ತಾಳುವಿಕೆಗಿಂತನ್ಯ ತಪವು ಇಲ್ಲ

ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦)

ನ ದಾನತುಲ್ಯಂ ಧನಮನ್ಯದಸ್ತಿ
ನ ಸತ್ಯತುಲ್ಯಂ ವ್ರತಮನ್ಯದಸ್ತಿ |
ನ ಶೀಲತುಲ್ಯಂ ಶುಭಮನ್ಯದಸ್ತಿ
ನ ಕ್ಷಾಂತಿತುಲ್ಯಂ ಹಿತಮನ್ಯದಸ್ತಿ ||

ಕೊಸರು:
ತಾಳುವಿಕೆಗಿಂತನ್ಯ ತಪವು ಇಲ್ಲ ಅನ್ನುವುದೊಂದು ಪ್ರಸಿದ್ಧ ವಚನ(?). ಈ ಸುಭಾಷಿತದಲ್ಲಿ
ಅದೇ ಮಾತು ಬರದಿದ್ದರೂ, ಅದನ್ನು ಹೋಲುವ ಮಾತುಗಳಿದ್ದರಿಂದ, ಆ ತಲೆಬರಹ ಕೊಟ್ಟಿದ್ದೇನೆ.
ಅಲ್ಲದೆ, ಧನ, ವ್ರತ, ಶುಭ, ಹಿತ, ಮೊದಲಾದ ಕನ್ನಡದಲ್ಲಿ ಹೆಚ್ಚಾಗೇ ಬಳಕೆಯಲ್ಲಿರುವ
ಸಮಸಂಸ್ಕೃತ ಪದಗಳ ಬದಲು, ದೇಶ್ಯ ಪದಗಳಾದ ಸಿರಿ, ನೋಂಪಿ, ಒಸಗೆ ಮತ್ತು ಸೇರಿಕೆ - ಈ
ಪದಗಳನ್ನು ಬಳಸುವ ಒಂದು ಪ್ರಯತ್ನ ಮಾಡಿದೆ. ಇದರಲ್ಲಿ ಒಂದೆರಡು ಪದಗಳನ್ನು ಹೆಕ್ಕಲು
ಜಿವೆಂ ಅವರ ಕನ್ನಡ ನಿಘಂಟು ಸಹಾಯಕ್ಕೆ ಬಂತು.

-ಹಂಸಾನಂದಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ತಾಳುವಿಕೆಗಿಂತನ್ಯ ತಪವು ಇಲ್ಲ

asuhegde's picture

ದಾನಕ್ಕೆ ಸಮಾನವಾದ ಸಂಪತ್ತು ಇನ್ನಿಲ್ಲ
ದಿಟನುಡಿಗೆ ಸಮಾನವಾದ ಆಚರಣೆ ಇನ್ನಿಲ್ಲ
ನಡತೆಗೆ ಸಮಾನವಾಗಿ ಮಂಗಳಕಾರಿ ಇನ್ನಿಲ್ಲ
ತಾಳ್ಮೆಗೆ ಸಮಾನವಾಗಿ ಹಿತಕಾರಿ ಇನ್ನಿಲ್ಲ.

ಇವಿಷ್ಟನ್ನೂ ಅರಿತು ಬಾಳಿದರೆ, ಬಾಳಲ್ಲಿ ನೋವಿಲ್ಲ.

ಉ: ತಾಳುವಿಕೆಗಿಂತನ್ಯ ತಪವು ಇಲ್ಲ

anil.ramesh's picture

ಆತ್ಮೀಯ ಹಂಸಾನಂದಿ,
ಮತ್ತೊಂದು ಸಂಗ್ರಹಯೋಗ್ಯ ಸುಭಾಷಿತವನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.

ನನಗೆ ತಾಳ್ಮೆ ಕೊಂಚ ಕಡಿಮೆ. ಆದರೂ ಇತ್ತೀಚೆಗೆ ತಾಳ್ಮೆಯಿಂದ ಇರಲು ಪ್ರಯತ್ನ ಪಡುತ್ತಿದ್ದೇನೆ.
ಮುಂದೆಯೂ ತಾಳ್ಮೆಯಿಂದ ಇರಲು ಪ್ರಯತ್ನಿಸುವೆ.

-ಅನಿಲ್