20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ದಿಟವಾದ ಒಲವು

December 10, 2008 - 11:10pm
hamsanandi

ದಿಟವಾಗಿರುವ ಒಲವೆಂಬುದು
ದೂರವಿದ್ದರು  ಕಂಗೆಡದು
ಆಗಸದಿ ಹೊಳೆವ ಚಂದಿರನು
ಚಕೋರಕೆ ತಂಪೆರೆವನು

*ಚಕೋರ ಪಕ್ಷಿಯು ಚಂದ್ರನ ಬೆಳಕಿಗೆ ಕಾಯುತ್ತಿರುತ್ತೆ ಅನ್ನುವುದು ಕವಿಸಮಯ - ಬಸವಣ್ಣನವರ  ’ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ’ ಎನ್ನುವ ವಚನವನ್ನು ನೆನಪಿಸಿಕೊಳ್ಳಿ.

ಸಂಸ್ಕೃತ ಮೂಲ:


ಅಹೋ ಸಾಹಜಿಕಂ ಪ್ರೇಮ ದೂರಾದಪಿ ವಿರಾಜತೇ |
ಚಕೋರ ನಯನದ್ವಂದ್ವಮಾಹ್ಲಾದಯತಿ ಚಂದ್ರಮಾಃ ||

-ಹಂಸಾನಂದಿ

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gurubaliga on
ಹಾಸಣಗಿ ಗಣಪತಿ ಭಟ್ಟರು ಭೈರವಿ ಹಾಡಿದ್ದು ನೆನಪಾಯಿತು. ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ ಅಂಬುಜಕೆ ಭಾನುವಿನ ಉದಯದ ಚಿಂತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಗುರು ಅವರೆ, ಇನ್ನೊಂದೆರಡು ಬಗೆಯಲ್ಲಿ ಈ ವಚನವನ್ನು ಕೇಳಲಿ ಇಲ್ಲಿ ಚಿಟಕಿಸಿ. ರಾಗ ಚಕ್ರವಾಕ (ಅಹಿರ್ ಭೈರವ್)ದಲ್ಲಿ - ಡಾ. ವಸುಂಧರಾ ದೊರೆಸ್ವಾಮಿ ಅವರ ಅಭಿನಯದ ಜೊತೆ: http://tinyurl.com/6... ರಾಗ ಭಟಿಯಾರ್ ನಲ್ಲಿ: http://neelanjana.wo... ಈ ಪುಟದ ಕೊನೆಯ ವಿಡಿಯೋನಲ್ಲಿ. -ಹಂಸಾನಂದಿ ಹರಿದಾಸ ಸಂಪದ:- http://haridasa.in/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shylaswamy on
ಪ್ರಿಯ ಹಂಸಾನಂದಿಯವರೇ, ನಿಜಪ್ರೀತಿಯ ಶಕ್ತಿ ಅಪಾರವಾದುದು. ಹೃದಯಗಳನ್ನು ಹತ್ತಿರ ತರುವುದರಲ್ಲಿ ಸಂಶಯವಿಲ್ಲ. ಶ್ಲೋಕದ ಅನುವಾದ ತುಂಬಾ ಚೆನ್ನಾಗಿದೆ. ಶೈಲಾಸ್ವಾಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.