ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ

April 19, 2008 - 6:12am — hamsanandi

ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿಯಂದು ರಾಮನಾಮ ಸ್ಮರಣೆಯ ಜೊತೆ, ಪಾನಕ, ಮಜ್ಜಿಗೆ, ಕೋಸುಂಬರಿ ಗೊಜ್ಜವಲಕ್ಕಿ ಸೇವನೆಯ ಕಾರ್ಯಕ್ರಮವನ್ನೇ ಜೋರಾಗಿ ಇಟ್ಟುಕೊಳ್ಳುವುದು?

ರಾಮನವಮಿ ಎಂದರೆ ಅದರ ಜೊತೆಗೇ ನನಗೆ ರಾಮನವಮಿ ಸಂಗೀತೋತ್ಸವಗಳದ್ದೇ ನೆನಪು. ನನ್ನ ಶಾಲಾ-ಕಾಲೇಜು ದಿನಗಳಲ್ಲಿ ರಾಮನವಮಿ ಯಾಕಾದರೂ ಈ ಪರೀಕ್ಷೆಯ ಸಮಯದಲ್ಲಿ ಬರುತ್ತೋ ಅಂತ ಬೈದುಕೊಳ್ಳುತ್ತಿದ್ದೆ. ಯಾವಾಗಲೂ, ಒಳ್ಳೇ ಸಂಗೀತಗಾರರು ಬರುತ್ತಿದ್ದರೆ, ಅದರ ಮರುದಿನವೇ ಪರೀಕ್ಷೆ ಇದ್ದಿರಬೇಕೇ? ಹಾಗಿದ್ದರೂ, ಆದಷ್ಟೂ ತಪ್ಪಿಸದೇ ಹೋಗುತ್ತಿದ್ದವನು ನಾನು. ಅಂದಿನ ದಿನಗಳು ಚೆನ್ನಾಗಿದ್ದವು. ನಮ್ಮ ಊರಿನಲ್ಲಿ ಎಲ್ಲಿ ಸಂಗೀತ ಕಾರ್ಯಕ್ರಮ ನಡೆದರೂ, ಹತ್ತು ನಿಮಿಷಗಳೊಳಗೆ ಅಲ್ಲಿ ಹೋಗಿ ಸೇರಬಹುದಿತ್ತು. ನಾನು ಕೇಳಿದ ಹೆಚ್ಚಿನ ಕಚೇರಿಗಳು ಹೀಗೆ ರಾಮೋತ್ಸವದಲ್ಲಿ (ಅಥವಾ ಗಣೇಶೋತ್ಸವದಲ್ಲಿ) ಕೇಳಿದ್ದವೇ. ಆದರೆ, ಈಗ ಬೆಂಗಳೂರಿನಂತಹ ಊರುಗಳಲ್ಲಂತೂ ಇಂತಹದ್ದೇ ಕಡೆ ನಡೆಯುವ ಕಾರ್ಯಕ್ರಮಕ್ಕೆ ಹೋಗಬೇಕೆಂದರೆ, ಅರ್ಧ ದಿನವೆಲ್ಲ ರಸ್ತೆಯ ಮೇಲೇ ಇರಬಹುದಷ್ಟೆ. ಪುಣ್ಯಕ್ಕೆ ಎಲ್ಲಾ ಕಡೆ ಗುಡಿ ಗೋಪುರವಿದ್ದಲ್ಲೆಲ್ಲ ಒಂದಲ್ಲ ಒಂದು ಸಂಗೀತ ಕಾರ್ಯಕ್ರಮ ನಡೆಯುವುದರಿಂದ, ಆಸಕ್ತರಿಗೆ ಅಂತಹ ಖೋತಾ ಆಗಲಾರದು. ಆದರೂ, ಕೋಟೆ ಹೈಸ್ಕೂಲ್ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾದರೆ ಆ ಸೊಗಸೇ ಬೇರೆ.

ನಾನು ಬೆಂಗಳೂರಿನಲ್ಲಿದ್ದಾಗ ಇದ್ದ ಕಡೆಯೂ ಹತ್ತಿರದಲ್ಲೇ ಹಲವು ರಾಮನವಮಿ ಸಂಗೀತೋತ್ಸವಗಳಾಗುತ್ತಿದ್ದವು. ವೈಯಾಲಿಕಾವಲಿನ ಒಂದು ಚೌಕದಲ್ಲಂತೂ, ರಸ್ತೆಯ ನಡುವೇ ಶಾಮಿಯಾನಾ ಹಾಕಿ, ನಡುವೆ ಒಂದು ಕಟ್ಟೆ ಕಟ್ಟಿ ರಂಗ ಸಿದ್ಧವಾಗಿರುತ್ತಿತ್ತು. ಎಷ್ಟೋ ಪ್ರಸಿದ್ಧ ವಿದ್ವಾಂಸರನ್ನು ಅಲ್ಲಿ ಕೇಳಿದ್ದ ನೆನಪು ನನಗಿದೆ. ಅದೇ ಅಲ್ಲದೇ ಮಲ್ಲೇಶ್ವರದ ರಾಮಮಂದಿರವೊಂದರಲ್ಲೂ ಒಳ್ಳೇ ಕಾರ್ಯಕ್ರಮಗಳು ಇದ್ದೇ ಇರುತ್ತಿದ್ದವು. ಸ್ವಲ್ಪ ದೂರಕ್ಕೆ ಹೋದರೆ, ಶೇಷಾದ್ರಿಪುರದ ಹೈಸ್ಕೂಲಿನಲ್ಲಿ ನಡೆಯುವ ಸಂಗೀತೋತ್ಸವವಂತೂ ಬಹಳ ಹೆಸರಾದ್ದೇ. ಈಗ ಬೆಂಗಳೂರು ಆಗಿಗಿಂತ ಸಿಕ್ಕಾಪಟ್ಟೆ ಬೆಳೆದಿದೆ -- ಅಂತೆಯೇ ಇನ್ನೂ ಹತ್ತು ಹಲವು ಕಡೆ ಕಾರ್ಯಕ್ರಮಗಳಂತೂ ನಡೆಯುತ್ತವೆ. ನಿಮ್ಮ ಹತ್ತಿರದಲ್ಲಿ ನಡೆಯುವ ಸಂಗೀತೋತ್ಸವಕ್ಕೆ ಹೋಗಿ ಅನ್ನುವ ಸಲಹೆ ನನ್ನದು :೦)

ಇಲ್ಲಿ ರಾಮನವಮಿಯಂದು ಇನ್ನೊಂದರ ಹೊಸ ಹುಟ್ಟೂ ಆಯಿತು. ಸಿಲಿಕಾನ್ ಕಣಿವೆಯ ಕನ್ನಡಿಗರಲ್ಲಿ ಕೆಲವರು ಹುಮ್ಮಸ್ಸಿಗರು ಸೇರಿ, ಮಾತಿನ ಮಲ್ಲರ ಕೂಟವೊಂದನ್ನು ಆರಂಭಿಸಿದರು. ಟೋಸ್ಟ್ ಮಾಸ್ಟರ್ಸ್ ಛಾವಣಿಯಡಿ ಬರುವ ಈ ಹೊಸ ಕೂಟದ ಗೆಳೆಯರು ನಿಯಮಿತವಾಗಿ ಸೇರಿ, ಕನ್ನಡದಲ್ಲಿ ಉತ್ತಮ ಮಾತುಗಾರರಾಗುವ ಪಣತೊಟ್ಟು ನಿಂತಿದ್ದಾರೆ. ನನ್ನ ಅರಿವಿನ ಮಟ್ಟಿಗೆ, ಪೂರ್ತಿ ಕನ್ನಡದಲ್ಲೇ ನಡೆಯುವ ಮೊದಲ ಟೋಸ್ಟ್ ಮಾಸ್ಟರ್ಸ್ ಕ್ಲಬ್ ಇದಾಗಲಿದೆ. ಟೋಸ್ಟ್ ಮಾಸ್ಟರ್ಸ್ ಬಗ್ಗೆ ಹೆಚ್ಚಿಗೆ ತಿಳಿಯಬೇಕಾದರೆ, www.toastmasters.org ಗೆ ಹೋಗಿ ನೋಡಿ.

ಇನ್ನೂ ಈ ಮಾತಿನಮಲ್ಲರ ಚಾವಡಿಗೆ ರೂಪುರೇಷೆಗಳು ಸಿದ್ಧವಾಗುತ್ತಿವೆ. ಸಿಲಿಕಾನ್ ಕಣಿವೆಯ ಕನ್ನಡಿಗರು ಇದರ ಉಪಯೋಗ ಪಡೆಯುವರೆಂಬ ಆಸೆ ನಿಯೋಜಜರಿಗೆ ಇದೆ. ರಾಮನವಮಿಯ ದಿನದಲ್ಲಿ ನಡೆದ ಮೊದಲ ಕೂಟವು ’ರಘುನಂದನ’ರ ಮನೆಯಲ್ಲಿ ನಡೆದಿದ್ದು, ಭಾಷಣದವ ವಿಷಯ (ಮೊದಲ ಭಾಷಣ ನನ್ನದೇ!) ’ರಾಮ ಭಕ್ತಿ ಸಾಮ್ರಾಜ್ಯ’ ಅನ್ನುವುದು ಕಾಕತಾಳೀಯವಾಗಿದ್ದರೂ, ಎಲ್ಲರ ಗಮನಕ್ಕೆ ಬಂದ ಸಂಗತಿ.

-ಹಂಸಾನಂದಿ

 

  • ಕನ್ನಡ
  • ಟೋಸ್ಟ್ ಮಾಸ್ಟರ್ಸ್
  • ನೆನಪುಗಳು
  • ಸಂಗೀತೋತ್ಸವ
~.~
  • hamsanandi ರವರ ಬ್ಲಾಗ್
  • Login or register to post comments
  • 614 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 20, 2008 - 7:12am — kalpana

ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ

kalpana's picture

ಹೌದು ಹಂಸಾನಂದಿಗಳೇ, ರಾಮನವಮಿ ಸಂಗೀತೋತ್ಸವಗಳು, ಅದರಲ್ಲೂ ಕೋಟೆ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಎಂ.ಎಸ್.ಎಸ್., ಬಾಲಮುರಳಿಯವರ ಕಛೇರಿಗಳು ಅಬ್ಭಾ ಏನು ಚೆನ್ನಾಗಿರುತ್ತಿದ್ದವು! ನನ್ನ ಸಂಗೀತ ಕೇಳುವ ಹುಚ್ಚಿನಿಂದಾಗಿ, ಹಲವು ಬಾರಿ ರಾತ್ರಿ ಬಹಳ ತಡವಾಗಿ ಮನೆ ತಲುಪಿ ನನ್ನ ತಾಯಿಯ ಕೋಪಕ್ಕೆ ಗುರಿಯಾಗುತ್ತಿದ್ದೆ. ಅದೇ ಹುಚ್ಚು ನನ್ನನ್ನು ಗಣೇಶೋತ್ಸವದಲ್ಲಿ ನಡೆಯುವ ಸಿನಿಮ ಆರ್ಕೆಸ್ಟ್ರಗೂ ಕಳಿಸುತ್ತಿತ್ತು Smiling ಆದರೆ ಅದು ಬೇರೆ ವಿಷಯ ಬಿಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2008 - 7:17am — kalpana

ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ

kalpana's picture

ಕೇಳಲು ಮರೆತೆ. ನೀವು ಮಾತಾಡಿದ್ದು "ರಾಮ ಭಕ್ರಿ ಸಾಮ್ರಾಜ್ಯಂ" ಎಂಬ ತ್ಯಾಗರಾಜರ ಕೃತಿಯ ಬಗ್ಗೆಯೇ? ಏನೇ ಇರಲಿ, ಕನ್ನಡದಲ್ಲಿ ಭಾಷಣವೆಂದ ಮೇಲೆ ಅದನ್ನು ಸಹ ಇಲ್ಲಿ ಹಾಕಬಹುದಲ್ಲ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 21, 2008 - 10:45am — hamsanandi

ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ

hamsanandi's picture

ಹೌದು - ಭಾಷಣದ ಮುಖ್ಯ ವಿಷಯ ತ್ಯಾಗರಾಜರ ರಾಮ ಭಕ್ತಿಯ ಬಗ್ಗೆ ಆಗಿತ್ತು. ಹಲವಾರು ಕೃತಿಗಳ ಜೊತೆಗೆ, ರಾಮ ಭಕ್ತಿ ಸಾಮ್ರಾಜ್ಯ ಕೃತಿಯೂ ಬಗ್ಗೆಯೂ ಒಂದೆರಡು ಮಾತಿತ್ತು. ಮುಖ್ಯವಾಗಿ ವಾಗ್ಗೇಯಕಾರ ತ್ಯಾಗರಾಜರ ಪರಿಚಯ ಇದು. ಈಗಾಗಲೇ, ಸಂಪದದಲ್ಲಿ ಒಂದೆರಡು ಬಾರಿ (ಹಾಗೇ ಅಲ್ಲಿದೆ ನಮ್ಮ ಮನೆಯಲ್ಲೂ) ಬರೆದುಬಿಟ್ಟಿರುವುದರಿಂದ 'ಹಾಡಿದ್ದೇ ಹಾಡೋ... " Eye-wink ಆಗಬಹುದೆಂಬ ಭಯದಿಂದ, ಪೂರ್ತಿ ಬರಹವನ್ನು ಇಲ್ಲಿ ಹಾಕಲಿಲ್ಲ ಅಷ್ಟೇ!

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತಾಗ್ರಜ
  • ಭರತಾನುಜ.
  • ಸಂಪದದಲ್ಲಿ ಹೊಸತು...
  • ಗ್ನು/ಲಿನಕ್ಸ್ ಹಬ್ಬಕ್ಕೊಂದು ತನ್ನದೇ ವೆಬ್ಸೈಟ್
  • ನೆನಪು
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಆಟೋದ ಆಟೋಪ
  • ನನ್ನಜ್ಜನ ಬೆಚ್ಚಗಿನ ನೆನಪುಗಳು
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
  • ಕನ್ನಡದ ನುಡಿದಾಟಿ ಎಂತದು?
  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator