಾ ಬರಹಗಳೂ ಇಷ್ಟವಾಗುವುದು.
-ಗಣೇಶ.
ಉ: ದೆಹಲಿ ದೂದ ಹಾಗೂ ನೆನಪುಗಳು!
ಭಾನುವಾರ ಮಧ್ಯಾಹ್ನದ ಪ್ರಾದೇಶಿಕ ಚಿತ್ರ ಮರೆಯಲಾಗದ್ದು! ನಮ್ಮ ಮನೇಲಿ ನಮ್ಮಪ್ಪ clockworkನಂತೆ ಗೊರಕೆ ಹೊಡೆಯುತ್ತ ರೂಮಿನಲ್ಲಿ ಮಲಗಿರುತ್ತಿದ್ರು. ನಮ್ಮಣ್ಣ ದೂರದ ಮೈದಾನದಲ್ಲಿ ಕ್ರಿಕೆಟ್ ಆಡೋಕ್ ಹೋಗಿರುತ್ತಿದ್ದ. ಅಕ್ಕನಿಗೆ ಈ ಸಿನಿಮಾಗಳ ತಲೆಬುಡ ಅರ್ಥವಾಗುತ್ತಿರಲಿಲ್ಲ. ನಾನು ನಮ್ಮಮ್ಮ ಜೊತೆಗೆ ಕುಳಿತು ನೋಡುತ್ತಿದ್ವಿ. ಬಹಳ ಅರ್ಥಪೂರ್ಣ ಸಿನಿಮಾಗಳು ಪ್ರಸಾರವಾಗುತ್ತಿದ್ವು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದೆಹಲಿ ದೂದ ಹಾಗೂ ನೆನಪುಗಳು!
ಹೌದು - ಮುಳ್ಳುಂ ಮಲರುಂ, ಮುದಲ್ ರ್ಯಾದೈ, ಸೀತಾಕೋಕಚಿಲಕ, ಕಾದತ್ತೈ ಕಿಲಿ೧ಕ್ಕೂಡೈ ಹೀಗೆ ಎಷ್ಟೋ ಒಳ್ಳೆ ಒಳ್ಳೆ ಸಿನಿಮಾ ನೋಡಿದ ನೆನಪಿದೆ.
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ದೆಹಲಿ ದೂದ ಹಾಗೂ ನೆನಪುಗಳು!
ನನಗೆ ತುಂಬ ಇಷ್ಟವಾಗುತ್ತಿದ್ದ ಒಂದು ದೂರದರ್ಶನದ ಕಾರ್ಯಕ್ರಮವೇಂದರೆ, ಅಲಿಫ್ಲ್ಯಲ. ಸೋಮವಾರ ರಾತ್ರಿ ವಾರಕ್ಕೊಮ್ಮೆ ಪ್ರಸಾರವಾಗ್ತ ಇತ್ತು. ನೋಡಲು ಮುದ ಕೊಡ್ತಿತ್ತು.
ಉ: ದೆಹಲಿ ದೂದ ಹಾಗೂ ನೆನಪುಗಳು!
ಸಿಧ್ಧಾರ್ಥಾ ಬಸು’ನ 'national Quiz' ಬರ್ತಾ ಇತ್ತು ನೆನೆಪಿದೆಯ ಭಾನುವಾರ ರಾತ್ರಿ ೯.೦ ಗ೦ಟೆಗೆ?
ಉ: ದೆಹಲಿ ದೂದ ಹಾಗೂ ನೆನಪುಗಳು!
ಅಂದೆಲ್ಲಾ ಹಾಗಿತ್ತು, ಕನ್ನಡ ಕಾರ್ಯಕ್ರಮಗಳಿಗಾಗಿ ಕಾಯುತ್ತಿದ್ದೆವು.
ಈಗ . . . . ಇಂದಿನ ಯುವಜನತೆಗೆ ಕನ್ನಡ ಕಾರ್ಯಕ್ರಮಗಳೇ ಬೇಕಿಲ್ಲ. ಕೇವಲ ಹಿಂದಿ, ಇಂಗ್ಲಿಷ್ ಚಾನೆಲ್ಲುಗಳೇ ಇಷ್ಟ.
ಎಂತಹ ವಿಪರ್ಯಾಸ ಅಲ್ಲವೇ?
ಉ: ದೆಹಲಿ ದೂದ ಹಾಗೂ ನೆನಪುಗಳು!
veena.
ಗುಲ್ ಗುಲ್ಶನ್ ಗುಲ್ಫಾಮ್ , ರಾಮಾಯಣ, ಮಹಾಭಾರತ, ಮನೋರಂಜನ್, ಫಟೀಚರ್, ಕರಮ್ ಚಂದ್, ವ್ಯೋಮ್ಕೇಶ್ ಭಕ್ಷಿ....
ಹಳೆಯ ನೆನಪುಗಳೆಲ್ಲವೂ ಮರುಕಳಿಸಿದವು. ಮತ್ತೆ ಆ ದಿನಗಳೆಂದೂ ಮರಳಿಬಾರವು.
ಉ: ದೆಹಲಿ ದೂದ ಹಾಗೂ ನೆನಪುಗಳು!
ಹ್ಹೋಹೋ.., ಮುಖ್ಯವಾದದ್ದನ್ನೇ, ಎಲ್ಲರೂ ಮರೆತಿದ್ದೀರಿ.............. "ಸರ್ಕಸ್",
ಹಂಗೆ, ಫೌಜಿ, ವಿಜಯ್-ಆನಂದ್ ಅವರ ಪತ್ತೇದಾರಿ(ಹೆಸ್ರು ನೆನಪಿಲ್ಲಾ)...
ಉ: ದೆಹಲಿ ದೂದ ಹಾಗೂ ನೆನಪುಗಳು!
ನುಕ್ಕಡ್
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದೆಹಲಿ ದೂದ ಹಾಗೂ ನೆನಪುಗಳು!
ತೀಸರ ಕೌನ್ ಅನ್ಸುತ್ತೆ
http://thereda-mana.blogspot.com/
ರೂಪ
ಉ: ದೆಹಲಿ ದೂದ ಹಾಗೂ ನೆನಪುಗಳು!
'ರಿಪೋರ್ಟರ್' ಅಂತ ಒಂದು ಪತ್ತೇದಾರಿ ಸೀರಿಯಲ್ ಬರುತ್ತಿತ್ತು. ಶೇಖರ್ ಸುಮನ್ ಅದರಲ್ಲಿ ಪ್ರಮುಖ ಪಾತ್ರದಲ್ಲಿದ್ರು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದೆಹಲಿ ದೂದ ಹಾಗೂ ನೆನಪುಗಳು!
ಈ ಸೀರಿಯಲ್ ನಲ್ಲಿ ಶೇಖರ್ ಸುಮನ್ ಸ್ಟೈಲ್ ಸಕ್ಕತಾಗಿತ್ತು. ಅವ್ನು ಗಾಗಲ್ ಹಾಕೋದು, ಫೀಯಟ್ ಓಡ್ಸೋದು.
ಹಂಗೆ ’ಬ್ರೇಕ್’ ಕೊಡುವಾಗ, ಕ್ಲೋಸ್-ಅಪ್ ನಲ್ಲಿ ಅವ್ನ ಮುಖ ನಿಧಾನಕ್ಕೆ ತಿರುಗೋದು ನಂಗಿನ್ನು ನೆನಪಿದೆ.
ಉ: ದೆಹಲಿ ದೂದ ಹಾಗೂ ನೆನಪುಗಳು!
ರಿಪೋರ್ಟರ್ ಅಂತೂ ತುಂಬಾ ಚೆನ್ನಾಗಿತ್ತು
ಅದರ ಒಂದು ಎಳೆ
ಹೆಂಗಸರನ್ನು ದುಬಾಯಿಗೆ ವೈಶ್ಯಾವಾಟಿಕೆಗೆ ಮಾರುವುದರ ಬಗ್ಗೆ ಇನ್ನೂ ನೆನೆಪಿದೆ
http://thereda-mana.blogspot.com/
ರೂಪ
ಉ: ದೆಹಲಿ ದೂದ ಹಾಗೂ ನೆನಪುಗಳು!
ಅಹುದು ರೂಪಾರವರೆ, ಅದು ತೀಸರಾ ಕೌನ್ ಅಂತ., ಅದ್ರಲ್ಲಿ ಸೌರಭ್ ಶುಕ್ಲಾ(ಡುಮ್ಮ ಅಸಿಸ್ಟಂಟ್)ನ ಪಾತ್ರ ನಂಗೆ ತುಂಬಾ ಹಿಡುಸ್ತಿತ್ತು.
ಉ: ದೆಹಲಿ ದೂದ ಹಾಗೂ ನೆನಪುಗಳು!
ವಿಜಯ್ ಆನಂದ(ದೇವಾನಂದರವರ ಅಣ್ಣ)ರೂ ತುಂಬಾ ಚೆನ್ನಾಗಿ ಪಾತ್ರ ಮಾಡುತ್ತಿದ್ದರು
ಅದರ ಮೊದಲ್ ಎಪಿಸೋಡ್
ಕಂಚ್‌ಗೆ (ಗೋಲಿಗೆ) ಸಂಭಂಧಿತವಾದುದು
ತೀವ್ರ ಕುತೂಹಲ ಕೆರಳಿಸಿತ್ತು
ಈಗಲೂ ಅದರ ಪ್ರತಿಯೋಚು ದೃಶ್ಯ ನೆನೆಪಿದೆ
http://thereda-mana.blogspot.com/
ರೂಪ
ಉ: ದೆಹಲಿ ದೂದ ಹಾಗೂ ನೆನಪುಗಳು!
ಶಾರುಕ್ ಖಾನ್ ನಟಿಸಿದ ಮೊದಲ ಸೀರಿಯಲ್ ಫೌಜಿ, ನಂತರದ್ದು ಸರ್ಕಸ್.
ನುಕ್ಕಡ್ ನ ಗುರು, ಕುಡುಕ,ಪೋಲಿಸ್.. ಸೂಪರ್.
ಹಾಗೇ ಮೃಗನಯನಿ ವಾಹ್. ಸುರುವಾಗುವಾಗ ಹಾಕುವ ಹಾಡು 'ತೋಂತನ ನನ ನನ ದಿತ ನನ..' ಬಹಳ ಚೆನ್ನಾಗಿತ್ತು.
ಉ: ದೆಹಲಿ ದೂದ ಹಾಗೂ ನೆನಪುಗಳು!
ಚಾಣಕ್ಯ?
(ಹಾಗೆಯೇ 'ದಿ ಗ್ರೇಟ್ ಮರಾಠಾ')
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದೆಹಲಿ ದೂದ ಹಾಗೂ ನೆನಪುಗಳು!
ರಾಮಾಯಣ ಬರುವ ಸಮಯದಲ್ಲಿ ಬೀದಿಯಲ್ಲಿ ಜನವೇ ಇರುತ್ತಿರಲಿಲ್ಲ.
NDTV Imagine ನಲ್ಲಿ ಈಗ ಬರುತ್ತಿರುವ ರಾಮಾಯಣ ಬರೀ ಡಲ್.
ಕರಮ್ ಚಂದ್ ನ ಕ್ಯಾರಟ್ ತಿನ್ನುವ ಪಂಕಜ್ ಕಪೂರ್,ಕಿಟ್ಟಿಯನ್ನು ಮರೆಯಲು ಸಾಧ್ಯವಿಲ್ಲ.
ಮಹಾಭಾರತದ ಕೃಷ್ಣ-ಸುಧಾಮ ಎಪಿಸೋಡ್ಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಉ: ದೆಹಲಿ ದೂದ ಹಾಗೂ ನೆನಪುಗಳು!
ಚಂದ್ರಕಾಂತಾನೂ ಆಗಲೇ ಬರುತ್ತಿದ್ದುದು ಅನ್ನಿಸುತ್ತೆ
http://thereda-mana.blogspot.com/
ರೂಪ
ಉ: ದೆಹಲಿ ದೂದ ಹಾಗೂ ನೆನಪುಗಳು!
ದೇಖ್ ಭಾಯ್ ದೇಖ್
ಮೇರಿ ಆವಾಜ್ ಸುನೋ
ಸುಪರ್ ಹಿಟ್ ಮುಕ್ಕಾಬಲ
ಮರ್ಯೋಕೆ ಸಾಧ್ಯಾನಾ?
ಮೇರಿ ಅವಾಜ್ ಸುನೋದಲ್ಲಿ ಹಾಡಿದ್ದ ಸುನೀದಿ ಚೌಧರಿ ಈಗ ಪಾಪ್ ಸಿಂಗರ್ ಸಹಾ ಆಗಿದ್ದಾಳೆ
http://thereda-mana.blogspot.com/
ರೂಪ