ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › hamsanandi ರವರ ಬ್ಲಾಗ್

ಹಂಸ ನಾದ

ಹಂಸ ನುಡಿದರೆ, ಹಂಸನಾದ!

ನವರಾತ್ರಿಯ ಎಂಟನೇ ದಿನ

October 19, 2007 - 10:04pm — hamsanandi

ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ. ಆಸಕ್ತರು, ಈ ಕೊಂಡಿಯನ್ನು ಕ್ಲಿಕ್ಕಿಸಬಹುದು.

ಇವತ್ತು ನಾನು ಕೇಳಿಸಲಿರುವ ರಚನೆ ಒಂದು ರಾಗಮಾಲಿಕೆ. ಹೆಸರೇ ಸೂಚಿಸುವಂತೆ ಇದು ರಾಗಗಳ ಸರಮಾಲೆ. ಎಷ್ಟೋ ರಚನೆಗಳಲ್ಲಿ, ಆಯಾ ರಾಗದ ಭಾಗದಲ್ಲಿ ಆಯಾ ರಾಗದ ಹೆಸರನ್ನೂ ಚಮತ್ಕಾರಿಕವಾಗಿ ಸೇರಿಸಿ ಸೂಚಿಸುವುದುಂಟು. ಅದಕ್ಕೆ ರಾಗಮುದ್ರೆ ಎನ್ನುತ್ತೇವೆ. ಇವತ್ತು ನಾನು ಕೊಡುತ್ತಿರುವ ರಾಗಮಾಲಿಕೆಯ ವಿಶೇಷವೇನೆಂದರೆ, ಅದರ ಪ್ರತಿ ರಾಗದ ಭಾಗದಲ್ಲಿಯೂ ಆಯಾ ರಾಗದ ರಾಗಮುದ್ರೆ ಇದೆ.

ಈ ರಚನೆಯ ಹೆಸರು ರಂಜನಿ ಮಾಲಾ. ಇದರ ಸಾಹಿತ್ಯ ಹೀಗಿದೆ - ರಾಗಗಳ ಹೆಸರುಗಳನ್ನು ದಪ್ಪ ಅಕ್ಷರದಲ್ಲಿ ಸೂಚಿಸಿರುವೆ.

ರಂಜನಿ ಮೃದು ಪಂಕಜ ಲೋಚನಿ

ಮಂಜು ಭಾಷಿಣಿ ಮನೋಲ್ಲಾಸಿನಿ ಮಂದಗಮನಿ ಶ್ರೀರಂಜನಿ

ಸಾಮಗಾನ ವಿನೋದಿನಿ ಶಶಾಂಕವದನಿ ಮೇಘರಂಜನಿ

ಪಾಮರಜನ ಪಾಲಿನಿ ಶೂಲಿನಿ  ಪಾಪವಿಮೋಚನಿ ಜನರಂಜನಿ

ಪ್ರತಿಸಾಲಿನ ನಡುವೆಯೂ ಸುಂದರವಾದ ಚಿಟ್ಟೆಸ್ವರಗಳಿವೆ. ಇದನ್ನು ನೀವು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಕೇಳಬಹುದು.

ರಂಜನಿ ಮೃದುಪಂಕಜ ಲೋಚನಿ - ನಿತ್ಯಶ್ರೀ ಅವರ ಕಂಠದಲ್ಲಿ

ಸಂಸ್ಕೃತದಲ್ಲಿರುವ  ಈ ಸುಂದರವಾದ ರಚನೆಯನ್ನು ರಚಿಸಿದ ವಾಗ್ಗೇಯಕಾರರು ತಂಜಾವೂರು ಶಂಕರ ಅಯ್ಯರ್. ೧೯೨೪ರಲ್ಲಿ ಜನಿಸಿದ ಇವರು ತಮ್ಮ ೮೦ ನೇ ವಯಸ್ಸಿನಲ್ಲಿಯೂ ಹಾಡುತ್ತಾ ರಸಿಕರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇವರಿಗೆ ಸಂಗೀತಗಾರರ ಸಂಗೀತಗಾರ ಎಂಬ ಬಿರುದೇ ಇದೆ.  ಇವರ ಹಲವು ರಚನೆಗಳು ಜನಪ್ರಿಯವೂ ಆಗಿವೆ. ಅವುಗಳಲ್ಲಿ ಬಹಳ ಪ್ರಖ್ಯಾತ ರಚನೆ ಎಂದರೆ ಈ ರಂಜನಿಮಾಲಾ.

ಈ ಸಮಯದಲ್ಲಿ ಇನ್ನೊಂದು ವಿಷಯವನ್ನು ಹೇಳಬೇಕು. ನಮಗೆ ಈಗ ದೊರಕಿರುವಂತೆ ರಾಗಮಾಲಿಕೆಗಳು, ಮತ್ತೆ ರಾಗಮುದ್ರೆಗಳು ೧೭-೧೮ನೇ ಶತಮಾನದ ನಂತರ ಕಂಡುಬರುತ್ತವೆ. ಮೊದಲು ಇಂತಹ ರಚನೆ ಮಾಡಿದವರಾರು? ಖಡಾಖಂಡಿತವಾಗಿ ಹೇಳಲಾರೆನಾದರು, ೧೫ನೇ ಶತಮಾನಕ್ಕೆ ಮೊದಲೇ ಇಂತಹ ಪ್ರಯೋಗಗಳನ್ನು ಕರ್ನಾಟಕದ ಹರಿದಾಸರು ಮಾಡಿದ್ದಿರಬೇಕು ಎಂದು ನನ್ನ ಅನಿಸಿಕೆ. ಶ್ರೀಪಾದರಾಯರ (ಕ್ರಿ.ಶ.೧೪೦೪-೧೫೦೨) ಲಾಲಿ ಗೋವಿಂದಲಾಲಿ ಎನ್ನುವ ಪದವೊಂದರಲ್ಲಿ (ದೇವರನಾಮ) ಮೂರು ಚರಣಗಳು ಹೀಗೆ ಬರುತ್ತವೆ:

.. ಮಂದಗಮನೆಯರೆಲ್ಲ  ತೂಗಿದರು ಕಲ್ಯಾಣಿ ರಾಗದಿಂದ ||

.. ದೇವಗಂಧರ್ವರೆಲ್ಲ ಪಾಡಿ ತೂಗಿದರು ದೇವಗಾಂಧಾರದಿಂದ ||

ಆ ನಂದ ಭವನದೊಳಗೆ ಆನಂದಭರಿತರಾಗಿ

.................  ತೂಗಿದರು ಆನಂದ ಭೈರವಿಯಿಂದ ||

ಕಲ್ಯ್ಯಾಣಿ, ದೇವಗಾಂಧಾರ, ಆನಂದಭೈರವಿ ಎಂಬ ಮೂರು ರಾಗಗಳ ಹೆಸರು ಇಲ್ಲಿ ಬಂದಿರುವುದನ್ನು ಗಮನಿಸಬಹುದು. ಬಹುಶಃ ರಾಗಮುದ್ರೆಯಿರುವ ಮೊದಲ ಸಂಗೀತ ರಚನೆ ಇದು. ಇದನ್ನು ಶ್ರೀಪಾದರಾಜರು ರಾಗಮಾಲಿಕೆಯಾಗೇ ಹಾಡುತ್ತಿದ್ದಿರಬೇಕೆಂದು ನನ್ನ ಅನುಮಾನ. ಅದು ನಿಜವಾಗಿದ್ದರೆ, ಇದಕ್ಕೇ ಮೊತ್ತಮೊದಲ ರಾಗಮಾಲಿಕೆ ಅನ್ನುವ ಪಟ್ಟ ಸಿಕ್ಕಲೂಬಹುದು!

ಮುಗಿಸುವ ಮೊದಲು, ಇವತ್ತಿನ ಸ್ವಾತಿ ತಿರುನಾಳರ ನವರಾತ್ರಿ ಕೃತಿ ಯಾವುದೆಂದು ಹೇಳಿಬಿಡುವೆ. ಅದು, ನಾಟಕುರಂಜಿ ರಾಗದಲ್ಲಿರುವ ಪಾಹಿ ಜನನಿ ಸಂತತಂ  ಎಂಬುದು. ಅದನ್ನು ಸರೋಜಾ ಮತ್ತು ಲಲಿತ ಅವರ ಕಂಠದಲ್ಲಿ ನೀವು  ಇಲ್ಲಿ ಕ್ಲಿಕ್ಕಿಸಿ ಕೇಳಬಹುದು. 

-ಹಂಸಾನಂದಿ

  • ಜ್ಞಾನವಾಹಿನಿ
  • ತಂಜಾವೂರು
  • ದಸರ
  • ಮೈಸೂರು
  • ಶ್ರೀಪಾದರಾಯರು
  • ಸಂಗೀತ
~.~
  • hamsanandi ರವರ ಬ್ಲಾಗ್
  • Login or register to post comments
  • 508 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನವರಾತ್ರಿಯ ನಾಲ್ಕನೇ ದಿನ
  • ನವರಾತ್ರಿಯ ಒಂಬತ್ತನೆಯ ದಿನ
  • ನವರಾತ್ರಿಯ ಐದನೆಯ ದಿನ
  • ನವರಾತ್ರಿಯ ಏಳನೇ ದಿನ
  • ನವರಾತ್ರಿಯ ಮೂರನೆಯ ದಿನ
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಾಶ್ಮೀರ ಯಾರಿಗೆ ಸೇರಿದ್ದು?
  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 76 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator