ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

June 12, 2008 - 7:11am — hamsanandi

ನಾವು ಚಿಕ್ಕವ್ರಿರೋವಾಗ ಯಾವುದೋ ಕಥೆ ಕೇಳ್ತಿದ್ದ ನೆನಪು. ಅದೇನೋ ಹೋಯ್ತು ಅದೇನೋ ಬಂತು ಡುಂ ಡುಂ ಅಂತ ಅದ್ರಲ್ಲಿ ಬರ್ತಿತ್ತು. ಹಾಳಾದ್ದು ಯಾವ ಕಥೆ ಅಂತ ನೆನಪೇ ಆಗ್ತಿಲ್ಲ ನೋಡಿ.

ಇವತ್ತು ನನ್ನ ಒಬ್ರು ಒಳ್ಳೇ ಗೆಳೆಯರೊಬ್ಬರ ಜೊತೆ ಮಾತಾಡ್ತಿದ್ದೆ.

"ನೀವ್ಯಾಕ್ರೀ ನಿಮ್ಮ ಬ್ಲಾಗಿನಲ್ಲಿ ಅದ್ಯಾವ್ದೋ ಚಿತ್ರ ಹಾಕ್ಕೊಂಡಿದೀರಾ? ಅದ್ರದ್ದು ಏನು ಅರ್ಥ" ಅಂದ್ರು.

"ಅದು ಸಿಗ್ನಸ್ ಅಂತ ಒಂದು ಆಕಾಶದಲ್ಲಿ ಕಾಣೋ ರಾಶಿ. ಹಂಗಂದ್ರೆ, ಮೇಷ ವೃಷಭದಿಂದ ಮೀನದ ವರೆಗೆ ಹನ್ನೆರಡೇ ಅಲ್ಲ್ದೆ, ಆಕಾಶದಲ್ಲಿ ಒಟ್ಟು ೮೮  ಕಾನ್ಸ್ಟೆಲ್ಲೇಶನ್ ಗಳಿವೆ. ಅದರಲ್ಲಿ ಇದೂ ಒಂದು. ಅದಕ್ಕೆ ಬೇರೆ ಒಳ್ಳೆ ಕನ್ನಡದ ಪದ ಇಲ್ದೆ ಅದಕ್ಕೂ ರಾಶಿ ಅಂತ ಅಂದೆ. ರಾಜಹಂಸ ಅಂತ ಕನ್ನಡಕ್ಕೆ (ಅಥ್ವಾ ಸಂಸ್ಕೃತಕ್ಕೆ ;)  )ಆನುವಾದ ಮಾಡಿ ಹೇಳಬಹುದು. ಆದ್ರೆ, ಈ ವಿಷಯದಲ್ಲೇನೋ ನನಗೆ ಸಿಗ್ನಸ್ ಅನ್ನೋದೇ ಸೌಕರ್ಯ" ಅಂದೆ.

http://www.sampada.net/image/9240

cygnus

"ಸರಿ, ಅದು ಗೊತ್ತಾಗಿರ್ಲಿಲ್ಲ" ಅಂದ್ರು ಆ ಸ್ನೇಹಿತರು.

"ಅಂದ್‍ಹಾಗೆ, ಸಿಗ್ನಸ್ ಗೆ ನಾರ್ದರ್ನ್ ಕ್ರಾಸ್ ಅಂತ್ಲೂ ಅಂತಾರೆ. ಯಾಕಂದ್ರೆ, ಅದು ಒಂಥರ ಶಿಲುಬೆ ಆಕಾರದಲ್ಲಿದೆ ಅದಕ್ಕೆ. ಇದು ಸಂಜೆ ಕಾಲದಲ್ಲಿ ಆಕಾಶದಲ್ಲಿ ಕಾಣೋದು ಅಂದ್ರೆ ಜುಲೈ ಆಗಸ್ಟ್ ಸೆಪ್ಟೆಂಬರ್ ಗಳಲ್ಲಿ. ಆಗ, ನಮ್ಮ ದೇಶದಲ್ಲಿ ಆಷಾಢ ಶ್ರಾವಣ ಭಾದ್ರಪದಗಳ ಮಳೆಗಾಲ. ಸುಮಾರಾಗಿ ಅರ್ದಂಬರ್ಧ ಮೋಡ ಕವ್ಕೊಂಡಿರತ್ತೆ. ಅದಕ್ಕೇ, ನಮ್ಮ ದೇಶದಲ್ಲಿ ಹಿಂದೆ ನಕ್ಷತ್ರ ವೀಕ್ಷಣೆ ಮಾಡಿ ರಾಶಿ ನಕ್ಷತ್ರ ಅಂತ ಹೆಸರು ಕೊಟ್ಟೋರು ಈ ಸಿಗ್ನಸ್ ಅನ್ನು ಗಮನ್ಸ್ಲಿಲ್ಲ ಅಂತ ಕಾಣತ್ತೆ. ಅದೇ ತರಹ ಪಶ್ಚಿಮದ ದೇಶಗಳಲ್ಲಿರೋ ತರಹ ಬೇಸಿಗೆ ತ್ರಿಕೋನ (summer triangle), ಮಾಗಿ ತ್ರಿಕೋನ (winter triangle) ಗಳನ್ನ ಕೂಡ ನಮ್ಮೋರು ಗಮನಿಸ್ಲಿಲ್ಲ. ಆದ್ರೆ ಎಷ್ಟೋ ವಿಷಯ ಗಮನಿಸಿದ್ದಾರೆ, ಅನ್ನೋದು ನವಗ್ರಹ ಸ್ತೋತ್ರ ಕೇಳಿದ್ರೆ ಗೊತ್ತಾಗತ್ತೆ. ಅಂದ್ರೆ, ವಿಷಯಕ್ಕೆ ಬರ್ತಾ..." ಅಂತ ಏನ್ನೋ ಹೇಳಕ್ಕೆ ಹೊರಟೆ.

ಅಷ್ಟರಲ್ಲಿ, ಅವ್ರು "ಅದು ಸರಿ, ವಿಷಯಕ್ಕೆ ಬರ್ತಾ, ನಾವು  ಪೆನ್-ನೇಮ್ ಬೇಕಾದ್ರೆ ಇಟ್ಟುಕೋಬಹುದು. ಆದ್ರೆ, ಐಡೆಂಟಿಟಿ ಉಳೀಬೇಕು" ಅಂದರು.

ಯೋಚಿಸ್ದೆ. "ಹೌದಲ್ವಾ?" ಅನ್ನಿಸ್ತು.

ಅವ್ರು ಹೇಳಿದ್ದು ತಪ್ಪೇನಿಲ್ಲ.  ಅಲ್ವಾ?

ಅದಕ್ಕೇ ಬದ್ಲಾಯ್ಸಿಬಿಟ್ಟೆ.  ನನ್ನ ಸಂಪದ ಪ್ರೊಫೈಲನ್ನ.

ಹಂಸದ ಚಿತ್ರ ಹೋಯ್ತು. ಮುಖದ ಚಿತ್ರ ಬಂತು. ಡುಂ ಡುಂ :) 

-ಹಂಸಾನಂದಿ

 

  • ಆಕಾಶ
  • ಹರಟೆ
  • ಹೀಗೆ ಸುಮ್ಮನೇ
~.~
  • hamsanandi ರವರ ಬ್ಲಾಗ್
  • Login or register to post comments
  • 585 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2008 - 9:19am — sumanajois

ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

sumanajois's picture

ಈ ಬ್ಲಾಗ್ ಜೊತೆಗೆ ಸಿಗ್ನಸ್ ದೂ ಒಂದು ಫೋಟೋ ಹಾಕಿದ್ರೆ ಚೆನ್ನಾಗಿರ್ತಿತ್ತು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:17am — ahankari

ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

ahankari's picture

ಇದು ಪಂಜೆ ಮಂಗೇಶ ರಾಯರ ಕಥೆ ಕತೆ ಹೆಸರು ನೆನಪು ಬರ್ತಾ ಇಲ್ಲ ..........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:54am — rameshbalaganchi

ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

rameshbalaganchi's picture

ಈ ಕತೆಯ ರೂಪಾಂತರಗಳು ತುಂಬಾ ಇವೆ. ಪಂಜೆ ಮಂಗೇಶರಾಯರು ಬರೆದ ಕತೆಯಲ್ಲಿ ಡುಂ ಡುಂ ಅಂತ ಬರುವುದಿಲ್ಲ. ಅಲ್ಲಿ ಬರುವುದು ಹೀಗೆ
ಕಾಲು ಕೊಟ್ಟು ಬಾಳು ತಂದೆ ಧೈ ಥಕ ಥೈ, ಬಾಳು ಕೊಟ್ಟು ಗಡಿಗೆ ತಂದೆ ಧೈ ಥಕ ಥೈ, ಗಡಿಗೆ ಕೊಟ್ಟು ಎಣ್ಣೆ ತಂದೆ ಧೈ ಥಕ ಥೈ...... ಇತ್ಯಾದಿ.
ಡುಂ ಡುಂ ಬರುವುದು ಒಂದು ಮಂಗನ ಕತೆಯಲ್ಲಿ

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:31pm — Srimatha

ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

Srimatha's picture

ಬಾಲ ಹೋಯ್ತು ಚಾಕು ಬಂತು ಡುಂ ಡುಂ ಡುಂ - ಕೋತಿ ಕತೆ. ಚಾಕು, ಕಬ್ಬು - ಹಿಂಗೇ ಎಕ್ಸ್‌ಚೇಂಜ್ ಆಫರ್ ಕತೆ ಅದು:)) ಪೂರ್ತಿ ಕತೆ ನೆನಪಾಗ್ತಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 5:32pm — Sunil Jayaprakash

ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

Sunil Jayaprakash's picture

ಹಂಸಾನಂದಿಯವರು ಕೇಳಿರಬಹುದಾದ ಕತೆಯಾಗಲೀ, ಪಂಜೆ ಮಂಗೇಶರಾಯರ ಪದ್ಯವಾಗಲೀ ನನಗೆ ಗೊತ್ತಿಲ್ಲ. ಆದರೆ ಅಣ್ಣಾವ್ರು ನಟಿಸಿದ ಒಂದು ಹಾಡಂತೂ ನೆನಪಿದೆ.

Quote:
ಹ್ಮ್.....ಏನೇ ಸುಬ್ಬಿ ತುಂಬಾ ಕೊಬ್ಬಿ, ಗೇಲಿ ಮಾಡಿ, ಕೆಳಕ್ಕೆ ದಬ್ಬಿ, ಕೆಕ್ಕೆ ಕೆಕ್ಕೆ ನೋಡ್ತಿಯಾಕೆ ಹಲ್ಲುಬ್ಬಿ.
ಹೇಏಏಏಏ, ಜೋರು ಮಾಡೋಓಓ, ಜೋರು ಮಾಡೋ ಜಂಭದ ಕೋಳಿ, ಸುಮ್ನೆ ನಿಲ್ಲೆ ಸುಂಟರ್ಗಾಳಿ,
ಥಳುಕ್ಕು ಬಳುಕ್ಕೆಲ್ಲ ಸಾಕಮ್ಮಾ, ಯಾತಕ್ಕಿಂತ ಹಾಳು ವೇಷ ಮಂಗಮ್ಮ...........
ಹ್ಮ್...ಸೀರೆ ಹೋಗಿ ಲುಂಗಿ ಬಂತು, ಲುಂಗಿ ಹೋಗಿ ಪ್ಯಾಂಟು ಬಂತು, ಪ್ಯಾಂಟು ಹೋಗಿ ಚಡ್ಡಿ ಬಂತು ಡುಂ ಡುಂ ಡುಂ......
ಸೀರೆ ಹೋಗಿ ಲುಂಗಿ ಬಂತು, ಲುಂಗಿ ಹೋಗಿ ಪ್ಯಾಂಟು ಬಂತು, ಪ್ಯಾಂಟು ಹೋಗಿ ಚಡ್ಡಿ ಬಂತು ಡುಂ ಡುಂ ಡುಂ.....
ಚಡ್ಡಿ ಹೋಗಿ ಇನ್ನೇನ್ ಬರುತ್ತೋ..."

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 5:33pm — Sunil Jayaprakash

ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

Sunil Jayaprakash's picture

ಮರೆತಿದ್ದೆ, "ರಾಜಹಂಸವನ್ನು" ತೆಗೆದು "ಹಂಸಾನಂದಿಯ" ಪಾಪೆ ಹಾಕಿದ್ದಕ್ಕಾಗಿ ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೈಟೊ ಕಾಫಿ !!! - ೧
  • ಝೆನ ಕಥೆ ೩೬: ಛತ್ರ
  • ಬೇಸ್ತು ಬಿದ್ದ ಪ್ರಸಂಗ
  • ನೀಳ್ಗತೆ
  • ಮುಕ್ತಾಯ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 511 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator