ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಹಣವೇ ಗುಣವೆ?

March 17, 2008 - 11:57pm — hamsanandi

ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದರಕ್ಕೆ ಒಳಗಾಗುತ್ತಾನೆ ಅನ್ನುವುದರ ಪ್ರಸ್ತಾಪ ಬಂದಿದೆ.

ಹಣದ ಗುಣವನ್ನು ತಿಳಿಸುವ ಒಂದು ಸಂಸ್ಕೃತ ಸುಭಾಷಿತವನ್ನು ಇಲ್ಲಿ ನೋಡೋಣ.

यस्यास्ति वित्तम् स नरः कुलीनः

स पंडितः सः श्रुतवान् गुणज्ञः

स एव वक्ता स च दर्शनीयः

सर्वॆ गुणाः काञ्चनं आश्रयंति

 

ದುಡ್ಡೊಂದು ಇದ್ದಲ್ಲಿ ಅವ ಜನಿಸಿದುದೆ ಸತ್ಕುಲವು

ಭಾರಿ ಕಲಿತವನವನು; ಕೇಳಿ ಅರಿತವನು!

ಮಾತುಗಾರನು ಅವನು, ಬಲು ಸೊಗಸುಗಾರ

ಹಣವಿರುವಲ್ಲಿ ತಾನೆ ಗುಣಗಳು ಸೇರುವುವು !

 

ಸ್ವಲ್ಪ ವ್ಯಂಗ್ಯ ಹೆಚ್ಚು ಎನ್ನಿಸುವಷ್ಟೇ ಇದ್ದರೂ, ಲೋಕದ ರೀತಿ ನೀತಿಯನ್ನು ಹೇಳುವುದರಲ್ಲಿ ಈ ನಲ್ನುಡಿ ಯಶಸ್ವಿಯಾಗಿದೆ ಅನ್ನಿಸುತ್ತೆ. 

ಒಟ್ಟಿನಲ್ಲಿ ಹೇಳುವುದಾದರೆ, ನಮ್ಮ ಗುಣಗಳನ್ನು ಹೆಚ್ಚಿಸಿಕೊಳ್ಳೋಣ - ಆದರೆ ಈ ಜಗತ್ತಿನಲ್ಲಿ ನಮಗೆ ಬದುಕಲು ಅಗತ್ಯವಾದಷ್ಟು ಹಣವನ್ನು ಗಳಿಸುವುದರಲ್ಲಿ ಹಿಂದೆ ಬಿದ್ದರೆ, ಈ ಕೆಳಗೆ ಇನ್ನೊಬ್ಬ ಸುಭಾಷಿತಕಾರ ಕೊರಗುತ್ತಿರುವಂತೆ ನಮ್ಮ ಗತಿಯಾಗಬಹುದು!

एको हि दोषो गुणसन्निपाते निमज्जतींदोः इति यो बभाषे
नूनम् न द्रुष्टं कविनापि तेन दारिद्रय दोषो गुणराशिनाशी

ಗುಣಗಳ ಗುಂಪಲಿ ಒಂದೇ ಕೊರತೆ
ಚಂದ್ರನ ಬೆಳಕಲಿ ಕಲೆಯಂತೆ
ಮುಚ್ಚೀತೆಂದ ಕವಿ ತಾ ಕಾಣನು
ಲೋಕದ ನಿಜರೂಪದ ಮೋರೆ;
ಸಾವಿರ ಗುಣಗಳ ಮುಚ್ಚಿ ಹಾಕದೆ
ಒಂದೇ ಬಡತನವೆಂಬ ಕೊರೆ ?

-ಹಂಸಾನಂದಿ 

 

 

 

  • ಅನುವಾದ
  • ಗುಣ
  • ಸುಭಾಷಿತ
  • ಹಣ
~.~
  • hamsanandi ರವರ ಬ್ಲಾಗ್
  • Login or register to post comments
  • 282 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 18, 2008 - 2:40pm — mahesha

ಉ: ಹಣವೇ ಗುಣವೆ?

mahesha's picture

ಚನ್ನಾಗಿದೆ..

ಸಕ್ಕದದ ಶ್ಲೋಕಗಳನ್ನು ಕನ್ನಡಲಿಪಿಯಲ್ಲಿ ಬರೆಲು ಕೋರಿಕೆ..

ಬೇರೆಡೆಯಿಂದ ಕಾಪಿ ಮಾಡ್ತಾ ಇದ್ರೆ... ಸಕ್ಕದ ಯೋನಿಕೋಡಿಂದ ಕನ್ನಡ ಯೋನಿಕೋಡ್ ಮಾರ್ಪಿಗೆ ಒಂದು ಸಯ್ಟಿದೆ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2008 - 12:41am — hamsanandi

ಉ: ಹಣವೇ ಗುಣವೆ?

hamsanandi's picture

ಇಲ್ಲ - ಕಾಪಿ-ಪೇಸ್ಟ್ ಮಾಡಿದ್ದಲ್ಲ - ನೀವು ಹೇಳಿದಂತೇ ಕನ್ನಡ ಲಿಪಿಯಲ್ಲೇ ಬರೆಯುತ್ತೇನೆ - ಬರಹ ಕನ್ವರ್ಟ್ ಉಪಯೋಗಿಸಿ

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2008 - 4:27am — hpn

ಉ: ಹಣವೇ ಗುಣವೆ?

hpn's picture

ಕನ್ನಡ ಹಾಗೂ ಸಂಸ್ಕೃತ ಎರಡರಲ್ಲೂ ಇದ್ದರೆ ಹೇಗೆ? Smiling

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2008 - 9:18am — ASHOKKUMAR

ಉ: ಹಣವೇ ಗುಣವೆ?

ASHOKKUMAR's picture

ಹೌದು,ಎರಡು ಭಾಷೆಗಳಲ್ಲೂ ಇರಲಿ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆಲವು ಸುಭಾಷಿತಗಳು
  • ಚೆಲುವೂ ಚಿನ್ನವೂ
  • ವಾಪಸ್ ಕೊಡಬೇಕಿಲ್ಲದ ಸಾಲದ ಯೋಜನೆ-ರಿವರ್ಸ್ ಮಾರ್ಟ್‍ಗೇಜ್ ಲೋನ್
  • ಕುರುಡು ಕಾಂಚಾಣ
  • ನಂಬಿಕೆಯೇ ಆಧಾರ.. ಎಂಬ ದೊಡ್ಡ ಸಮಸ್ಯೆ.
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator