ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ಹೆಸರಿಲ್ಲದ್ದು ?

February 20, 2008 - 1:58am — hamsanandi

ಯಾರನ್ನಾದರೂ ಬೆಟ್ಟುಮಾಡಿ ತೋರುವುದು ಸಭ್ಯತೆಯಲ್ಲ ಅನ್ನುವುದು ಹಲವರ ಅಂಬೋಣ. ಅದನ್ನು ನೀವು ಒಪ್ಪುವಿರೋ, ಬಿಡುವಿರೋ, ಆದರೆ, ’ತೋರು’ವ ಕೆಲಸ ಮಾಡುವ ಬೆರಳಿಗೆ ತೋರುಬೆರಳು ಎಂಬ ಹೆಸರೇನೋ ಸಾರ್ಥಕ ಅನ್ನಿಸುತ್ತೆ. ಅಲ್ಲವೆ? ಅದಲ್ಲದೆ, ಎಲ್ಲಕ್ಕಿಂತ ಚಿಕ್ಕ ಬೆರಳಿಕೆ ಕಿರುಬೆರಳು ಎನ್ನುವುದೂ, ಎಲ್ಲಕ್ಕೂ ದಪ್ಪದ ಬೆರೆಳಿಗೆ ಹೆಬ್ಬೆರಳು ಎನ್ನುವುದೂ, ಅಷ್ಟೇ ಅರ್ಥಪೂರ್ಣ. ಇನ್ನು ನಡು ಬೆರಳು- ಅದೂ ಕೂಡ ಸ್ಥಾನಸೂಚಕ. ಉಳಿದದ್ಯಾವುದು?

ಆ ಬೆರಳಿಗೆ ಆಗಾಗ ಉಂಗುರ ತೊಡಿಸುವುದರಿಂದ, ಅದಕ್ಕೆ ಉಂಗುರದ ಬೆರಳು ಎನ್ನುವ ರೂಢಿ ಇದೆ. ಸಂಸ್ಕೃತದಲ್ಲಿ, ಈ ಬೆರಳಿಗೆ ಏನು ಹೆಸರು ಗೊತ್ತೇ?

’ಹೆಸರಿಲ್ಲದ್ದು’ !

ಹೌದು. ಈ ಬೆರಳಿಗೆ ’ಅನಾಮಿಕಾ’ ಅಥವ ಹೆಸರಿಲ್ಲದ್ದು ಎನ್ನುವುದೇ ಸರಿಯಾದ ಹೆಸರು ಸಂಸ್ಕೃತದಲ್ಲಿ. ಉಂಗುರದ ಬೆರಳು ಎಂಬರ್ಥ ಬರುವ ಹೆಸರಿದೆಯೋ ಇಲ್ಲವೋ ನಾನರಿಯೆ.

ಆದರೆ, ಈ ಹೆಸರು ಹೇಗೆ ಬಂತೆಂಬುದರ ಬಗ್ಗೆ ಮಾತ್ರ ಕುತೂಹಲಕಾರಿ ಕಥೆಯೊಂದಿದೆ. ಕೇಳಿ.

ಪುರಾ ಕವೀನಾಂ ಗಣನಾ ಪ್ರಸಂಗೇ ಕನಿಷ್ಟಕಾದಿಷ್ಟಿತ ಕಾಲಿದಾಸಃ |

ಅದ್ಯಾಪಿ ತತ್ತುಲ್ಯ ಕವೇರಭಾವಾತ್ ಅನಾಮಿಕಾ ಸಾರ್ಥವತೀ ಬಭೂವ ||

ಇದನ್ನೇ ಕನ್ನಡದಲ್ಲಿ ನಾನು ಹೀಗೆ ಹೇಳುವೆ:

(ಇದು ಕನ್ನಡವೇ? ಎಂದು ಕೇಳದಿರಿ Smiling )

 

ಹಿಂದೊಮ್ಮೆ  ವರಕವಿಗಳನು ಎಣಿಸುತಿರಲು

ಕಿರುಬೆರಳಲಿ ಇಟ್ಟರು ಆ ಕಾಳಿದಾಸನನು

ಇಂದಿಗೂ ಅವನ ಸಮ ಕವಿ ಬರದೆ ಇರಲು

ಹೆಸರಿಲ್ಲದ್ದು ಆಯಿತದು ಅರ್ಥಪೂರಿತವು 

 

ಕವಿಗಳನ್ನು ಎಣಿಕೆ ಮಾಡುವಾಗ, ಕಾಳಿದಾಸ ಎಂದು ಹೇಳಿ, ಕಿರುಬೆರಳನ್ನು ಮಡಿಚಿಟ್ಟರಂತೆ ( ಎಣಿಸುವಾಗ ನಾವು ಹಾಗೆ ತಾನೇ ಮಾಡುವುದು?).ಈಗ ನಡೆಯುವ ಜನಗಣತಿಯ ತರಹ ಆಗ ಕವಿಗಣತಿ ಇತ್ತೋ ಏನೋ? ನಂತರ ಎರಡನೆಯ ಬೆರಳಿಗೆ, ಕಾಳಿದಾಸನಿಗೆ ಸಾಟಿಯಾದವನೋ, ಅಥವಾ ಅವನನ್ನು ಮೀರಿಸುವವನೋ ಯಾರೂ ಸಿಗದೇ ಹೋಗಲು, ಆ ಬೆರಳಿಗಿದ್ದ ’ಅನಾಮಿಕ’ ’ಹೆಸರಲ್ಲದ್ದು’ ಎಂಬ ಹೆಸರು ಬಹಳ ಅರ್ಥಪೂರ್ಣವಾಯಿತು ಎಂದು ಸುಭಾಷಿತಕಾರ ಹೇಳುತ್ತಾನಿಲ್ಲಿ.

ಅಂದಹಾಗೆ, ಇದು ಯಾರು ಬರೆದ ಪದ್ಯ ಅನ್ನುವುದು ನನಗೆ ಗೊತ್ತಿಲ್ಲ. ತಿಳಿದವರಿದ್ದರೆ ಬರೆಯಿರಿ.

-ಹಂಸಾನಂದಿ

  • ಅನುವಾದ
  • ಕಾಳಿದಾಸ
  • ಹರಟೆ
~.~
  • hamsanandi ರವರ ಬ್ಲಾಗ್
  • Login or register to post comments
  • 362 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 20, 2008 - 12:02pm — vinayak.mdesai

ಉ: ಹೆಸರಿಲ್ಲದ್ದು ?

vinayak.mdesai's picture

ಆ ಬೆರಳಿಗೆ ’ಅನಾಮಿಕಾ’ ಎಂದು ಹೆಸರು ಬರಲು ನಿಜವಾದ ಕಾರಣದ ಬಗ್ಗೆ ಸುಭಾಶಿತಕಾರನು ಕೊಟ್ಟ ಹೋಲಿಕೆ ಮಾತ್ರ ಸೂಪರ್...
ಎಲ್ಲೋ ಕೇಳಿದ್ದು...

ಕಾಳಿದಾಸನ ಸಮಯದಲ್ಲಿ, ಅವನು ಬರೆಯಲು ಒಂದು ವಿಷಯವನ್ನು ಆರಿಸಿಕೊಂಡರೆ ಆ ವಿಷಯದಲ್ಲಿ ಬೇರೆ ಯಾರೂ ಬರೆಯಲು ಧೈರ್ಯ ಮಾಡುತ್ತಿರಲಿಲ್ಲವಂತೆ... ಆದರೆ ಕಾಳಿದಾಸನ ಸಮಕಾಲೀನ ಒಬ್ಬ ಕವಿಇದ್ದನಂತೆ ಅವನೂ ಸಹ ರಘುವಿನ ವಂಶದ ಬಗ್ಗೆ ಬರೆದಿದ್ದಾನೆ ಅದೂಸಹ ಚನ್ನಾಗಿದೆ...

[ನನಗೆ ಸರಿಯಾಗಿ ಸಾಲು ಗೊತ್ತಿಲ್ಲ ]

ಆಸೀದವನ್ಯಾಂ ಅತಿಭೋಗಭಾರಾತ್ ದಿವೊವತೀರ್ಣಾ ನಗರೀವದಿವ್ಯಾ................

ಧಾರವಾಡ university B.Sc ಗೆ ಈ ಕೃತಿ ಇದೆ(?).... ಓದಿದವರು ಗೊತ್ತಿದ್ದರೆ ತಿಳಿಸಿ.. Smiling

ವಿನಾಯಕ ಮುತಾಲಿಕ ದೇಸಾಯಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2008 - 12:54am — kalpana

ಉ: ಹೆಸರಿಲ್ಲದ್ದು ?

kalpana's picture

ಅಯ್ಯಾ ಹಂಸಾನಂದಿಗಳೇ,
ಇಂದು ಚಂದ್ರ ಗ್ರಹಣದಂದು ನಿಮ್ಮಿಂದ ಬೇರೇ ಲೇಖನ ನಿರೀಕ್ಷಿಸಿದ್ದೆ Smiling ಅದರ ಬಗ್ಗೆನೂ ಸ್ವಲ್ಪ ಬರೀರಿ ಸ್ವಾಮಿ. ಅಥವ ನಾಳೆ ಚಿತ್ರಗಳ ಸಮೇತ ಪ್ರಕಟಿಸುತ್ತೀರೋ?

ಇಂತಿ, ನಿಮ್ಮ ಲೇಖನ ಒಮ್ಮೊಮ್ಮೆ ಅರ್ಥವಾಗದಿದ್ದರೂ(ಅಂದರೆ ತಲೆಯ ಮೇಲೇ ರಾಕೆಟ್ ತರಹ ಹೋದರೂ Smiling) ತಪ್ಪದೆ ಓದುವ,
ಬೀಸಣಿಗೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2008 - 1:23am — hamsanandi

ಉ: ಹೆಸರಿಲ್ಲದ್ದು ?

hamsanandi's picture

ನೀವು ಹೇಳಿದ ಚಂದ್ರ ಗ್ರಹಣದ ಲೇಖನ ನಾನು ಬೇರೊಂದೆಡೆ ಬರೆದುಬಿಟ್ಟೆ Smiling

http://neelanjana.wordpress.com/2008/02/19/eclipse/

ಸಂಪದಿಗರು ಯಾಕೋ ಆಕಾಶದ ಆಗುಹೋಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವರಲ್ಲ ಅನ್ನಿಸಿತ್ತು Eye-wink ಅದಕ್ಕೆ ಹೀಗೆ ಮಾಡಿದೆ. ಇರಲಿ ಇನ್ನೊಂದು ಸಲ ರಾಹು ಕೇತುಗಳ ಬಗ್ಗೆ ತಲೆ ಕೊರೆಯುತ್ತೇನೆ.

ನಿಮ್ಮ ಮೆಚ್ಚಿಗೆಗೆ ಹಾಗೂ ಎಚ್ಚರಿಕೆಗೆ ಧನ್ಯವಾದಗಳು!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2008 - 4:37am — kalpana

ಉ: ಹೆಸರಿಲ್ಲದ್ದು ?

kalpana's picture

ಹಂಸಾನಂದಿಗಳೇ,
ಅಲ್ಲಿನ ಲೇಖನವೂ ಚೆನ್ನಾಗಿದೆ. ಸಮಯ ಸಿಕ್ಕರೆ ನಾನೂ ಮಕ್ಕಳೊಡನೆ ಗ್ರಹಣ ನೋಡುವೆ.

ಮತ್ತೆ,, ನನಗೆ ಅರ್ಥವಾಗದ್ದು ನಿಮ್ಮ ತಪ್ಪಲ್ಲ ಬಿಡಿ Smiling ಅದು, ಮೊದಲೇ ಕ್ಲಿಷ್ಟವಾಗಿರುವ ವಿಚಾರವನ್ನು ಕನ್ನಡ ಭಾಷೆಯಲ್ಲಿ ಓದಿ ಜೀರ್ಣಿಸಿಕೊಳ್ಳಲು ಹೆಣಗುವ ನನ್ನ ಗ್ರಹಣ ಶಕ್ತಿಯ ಕುಂದು Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2008 - 11:28am — mahesha

ಉ: ಹೆಸರಿಲ್ಲದ್ದು ?

mahesha's picture

ಚನ್ನಾಗಿದೆ...

ಬೆರಳನ್ನು ಹೆಸರಿಸುವಲ್ಲೀ ಕನ್ನಡ ಮತ್ತು ಇಂಗ್ಲೀಸ್ ನಡುವೆ ಹೋಲಿಕೆ ಇದೆ...

little finger = ಕಿರುವೆರಳು/ಕಿರುಬೆರಳು
ring finger = ಉಂಗುರದ ಬೆರಳು
middle finger = ನಡುವೆರಳು/ನಡುಬೆರಳು
index finger = ತೋರ್ವೆರಳು/ತೋರುಬೆರಳು
thumb = ಹೆಬ್ಬೆರಳು

ಇದು ಸಹಜ, ಸರಳ ಮತ್ತು ಅರ್ಥಪೂರಣ!

ಸಂಸ್ಕೃತದ ಬೆರಳುಗಳು
ಕಿನಿಷ್ಠಿಕ
ಅನಾಮಿಕ
ಮಧ್ಯಮ
ತರ್ಜನಿ
ಅಂಗುಷ್ಠ ( ಅಂಗುಷ್ಠಿಕ ಅನ್ನೊ ಹೆಬ್ಬರಳ ಉಂಗುರ ಇದೆ ಅಲ್ವ? )

ಬಹುಶಃ ಸಂಸ್ಕೃತ ಜನಾಂಗದವರು ಉಂಗುರವನ್ನು ಬರೀ ಉಂಗುರದ ಬೆರಳಲ್ಲಿ ತೊಡುತ್ತಿರಲಿಲ್ಲವೇನೋ..

ಆದೂ ಅಲ್ಲದೇ..
ಅನಾಮಿಕ = ಅ ನಾಮಿಕ / ಅನ್ ಆಮಿಕ ಹೀಗೂ ಬಿಡಿಸ ಬೋದಲ್ಲ.. ಆಮಿಕ ಅಂತ ಪದ ಇದೆಯಾ?

....

ಇನ್ನು ಆ ಶ್ಲೋಕ ಒಂದು ಉತ್ಪ್ರೇಕ್ಷೆ...

ಭಾಸನ ಸ್ವಪ್ನವಾಸವದತ್ತಾ ಬಗ್ಗೇ ಕೂಡ ಹೀಗೇ ಒಂದು ಇದೆ.

ಭಾಸನ ಎಲ್ಲಾ ನಾಟಕಗಳನ್ನು ಅಗ್ನಿಗೆಸೆದರೆ, ಅಗ್ನಿರಾಯ ಕೂಡ ಸ್ವಪ್ನವಾಸವದತ್ತಾ ಅನ್ನು ಸುಡಲಾರೆನೆಂದು ಸುಡದೇ ಬಿಡುವನಂತೆ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೆಸರು ಬರೆಯುವುದು ಹೇಗೆ?
  • ಪುಣ್ಯದ ಫಲ
  • ಅಕ್ಕಿ ಆರಿಸುವಾಗ
  • ನಾಡಿಗರು ಯಾರು?
  • ಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator