ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಆಗಸ್ಟ್ ನಲ್ಲಿ ಏಪ್ರಿಲ್ ಫೂಲ್?

August 11, 2007 - 12:54am — hamsanandi

ಇದೇನು ಓದುಗರನ್ನು ಏಪ್ರಿಲ್ ಫೂಲ್ ಮಾಡುವ ಹೊಸವಿಧಾನವೇ? ಆದರೆ, ಈಗ ಇನ್ನೂ ಆಗಸ್ಟ್ ತಾನೇ? Sad :(

ವಿಜಯಕರ್ನಾಟಕದಲ್ಲಿ ಈ ಸುದ್ದಿ ಪ್ರಕಟವಾಗಿದೆ:

ಆಗಸ್ಟ್ ನಲ್ಲಿ ಏಪ್ರಿಲ್ ಫೂಲ್?

ಜೆಪೆಗ್ ಕೃಪೆ: http://budubudike.blogspot.com/

ಇದೇ ರೀತಿಯ ಅಭಾಸದ ಸುದ್ದಿಯನ್ನು ದಟ್ಸ್ ಕನ್ನಡದಲ್ಲೂ ಓದಿದೆ.

http://thatskannada.oneindia.in/news/2007/08/09/news_bytes.html

ಈ ರೀತಿಯ (ಅ)ವೈಜ್ಞಾನಿಕ ಬರಹಗಳನ್ನು ಏಕಾದರೂ ಬರೆಯುತ್ತಾರೋ ಎನ್ನಿಸಿತು. ಇಂಗ್ಲಿಷ್ ನಿಂದ ಕನ್ನಡಕ್ಕೆ ತರುವಾಗ, ಮೂಲ ಅರ್ಥವನ್ನೇ ನೋಡದೆ ಇದ್ದರೆ ಇಂತಹ ಅನರ್ಥಗಳು ಆಗೇ ಆಗುತ್ತವೆ.

ಮೊದಲು ವಿ.ಕ. ದ ಸುದ್ದಿಯಲ್ಲಿರುವ ಕೆಲವು ತಪ್ಪುಗಳನ್ನು ನೋಡೋಣ:

೧. ಸೌರಮಂಡಲದಲ್ಲಿ ಭೂಮಿಗೆ ೨೦ರಷ್ಟು ದೊಡ್ಡ ಮತ್ತು ಮಂಗಳನ ೧.೭ ರಷ್ಟು ಅತಿ ದೊಡ್ಡ ಗ್ರಹವನ್ನು ಪತ್ತೆ ಮಾಡಲಾಗಿದೆ

ಮಂಗಳ ಭೂಮಿಯ ಸುಮಾರು ಅರ್ಧದಷ್ಟು ದೊಡ್ಡದು - ಅದರ ೧.೭ ಇರುವ ಗ್ರಹ ಭೂಮಿಯ ೨೦ ಪಟ್ಟು ದೊಡ್ಡದು ಹೇಗಾಗುತ್ತೆ?

Jupiter (ಗುರು) ಅನ್ನು ಮಂಗಳ ಮಾಡಿದ ಅನುವಾದಕರಿಗೆ ಏನೆನ್ನೋಣ? ದಟ್ಸ್ ಕನ್ನಡ ದಲ್ಲಿ ಮಂಗಳನ ಪ್ರಸ್ತಾಪ ಇರಲಿಲ್ಲ ಸದ್ಯ Eye-wink

ಸೌರಮಂಡಲ ಎನ್ನುವುದು ಸಾಧಾರಣವಾಗಿ (ನಮ್ಮ) ಸೂರ್ಯನ ಗ್ರಹಗಳ ಕುಟುಂಬಕ್ಕೆ. ಈ ಹೊಸ ಗ್ರಹ ಪತ್ತೆಯಾಗಿರುವುದು ಬೇರೊಂದು ೧೪೦೦ ಬೆಳಕಿನ ವರ್ಷ ದೂರದ ಒಂದು ನಕ್ಷತ್ರದ ಗ್ರಹಪರಿವಾರದಲ್ಲಿ! ಅದು ಯಾವಾಗ ನಮ್ಮ ಸೂರ್ಯನ ಪರಿವಾರ ಅಷ್ಟು ದೂರಕ್ಕೆ ಹಬ್ಬಿತೋ ನಾನರಿಯೆ Sad

೨. ಈ ಗ್ರಹ ನಕ್ಷತ್ರವೊಂದನ್ನು ಹರ್ಕುಲಿಸ್ ಪುಂಜದಲ್ಲಿ ಸುತ್ತುವರೆದಿರುವುದು ಪತ್ತೆಯಾಗಿದೆ

This planet is found revolving around a star in the constellation of Hercules ಎಂಬುದರ ಅನುವಾದವಿರಬೇಕು ಇದು; ಹರ್ಕ್ಯುಲಿಸ್ ಪುಂಜದಲ್ಲಿ ಕಾಣುವ ನಕ್ಷತ್ರವೊಂದನ್ನು ಈ ಗ್ರಹ ಸುತ್ತುತ್ತಿರುವುದು ಪತ್ತೆಯಾಗಿದೆ ಎಂದು ಬರೆದಿದ್ದರೆ ಸ್ವಲ್ಪವಾದರೂ ಅರ್ಥವಾಗುತ್ತಿತ್ತೇನೋ.

ಈ ಗ್ರಹವೇನು ಬಟ್ಟೆಯೇ ಸುತ್ತುವರೆಯುವುದಕ್ಕೆ?

೩. ಪ್ಲೂಟೊ ತನ್ನ ಗ್ರಹದ ಸ್ಥಾನಮಾನವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾದ ೧೯೩೦ರ ಸಂಶೋಧನೆಗೆ ಲೊವೆಲ್ ಖ್ಯಾತಿಹೊಂದಿದ್ದಾರೆ.

Lowell, famous for the 1930 discovery of Pluto, which recently lost its planet status ಎನ್ನುವುದರ ಅನುವಾದವಿರಬಹುದೆ?

೧೯೩೦ ರಲ್ಲಿ ಲೊವೆಲ್ ವೀಕ್ಷಣಾಲಯದಲ್ಲಿ ಪ್ಲುಟೋ ಪತ್ತೆಯಾಯ್ತು. ಅದು ಗ್ರಹದ ಸ್ಥಾನಮಾನ ಕಳೆದುಕೊಂಡಿದ್ದು ೨೦೦೬ರಲ್ಲಿ! ಅದನ್ನು ಪತ್ತೆಮಾಡಿದ್ದು ಲೊವೆಲ್ ಎಂಬ ವ್ಯಕ್ತಿ ಅಲ್ಲ (ಆ ಹೆಸರಿನ ಖಗೋಳಶಾಸ್ತ್ರಜ್ಞನೂ ಇದ್ದ; ಅವದು ನೆಪ್ಚೂನ್ ಗಿಂತ ಹೊರಗೆ ಇನ್ನೊಂದು ಗ್ರಹ ಇರಬೇಕೆಂಬ ಊಹೆ ಮಾಡಿದ್ದ)

ಹೀಗೆ ಬರೆಯುವುದಕ್ಕಿಂತ, ಬರೆಯದಿರುವುದೇ ಲೇಸು ಎನಿಸುತ್ತೆ.

-ಹಂಸಾನಂದಿ

~.~
  • hamsanandi ರವರ ಬ್ಲಾಗ್
  • Login or register to post comments
  • 339 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 11, 2007 - 1:25am — hpn

ಉ: ಆಗಸ್ಟ್ ನಲ್ಲಿ ಏಪ್ರಿಲ್ ಫೂಲ್?

hpn's picture

ಸುದ್ದಿಯ ಅಭಾಸ ಹೊಸತಲ್ಲ. ಮುಂಚೆ ಓದುಗರು ನಂಬುತ್ತಿದ್ದರು, ಈಗ ಅಂತರಜಾಲ ಮತ್ತು ಇತರೆ ರಿಸೌರ್ಸುಗಳಿರುವುದರಿಂದ ಅದಾಗುವ ಸಂಭವ ಅಷ್ಟಿಲ್ಲ.

ದಟ್ಸ್ ಕನ್ನಡದಲ್ಲೊಮ್ಮೆ "ಏಜೆನ್ಸಿ ಸುದ್ದಿ" ಎಂದುಕೊಂಡು ವಿಕಿಪೀಡಿಯ ಹಾಗೂ ವಿಕಿಯ ಎರಡನ್ನೂ ಒಂದೇ ಮಾಡಿಬಿಟ್ಟಿದ್ದರು. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2007 - 8:24am — Sunil Jayaprakash

ಉ: ಆಗಸ್ಟ್ ನಲ್ಲಿ ಏಪ್ರಿಲ್ ಫೂಲ್?

Sunil Jayaprakash's picture

ಚೈ ಕನ್ನಡಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಗಸ್ಟ್ ನಲ್ಲಿ ಏಪ್ರಿಲ್ ಫೂಲ್?
  • ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
  • ಶಂಖನಾದ - ಭಾಗ ಎರಡು
  • ಫಾದರ್ ಸೆರ್ಗಿಯಸ್ (ಟಾಲ್ಸ್‌ಟಾಯ್ ಕಥೆ) - ಓ ಎಲ್ ಎನ್ ಸ್ವಾಮಿ
  • ಇನ್ನೊಂದಿಷ್ಟು , ಮತ್ತೊಂದಿಷ್ಟು ವಿಚಿತ್ರಾನ್ನ ಪುಸ್ತಕ ಲೋಕಾರ್ಪಣೆ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 56 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator