ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

February 14, 2008 - 5:58am — hamsanandi

ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಹಾಗೇ, ಹೊರನಾಡಿನಿಂದ ವಲಸೆ ಬಂದು, ಕನ್ನಡದ ನೆಲದಲ್ಲಿ ನೆಲೆ ನಿಂತು, ಕನ್ನಡಿಗರೇ ಆಗಿಹೋಗಿರುವ ಗುಂಪುಗಳಲ್ಲಿ, ಸಂಕೇತಿಗಳನ್ನು ಎಣಿಸಬೇಕಾಗುತ್ತೆ. ಹೆಚ್ಚಿಗೆ ದಕ್ಷಿಣ ಕರ್ನಾಟಕದ ಹಾಸನ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಊರಿದ ಸಂಕೇತಿಗಳು, ಈಗ ಎಲ್ಲ ಕನ್ನಡಿಗರಂತೆ, ಸರ್ವವ್ಯಾಪಿಗಳಾಗಿದ್ದಾರೆ!

ಪ್ರಖ್ಯಾತ ಸಂಕೇತಿ-ಕನ್ನಡಿಗರ ಸಾಲಿನಲ್ಲಿ, ಸಂಗೀತ ಕಲಾನಿಧಿ ಆರ್.ಕೆ.ಶ್ರೀಕಂಠನ್, ವೈಣಿಕ ಆರ್.ಕೆ.ಸೂರ್ಯನಾರಾಯಣ, ಹಾಡುಗಾರ ಆರ್.ಕೆ. ಪದ್ಮನಾಭ, ಕೊಳಲಿನ ಮಾಂತ್ರಿಕ ಎಸ್.ಶಶಾಂಕ್, ಇಂದಿನ ಯಶಸ್ವಿ ಚಲನಚಿತ್ರ ಸಂಗೀತ ನಿರ್ದೇಶಕ ಮನೋಮೂರ್ತಿ ಮೊದಲಾದವರನ್ನು ಗುರುತಿಸಬಹುದು.

ಸಂಕೇತಿಗಳು ಎಂಬ ಗುಂಪು ತನ್ನ ಮೂಲ ಸ್ಥಾನವನ್ನು ತೊರೆದು, ಕರ್ನಾಟಕಕ್ಕೆ ಬಂದು ನೆಲೆ ನಿಂತಿದ್ದರ ಹಿಂದೆ ಪರಂಪರೆಯಿಂದ ಬಂದ ಕಥೆಯೊಂದಿದೆ.

ತಿಳಿಯುವ ಕುತೂಹಲವಿದೆಯೇ?

ಹಾಗಿದ್ದರೆ ಈ  ಕೊಂಡಿಯಲ್ಲಿ ಅದನ್ನು ಕಥೆಯೊಂದರ ರೂಪದಲ್ಲಿ ಓದಬಹುದು : ಹೀಗೊಬ್ಬಳು ಹೆಂಗಸು

ಓದಿ. ಏನನ್ನಿಸಿತು ಎಂದು ಬರೆಯುವುದನ್ನು ಮರೆಯಬೇಡಿ.

-ಹಂಸಾನಂದಿ

  • ಕಥೆ
  • ಕನ್ನಡ
  • ಚರಿತ್ರೆ
~.~
  • hamsanandi ರವರ ಬ್ಲಾಗ್
  • Login or register to post comments
  • 497 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 14, 2008 - 11:20am — mahesha

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

mahesha's picture

’ಸಂಕಥಾ’ ಎಂಬ ಸಂಕೇತಿ-ಕತೆ-ಹೊತ್ತಗೆ ಇದೆ.. ಅದರಲ್ಲಿ ಕನ್ನಡ ಮತ್ತು ಕನ್ನಡ-ಸಂಕೇತಿ ನುಡಿಗಳಲ್ಲಿ ಕತೆಗಳಿವೆ.. ಓದ್ರಿ ಚನ್ನಾಗಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 11:14pm — hamsanandi

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

hamsanandi's picture

ಮಹೇಶರೆ,

ಈ ಪುಸ್ತಕ ಎಲ್ಲಿ ಸಿಗುತ್ತೆ ಅಂತ ನಿಮಗೆ ಗೊತ್ತೇ? ಗೊತ್ತಿದ್ದರೆ ತಿಳಿಸಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 16, 2008 - 10:40am — mahesha

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

mahesha's picture

ಅದು ಎಲ್ಲಿ ಸಿಕ್ಕತ್ತೇ ಅಂತ ಗೊತ್ತಿಲ್ಲ...

ನಮ್ ಚಿಕ್ಕಪ್ಪನ್ನ ಮನೇಗೇ ಯಾರೋ ಸಂಕೇತಿಗಳು ಬಂದು ಕೊಟ್ಟಿದ್ರಂತೆ.. ತುಂಬಾ ಚನ್ನಾಗಿದೆ ಅಂತ ಅವರು ನಂಗೆ ಓದಕ್ಕೆ ಹೇಳ್‌ದ್ರು.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 11:34am — mahesha

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

mahesha's picture

ಹಂಸಾನಂದಿಗಳೇ...

ನನಗೆ ಇಲ್ಲಿ ಕೊಂಚ ಬೇಜಾರಾಯ್ತು..

ಸಂಕೇತಿಗಳು, ಹೆಬ್ಬಾರ್‍ ಮುಂತಾದ ಕನ್ನಡ ಅಯ್ಯಂಗಾರರು(ಇವರ ತಮಿಳು ತಮಿಳೇ ಅಲ್ಲವಂತೆ Smiling ), ಸ್ಮಾರ್ತ ಕಮ್ಮೆಗಳು(ಇವರ ಮೂಲವೂ ಆಂದ್ರ ಅನ್ನೋ ಮಾತಿದೆ; ಬಸವಣ್ಣ ಈ ಗುಂಪಿಗೆ ಸೇರಿದವರಂತೆ), ಕೆಲವು ರೆಡ್ಡಿಪಂಗಡಗಳು ಹುಟ್ಟುಗನ್ನಡಿಗರೇ!!

ಅವರು ಹುಟ್ಟು ಇರೋದು ಕನ್ನಡದಲ್ಲೇ( ಕನ್ನಡ ಅಂದ್ರೆ ಕನ್ನಡ ನೆಲ ಕೂಡ )!!

ಸೊಲಂಕಿ ಅನ್ನೊ ರಾಜಪೂತರು, ಸೇನ್ ( ತಾನ್ ಸೇನ್, ಸುಶ್ಮಿತ ಸೇನ್, ಅಮರ್ತ್ಯ ಸೇನ್), ಇನ್ನು ಮುಂತಾದ ಕುಲಗಳ ಮೂಲ ಕನ್ನಡವೇ, ಅದ್ರೆ ಅವರೆಲ್ಲ ಇಂದು ಕನ್ನಡಿಗರಲ್ಲ!!

ಇನ್ನು ಮರಾಟಿಗಳೆಲ್ಲ ಒಂದಾನೊಂದು ಕಾಲದಲ್ಲಿ ಕನ್ನಡರೇ ಆಗಿದ್ರು..!! Smiling

ಆದುದರಿಂದ ದ.ರಾ.ಬೇಂದ್ರೆ, ಪುತಿನ, ಮಾಸ್ತಿ, ನೀವು, ನಾನು ಎಲ್ರು ಹುಟ್ಟುಗನ್ನಡಿಗ್ರೆ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 11:16pm — hamsanandi

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

hamsanandi's picture

ನಿಮ್ಮ ಮಾತು ನನಗೂ ೧೦೦% ಒಪ್ಪಿಗೆ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 15, 2008 - 11:28am — ವೈಭವ

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

ವೈಭವ's picture

ಸ್ಮಾರ್ತ ಕಮ್ಮೆಗಳು(ಇವರ ಮೂಲವೂ ಆಂದ್ರ ಅನ್ನೋ ಮಾತಿದೆ; ಬಸವಣ್ಣ ಈ ಗುಂಪಿಗೆ ಸೇರಿದವರಂತೆ)
ಇಲ್ಲಿ 'ಕಮ್ಮೆ' ಅನ್ನುವ ಪದದಲ್ಲಿ ತೆಲ್ಗುತನಕ್ಕಿಂತ ಕನ್ನಡತನವೇ ಎದ್ದು ಕಾಣುತ್ತದೆ.

ಮಾದರಿ:
ತೆಲುಗು : ಚಿರುತಾ
ಕನ್ನಡ : ಚಿರತೆ

ಕೊನೆಯಲ್ಲಿ 'ಎ' ಕಾರ ಬರುವುದು ಕನ್ನಡದ ಗುಣ. ಆದ್ದರಿಂದ ಕಮ್ಮೆಗಳು ಅಪ್ಪಟ ಕನ್ನಡಿಗರೇ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 16, 2008 - 10:54am — mahesha

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

mahesha's picture

ಕರ್ಮೀ => ಕಮ್ಮಿ/ಕಮ್ಮೇ

ಕರ್ಮಠರು ಅಂದ್ರೆ ಕರ್ಮೀಗಳು... ಇವರನ್ನು ಆಡುಮಾತಲ್ಲಿ ಕಮ್ಮಿ/ಕಮ್ಮೆಗಳೆಂದು ಕರೆಯೋದು...

ನಾವೆಲ್ಲ ’ಬಬ್ಬೂರುಕಮ್ಮಿ, ಉಲಚುಕಮ್ಮಿ, ವಿಜಯಕಮ್ಮಿ’ ಅಂತ ಮಾತಲ್ಲಿ ಹೇಳಿದ್ರೆ.. ಬರೆವಣಿಗೆಯಲ್ಲಿ ’ಬಬ್ಬೂರುಕಮ್ಮೆ, ಉಲಚುಕಮ್ಮೆ, ವಿಜಯಕಮ್ಮೆ’ ಅಂತ ಬರೇತಾರೆ!

ಬಬ್ಬೂರುಕಮ್ಮೆಯಲ್ಲಿರುವ ಬಬ್ಬೂರು ಆಂದ್ರದಲ್ಲಿರುವ ಬಬ್ಬಲಿ ಅಂತೆ..
ಇನ್ನೊಂದು ಕತೆಯಂತೆ ಈ ಬಬ್ಬೂರು ಈಗಿನ ಮದ್ಯಪ್ರದೇಶ Smiling ಅಲ್ಲ ಮಧ್ಯಪ್ರದೇಶದಲ್ಲಿದೆಯಂತೆ...

ಮತ್ತೊಂದು ಕತೆಯಂತೆ ಈ ಬಬ್ಬೂರು ಕನ್ನಡದೇಸದಲ್ಲೇ ಇದ್ದ ಊರು.. ಕಾಲ ಹೋದ ಹಾಗೆ ಕನ್ನಡರಸರ ಕೈತಪ್ಪಿದರಿಂದ, ಈ ಮಂದಿ ಅಲ್ಲಿಂದ ಕನ್ನಡರಸರಾಳ್ವಿಕೆಯ ನಾಡಿಗೆ ವಲಸೆಗಯ್ದರಂತೆ.

http://en.wikipedia.org/wiki/Babboor_Kamme

ದುರ್ಗಸಿಂಹನ ಕರ್ನಾಟ ಪಂಚತಂತ್ರದಲ್ಲಿ ಹೇಳಿರುವಂತೆ ಸಂಸ್ಕೃತದಲ್ಲಿ ಪಂಚತಂತ್ರ ಬರೆದ ವಾಸುಗಭಟ್ಟ ,
ಬಸವೇಶ್ವರ,
ಮುಂದ್ರಾಮಂಜೂಷ ಬರೆದ ಕೆಂಪುನಾರಾಯಣ,
ಚೊನ್ನ, ವಿದ್ಯಾರಣ್ಯರು ಕೂಡ ಈ ಪಂಗಡದವರಂತೆ.. !! ಬಿ.ಎಂ.ಶ್ರೀ. ಕೂಡ!!

೮೦೦ AD ಇಂದ ಈ ಮಂದಿ ಕನ್ನಡದೇಸದಲ್ಲೇ ಇರುವ ಕುರುಹುಗಳು ಸಿಕ್ಕಿವೆ.

ಒಟ್ನಲ್ಲಿ ಇವರೆಲ್ಲ ಕಡೆ ಪಕ್ಶ ೧೨೦೦ ವರ್ಶಗಳಿಂದ ಹುಟ್ಟು+ಅಪ್ಪಟಗನ್ನಡಿರು Smiling

ಸಕ್ಕತ್ ಅಲ್ವ ನಾನು Smiling !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 16, 2008 - 8:08pm — cmariejoseph

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

cmariejoseph's picture

"ಬಬ್ಬೂರು ಆಂದ್ರದಲ್ಲಿರುವ ಬಬ್ಬಲಿ ಅಂತೆ.."

ವಿಶಾಖಪಟ್ಟಣದಾಚೆ ವಿಜಯನಗರಂ ಎಂಬ ಊರಿದೆ. ಅಲ್ಲಿಂದ ಮುಂದಕ್ಕೆ ಸುಮಾರು ೪೦ ಕಿಮೀ ದೂರದಲ್ಲಿ ಬೊಬ್ಬಿಲಿ ಎಂಬ ಊರು ಇದೆ. ಅದೇ ನಿಮ್ಮ ಬಬ್ಬಲಿ ಇರಬಹುದೇ? ಇಚಾರಿಸಿ ತಿಳ್ಕಳಿ.

"ಕೆಂಪುನಾರಾಯಣ, ಚೊನ್ನ, ವಿದ್ಯಾರಣ್ಯರು ಕೂಡ . . "
ಚೊನ್ನ ಇದು ಬಹುಶಃ ಯಶೋಧರಚರಿತೆಯ ಜನ್ನ ಇರಬಹುದೇ?
(ಜನಾರ್ಧನ>ಜನ್ನ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 17, 2008 - 12:47pm — mahesha

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

mahesha's picture

ಹವುದು.. ಅದೇ ಬಬ್ಬಲಿ... ಒಡಿಸ್ಸ ದಗ್ರ.. Smiling

ಜೋತ್ಸ್ನ => ಜೊನ್ನ
ಯಜ್ಞ => ಜನ್ನ ( ಜನ್ನಿಕೆ ಅಂದ್ರೆ ಜನಿವಾರ )

ಚೊನ್ನ ಅಂತ ಬರೆದಿದ್ನ? ಜೊನ್ನ ಇರಬೇಕು..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 2:25pm — Sunil Jayaprakash

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

Sunil Jayaprakash's picture

ಹಂಸಾನಂದಿ, ಮಹೇಶ ಮತ್ತು ಎಲ್ಲರಿಗೂ, "ಕನ್ನಡ ಅಂದರೆ ಕನ್ನಡ ನೆಲ ಅಂತಲೂ ಕೂಡ" ಎನ್ನೋದು ತಪ್ಪು. ಏಕೆಂದರೆ "ಕನ್ನಡ ಅಂದರೇನೇ ನಾಡು". ಈ ಬಗ್ಗೆ ಶಂ.ಬಾ.ಜೋಶಿಯವರ "ಕಂನುಡಿಯ ಹುಟ್ಟು" ಪುಸ್ತಕದಲ್ಲಿ ಚೆನ್ನಾಗಿ ಹೇಳಿದ್ದಾರೆ. ಅದೂ ಅಲ್ಲದೆ, ಕವಿರಾಜಮಾರ್ಗದ ಒಂದು ಪದ್ಯದಲ್ಲಿ, "....ನಾಡೇ ನಾಡೇ ಕನ್ನಡ" ಎಂಬುದಾಗಿ ಜೋರಾಗಿ ಹೇಳಿದೆ.

"ಕನ್ನಡ ಎನ್ನುವುದು ಮುಖ್ಯವಾಗಿ ಭಾಷೆ ಅಲ್ಲ, ಅದೊಂದು ನೆಲೆ, ನಾಡು" ಎಂಬ ಸತ್ಯಾಂಶ ಪಂಡಿತರುಗಳಿಗೆ ಗೊತ್ತಿರದ ವಿಷಯವೇನಲ್ಲ, ಆದರೆ ಇದನ್ನು ಮರೆಮಾಚಲಾಗಿದೆ. ಆ ಕನ್ನಡದಲ್ಲಿದ್ದ(=ಒಂದು xyz ದೇಶದಲ್ಲಿದ್ದ) ಜನರು ಆಡುತ್ತಿದ್ದ ಭಾಷೆಗೂ ಕನ್ನಡ ಅಂತಲೇ ಹೆಸರು ಆಮೇಲೆ ಬಂದಿರೋದು.

ಹಾಗಾಗಿ, ಇಲ್ಲಿ ಸಂಕೇತಿಗಳು, ಹುಟ್ಟುಕನ್ನಡಿಗರೇ ಆಗುತ್ತಾರೆ ಅಂದರೆ "ಕನ್ನಡ ಅನ್ನೋ ದೇಶದಲ್ಲಿ ಹುಟ್ಟಿದವರು".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 2:41pm — mahesha

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

mahesha's picture

""ಕನ್ನಡ ಅಂದರೆ ಕನ್ನಡ ನೆಲ ಅಂತಲೂ ಕೂಡ" ಎನ್ನೋದು ತಪ್ಪು. ಏಕೆಂದರೆ "ಕನ್ನಡ ಅಂದರೇನೇ ನಾಡು". "

ಹಿಂಗಂದ್ರೇನು ನಂಗೆ ತಿಳಿಲಿಲ್ಲ..

ಕನ್ನಡ = a set of land, people, culture, language, ethnicity etc.. totally a 'conceptual nation' like Japan, Germany, Finland, England.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 4:03pm — Sunil Jayaprakash

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

Sunil Jayaprakash's picture

ಕನ್ನಡ ಎನ್ನುವುದು ಮೊದಲು "ನಾಡು" ಆಗಿತ್ತು. ಆಮೇಲೆ ನುಡಿ ಆಯಿತು.

ಕನ್ನಡ = a set of land, people, culture, language, ethnicity etc.. totally a 'conceptual nation' like Japan, Germany, Finland, England.

ನಿಜ. ಇದರ ಬಗ್ಗೆ ಎರಡು ಮಾತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 4:21pm — Sunil Jayaprakash

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

Sunil Jayaprakash's picture

ಮೈಸೂರಿನವರಿಗಂತೂ, ಆರ್.ಕೆ.ಶ್ರೀಕಂಠನ್ ಅಂದ್ರೆ ಸಾಕು. ಪ್ರಾಣ ಕೊಡೋಕ್ಕೆ ತಯಾರಾಗಿ ಬಿಡ್ತಾರೆ!!! ಅಷ್ಟು ಪ್ರೀತಿ, ಅವರ ಮೇಲೆ. ಆರ್.ಕೆ.ಶ್ರೀಕಂಠನ್ ನಮ್ಮ ಆಸ್ತಿ.

ಹಂಸಾನಂದಿ, ನಾಚಾರಮ್ಮನವರ ಕತೆ ಓದಿದೆ. ನೀವು ಸಂಪದದಲ್ಲಿ, ನಿಮ್ಮ ಬ್ಲಾಗುಗಳಲ್ಲಿ ಆಗಾಗ ನೀಡಿರುವ ಮಾಹಿತಿಗಳನ್ನು ಸಖತ್ತಾಗಿ ಕಲೆಹಾಕಿ ಸೂಪರ್ರಾಗಿ ಕತೆ ಹೆಣೆದಿದ್ದೀರಿ. ಚಾಂಗು ಬಳಾ ಭಾಪುರೆ.

೧. ಕತೆಯ ಪ್ರಯತ್ನ ಚೆನ್ನಾಗಿದೆ. "ಸಾವಿನ ಸಮಾರಾಧನೆ" ಅಷ್ಟು ಸಮರ್ಪಕವಾಗಿ ಬಂದಿಲ್ಲ, ಅನ್ನಿಸ್ತು. ಆದರೂ ಓದುಗರಿಗೆ ಚಿತ್ರಣ ಸಿಗುತ್ತದೆ. ನಿಮ್ಮ ಕಡೆ, ಸಾವಿನ ಸಮಾರಾಧನೆ ಅಂತೀರಾ.
೨. ಕತೆಯಲ್ಲಿರುವ ಮಾಹಿತಿಗಳಂತೂ ಅಬ್ಬಬ್ಬಾ, ಸೂಪರ್ರೋ ಸೂಪರ್ರು Eye-wink ಅದರಲ್ಲಿಯೂ ವಿಜ್ಜಿಕೆ Eye-wink ಸರ್ವಶುಕ್ಲಾ ಸರಸ್ವತೀ Eye-wink ನೀವು ಹೆಣ್ಣಿನ ಸಹಜ ಭಾವನೆಗಳಿಗೆ ಪಾಂಡಿತ್ಯದ ಸ್ಪರ್ಶ ನೀಡಿದ್ದು ನಮ್ಮ ಸಂಪದದ ಹೆಂಗಳೆಯರಿಗೂ ಮಾದರಿಯಾಗಲಿ.

ಹೀಗೆಯೇ ಇನ್ನೂ ಅನೇಕಾನೇಕ ಕತೆಗಳನ್ನು ಹೆಣೆದು ಎಲ್ಲರಿಗೂ ಉಣಬಡಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 6:49pm — ವೈಭವ

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

ವೈಭವ's picture

ಜಿ.ಪಿ. ರಾಜರತ್ನಂ, ಟಿ.ಪಿ.ಕಯ್ಲಾಸಂ ಇವರುನ್ನು ಸೇರಿಸಿಕೊಳ್ಳಿ.

ನನ್ನ ಗೆಳೆಯನೊಬ್ಬನ ಮನೆಮಾತು ಮರಾಟಿ. (ಹುಬಳ್ಳಿಯಲ್ಲಿ ಹುಟ್ಟಿ ಬೆಳೆದದ್ದು) ಆದರೂ ಅವನಿಗೆ 'ಕನ್ನಡಿಗ' ಅಂತ ಹೇಳಿಕೊಳ್ಳುವದರಲ್ಲಿ ಹೆಮ್ಮೆ ಇದೆ.
ಅವನು ಹೇಳುವುದು ಹುಟ್ಟಿರುವುದು, ಬೆಳೆದಿರುವುದು ಮತ್ತು ಕೆಲಸ ಪಡೆದು ಹಣ ಗಳಿಸುತ್ತಿರುವುದು ಎಲ್ಲ ಕರುನಾಡಲ್ಲಿ ಆದ್ದರಿಂದ ನಾನು ೧೦೦% ಕನ್ನಡಿಗ ಅಂತ ಅವನ ಒಕ್ಕೊರಲು.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 9:05pm — hamsanandi

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

hamsanandi's picture

ಈ ಬರಹದ ತಲೆಬರಹ ಸ್ವಲ್ಪ ವಿವಾದಕ್ಕೀಡುಮಾಡಿತಲ್ಲ Sad ಸ್ವಲ್ಪ ಆತುರದಲ್ಲಿ ಬರೆದೆನೇನೋ.

ನನಗೆ ತಿಳಿದ ಎಲ್ಲ ಸಂಕೇತಿಗಳೂ, ೧೦೦% ಕನ್ನಡಿಗರೆಂದೇ ತಮ್ಮನ್ನು ತಿಳಿದುಕೊಂಡಿದ್ದಾರೆ :೦) - ಹುಟ್ಟು ಯಾರದೂ ಆಯ್ಕೆ ಅಲ್ಲ, ಆದರೆ, ಅಭಿರುಚಿ ಅವರ ಆಯ್ಕೆ!

ಮುಖ್ಯ ಉದ್ದೇಶ ನಾಚಾರಮ್ಮನ ಕಥೆಯನ್ನು ಹೇಳುವುದಾಗಿತ್ತು ಅಷ್ಟೆ - ೫೦೦ ವರ್ಶಗಳ ಹಿಂದೆ, ಒಬ್ಬ ಹೆಂಗಸು ಒಂದು ಸಾವಿರ ಕುಟುಂಬಗಳನ್ನು ಸಾವಿರ ಮೈಲಿ ದೂರಕ್ಕೆ ತಂದು ನೆಲೆಗೊಳಿಸಿದ್ದು ಒಂದು ಅಸಾಮಾನ್ಯ್ಸ ಸಂಗತಿ ಎಂದೇ ನನ್ನ ಅಭಿಪ್ರಾಯ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 13, 2008 - 10:42pm — Sunil Jayaprakash

ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

Sunil Jayaprakash's picture

ಹ್ಹಹ್ಹಹ್ಹ. ತುಂಬಾ ಹಿಂದೆ, ಮೈಸೂರಿನಲ್ಲಿದ್ದಾಗ ನಮ್ಮ ತಂದೆ ಅವರ ಸಂಕೇತಿ ಗೆಳೆಯರನ್ನು ಹೀಗೆ ಆಡಿಕೊಳ್ತಾ ಇದ್ರಂತೆ. "ಸಂಕೇತಿ ಸಕಲಾತಿ ನೀ ಕೋತಿ ನಿಮ್ಮಪ್ಪ ಮುದಿಕೋತಿ" Smiling - Smiling - Smiling ನನಗೆ ನಗು ತಡಿಯೋಕ್ಕೆ ಆಗದೆ, ಇದನ್ನ ಈಗಿನ ನನ್ನ ಸಂಕೇತಿ ಗೆಳೆಯರಿಗೆ ಹೇಳಿದೆ. ಅವರಿಗೋ ಇನ್ನೂ ನಗು ತಡ್ಕೊಳಕ್ಕೆ ಆಗಿಲ್ಲ.

ಕೊಕೊ - ಈ ಕಾಮೆಂಟ್ ಓದಿದ ಮೇಲೆ ಸಂಕೇತಿಗಳು, ನನ್ನ ಮೇಲೆ ಬೇಜಾರು ಮಾಡಿಕೊಳ್ಳಬೇಡೀಪ್ಪಾ. ನಮ್ಮ ಮನೆಗೂ ಸಂಕೇತಿ ಕುಟುಂಬಗಳಿಗೂ ಅವಿನಾಭಾವ ಸಂಬಂಧಿವಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹತ್ತು ಮುತ್ತುಗಳು: ರಾಗ ಕಲ್ಯಾಣಿ - ಭಾಗ ೨
  • ಬೆನ್ನು ತಟ್ಟಿದವರು :-)
  • 365 ದಿನಗಳು
  • ಉಳ್ಳವರು ಶಿವಾಲಯವ ಮಾಡುವರು
  • ರಾಜರಲ್ಲೊಬ್ಬ ರತ್ನ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator