ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ದೊಡ್ಡವರ ದೊಡ್ಡತನ

ಮೊನ್ನೆ ಒಂದು ಒಳ್ಳೇ ಅವಕಾಶ ಸಿಕ್ಕಿತು. ಇಲ್ಲಿ ಕಚೇರಿಯೊಂದಕ್ಕೆ ಬಂದಿದ್ದ ಒಬ್ಬ ಸಂಗೀತಗಾರರು ನಮ್ಮ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಆ ನೆವದಲ್ಲಿ ನಾವು ಕೆಲವು ಸಂಗೀತಾಸಕ್ತ ಕುಟುಂಬಗಳು ನಮ್ಮ ಗೆಳೆಯರ ಮನೆಯಲ್ಲಿ ಒಟ್ಟು ಸೇರಿ ಅವರೊಡನೆ ಹರಟೆ ಹೊಡೆಯುತ್ತಾ - ಊಟ ಮಾಡುವ ಅವಕಾಶ ಸಿಕ್ಕಿತು.

ಊಟ ಮಾಡಿದ ಮೇಲೆ ನಾವೆಲ್ಲ ಅವರಿಗೆ ಒಂದು ಹಾಡು ಹೇಳಬೇಕೆಂದು ದುಂಬಾಲು ಬಿದ್ದೆವು. ಎರಡು ಮೂರು ದಿನ ಸಾಲಾಗಿ ಮೂರು -ನಾಕು ಗಂಟೆ ಕಚೇರಿಯಲ್ಲಿ ಹಾಡಿ ಗಂಟಲು ಒಳ್ಳೇ ಸ್ಥಿತಿಯಲ್ಲಿಲ್ಲ ಎನ್ನಬೇಕೇ ಅವರು! ನಾವೂ ಬಿಡದೇ ಮತ್ತೆ ಕಾಡುತ್ತಲೇ ಇದ್ದೆವು. ಮತ್ತೆ ಅವರು ನಮಗೆಲ್ಲ ನೀವೆಲ್ಲ ಒಂದೊಂದು ಹಾಡಿ, ಕಡೆಯಲ್ಲಿ ನಾನೂ ಒಂದು ಹಾಡುವೆ ಎಂದರು.

ಸರಿ - ಸೇರಿದವರಲ್ಲಿ ಹಾಡಲು ಬರುವವರೆಲ್ಲ - ಒಂದೈದಾರು ಜನ ಹಾಡಿದೆವು. ನನಗೆ ಬಹಳ ಆಶ್ಚರ್ಯ ಹಾಗೂ ಸಂತೋಷವಾಗಿದ್ದು  ಈ ಕಲಾವಿದರು ನಾವು ಹಾಡಿದ್ದಕ್ಕೆ ಕೊಟ್ಟ ಪ್ರೋತ್ಸಾಹ.ಹಾಡುವಾಗ ಒಳ್ಳೆಯ ಸಂಗತಿಯೊಂದು ಬಂದರೆ ಭಲೆ! ಭೇಷ್!! ಎಂದು ಹುರಿದುಂಬಿಸಿ ಒಳ್ಳೇ ಮಾತಾಡಿದರು. ಅವರೋ ಹಲವು ದಶಕಗಳಿಂದ ಸಾವಿರಾರು ಕಚೇರಿ ಕೊಟ್ಟಿರುವ ಕಲಾವಿದರು. ನಮ್ಮಲ್ಲಿ ಹೆಚ್ಚಿನವರು (ಎಂದೆಂದಿಗೂ ಅದೇ ಮಟ್ಟದಲ್ಲೇ ಇರುವ ;) ) ಸಂಗೀತ ವಿದ್ಯಾರ್ಥಿಗಳು! ಈ ರೀತಿಯ ಕಲಾವಿದರು ಕಡಿಮೆಯೇ ಎನ್ನಬಹುದು.

ಕಡೆಗೆ ನಮ್ಮೆಲ್ಲರ ಆಸೆಯಂತೆ ಅವರು - ತಾವು ಕನ್ನಡದವರಲ್ಲದಿದ್ದರೂ- ಬಂದವರಲ್ಲಿ ಹೆಚ್ಚಿಗೆ ಕನ್ನಡದವರಿದ್ದರಿಂದ ಒಂದು ಒಳ್ಳೇ ಕನ್ನಡ ಹಾಡನ್ನು ಹಾಡಿದರು.

ಒಬ್ಬರ ಬಗ್ಗೆ ಒಂದು ಒಳ್ಳೆ ಮಾತಾಡಲು ಕೂಡಾ ಹಿಂದೆಮುಂದೆ ನೋಡುವ ಈ ಕಾಲದಲ್ಲಿ, ಈ ರೀತಿಯ ಜನರು ಅಪರೂಪವೆನ್ನಿಸಿ ಹೀಗೆ ನಾಲ್ಕು ಸಾಲು ಬರೆದೆ.

-ಹಂಸಾನಂದಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ದೊಡ್ಡವರ ದೊಡ್ಡತನ

shylaswamy's picture

ಪ್ರಿಯ ಹಂಸಾನಂದಿಯವರೆ,
ಆ ದೊಡ್ಡ ಕಲಾವಿದರು ಯಾರೇ ಆಗಲಿ ಅವರ ತನಗಿಂತ ಕಿರಿಯರನ್ನೂ ಮೆಚ್ಚುವ ಆ ಗುಣ ನಿಜಕ್ಕೂ ದೊಡ್ಡದೇ. ಎಲ್ಲರೂ ಆ ಗುಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬಹುದು. ತುಂಬಿದ ಕೊಡಗಳು ಹಾಗೇ. ಆ ಅಪರೂಪದ ದೊಡ್ಡ ವ್ಯಕ್ತಿ ಯಾರೆಂದು ನಮಗೆ ತಿಳಿಸಬಹುದೆ? ಧನ್ಯವಾದಗಳೊಂದಿಗೆ,
ಶೈಲಾಸ್ವಾಮಿ

ಉ: ದೊಡ್ಡವರ ದೊಡ್ಡತನ

gurubaliga's picture

ದಯವಿಟ್ಟು ಅವರ ಹೆಸರು ತಿಳಿಸಿ. ಮುಂದೆ ಅವರನ್ನು ನೆನೆವಾಗ ಅವರ ದೊಡ್ದತನವೂ ನೆನಪಾಗಲಿ.

ಉ: ದೊಡ್ಡವರ ದೊಡ್ಡತನ

shaamala's picture

ಕಲಾವಿದರು ಸಜ್ಜನರೂ ಆದರೆ ಅದರ ಶೋಭೆಯೇ ಬೇರೆ!
ಹಂಸಾನಂದಿಯವರು ಬರೆದಿರುವ ವಿಷಯಕ್ಕೆ ನೇರವಾಗಿ ಸಂಬಂಧಪಟ್ಟಿಲ್ಲವಾದರೂ ನಿಮ್ಮೆಲ್ಲರ ಜೊತೆ ಇದನ್ನು ಹಂಚಿಕೊಳ್ಳೋಣ ಎನಿಸಿತು:

http://www.youtube.c...

[ಹಂಸಾನಂದಿಯವರ ಸಪ್ತಾಕ್ಷರೀ ಮಂತ್ರಪ್ರಭಾವ ಬೇಕಾಗತ್ತೆ] :)

ಶಾಮಲ

ಉ: ದೊಡ್ಡವರ ದೊಡ್ಡತನ

shylaswamy's picture

ಪ್ರಿಯ ಶ್ಯಾಮಲ ಅವರೆ,
ತಾವು ಕಳಿಸಿರುವ ಈ ಕೃತಿ ದೀಕ್ಷಿತರ ಕೃತಿ ಶ್ರೀ ರಾಗದಲ್ಲಿದೆ. ಕಮಲಾಂಬಾ ನವಾವರಣ ಸೀರೀಸ್‍ನಲ್ಲಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಸರಿನಾ? ನಮ್ಮ ದೇಶದವರಲ್ಲದಿದ್ದರೂ ಚೆನ್ನಾಗಿ ಹಾಡಿದಾರೆ. ಇದೇ ವೀಡಿಯೋ linkನ್ನು ನನ್ನ ಮಗಳು ನನಗೆ ಕಳಿಸಿದ್ದಳು. ಅದನ್ನು ನಾನು ಇಲ್ಲಿಗೆ ಕಳಿಸೋಣ ಎಂದು ಯೋಚಿಸಿದ್ದೆ. ನೀವು ಆ ಕೆಲಸ ಮಾಡಿದಿರಿ. ಎಲ್ಲರೊಂದಿಗೆ ಹಂಚಿಕೊಂಡಿದ್ದಕೆ ಸಂತೋಷವಾಯ್ತು. ಧನ್ಯವಾದಗಳು.
ಶೈಲಾಸ್ವಾಮಿ

ಉ: ದೊಡ್ಡವರ ದೊಡ್ಡತನ

ಮನಹ್ಪಠಲ's picture

ವೀಡಿಯೋ linkನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಸಂತೋಷವಾಯ್ತು.

ಧನ್ಯವಾದಗಳು.

ಕೃಷ್ಣ