ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ನವರಾತ್ರಿಯ ದಿನಗಳು

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ನವರಾತ್ರಿಯ ಆರನೇ ದಿನ

October 18, 2007 - 3:07am — hamsanandi

ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು

ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ

ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ

ಏಳನೆಯ ದಿನ ಬರುತ್ತದೆ.

ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಕೃತಿ ಕಾಮವರ್ಧಿನಿ ರಾಗದಲ್ಲಿರುವ

ಸರೋರುಹಾಸನ ಜಾಯೇ ಎಂಬುದು. ಅದನ್ನು ನೀವು ಮ್ಯೂಸಿಕ್ ಇಂಡಿಯಾ ತಾಣದಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.

ಈ ರಾಗವನ್ನು ತಮಿಳುನಾಡಿನಲ್ಲಿ ಹೆಚ್ಚಾಗಿ ಪಂತುವರಾಳಿ ಎಂಬ ಹೆಸರಿಂದ ಕರೆಯುತ್ತಾರೆ.

ಸರಸ್ವತಿಯನ್ನು ಕಲಿಕೆಯ ಅಧಿದೇವತೆ ಎಂದು ನಂಬುವವರು ನಾವು. ಹಾಗಾಗೇ, ವಿದ್ಯಾರಂಭದಲ್ಲಿ ಸರಸ್ವತಿಯ ಪೂಜೆ

ಗೈಯುವುದು ರೂಢಿ. ಲಲಿತಕಲೆಗಳಾದ ಸಂಗೀತ ನೃತ್ಯ ಮೊದಲಾದುವುಗಳನ್ನು ಕಲಿಯಲಾರಂಭಿಸುವಾಗಲಂತೂ

ಕಡ್ಡಾಯವೇ ಎನ್ನಬಹುದು.

ಸಂಗೀತಾಭ್ಯಾಸಿಗಳು ಮೊದಲಿಗೆ ಕಲಿಯುವುದು ಮಾಯಾಮಾಳವಗೌಳ ರಾಗದಲ್ಲಿ ಸರಳೆವರಸೆ-ಜಂಟೀವರಸೆ

-ಅಲಂಕಾರ ಮೊದಲಾದ ಸರಳವಾದ ಸ್ವರ ಚಿತ್ತಾರಗಳನ್ನು. ನಂತರ, ಸರಳ ಸ್ವರ ಸಾಹಿತ್ಯ ಸಂಯೋಜನೆ ಇರುವ

ಗೀತೆಗಳನ್ನು ಹೇಳಿಕೊಡಲಾಗುತ್ತೆ. ಈ ಪದ್ಧತಿಯನ್ನು ಹಾಕಿಕೊಟ್ಟವರು ಪುರಂದರದಾಸರೇ ಎಂಬ ನಂಬುಗೆ

ಸಾಂಪ್ರದಾಯಿಕವಾಗಿ ಚಾಲ್ತಿಯಲ್ಲಿದೆ.

ಇದರ ನಂತರ ಹೇಳಿಕೊಡಲಾಗುವ ರಚನೆಗಳು ಸ್ವರಜತಿಗಳು ಅಥವಾ ಜತಿಸ್ವರಗಳು. ಇದರ ನಂತರ ಬರುವ

ರಚನೆಗಳೇ ವರ್ಣಗಳು.

ವರ್ಣ ಎಂಬುದರ ಅರ್ಥ ಬಣ್ಣ ಎಂದಲ್ಲವೇ? ಹಾಗೇ, ಈ ವರ್ಣಗಳು ರಾಗಗಳ ಬೇರೆಬೇರೆ ಛಾಯೆಗಳನ್ನು ತೋರುವ

ಚಿತ್ರಪಟಗಳೆಂದರೆ ಅಡ್ಡಿಯಿಲ್ಲ. ವರ್ಣಗಳು ಅವು ನಿಯೋಜಿತವಾಗಿರುವ ರಾಗಗಳ ವೈಶಿಷ್ಟ್ಯಗಳನ್ನು ಎತ್ತಿ ತೋರುವಂತೆ

ಮಾಡಿರುವ ರಚನೆಗಳು. ಒಂದು ಸಂಗೀತ ಕಚೇರಿಗೆ ನೀವು ಹೋದರೆ, ಹೆಚ್ಚೆಂದರೆ ಒಂದು ವರ್ಣವನ್ನು, ಕಚೇರಿಯ

ಪ್ರಾರಂಭದಲ್ಲಿ ಕೇಳಬಹುದು. ಪ್ರತೀಸಲ, ಕೇಳುತ್ತೀರಿ ಎಂದೇನಿಲ್ಲ. ಆದರೆ, ಸಂಗೀತದ ವಿದ್ಯಾರ್ಥಿಗಳಿಗೆ ಮಾತ್ರ,

ಇವು ಬಹಳ ಮಹತ್ವದ ರಚನೆಗಳು. ಹೇಗೆ ಉತ್ತಮವಾದ ಪ್ರಬಂಧವನ್ನು ರಚಿಸಲು ಒಳ್ಳೆಯ ವ್ಯಾಕರಣದ ಬುನಾದಿ

ಬೇಕೋ, ಹಾಗೆ, ಉತ್ತಮ ಸಂಗೀತಗಾರರಾಗಲು ಈ ವರ್ಣಗಳ ಅಭ್ಯಾಸ ಅತ್ಯವಶ್ಯಕ.

ಇಷ್ಟೆಲ್ಲ ಏಕೆ ಹೇಳಿದೆನೆಂದರೆ, ಇವತ್ತು ನಾನು ಆರಿಸಿಕೊಂಡು, ನಿಮಗೆ ಕೇಳಿಸುತ್ತಿರುವ, ದೇವೀಪರವಾದ ರಚನೆ,

ಒಂದು ವರ್ಣ. ವರ್ಣಗಲ್ಲಿ ಸಾಹಿತ್ಯ (= ಮಾತು) ಕಡಿಮೆ. ಸಂಗೀತ (=ಧಾತು) ಹೆಚ್ಚು. ಒಂದು ಸಾಲಿನ ಪಲ್ಲವಿ,

ಒಂದು ಸಾಲಿನ ಅನುಪಲ್ಲವಿಯ ನಂತರ ಚಿಟ್ಟೆಸ್ವರಗಳು ಇರುತ್ತವೆ. ನಂತರ ಒಂದು ಸಾಲಿನ ಚರಣವನ್ನು, ಹಲವು

ಎತ್ತುಗಡೆ ಸ್ವರಗಳನ್ನು ಹಾಡುವ ನಡುವೆ ಮತ್ತೆ ಮತ್ತೆ ಹಾಡಲಾಗುತ್ತೆ.

ಇವತ್ತಿನ ವರ್ಣ ಅಮೃತವರ್ಷಿಣಿ ರಾಗದಲ್ಲಿ, ಆದಿತಾಳದಲ್ಲಿದೆ. ರಚಿಸಿರುವವರು ಡಾ. ಎಂ. ಬಾಲಮುರಳಿಕೃಷ್ಣ.

ಸಾಹಿತ್ಯದ ಭಾಗ ಎಷ್ಟು ಕಡಿಮೆ ಇದೆ ಎಂಬುದನ್ನು ಗಮನಿಸಿ. ಇದು ತೆಲುಗು ಭಾಷೆಯಲ್ಲಿದೆ.

ಪಲ್ಲವಿ: ಆಬಾಲಗೋಪಾಲಮು ಸಭಲೋನ ಮುರಳೀಗಾನಮು
ಅನುಪಲ್ಲವಿ: ಶಬಾಸನಿಪಿಂಚಿ ಮೋದಮು ಚೆಂತ ಮೆಯ್ಯುಲು ಗಾವುತ
ಚರಣ: ಗಾನಾಮೃತವರ್ಷಿಣೀ ವಾಣೀ
ಬಾಲಮುರಳಿಕೃಷ್ಣ ಅವರು ೨೦ನೇ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ಸ್ಂಗೀತದಲ್ಲಿ ಅವರು ಅಪರಿಮಿತ
ಮೇಧಾವಿ. ಬಹಳ ಚಿಕ್ಕವಯಸ್ಸಿನಲ್ಲೇ ರಚನೆಗಳನ್ನು ಮಾಡತೊಡಗಿದ ಬಾಲಮುರಳಿ ಅವರು ಬಹಳ ಸಂಖ್ಯೆಯಲ್ಲಿ ವರ್ಣ,
ಕೃತಿ ಮತ್ತು ತಿಲ್ಲಾನಗಳನ್ನು ರಚಿಸಿದ್ದಾರೆ. ಅವರ ವರ್ಣಗಳು ಮತ್ತು ತಿಲ್ಲಾನಗಳು ಸಂಗೀತರಂಗದಲ್ಲಿ ಬಹಳ ಮೆಚ್ಚುಗೆ ಪಡೆದಿವೆ.
ಈ ವರ್ಣದ ಚರಣದಲ್ಲಿ ಬಾಲಮುರಳಿ ಅವರು, ಹಾಡಿನ ಅಮೃತದ ಮಳೆಯನ್ನೇ ಸುರಿಸುವಳು ಎಂದು ಮಾತಿನ ದೇವಿಯನ್ನು
ಹೊಗಳಿದ್ದಾರೆ (ಗಾನಾಮೃತವರ್ಷಿಣೀ ವಾಣೀ). ಅದಲ್ಲದೆ, ವರ್ಣ ಎನ್ನುವುದೇ ಸಂಗೀತಾಭ್ಯಾಸಿಗಳಿಗೆ ಕಲಿಕೆಯ ಒಂದು
ಪ್ರತೀಕ.ಹಾಗಾಗಿ, ವಿದ್ಯಾಧಿದೇವತೆ ಸರಸ್ವತೀ ಪೂಜೆಯ ದಿನಕ್ಕೆ ಇದು ಸರಿಯಾದ ರಚನೆಯೆಂದು ನನಗನ್ನಿಸಿತು.

ಇಲ್ಲಿ ಕ್ಲಿಕ್ಕಿಸಿ, ಈ ವರ್ಣವನ್ನು ನೀವು ಕೇಳಬಹುದು.

-ಹಂಸಾನಂದಿ
‹ ನವರಾತ್ರಿಯ ಐದನೆಯ ದಿನಮೇಲಿನ ಪುಟಕ್ಕೆನವರಾತ್ರಿಯ ಏಳನೇ ದಿನ ›
  • ಜ್ಞಾನವಾಹಿನಿ
  • ದಸರ
  • ಮೈಸೂರು
  • ವರ್ಣ
  • ಸಂಗೀತ
~.~
  • hamsanandi ರವರ ಬ್ಲಾಗ್
  • Printer-friendly version
  • Login or register to post comments
  • 484 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನವರಾತ್ರಿಯ ಒಂಬತ್ತನೆಯ ದಿನ
  • ನವರಾತ್ರಿಯ ಐದನೆಯ ದಿನ
  • ನವರಾತ್ರಿಯ ನಾಲ್ಕನೇ ದಿನ
  • ನವರಾತ್ರಿಯ ಎಂಟನೇ ದಿನ
  • ನವರಾತ್ರಿಯ ಮೂರನೆಯ ದಿನ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator